ಪ್ರತಿಪಕ್ಷಗಳಿಂದ ಕೊರೋನಾ ರಾಜಕೀಯ; ಸೋಲಿನಿಂದಲೂ ಬುದ್ದಿ ಕಲಿಯದ ಕಾಂಗ್ರೆಸ್​: ಪ್ರಧಾನಿ ವಾಗ್ದಾಳಿ

ಕಾಂಗ್ರೆಸ್ ಪಕ್ಷದ ವಿಚಾರ  ತೆಗೆದುಕೊಂಡು ಪ್ರಧಾನಿ, ದೇಶದ ಕೇವಲ ಎರಡು ಅಥವಾ ಮೂರು ರಾಜ್ಯಗಳಿಗೆ ಮಾತ್ರ ಸೀಮಿತವಾಗಿರುವ ಪಕ್ಷವು ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸುತ್ತಿದೆ. ಎರಡನೇ ಅವಧಿಯಲ್ಲಿ ದಾಖಲೆಯ ಅಂತರದೊಂದಿಗೆ ಬಿಜೆಪಿಯನ್ನು ದೇಶದ ಜನರು ಆಯ್ಕೆ ಮಾಡಿರುವುದನ್ನು ಅವರ ಕೈಯಲ್ಲಿ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ ಆದ ಕಾರಣ ಈ ರೀತಿ ಕಾಲೆಳೆಯುವ ತಂತ್ರ ಮಾಡುತ್ತಿದೆ ಎಂದರು.

ನರೇಂದ್ರ ಮೋದಿ-ರಾಹುಲ್ ಗಾಂಧಿ.

ನರೇಂದ್ರ ಮೋದಿ-ರಾಹುಲ್ ಗಾಂಧಿ.

 • Share this:
  ದೇಶದಲ್ಲಿ ಸಾಕಷ್ಟು ಕೊರೋನಾ ಲಸಿಕೆಗಳು ಲಭ್ಯವಿದೆ, ಆದರೂ ಸಹ ಈ ವಿಚಾರದಲ್ಲಿ ಪ್ರತಿಪಕ್ಷಗಳು ಬೇಕಂತಲೇ ಸರ್ಕಾರದ ವಿರುದ್ದ ಕತ್ತಿ ಮಸೆಯುತ್ತಿವೆ, ಇದು ಈ ದೇಶದ ದುರಂತ ಹಾಗೂ "ಅತ್ಯಂತ ದುರದೃಷ್ಟಕರ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್ ರಾಜಕಾರಣದ ಕುರಿತು ಪ್ರತಿಪಕ್ಷಗಳ ವಿರುದ್ದ ಮಂಗಳವಾರ ವಾಗ್ದಾಳಿ ನಡೆಸಿದರು.

  ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಪ್ರಧಾನಿ, ಲಸಿಕೆಗಳ ಕೊರತೆಯ ಬಗ್ಗೆ ಯಾರೂ ಭಯಪಡುವ ಅಗತ್ಯವಿಲ್ಲ, ಏಕೆಂದರೆ ಲಭ್ಯತೆಯನ್ನು ಎಲ್ಲಾ ಕಡೆ ದೊರಕುವಂತೆ ಮಾಡಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಲಸಿಕೆ ವ್ಯರ್ಥವಾಗುವುದನ್ನು ತಡೆಯಲು ಪ್ರತಿಪಕ್ಷಗಳು ಸೇರಿದಂತೆ ಎಲ್ಲಾ ಕಡೆಯಿಂದ ಏಕೀಕೃತ ಪ್ರಯತ್ನಗಳು ನಡೆಯಬೇಕು ಎಂದು ಅವರು ಹೇಳಿದರು ಮತ್ತು ಲಸಿಕೆ ತೆಗೆದುಕೊಳ್ಳಲು ಜನರು ಹಿಂಜರಿಯುತ್ತಿದ್ದು ಅದನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಹಾಗೂ ಜನರನ್ನು ತಲುಪಲು ಉಪಾಯಗಳನ್ನು ಸರ್ಕಾರಕ್ಕೆ ತಿಳಿಸಬೇಕು ಎಂದು  ತಮ್ಮ ಪಕ್ಷದ ಸಹೋದ್ಯೋಗಿಗಳನ್ನು ಕೇಳಿದರು.

  ಇದೇ ವೇಳೆ ದೆಹಲಿಯ ಆಮ್​ ಆದ್ಮಿ ಸರ್ಕಾರದ ನಡೆಯನ್ನು ವಿರೋಧಿಸಿದ ಪಿಎಂ ಮೋದಿ ಇದು "ಅತ್ಯಂತ ದುರದೃಷ್ಟಕರ" ಮತ್ತು "ಇದು ಜನರ ಮೇಲಿನ ತಮ್ಮ ಕಾಳಜಿಯನ್ನು ತೋರಿಸುತ್ತದೆ" ಎಂದು ಹೇಳಿದರು, ಏಕೆಂದರೆ ಸುಮಾರು ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವ 20%  ಕಾರ್ಮಿಕರಿಗೆ ರಾಷ್ಟ್ರ ರಾಜಧಾನಿಯಲ್ಲಿ ಆಮ್​ ಆದ್ಮಿ ಪಕ್ಷದ ಸರ್ಕಾರ ಲಸಿಕೆ ನೀಡಿಲ್ಲ.

  ಕಾಂಗ್ರೆಸ್ ಪಕ್ಷದ ವಿಚಾರ  ತೆಗೆದುಕೊಂಡು ಪ್ರಧಾನಿ, ದೇಶದ ಕೇವಲ ಎರಡು ಅಥವಾ ಮೂರು ರಾಜ್ಯಗಳಿಗೆ ಮಾತ್ರ ಸೀಮಿತವಾಗಿರುವ ಪಕ್ಷವು ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸುತ್ತಿದೆ. ಎರಡನೇ ಅವಧಿಯಲ್ಲಿ ದಾಖಲೆಯ ಅಂತರದೊಂದಿಗೆ ಬಿಜೆಪಿಯನ್ನು ದೇಶದ ಜನರು ಆಯ್ಕೆ ಮಾಡಿರುವುದನ್ನು ಅವರ ಕೈಯಲ್ಲಿ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ ಆದ ಕಾರಣ ಈ ರೀತಿ ಕಾಲೆಳೆಯುವ ತಂತ್ರ ಮಾಡುತ್ತಿದೆ ಎಂದರು.

  ಇತಿಹಾಸದಲ್ಲೇ ಕೇಸರಿ ಪಕ್ಷವು ಬಹಳ ಕಷ್ಟ ಪಟ್ಟು ಈ ಮಟ್ಟಕ್ಕೆ ಬಂದಿದೆ, ಅಲ್ಲದೇ ಅತ್ಯಂತ ಹೆಚ್ಚಿನ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ನಮ್ಮನ್ನು ಪ್ರತಿಪಕ್ಷಗಳು ಸಹಿಸುತ್ತಿಲ್ಲ ಆದ ಕಾರಣ. ತಮ್ಮ ಪಕ್ಷದ ಸದಸ್ಯರು ಸಕ್ರಿಯವಾಗಿ ಮತ್ತು ಸಂಸತ್ತಿನಲ್ಲಿ ಹಾಜರಿರಬೇಕು ಮತ್ತು ಶಾಸನಗಳನ್ನು ನಿರ್ಬಂಧಿಸಲು ವಿರೋಧ ಪಕ್ಷಗಳು ಮಾಡುವ ಯಾವುದೇ ಪ್ರಯತ್ನವನ್ನು ತಡೆಯುವ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಆಗ್ರಹಿಸಿದರು.

  ಪ್ರಧಾನಿ ಮೋದಿ ಅವರ ಮಾತಿಗೂ ಮೊದಲು ಸಭೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್​ ಜೋಶಿ ಅವರು ಅಧಿವೇಶನದಲ್ಲಿ ಮಂಡಿಸಲಿರುವ ಮಸೂದೆಗಳು ಮತ್ತು ಶಾಸನಗಳ ಜಾರಿಗೆ ಸರ್ಕಾರ ಏನು ಯೋಜಿಸಿದೆ ಎಂಬುದನ್ನು ವಿವರಿಸಿದರು.

  ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ: 42 ಲಕ್ಷ ಅನರ್ಹ ರೈತರ ಖಾತೆಗೆ ಹೋಗಿದೆ 3 ಸಾವಿರ ಕೋಟಿ ಹಣ​

  ಸಂಸತ್ತಿನಲ್ಲಿ ಸೋಮವಾರ ನಡೆದ ಮುಂಗಾರು ಅಧಿವೇಶನದ ಮೊದಲನೇ ದಿನವು ಕೃಷಿ ಕಾನೂನುಗಳು ಮತ್ತು ಪೆಗಾಸಸ್ ಸ್ನೂಪಿಂಗ್  ವಿಷಯಗಳ ಬಗ್ಗೆ ಪ್ರತಿಪಕ್ಷಗಳು ಭಾರೀ ಕೋಲಾಹಲವನ್ನು ಉಂಟು ಮಾಡಿದವು. ಇದೇ ವೇಳೆಗೆ ತಮ್ಮ ಹೊಸ ಮಂತ್ರಿಗಳನ್ನು ಪರಿಚಯಿಸಲು ಪ್ರಧಾನ ಮಂತ್ರಿ ಅವರಿಗೆ ಅವಕಾಶ ಸಿಗಲಿಲ್ಲ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: