PM Modi Speech: ಮೋದಿ ವಿಡಿಯೋ ಕಾನ್ಫರೆನ್ಸ್ ಹಿಂದಿ ಭಾಷೆಯಲ್ಲಿತ್ತು, ನನಗೆ ಅರ್ಥವೇ ಆಗಿಲ್ಲ; ಮಿಜೋರಾಂ ಸಿಎಂ

Narendra Modi Speech: ಕಾನ್ಫರೆನ್ಸ್​ನಿಂದ ಹೊರ ಬರುವಾಗ ಮಿಜೋರಾಂ ಮುಖ್ಯಮಂತ್ರಿ ಜೋರಾಮ್​ತಂಗ ಗೊಂದಲದಲ್ಲಿದ್ದಂತೆ ಕಂಡು ಬಂತು. ಈ ಬಗ್ಗೆ ಪ್ರಶ್ನೆ ಮಾಡಿದಾಗ ನನಗೆ ಒಳಗೆ ನಡೆದ ಸಂವಾದ ಅರ್ಥವಾಗಿಲ್ಲ ಎಂದು ಹೇಳಿದ್ದಾರೆ.

ನರೇಂದ್ರ ಮೋದಿ

ನರೇಂದ್ರ ಮೋದಿ

  • Share this:
    ಕೊರೋನಾ ವೈರಸ್​ ನಿಯಂತ್ರಣ ಮತ್ತು ಲಾಕ್‌ಡೌನ್ ಅವಧಿಯನ್ನು ವಿಸ್ತರಿಸುವ ಕುರಿತು ಎಲ್ಲ ಸಿಎಂಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಚರ್ಚೆ ನಡೆಸಿದ್ದಾರೆ. ಈ ವೇಳೆ ಸಂಪೂರ್ಣ ಸಂವಾದ ಹಿಂದಿ ಮೂಲಕವೇ ನಡೆದಿದ್ದು, ನನಗೆ ಹಿಂದಿ ಅರ್ಥವೇ ಆಗಿಲ್ಲ ಎಂದು ಮಿಜೋರಾಂ ಮುಖ್ಯಮಂತ್ರಿ ಆರೋಪಿಸಿದ್ದಾರೆ.

    ನಿನ್ನೆ ನಡೆದ ಸಭೆಯಲ್ಲಿ ಕೇವಲ 9 ರಾಜ್ಯದ ಮುಖ್ಯಮಂತ್ರಿಗಳಿಗೆ ಮಾತ್ರ ಮಾತನಾಡಲು ಅವಕಾಶ ನೀಡಲಾಗಿತ್ತು ಎನ್ನಲಾಗಿದೆ. ಹೀಗಾಗಿ ತಮ್ಮ ರಾಜ್ಯಗಳ ಸಮಸ್ಯೆ ಹೇಳಬೇಕು ಎಂದುಕೊಂಡಿದ್ದ ಸಿಎಂಗಳಿಗೆ ನಿರಾಸೆ ಉಂಟಾಗಿತ್ತು. ಇನ್ನು, ಕೆಲವರು ಹಿಂದಿ ಅರ್ಥವಾಗದೇ ಸುಮ್ಮನೇ ಮುಖ ಮುಖ ನೋಡಿಕೊಂಡರು.

    ಕಾನ್ಫರೆನ್ಸ್​ನಿಂದ ಹೊರ ಬರುವಾಗ ಮಿಜೋರಾಂ ಮುಖ್ಯಮಂತ್ರಿ ಜೋರಾಮ್​ತಂಗ ಗೊಂದಲದಲ್ಲಿದ್ದಂತೆ ಕಂಡು ಬಂತು. ಈ ಬಗ್ಗೆ ಪ್ರಶ್ನೆ ಮಾಡಿದಾಗ ನನಗೆ ಒಳಗೆ ನಡೆದ ಸಂವಾದ ಅರ್ಥವಾಗಿಲ್ಲ ಎಂದು ಹೇಳಿದ್ದಾರೆ.

    “ಪಿಎಂ ಮೋದಿ ಜೊತೆಗಿನ ಸಂವಾದ ನನಗೆ ಸ್ವಲ್ಪವೂ ಅರ್ಥವಾಗಿಲ್ಲ. ಏಕೆಂದರೆ ಅವರು ಹಿಂದಿಯಲ್ಲೇ ಸಂಭಾಷಣೆ ನಡೆಸಿದ್ದರು,” ಎಂದು ಹೆಳಿಕೊಂಡಿದ್ದಾರೆ.

    ಇದನ್ನೂ ಓದಿ: ಮೇ.15ರ ವರೆಗೆ ಲಾಕ್‌ಡೌನ್ ಮುಂದುವರೆಸುವ ಸಾಧ್ಯತೆ?; ಬಿ.ಎಸ್.‌ ಯಡಿಯೂರಪ್ಪ ಸ್ಪಷ್ಟನೆ

    "ಸೋಂಕು‌ ಹರಡದಂತೆ ಎಲ್ಲಾ ಕ್ರಮ ಕೈಗೊಂಡಿದ್ದೇವೆ. ಮುಂದೆಯೂ ಅದನ್ನು ಮುಂದುವರಿಸುತ್ತೇವೆ. ಹೀಗಾಗಿ ಮೇ 3ರ ನಂತರವೂ ಎರಡು ವಾರಗಳ ಕಾಲ ಲಾಕ್‌ಡೌನ್ ವಿಸ್ತರಣೆಯಾಗುವ ಸಾಧ್ಯತೆ ಇದೆ. ಮೇ 15ರ ವರೆಗೂ ಲಾಕ್‌ಡೌನ್ ಇರಲಿದೆ," ಎಂದು ಬಿಎಸ್​​ವೈ ತಿಳಿಸಿದ್ದರು.
    First published: