ಸರ್ವಪಕ್ಷ ಸಭೆಗೆ Modi ಗೈರು, ಸಭೆಗೆ ಪ್ರಧಾನಿ ಉಪಸ್ಥಿತಿ ಸಂಪ್ರದಾಯವಲ್ಲ ಎಂದ ಕೇಂದ್ರ ಸರ್ಕಾರ

ಅಕ್ಕಿ, ಪೆಟ್ರೋಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಗ್ಗೆ ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸಿವೆ. ಮತ್ತು ನಾಲ್ವರು ರೈತರು ಸೇರಿದಂತೆ ಎಂಟು ಜನರನ್ನು ಕೊಂದ ಲಖಿಂಪುರ ಖೇರಿ ಪ್ರಕರಣದಲ್ಲಿ ಟೆನಿ ಅವರ ಮಗನ ವಿಷಯದಲ್ಲಿ ಸರ್ಕಾರ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿವೆ.

ಸರ್ವಪಕ್ಷಗಳ ಸಭೆ

ಸರ್ವಪಕ್ಷಗಳ ಸಭೆ

 • Share this:

  ನವದೆಹಲಿ: ಚಳಿಗಾಲದ ಅಧಿವೇಶನದ (Winter Session) ನಿಮಿತ್ತ ಇಂದು ನಡೆದ ಸರ್ವಪಕ್ಷಗಳ ಸಭೆಗೆ (All Party Meeting) ಪ್ರಧಾನಿ ಮೋದಿ (PM Modi) ಅವರು ಗೈರಾಗಿದ್ದಾರೆ. ಸಭೆಗೆ ಪ್ರಧಾನಿಗಳ ಗೈರನ್ನು ವಿರೋಧ ಪಕ್ಷಗಳು (Opposition Party) ಪ್ರಶ್ನೆ ಮಾಡಿವೆ. ಪ್ರಧಾನಿ ಹಾಜರಾತಿ ಸರ್ವಪಕ್ಷಗಳ ಸಭೆಗೆ ಕಡ್ಡಾಯವಲ್ಲ. ಮತ್ತು ಅದು ಸಂಪ್ರದಾಯವಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ವಿರೋಧ ಪಕ್ಷಗಳ ಪ್ರಮುಖ ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಮಲ್ಲಿಕಾರ್ಜುನ ಖರ್ಗೆ, ಅದೀರ್ ರಂಜನ್ ಚೌಧರಿ, ಮತ್ತು ಆನಂದ ಶರ್ಮ ಸೇರಿದಂತೆ ಕಾಂಗ್ರೆಸ್​ನ ಸುದೀಪ್ ಬಂಡೋಪಾಧ್ಯಾಯ, ಮತ್ತು ಟಿಎಂಸಿಯ ದೀರಕ್ ಓಬ್ರೇನ್, ಡಿಎಂಕೆಯ ಟಿಆರ್ ಬಾಲು, ಮತ್ತು ತಿರುಚಿ ಶಿವ, ಎನ್​ಸಿಪಿಯಿಂದ ಶರದ್ ಪವಾರ್, ಶಿವಸೇನೆಯಿಂದ ವಿನಾಯಕ್ ರಾವತ್, ಸಮಾಜವಾದಿ ಪಕ್ಷದಿಂದ ರಾಮಗೋಪಾಲ್ ಯಾದವ್, ಬಿಎಸ್​ಪಿಯಿಂದ ಸತೀಶ್ ಮಿಶ್ರಾ, ಬಿಜೆಪಿಯ ಪ್ರಸನ್ನ ಆಚಾರ್ಯ, ಫಾರೂಕ್ ಅಬ್ದುಲ್ಲಾ, ಅಕಾಲಿ ದಳದ ಬಲ್ವಿಂದರ್ ಸಿಂಗ್ ಭುಂದರ್, ವೈಎಸ್​ಆರ್​ ಕಾಂಗ್ರೆಸ್​ನಿಂದ ವಿಜಯಸಾಯಿ ರೆಡ್ಡಿ, ಟಿಡಿಪಿಯಿಂದ ಜಯದೇವ ಗಲ್ಲಾ ಸಿಪಿಐನ ಬಿನೋಯ್ ವಿಸ್ವಂ ಹಾಗೂ ಎಎಪಿಯ ಸಂಜಯ್ ಸಿಂಗ್ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು.


  ವಿರೋಧ ಪಕ್ಷಗಳು ಸಭೆಯಲ್ಲಿ ಕೆಲವು ಪ್ರಮುಖ ಸಮಸ್ಯೆಗಳ ವಿಷಯವಾಗಿ ಧ್ವನಿ ಎತ್ತಿವೆ.  ವಿವಾದಾಸ್ಪದ ಕೃಷಿ ಕಾನೂನುಗಳನ್ನು ರದ್ದುಪಡಿಸಿದ ನಂತರವೂ ರೈತರು ಬೀದಿಗಿಳಿಯಲು ಎಂಎಸ್‌ಪಿಗಾಗಿ ಕಾನೂನನ್ನು ತರಲು ಮುಂದಾಗಿರುವುದು. ಲಖಿಂಪುರ ಖೇರಿ ಘಟನೆಯ ನಂತರ ಗೃಹ ವ್ಯವಹಾರಗಳ ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರನ್ನು ವಜಾಗೊಳಿಸದ ಸರ್ಕಾರದ ನಿಲುವನ್ನು ವಿರೋಧಿಸಿ ಸರ್ಕಾರದಿಂದ ಉತ್ತರವನ್ನು ಕೇಳಿವೆ.

  ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಪಕ್ಷವು ಎಂಎಸ್‌ಪಿ, ಮೂರು ಮಸೂದೆಗಳ ಹಿಂಪಡೆಯುವಿಕೆ ಮತ್ತು ಕೋವಿಡ್ -19 ನಿರ್ವಹಣೆಯ ಸಮಸ್ಯೆಗಳನ್ನು ಪ್ರಸ್ತಾಪಿಸಿದೆ ಎಂದು ಹೇಳಿದರು. ಸಭೆಗೆ ಪ್ರಧಾನಿ ಗೈರಾಗಿರುವುದನ್ನು ಅವರು ಪ್ರಶ್ನಿಸಿದ್ದಾರೆ.


  ಸರ್ವಪಕ್ಷಗಳ ಸಭೆಗೆ ಪ್ರಧಾನಿ ಹಾಜರಾಗುವ ಸಂಪ್ರದಾಯವನ್ನು ಆರಂಭಿಸಿದ್ದೆ ಮೋದಿ ಅವರು. ಈ ಹಿಂದೆ ಯಾವುದೇ ನಾಯಕರು ಇಂತಹ ಸಭೆಗೆ ಬರುತ್ತಿರಲಿಲ್ಲ ಎಂದು ಸರ್ಕಾರವು ಹೇಳಿದೆ. “ಇದು ಪ್ರಧಾನಿ ಮೋದಿ ಆರಂಭಿಸಿದ ಸಂಪ್ರದಾಯ. ಈ ಸಭೆಗೆ ಈ ಹಿಂದೆ ಯಾರೂ ಬರುತ್ತಿರಲಿಲ್ಲ. ಹಾಗಾಗಿ ಪ್ರತಿಪಕ್ಷಗಳು ಇಂತಹ ಪ್ರಶ್ನೆಗಳನ್ನು ಎತ್ತುವುದು ಸರಿಯಲ್ಲ. ಇಂದು ಪ್ರಧಾನಿಯವರು ಈ ಸಭೆಗೆ ಬರಲು ಸಾಧ್ಯವಾಗಲಿಲ್ಲ ಎಂದು ಸರ್ಕಾರ ಪ್ರಧಾನಿ ಮೋದಿ ಗೈರಿನ ಬಗ್ಗೆ ಸಮರ್ಥನೆ ನೀಡಿದೆ.

  ಅಕ್ಕಿ, ಪೆಟ್ರೋಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಗ್ಗೆ ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸಿವೆ. ಮತ್ತು ನಾಲ್ವರು ರೈತರು ಸೇರಿದಂತೆ ಎಂಟು ಜನರನ್ನು ಕೊಂದ ಲಖಿಂಪುರ ಖೇರಿ ಪ್ರಕರಣದಲ್ಲಿ ಟೆನಿ ಅವರ ಮಗನ ವಿಷಯದಲ್ಲಿ ಸರ್ಕಾರ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿವೆ. RJD ಯಂತಹ ಪ್ರಾದೇಶಿಕ ಪಕ್ಷಗಳು MSP ಯನ್ನು ಕಾನೂನಿನ ಅಡಿಯಲ್ಲಿ ತರಬೇಕೆಂದು ಕೇಳಿಕೊಂಡವು ಮತ್ತು ಪೆಗಾಸಸ್ ಬಗ್ಗೆ ವಿವರವಾದ ಚರ್ಚೆಗೆ ಒತ್ತಾಯಿಸಿದವು.

  ಸಂಜಯ್ ಸಿಂಗ್ ನೇತೃತ್ವದ ಆಮ್ ಆದ್ಮಿ ಪಕ್ಷವು ಕೇಂದ್ರ ಸರ್ಕಾರದ ಪರವಾಗಿ ಎಂಎಸ್‌ಪಿ ಮತ್ತು ನಡೆಯುತ್ತಿರುವ ರೈತ ಆಂದೋಲನದಿಂದ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದರು. ಪಂಜಾಬ್‌ನಂತಹ ಸ್ಥಳದಲ್ಲಿ ಬಿಎಸ್‌ಎಫ್ ನಿಯೋಜನೆಯ ವಿಷಯವನ್ನು ಪ್ರಸ್ತಾಪಿಸಿ, ಇದು ಅಶಾಂತಿಗೆ ಕಾರಣವಾಗುತ್ತದೆ ಎಂದು ಹೇಳಿದರು. ಮಾತನಾಡುವಾಗ ಪದೇ ಪದೇ ಅಡ್ಡಿಪಡಿಸಿದ ನಂತರ, ಸಿಂಗ್ ಸಭೆಯಿಂದ ಹೊರನಡೆದರು.

  ಇದನ್ನು ಓದಿ: Omicron ಆತಂಕ: ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಮಾರ್ಗಸೂಚಿ

  NDA ಮಿತ್ರಪಕ್ಷ NPP ಯ ನಾಯಕಿ ಅಗಾಥಾ ಸಂಗ್ಮಾ ಅವರು 2019 ರಲ್ಲಿ ಅಂಗೀಕರಿಸಿದ CAA ನಿಯಮಗಳನ್ನು ಸರ್ಕಾರವು ತಿಳಿಸದಿರುವ ವಿಷಯವನ್ನು ಪ್ರಸ್ತಾಪಿಸಿದರು ಮತ್ತು ಇದು ಅವರ ಪಕ್ಷಕ್ಕೆ ಮಾತ್ರವಲ್ಲದೆ ಈಶಾನ್ಯದ ಎಲ್ಲಾ ಪ್ರಾದೇಶಿಕ ಪಕ್ಷಗಳಿಗೂ ಕಳವಳವಾಗಿದೆ ಎಂದು ಹೇಳಿದರು.
  Published by:HR Ramesh
  First published: