ಸಮುದ್ರ ದಡದಲ್ಲಿ ಕಸ ಆಯ್ದು ಸ್ವಚ್ಛತೆಯ ಸಂದೇಶ ಸಾರಿದ ಪ್ರಧಾನಿ ಮೋದಿ

ಪ್ರಧಾನಿ ಮೋದಿ ಸುಮಾರು 30 ನಿಮಿಷಕ್ಕೂ ಹೆಚ್ಚು ಕಾಲ ಸಮುದ್ರದ ತೀರದಲ್ಲಿ ವಾಕಿಂಗ್ ಮಾಡಿದ್ಧಾರೆ. ಇದೇ ವೇಳೆ ಅಲ್ಲಿ ಬಿದ್ದಿದ್ದ ಪ್ಲಾಸ್ಟಿಕ್​ ತ್ಯಾಜ್ಯಗಳು, ಮತ್ತಿತರ ಕಸವನ್ನು ಬ್ಯಾಗ್​ವೊಂದಕ್ಕೆ ತುಂಬಿಸಿದ್ದಾರೆ.

Latha CG | news18-kannada
Updated:October 12, 2019, 11:54 AM IST
ಸಮುದ್ರ ದಡದಲ್ಲಿ ಕಸ ಆಯ್ದು ಸ್ವಚ್ಛತೆಯ ಸಂದೇಶ ಸಾರಿದ ಪ್ರಧಾನಿ ಮೋದಿ
ಸ್ವಚ್ಛತಾ ಕಾರ್ಯದಲ್ಲಿ ಪ್ರಧಾನಿ ಮೋದಿ
  • Share this:
ಚೆನ್ನೈ(ಅ.12): ಪ್ರಧಾನಿ ಮೋದಿ ಇಂದು ಬೆಳ್ಳಂಬೆಳಗ್ಗೆ ಮಹಾಬಲಿಪುರಂನಲ್ಲಿರುವ ಸಮುದ್ರ ದಡದಲ್ಲಿ ಕಸ ತೆಗೆಯುವ ಕೆಲಸ ಮಾಡುವ ಮೂಲಕ ಜನರಿಗೆ ಸ್ವಚ್ಛತೆಯ ಸಂದೇಶ ಸಾರಿದ್ಧಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ಭಾರೀ ವೈರಲ್​ ಆಗುತ್ತಿದೆ. ದೇಶದ ಪ್ರಧಾನಿ ಇಂತಹ ಸ್ವಚ್ಛತಾ ಕಾರ್ಯ ಮಾಡಿರುವುದು ಎಲ್ಲರ ಪ್ರಶಂಸೆಗೆ ಮೆಚ್ಚುಗೆಯಾಗಿದೆ.

ಪ್ರಧಾನಿ ಮೋದಿ ಸುಮಾರು 30 ನಿಮಿಷಕ್ಕೂ ಹೆಚ್ಚು ಕಾಲ ಸಮುದ್ರದ ತೀರದಲ್ಲಿ ವಾಕಿಂಗ್ ಮಾಡಿದ್ಧಾರೆ. ಇದೇ ವೇಳೆ ಅಲ್ಲಿ ಬಿದ್ದಿದ್ದ ಪ್ಲಾಸ್ಟಿಕ್​ ತ್ಯಾಜ್ಯಗಳು, ಮತ್ತಿತರ ಕಸವನ್ನು ಬ್ಯಾಗ್​ವೊಂದಕ್ಕೆ ತುಂಬಿಸಿದ್ದಾರೆ. ಈ ವಿಡಿಯೋವನ್ನು ಮೋದಿ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

 "ಇಂದು ಬೆಳಗ್ಗೆ ಮಹಾಬಲಿಪುರಂನ ಸಮುದ್ರ ತೀರವೊಂದರಲ್ಲಿ ಪ್ಲಾಗಿಂಗ್​  ಮಾಡಿದೆ. ಈ ವೇಳೆ ಸಮುದ್ರದ ದಡದಲ್ಲಿ ಬಿದ್ದಿದ್ದ ಕಸವನ್ನು ಬ್ಯಾಗ್​ಗೆ ತುಂಬಿಸಿದೆ. ಬಳಿಕ ಆ ಬ್ಯಾಗ್​ನ್ನು ಹೋಟೆಲ್​ ಸಿಬ್ಬಂದಿ ಜಯರಾಜ್​ಗೆ ಕೊಟ್ಟೆ. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳೋಣ. ಜೊತೆಗೆ ನಾವು ಸಹ ಸದೃಢ ಹಾಗೂ ಆರೋಗ್ಯವಾಗಿರಬೇಕು," ಎಂದು ಮೋದಿ ಟ್ವೀಟ್​ ಮಾಡಿದ್ದಾರೆ. ಪ್ಲಾಗಿಂಗ್ ಎಂದರೆ ವಾಕ್ ಮಾಡುತ್ತಾ ಅಥವಾ ಜಾಗಿಂಗ್ ಮಾಡುತ್ತಾ ರಸ್ತೆಯಲ್ಲಿ ಬಿದ್ದ ಕಸವನ್ನು ಆಯ್ದು ಸ್ವಚ್ಛಗೊಳಿಸುವುದು.

 

ಮಹಾಬಲಿಪುರಂ ಸಮುದ್ರ ತೀರದಲ್ಲಿ ಮನಸ್ಸಿಗೆ ಆಹ್ಲಾದ ಉಂಟು ಮಾಡುವ ನಡಿಗೆ ಎಂದು ಮೋದಿ ಮತ್ತೊಂದು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.ಪ್ರಧಾನಿ ಮೋದಿ ಚೀನಾ ಅಧ್ಯಕ್ಷ ಶೀ ಜಿನ್​ಪಿಂಗ್​ ಜೊತೆ ಅನೌಪಚಾರಿಕ ಸಭೆ ನಡೆಸಲು ತಮಿಳುನಾಡಿನ ಮಹಾಬಲಿಪುರಂನಲ್ಲಿ ತೆರಳಿದ್ದಾರೆ. ನಿನ್ನೆ ಒಂದು ಸುತ್ತಿನ ಮಾತುಕತಡೆ ಮುಗಿದಿದ್ದು, ಇಂದು ಕೂಡ ಚರ್ಚೆ ನಡೆಯಲಿದೆ.

First published: October 12, 2019, 11:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading