Modi Speech: 100 ಕೋಟಿ ಲಸಿಕೆ ಸಾಧನೆ; ದೇಶದ ಜನರಿಗೆ ಮೋದಿ ಶುಭಾಶಯ; ಇಲ್ಲಿದೆ ಪ್ರಧಾನಿ ಭಾಷಣದ ಹೈಲೈಟ್ಸ್​​

ಲಸಿಕೆ ಪಡೆದ ಮಾತ್ರಕ್ಕೆ ಜನರು ಕೋವಿಡ್​ ನಿಯಮಾವಳಿ ಮರೆಯಬಾರದು. ಜನರು ಮತ್ತೊಂದು ಅಲೆಗೆ ಆಹ್ವಾನ ನೀಡದೇ, ಮಾಸ್ಕ್​ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಬೇಕು ಎಂದು ಮನವಿ ಮಾಡಿದರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ದೇಶಾದ್ಯಂತ 100 ಕೋಟಿ ಡೋಸ್​ ಕೋವಿಡ್​ ಲಸಿಕೆ  (india Covid Vaccine Milestone) ನೀಡುವಲ್ಲಿ ಭಾರತ ಹೊಸ ಮೈಲಿಗಲ್ಲು ಸಾಧಿಸಿದ್ದು, ಈ ಸಾಧನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Modi) ದೇಶದ ಜನರಿಗೆ ಶುಭ ಕೋರಿದರು. ಈ ಸಂಬಂಧ ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, 100 ಕೋಟಿ ಲಸಿಕೆ ನೀಡುವ ಮೂಲಕ ಭಾರತದ ಸಾಮರ್ಥ್ಯ ಪ್ರತಿಬಿಂಬಿಸಲಾಗಿದೆ. ಲಸಿಕೆ ನೀಡಿಕೆಯಲ್ಲಿ ಜಗತ್ತಿನಲ್ಲಿಯೇ ಭಾರತ ಎರಡನೇ ಸ್ಥಾನದಲ್ಲಿದೆ. ದೇಶದ ಅತಿ ಹೆಚ್ಚು ಜನರಿಗೆ ಲಸಿಕೆ ನೀಡುವ ಮೂಲಕ ಭಾರತ ವಿಶ್ವಕ್ಕೆ ಮಾದರಿಯಾಗಿದೆ. ಈ ಮೂಲಕ ಭಾರತ ಹೊಸ ಇತಿಹಾಸ ಸೃಷ್ಟಿಸಿದೆ ಎಂದರು

  ಇನ್ನು ಇದೇ ವೇಳೆ ಜನರಿಗೆ ಎಚ್ಚರಿಸಿದ ಪ್ರಧಾನಿ ನರೇಂದ್ರ ಮೋದಿ, ಲಸಿಕೆ ಪಡೆದ ಮಾತ್ರಕ್ಕೆ ಜನರು ಕೋವಿಡ್​ ನಿಯಮಾವಳಿ (covid Norms) ಮರೆಯಬಾರದು. ಜನರು ಮತ್ತೊಂದು ಅಲೆಗೆ ಆಹ್ವಾನ ನೀಡದೇ, ಮಾಸ್ಕ್​ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಬೇಕು ಎಂದು ಮನವಿ ಮಾಡಿದರು.

  ಭಾಷಣದ ಪ್ರಮುಖ ಅಂಶಗಳು

  ಈ ಹಿಂದೆ ಮೇಡ್​​ ಇನ್​ ದಿಸ್​ ಕಂಟ್ರಿ ಎಂದು ಹೇಳುತ್ತಿದ್ದೇವು. ಆದರೆ ಇದೀಗ ಮೇಡ್​ ಇನ್​ ಇಂಡಿಯಾ ಶಕ್ತಿಯನ್ನು ನಾವು ಅರಿತು ಕೊಂಡಿದ್ದೇವೆ. ‘ಮೇಡ್ ಇನ್ ಇಂಡಿಯಾ’ ಉತ್ಪನ್ನಗಳನ್ನು ಖರೀದಿಸುವ ಮೂಲಕ ಭಾರತೀಯ ಉತ್ಪಾದಕರನ್ನು ಪ್ರೋತ್ಸಾಹಿಸುವಂತೆ ನಾನು ಎಲ್ಲ ಭಾರತೀಯರನ್ನು ಕೋರುತ್ತೇನೆ, ‘ವೋಕಲ್ ಫಾರ್ ಲೋಕಲ್’ ಅನ್ನು ಉತ್ತೇಜಿಸಬೇಕು ಎಂದು ಇದೇ ವೇಳೆ ತಿಳಿಸಿದರು.

  ಭಾರತದ ಸಂಪೂರ್ಣ ವ್ಯಾಕ್ಸಿನೇಷನ್ ಕಾರ್ಯಕ್ರಮವು ವಿಜ್ಞಾನ-ಚಾಲಿತ ಮತ್ತು ವಿಜ್ಞಾನ ಆಧಾರಿತವಾಗಿದೆ ಎಂಬ ಅಂಶದ ಬಗ್ಗೆ ನಾವು ಹೆಮ್ಮೆ ಪಡಬೇಕು. ಇದು ಸಂಪೂರ್ಣವಾಗಿ ವೈಜ್ಞಾನಿಕ ವಿಧಾನಗಳನ್ನು ಆಧರಿಸಿದೆ

  "ವಿಐಪಿ ಸಂಸ್ಕೃತಿ" ನಮ್ಮ ಲಸಿಕೆ ಕಾರ್ಯಕ್ರಮವನ್ನು ಮರೆಮಾಚುವುದಿಲ್ಲ. ಲಸಿಕೆಯಲ್ಲಿ ದೇಶದ ಎಲ್ಲರನ್ನೂ ಸಮಾನವಾಗಿ ಪರಿಗಣಿಸಲಾಗಿದೆ.

  ಪ್ರಪಂಚದಾದ್ಯಂತದ ಹಲವಾರು ರಾಷ್ಟ್ರಗಳು ಇನ್ನೂ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ. ಭಾರತದಲ್ಲೂ ಇದೇ ರೀತಿಯ ಆತಂಕ ಅನೇರಕಲ್ಲಿ ಮೂಡಿತು. ಇವುಗಳ ಹೊರತಾಗಿ ನಾವು 100 ಕೋಟಿ ಲಸಿಕೆ ಡೋಸ್ ಸಾಧನೆಯು ನಾವು ಲಸಿಕೆ ಸಾಧನೆ ಮಾಡಿ ಈ ಹಿಂಜರಿಕೆಯನ್ನು ಹೇಗೆ ಸೋಲಿಸಿದ್ದೇವೆ ಎಂಬುದನ್ನು ತೋರಿಸುತ್ತದೆ.

  ಇದನ್ನು ಓದಿ: 100 ಕೋಟಿ ಡೋಸ್ ಕೋವಿಡ್-19 ಲಸಿಕೆ ವಿತರಣೆ; ಕೆಂಪು ಕೋಟೆಯಲ್ಲಿ ಹಾರಾಡಲಿದೆ 1,400 ಕೆಜಿ ತೂಕದ ತಿರಂಗ!

  ಮುಂಬರುವ ಹಬ್ಬಗಳ ಸಾಲಿನಲ್ಲಿ ಜನರು ಎಚ್ಚರಿಕೆ ವಹಿಸಬೇಕು. ಜೊತೆಗೆ ಲಸಿಕೆ ಪಡೆದವರು ಲಸಿಕೆ ಪಡೆಯದ ಇತರರನ್ನು ಉತ್ತೇಜಿಸಬೇಕು

  ಇದನ್ನು ಓದಿ: ವಿಶ್ವಕ್ಕೇ ವೈರಸ್​ ಹಂಚಿದ್ದ ಚೀನಾಗೆ ಮತ್ತೆ ಶಾಕ್​: ಕೊರೋನಾ​ ಅಟ್ಟಹಾಸಕ್ಕೆ ವಿಮಾನ, ಶಾಲೆಗಳು ಬಂದ್

  ಇತರ ರಾಷ್ಟ್ರಗಳಿಗೆ, ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಹೊಸದೇನಲ್ಲ. ಭಾರತವು ಸಾಮಾನ್ಯವಾಗಿ ಇತರ ರಾಷ್ಟ್ರಗಳಿಂದ ಲಸಿಕೆಗಳನ್ನು ಆಮದು ಮಾಡಿಕೊಳ್ಳುತ್ತದೆ. ಆರಂಭದಲ್ಲಿ, ಭಾರತವು ಈ ಸಾಂಕ್ರಾಮಿಕ ರೋಗದಿಂದ ಬದುಕುಳಿಯಲು ಸಾಧ್ಯವೇ ಎಂದು ಪ್ರಶ್ನಿ ಮೂಡಿತು. ಇದಕ್ಕೆ ಲಸಿಕೆ ಇದೆಯೇ? ಸಾಕಷ್ಟು ಹಣವಿದೆಯೇ? ಎಂಬ ಅನೇಕ ಪ್ರಶ್ನೆಗಳು ಮೂಡಿದವು. ಆದರೆ ಭಾರತ ಇಂದು 100 ಕೋಟಿ ಲಸಿಕೆ ಸಾಧನೆ ಮಾಡುವ ಮೂಲಕ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದೆ. ಈಗ ಭಾರತವನ್ನು ಸುರಕ್ಷಿತ ಸ್ಥಳವೆಂದು ಪರಿಗಣಿಸಲಾಗಿದೆ.

  ವೈರಸ್ ಅನ್ನು ನಿರ್ಮೂಲನೆ ಮಾಡಲು ಆರೋಗ್ಯ ಕಾರ್ಯಕರ್ತರಿಗೆ ಚಪ್ಪಾಳೆ ತಟ್ಟುವುದು, ದೀಪ ಹಚ್ಚುವ ಕಾರ್ಯವನ್ನು ಲೇವಡಿ ಮಾಡಲಾಗಿತ್ತು. ಈ ಕಾರ್ಯಕ್ರಮಗಳ ಮುಂಚೂಣಿ ಕಾರ್ಯಕರ್ತರ ಜೊತೆಗೆ ಜನರ ಭಾಗವಹಿಸುವಿಕೆ ಮತ್ತು ಸಾಮರ್ಥ್ಯದ ಪ್ರತಿಬಿಂಬವಾಗಿತ್ತು. ನಮ್ಮ ಲಸಿಕೆ ಕಾರ್ಯಕ್ರಮವು ತಂತ್ರಜ್ಞಾನದ ಫಲಿತಾಂಶವಾಗಿದೆ.

  ಕೋವಿನ್​ ಪೋರ್ಟಲ್​ನಲ್ಲಿ ಬುಧವಾರ ರಾತ್ರಿಯ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಇಲ್ಲಿಯವರೆಗೆ ಒಟ್ಟು 99.7 ಕೋಟಿ ಡೋಸ್​ ವ್ಯಾಕ್ಸಿನ್​​ ನೀಡಲಾಗಿದೆ. ದೇಶದ ಅರ್ಹ ಫಲಾನುಭವಿಗಳ ಪೈಕಿ ಶೇ. 75ರಷ್ಟು ಜನರಿಗೆ ಮೊದಲ ಡೋಸ್​ ನೀಡಲಾಗಿದೆ. ಶೇ.31ರಷ್ಟು ಜನರು ಎರಡೂ ಡೋಸ್ ವ್ಯಾಕ್ಸಿನ್​ ಪಡೆದುಕೊಂಡಿದ್ದಾರೆ.
  Published by:Seema R
  First published: