news18-kannada Updated:November 3, 2020, 3:09 PM IST
ನರೇಂದ್ರ ಮೋದಿ.
ಪಟ್ನಾ (ನ.3): ಬಿಹಾರದಲ್ಲಿ ಎರಡನೇ ಸುತ್ತಿನ ಮತದಾನದ ಬಳಿಕ ಪ್ರಚಾರ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಜನರು ಕಾಂಗ್ರೆಸ್ ಅನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಇದೇ ಕಾರಣದಿಂದ ಸಂಸತ್ತಿನಲ್ಲಿ 100 ಸದಸ್ಯರನ್ನು ಹೊಂದುವಲ್ಲಿ ಕೂಡ ಐತಿಹಾಸಿಕ ರಾಷ್ಟ್ರೀಯ ಪಕ್ಷ ಸೋತಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಜನರು ರಾಜ್ಯದಲ್ಲಿ ಮತ್ತೊಮ್ಮೆ ಎನ್ಡಿಎ ಸರ್ಕಾರವನ್ನು ನೀರಿಕ್ಷಿಸಿದ್ದಾರೆ ಎಂಬುದು ಮೊದಲ ಹಂತದ ಮತದಾನದ ಆಧಾರದ ಮೇಲೆ ಬಿತ್ತಾರವಾದ ವರದಿಗಳು ಸಾಬೀತು ಪಡಿಸಿದೆ ಎಂದರು.
ಇಲ್ಲಿನ ಅರಾರಿಯಾ ಜಿಲ್ಲೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಜನರಿಗೆ ನೀಡಿದ ಭರವಸೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ. ಆದರೆ, ಬಿಜೆಪಿ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಅವರು ಜನರಿಗೆ ಏನನ್ನು ಮಾಡಲಿಲ್ಲ. ಈಗ ಎಲ್ಲಿದ್ದಾರೆ ನೋಡಿ. ಕಾಂಗ್ರೆಸ್ನ ಇಂದಿನ ಸ್ಥಿತಿ ಗಮನಿಸಿ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲಿ ಸೇರಿ ನೂರು ಸದಸ್ಯರನ್ನು ಅವರು ಹೊಂದಿಲ್ಲ. ಕಾಂಗ್ರೆಸ್ ಸದಸ್ಯರು ಸಂಸದರಾಗಲು ಜನರಿಗೆ ಅವಕಾಶವೇ ನೀಡುತ್ತಿಲ್ಲ. ಜಮ್ಮು ಮತ್ತು ಕಾಶ್ಮೀರ, ಉತ್ತರಖಂಡ, ರಾಜಸ್ಥಾನ, ಗುಜರಾತ್, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಇಲ್ಲದಂತೆ ಆಗಿದೆ ಎಂದರು.
ಬಿಹಾರ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಕಾಂಗ್ರೆಸ್ ಮೂರು, ನಾಲ್ಕು, ಐದನೇ ಸ್ಥಾನದಲ್ಲಿದೆ. ಅವರು ಅಧಿಕಾರಕ್ಕೆ ಬರಬೇಕೇಂದರೆ ಯಾರದಾದರೂ ಕುರ್ತಾ ಹಿಡಿದು ಬರಬೇಕು ಎಂದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಉಲ್ಲೇಖಿಸಿ ಟೀಕಿಸಿದರು.
ಇದನ್ನು ಓದಿ: ಬಿಹಾರ ಚುನಾವಣಾ ಕಾವು; ರಾಷ್ಟ್ರೀಯ ಮಟ್ಟದಲ್ಲಿ ಟ್ರೆಂಡ್ ಆಗುತ್ತಿದೆ #BiharRejectsModi ಹ್ಯಾಷ್ಟ್ಯಾಗ್
ಬಿಹಾರದ ಜನರು ಜಂಗಲ್ ರಾಜ್ ಮತ್ತು ಡಬ್ಬಲ್ ಯುವರಾಜ್ ಅವರನ್ನು ತಿರಸ್ಕರಿಸಿದ್ದಾರೆ. ಮತ್ತೊಮ್ಮೆ ಬಿಹಾರದಲ್ಲಿ ಎನ್ಡಿಎ ಸರ್ಕಾರ ಎಂದು ತೀರ್ಮಾನಿಸಿದ್ದಾರೆ. ಇದು ಮೊದಲ ಹಂತದ ಮತದಾನದಲ್ಲಿ ಸ್ಪಷ್ಟವಾಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು.
ಬಿಹಾರದ ತಾಯಂದಿರ, ಮಗಳ ಆಶೀರ್ವಾದ ಕೂಡ ನಮ್ಮ ಮೇಲಿದೆ. ಇದು ಪ್ರಜಾಪ್ರಭುತ್ವದ ಶಕ್ತಿ. ಮೊದಲಿನ ರೀತಿ ಪರಿಸ್ಥಿತಿ ಇದ್ದಿದ್ದರೆ, ಒಬ್ಬ ಬಡತಾಯಿಯ ಮಗ ಇಂದು ಪ್ರಧಾನ ಮಂತ್ರಿಯಾಗುತ್ತಿರಲಿಲ್ಲ. ಅವನು ನಿಮ್ಮ ಪ್ರಧಾನ ಸೇವಕ ಕೂಡ ಆಗುತ್ತಿರಲಿಲ್ಲ ಎಂದರು.
ಕಳೆದೊಂದು ದಶಕದಿಂದ ನಿತೀಶ್ ಕುಮಾರ್ ರಾಜ್ಯದ ಜನರ ಅಗತ್ಯಗಳನ್ನು ಪೂರೈಸಲು ಕೆಲಸ ಮಾಡುತ್ತಿದ್ದಾರೆ. ಮುಂದಿನ ಒಂದು ದಶಕಕೂಡ ಅವರು ಬಿಹಾರಿಗಳ ಆಕಾಂಕ್ಷೆಗಳನ್ನು ಈಡೇರಿಸುವ ಕೆಲಸ ಮಾಡಲಿದ್ದಾರೆ. ನಿತೀಶ್ ಕುಮಾರ್ ತಂಡ ಜನರ ಸೇವೆಗೆ ಎಲ್ಲವನ್ನು ಮಾಡಿತು. ದಣಿವರಿಯದಂತೆ ಅವರು ಜನರ ಅಗತ್ಯ ಪೂರೈಸಿದ್ದಾರೆ. ಮುಂದಿನ ಒಂದು ದಶಕ2021-30 ಬಿಹಾರದ ಜನರ ಆಕಾಂಕ್ಷೆಗಳನ್ನು ಈಡೇರಿಸಲು ಅವರು ಬದ್ಧರಾಗಿರಲಿದ್ದಾರೆ. ಕಳೆದ ದಶಕದಲ್ಲಿ ಪ್ರತಿಯೊಂದು ಮನೆಗೂ ಶೌಚಾಲಯ ನಿರ್ಮಿಸಿದ ಅವರು ಮುಂದಿನ ದಿನದಲ್ಲಿ ಪ್ರತಿಯೊಂದು ಮನೆಗೆ ಪೈಪ್ ಅಡುಗೆ ಅನಿಲ ನೀಡುತ್ತಾರೆ ಎಂದರು.
Published by:
Seema R
First published:
November 3, 2020, 3:09 PM IST