• Home
  • »
  • News
  • »
  • national-international
  • »
  • ಅಖಿಲೇಶ್​ ಯಾದವ್​ ಪಕ್ಷದ ವಿರುದ್ಧ ಹರಿಹಾಯ್ದ ಪ್ರಧಾನಿ ನರೇಂದ್ರ ಮೋದಿ

ಅಖಿಲೇಶ್​ ಯಾದವ್​ ಪಕ್ಷದ ವಿರುದ್ಧ ಹರಿಹಾಯ್ದ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ಮೋದಿ

ಪ್ರಧಾನಿ ಮೋದಿ

ಕೆಂಪು ಟೋಪಿಗಳನ್ನು ಧರಿಸಿರುವವರು ಕೇವಲ ಕೆಂಪು ದೀಪದ ಬಗ್ಗೆ ಕಾಳಜಿ ವಹಿಸುತ್ತಾರೆ. ಇವರು ಉತ್ತರ ಪ್ರದೇಶಕ್ಕೆ ಅವರು ರೆಡ್ ಅಲರ್ಟ್ (ಅಪಾಯ) ಆಗಿರುತ್ತಾರೆ

  • Share this:

    ಲಕ್ನೋ (ಡಿ. 7): ಗೋರಖ್​ಪುರದಲ್ಲಿ (Gorakhpur) ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸಮಾಜವಾದಿ ಪಕ್ಷದ (Samajawadi Party) ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಭಯೋತ್ಪಾದಕರ ವಿರುದ್ಧ ದಯೆ ತೋರಿಸಲು ಮತ್ತು ಅವರನ್ನು ಜೈಲಿನಿಂದ ಹೊರತರಲು ಉತ್ತರ ಪ್ರದೇಶದಲ್ಲಿ ಸರ್ಕಾರ ರಚಿಸಲು 'ಕೆಂಪು ಟೋಪಿ'ಗಳು ಬಯಸುತ್ತಿದ್ದಾರೆ ಎಂದು ಕಿಡಿಕಾರಿದರು


    ಕೆಂಪು ದೀಪದ ಬಗ್ಗೆ ಅವರಿಗೆ ವ್ಯಾಮೋಹ


    ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಭದ್ರಕೋಟೆಯಾದ ಗೋರಖ್‌ಪುರದಲ್ಲಿ ಏಮ್ಸ್ ಮತ್ತು ಪ್ರಮುಖ ರಸಗೊಬ್ಬರ ಘಟಕ ಸೇರಿದಂತೆ ಮೂರು ಬೃಹತ್ ಯೋಜನೆಗಳನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಕೆಂಪು ಟೋಪಿಗಳನ್ನು ಧರಿಸಿರುವವರು ಕೇವಲ ಕೆಂಪು ದೀಪದ ಬಗ್ಗೆ ಕಾಳಜಿ ವಹಿಸುತ್ತಾರೆ. ಇವರು ಉತ್ತರ ಪ್ರದೇಶಕ್ಕೆ ಅವರು ರೆಡ್ ಅಲರ್ಟ್ (ಅಪಾಯ) ಆಗಿರುತ್ತಾರೆ ಎಂದು ಟೀಕಿಸಿದರು.


    ಅವರಿಗೆ ಜೇಬು ತುಂಬಿಸಿಕೊಳ್ಳಲು, ಮಾಫಿಯಾಗಳಿಗೆ ಮುಕ್ತ ಚಾಲನೆ ನೀಡಲು, ಭಯೋತ್ಪಾದಕರಿಗೆ ಕರುಣೆ ತೋರಿಸಲು ಮತ್ತು ಜೈಲುಗಳಿಂದ ಮುಕ್ತಗೊಳಿಸಲು ಅಧಿಕಾರ ಬೇಕು ಎಂದು ಅಖಿಲೇಶ್​ ಯಾದವ್​ ಪಕ್ಷದ ವಿರುದ್ಧ ಹರಿಹಾಯ್ದರು.


    ಹಿಂದಿನ ಸರ್ಕಾರದ ವೈಫಲ್ಯದಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತ


    ಹಿಂದಿನ ಸರ್ಕಾರಗಳು ಜನರ ಅಭಿವೃದ್ಧಿಗೆ ಆಸಕ್ತಿ ತೋರಿಸಲಿಲ್ಲ. ಗೋರಖ್‌ಪುರದ ರಸಗೊಬ್ಬರ ಸ್ಥಾವರವು ಇಡೀ ಪ್ರದೇಶದ ರೈತರಿಗೆ ಇಲ್ಲಿ ಉದ್ಯೋಗಕ್ಕಾಗಿ ಎಷ್ಟು ಮಹತ್ವದ್ದಾಗಿದೆ ಎಂಬುದು ಎಲ್ಲರಿಗೂ ತಿಳಿದಿತ್ತು. ಆದರೆ ಹಿಂದಿನ ಸರ್ಕಾರಗಳು ಇದನ್ನು ಪ್ರಾರಂಭಿಸಲು ಆಸಕ್ತಿ ತೋರಿಸಲಿಲ್ಲ ಎಂದು ಕಿಡಿಕಾರಿದರು


    ಗೋರಖ್‌ಪುರದಲ್ಲಿ ಎಐಐಎಂಎಸ್‌ಗಾಗಿ ಹಲವು ವರ್ಷಗಳಿಂದ ಬೇಡಿಕೆ ಇಡುತ್ತಿರುವುದು ಎಲ್ಲರಿಗೂ ತಿಳಿದಿತ್ತು. ಆದರೆ 2017 ರ ಮೊದಲು ಸರ್ಕಾರವನ್ನು ನಡೆಸುತ್ತಿದ್ದವರು ಏಮ್ಸ್‌ಗೆ ಭೂಮಿ ನೀಡುವಲ್ಲಿ ಎಲ್ಲಾ ರೀತಿಯ ಸಮರ್ಥನೆಗಳನ್ನು ನೀಡಿದರು.


    ಇದನ್ನು ಓದಿ : ಹೊಸ ಅವತಾರದಲ್ಲಿ ಕಾಶಿ ವಿಶ್ವನಾಥ ದೇಗುಲ; ಉದ್ಘಾಟನೆಗೆ ಸಜ್ಜಾದ ಪ್ರಧಾನಿ ಕನಸಿನ ಯೋಜನೆ


    ಡಬ್ಬಲ್​ ಇಂಜಿನ್​ ಸರ್ಕಾರದಿಂದ ಅಭಿವೃದ್ಧಿ


    ಡಬ್ಬಲ್ ಇಂಜಿನ್ ಉತ್ತರ ಪ್ರದೇಶದ ಬಿಜೆಪಿ ಸರ್ಕಾರವು ಸಾಂಕ್ರಾಮಿಕ ಸಮಯದಲ್ಲಿಯೂ ರಾಜ್ಯದ ಪ್ರಗತಿಯನ್ನು ಶಕ್ತಗೊಳಿಸಿತು. ಹಿಂದಿನ ಸರ್ಕಾರಗಳು ಅಪರಾಧಿಗಳಿಗೆ ರಕ್ಷಣೆ ನೀಡುವ ಮೂಲಕ ಉತ್ತರ ಪ್ರದೇಶ ಹೆಸರಿಗೆ ಮಸಿ ತಗುಲಿತು. ಆದರೆ, ಇಂದು ಮಾಫಿಯಾ ಜೈಲಿನಲ್ಲಿದೆ. ಹೂಡಿಕೆದಾರರು ರಾಜ್ಯದಲ್ಲಿ ಮುಕ್ತವಾಗಿ ಬಹಿರಂಗವಾಗಿ ಹೂಡಿಕೆ ಮಾಡುತ್ತಿದ್ದಾರೆ. ಅದು ಡಬಲ್ ಎಂಜಿನ್‌ನ ಡಬಲ್ ಪ್ರಗತಿಯಾಗಿದೆ. ಅದಕ್ಕಾಗಿಯೇ ಯುಪಿ ಡಬಲ್ ಎಂಜಿನ್ ಸರ್ಕಾರದ ಮೇಲೆ ನಂಬಿಕೆ ಹೊಂದಿದೆ ಎಂದು ಯೋಗಿ ಸರ್ಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.


    ಇದನ್ನು ಓದಿ: ಪ್ರಾಯೋಗಿಕ ಪರೀಕ್ಷೆ ನೆಪದಲ್ಲಿ 17 ವಿದ್ಯಾರ್ಥಿಗಳನ್ನು ಶಾಲೆಗೆ ಕರೆಸಿ ದೌರ್ಜನ್ಯ ನಡೆಸಿದ ಶಾಲಾ ಸಿಬ್ಬಂದಿ


    ಸಾಮಾಜಿಕ ಜಾಲತಾಣದಲ್ಲಿ ತಿರುಗೇಟು ನೀಡಿದ ಅಖಿಲೇಶ್​ ಯಾದವ್​


    ಪ್ರಧಾನಿ ಮೋದಿ ಅವರ ವಾಗ್ದಾಳಿಗೆ ಸಾಮಾಜಿಕ ಜಾಲತಾಣ ಟ್ವಿಟರ್​ ಮೂಲಕ ತಿರುಗೇಟು ನೀಡಿರುವ ಉತ್ತರ ಪ್ರದೇಶ ಮಾಜಿ ಸಿಎಂ, ಎಸ್​ಪಿ ನಾಯಕ ಅಖಿಲೇಶ್​ ಯಾದವ್​, ಬೆಲೆ ಏರಿಕೆ, ನಿರುದ್ಯೋಗ, ರೈತರು ಮತ್ತು ಕಾರ್ಮಿಕರ ಕೆಟ್ಟ ಸ್ಥಿತಿಯ ಬಗ್ಗೆ ಬಿಜೆಪಿಗೆ ರೆಡ್ ಅಲರ್ಟ್ ಆಗಿದೆ. ಹತ್ರಾಸ್, ಲಖಿಂಪುರ ಮತ್ತು ಮಹಿಳೆಯರು ಮತ್ತು ಯುವಕರ ಮೇಲೆ ಕಿರುಕುಳ. ಶಿಕ್ಷಣ ವ್ಯವಸ್ಥೆ ಕುಸಿತ, ವ್ಯಾಪಾರ ಮತ್ತು ಆರೋಗ್ಯ ವಿಚಾರಗಳು ಈ ಬಾರಿ ಬಿಜೆಪಿಯನ್ನು ಅಧಿಕಾರದಿಂದ ಹೊರಹಾಕುವ 'ರೆಡ್ ಕ್ಯಾಪ್'ಗಳು ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ

    Published by:Seema R
    First published: