WEF: ಇಂದು ವಿಶ್ವ ಆರ್ಥಿಕ ವೇದಿಕೆಯ ದಾವೋಸ್ ಅಜೆಂಡಾ ಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

World Economic Forum: ಕೋವಿಡ್ -19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ವಿಶ್ವ ಆರ್ಥಿಕ ವೇದಿಕೆಯು 2ನೇ ಬಾರಿಗೆ ವರ್ಚುಯಲ್​ ಸಭೆಯನ್ನು ನಡೆಸುತ್ತಿದೆ. ಈ ವರ್ಷದ ಕೊನೆಯಲ್ಲಿ 2022ರ ವಾರ್ಷಿಕ ಸಭೆಯನ್ನು ಕರೆಯಲು ವಿಶ್ವ ಆರ್ಥಿಕ ವೇದಿಕೆ ಚಿಂತನೆ ನಡೆಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರಧಾನಿ ನರೇಂದ್ರ ಮೋದಿಯವರು(PM Narendra Modi) ಇಂದು ವಿಶ್ವ ಆರ್ಥಿಕ ವೇದಿಕೆಯ(World Economic Forum) ದಾವೋಸ್ ಅಜೆಂಡಾ ಸಭೆಯನ್ನು(Davos Agenda Virtual Event) ಉದ್ದೇಶಿಸಿ ಮಾತನಾಡಲಿದ್ದಾರೆ. ಕೊರೋನಾ ಮತ್ತು ಓಮೈಕ್ರಾನ್ ಕಾರಣದಿಂದಾಗಿ ಸತತ ಎರಡನೇ ಬಾರಿಯೂ ಸಹ ವಿಶ್ವ ಆರ್ಥಿಕ ದಾವೋಸ್ ಅಜೆಂಡಾ ಸಭೆ ವರ್ಚುಯಲ್ ಆಗಿ ನಡೆಯುತ್ತಿದೆ. ಈ ಸಭೆಯು ಇಂದಿನಿಂದ ಜನವರಿ 21ರವರೆಗೆ ನಡೆಯಲಿದೆ. ಉದ್ಘಾಟನಾ ದಿನವಾದ (Inauguration Day) ಇಂದು ಪ್ರಧಾನಿ ಮೋದಿ ವಿಶ್ವ ಆರ್ಥಿಕ ವೇದಿಕೆಯ ದಾವೋಸ್ ಅಜೆಂಡಾ ವರ್ಚುಯಲ್​ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅನೇಕ ಜಾಗತಿಕ ನಾಯಕರು(World Leaders) ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ವರ್ಷಾಂತ್ಯದಲ್ಲಿ ವಾರ್ಷಿಕ ಸಭೆ

ವಿಶ್ವ ಆರ್ಥಿಕ ವೇದಿಕೆಯು 1721ರ ಜನವರಿಯಿಂದ ತನ್ನ ವೆಬ್​ಸೈಟ್​ ಹಾಗೂ ಸೋಷಿಯಲ್ ಮೀಡಿಯಾ ಚಾನೆಲ್​ಗಳಲ್ಲಿ ದಾವೋಸ್ ಅಜೆಂಡಾ ಸಭೆಯನ್ನು ಆಯೋಜಿಸಲು ಸಿದ್ಧವಾಗಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ವಿಶ್ವ ಆರ್ಥಿಕ ವೇದಿಕೆಯು 2ನೇ ಬಾರಿಗೆ ವರ್ಚುಯಲ್​ ಸಭೆಯನ್ನು ನಡೆಸುತ್ತಿದೆ. ಈ ವರ್ಷದ ಕೊನೆಯಲ್ಲಿ 2022ರ ವಾರ್ಷಿಕ ಸಭೆಯನ್ನು ಕರೆಯಲು ವಿಶ್ವ ಆರ್ಥಿಕ ವೇದಿಕೆ ಚಿಂತನೆ ನಡೆಸಿದೆ.

ಇದನ್ನೂ ಓದಿ: Omicron Effect: ಶೇ. 20 ರಷ್ಟು ವಿಮಾನ ಹಾರಾಟ ರದ್ದುಗೊಳಿಸಿದ ಇಂಡಿಗೋ

ಈ ವಿಷಯಗಳ ಬಗ್ಗೆ ಮಹತ್ವದ ಚರ್ಚೆ

ವಿಶ್ವ ಆರ್ಥಿಕ ವೇದಿಕೆಯ ದಾವೋಸ್ ಅಜೆಂಡಾ ಸಭೆಯಲ್ಲಿ ಪ್ರಸ್ತುತ ಜಗತ್ತು ಎದುರಿಸುತ್ತಿರುವ ಮಾರಕ ಕೊರೋನಾ ವೈರಸ್​, ಇತರೆ ಸವಾಲುಗಳು ಹಾಗೂ ಪರಿಹಾರ ಕುರಿತು ಜಾಗತಿಕ ನಾಯಕರು ಚರ್ಚೆ ನಡೆಸಲಿದ್ದಾರೆ. ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಎದುರಿಸುತ್ತಿರುವ ಅತೀ ದೊಡ್ಡ ಜಾಗತಿಕ ಸಮಸ್ಯೆ ಕೋವಿಡ್-19 ಸಾಂಕ್ರಾಮಿಕ ರೋಗ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಇಂದಿನ ಭಾಷಣದಲ್ಲಿ ಮಾತನಾಡಲಿದ್ದಾರೆ. ಕೊರೋನಾ ನಿಯಂತ್ರಣಕ್ಕಾಗಿ ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದು ಜಾಗತಿಕ ನಾಯಕರಿಗೆ ಸಲಹೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಭಾರತದಲ್ಲಿನ ಲಸಿಕಾ ಅಭಿಯಾನದ ಕುರಿತು ಸಭೆಯಲ್ಲಿ ಮೋದಿ ಮಾತನಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಮಾರಕ ಕೊರೋನಾ ಬಗ್ಗೆ ಚರ್ಚೆ

ಕೊರೋನಾ ನಡುವೆ ದೇಶದ ಆರ್ಥಿಕ ಚೇತರಿಕೆ ಸೇರಿದಂತೆ ಪ್ರಮುಖ ವಿಚಾರಗಳನ್ನು ಇಂದಿನ ಭಾಷಣದಲ್ಲಿ ಮೋದಿ ಚರ್ಚಿಸಲಿದ್ದಾರೆ. 2019ರ ಅಂತ್ಯ ಭಾಗದಿಂದ ಬಹುತೇಕ ಎಲ್ಲಾ ದೇಶಗಳು ಮಹಾಮಾರಿ ಕೊರೋನಾಗೆ ಸಿಲುಕಿ ನಲುಗಿವೆ. ಮೊದಲಿಗೆ ಕೊರೋನಾ ಮೊದಲನೇ ಅಲೆ ಶುರುವಾಯಿತು. ಬಳಿಕ 2ನೇ ಅಲೆ ವಕ್ಕರಿಸಿ ಇಡೀ ವಿಶ್ವವನ್ನೇ ಹಿಂಡಿ ಹಿಪ್ಪೆ ಮಾಡಿತು. ಈಗ 3ನೇ ಅಲೆಯ ರೂಪದಲ್ಲಿ ಜಗತ್ತನ್ನು ನುಂಗಲು ಮುಂದಾಗಿದೆ. ಪ್ರತೀ ವರ್ಷ ಹೊಸ-ಹೊಸ ರೂಪ ಪಡೆದುಕೊಂಡು ಕೊರೋನಾ ಲಗ್ಗೆ ಇಡುತ್ತಿದೆ.

ಇದನ್ನೂ ಓದಿ: Corona Virus: ಇಂದು ಸಂಜೆ ಸಿಎಂ‌ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್ ಸಿದ್ಧತೆ ಕುರಿತು ಸಭೆ

ಯಾರ್ಯಾರು ಸಭೆಯಲ್ಲಿ ಭಾಗಿ?

ವಿಶ್ವ ಆರ್ಥಿಕ ವೇದಿಕೆಯ ದಾವೋಸ್ ಅಜೆಂಡಾ ಸಭೆಯಲ್ಲಿ ಅಮೆರಿಕ ಹವಾಮಾನ ಕೇಂದ್ರದ ವಿಶೇಷ ರಾಯಭಾರಿ ಜಾನ್ ಎಫ್ ಕೆರಿ, IMF ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಿಲಿನಾ ಜಾರ್ಜಿವಾ ಸೇರಿದಂತೆ ಅನೇಕ ಜಾಗತಿಕ ನಾಯಕರು ಪಾಲ್ಗೊಳ್ಳಲಿದ್ದಾರೆ. ಮಹಾಮಾರಿ ಕೊರೋನಾ ನಿಯಂತ್ರಣಕ್ಕೆ ಬಂದರೆ ಇದೇ ವರ್ಷದಲ್ಲಿ ನಡೆಯಲಿರುವ ವಾರ್ಷಿಕ ಸಭೆ ಸಾಮಾನ್ಯ ರೂಪದಲ್ಲಿ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತದೆ. ಆದರೆ ಆ ವೇಳೆಗೆ ಕೊರೋನಾ ಮತ್ಯಾವ ರೂಪ ಪಡೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.
Published by:Latha CG
First published: