PM Narendra Modi: ಇವರೇ ಅಂತೆ ಪ್ರಧಾನಿ ಮೋದಿ ಸ್ಪೆಷಲ್​ ಫ್ರೆಂಡ್​..!

ಮಗು ಯಾರು ಎಂಬ ಯಾವುದೇ ಮಾಹಿತಿ, ವಿವರಗಳನ್ನು ಪ್ರಧಾನಿ ಮೋದಿ ಹಂಚಿಕೊಂಡಿಲ್ಲ.

Latha CG | news18
Updated:July 23, 2019, 4:15 PM IST
PM Narendra Modi: ಇವರೇ ಅಂತೆ ಪ್ರಧಾನಿ ಮೋದಿ ಸ್ಪೆಷಲ್​ ಫ್ರೆಂಡ್​..!
ಪ್ರಧಾನಿ ನರೇಂದ್ರ ಮೋದಿ
Latha CG | news18
Updated: July 23, 2019, 4:15 PM IST
ನವದೆಹಲಿ,(ಜು.23): ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲು ಇಂದು ಸಂಸತ್ತಿಗೆ ಬಹಳ ವಿಶೇಷ ಅತಿಥಿಯೊಬ್ಬರು ಆಗಮಿಸಿದ್ದರು. ಅವರು ಮೋದಿಯವರ ಸ್ಪೆಷಲ್​ ಫ್ರೆಂಡ್​ ಕೂಡ ಹೌದಂತೆ.  ಅವರು ಸಂಸತ್ತಿನಲ್ಲೇ ಪ್ರಧಾನಿ ಜೊತೆ ಆಡ ಕೂಡ ಆಡಿದ್ರಂತೆ.  ಮೋದಿ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಗೆಳೆಯನೊಂದಿಗಿರುವ ಫೋಟೋಗಳನ್ನು ಹಾಕಿಕೊಂಡಿದ್ದಾರೆ. ಅಂದ ಹಾಗೆ ಆ ಗೆಳೆಯ ಬೇರೆ ಯಾರೂ ಅಲ್ಲ, ಒಂದು ಪುಟ್ಟ ಕಂದಮ್ಮ. ಮೋದಿ ಹಂಚಿಕೊಂಡಿರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.

"ಇಂದು ಸಂಸತ್ತಿನಲ್ಲಿ ನನ್ನನ್ನು ಭೇಟಿಯಾಗಲು ಬಹಳ ವಿಶೇಷ ಸ್ನೇಹಿತನೊಬ್ಬ ಬಂದಿದ್ದಾನೆ" ಎಂದು ಪ್ರಧಾನಿ ಮೋದಿ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪುಟ್ಟ ಮಗುವಿನ ಫೋಟೋಗಳೊಂದಿಗೆ ಬರೆದುಕೊಂಡಿದ್ದಾರೆ.




 




View this post on Instagram




 

A very special friend came to meet me in Parliament today.


A post shared by Narendra Modi (@narendramodi) on






ಪ್ರಧಾನಿ ಮೋದಿ ತಮ್ಮ ಕುರ್ಚಿಯ ಮೇಲೆ ಕುಳಿತು ಆ ಪುಟ್ಟ ಕಂದನ ಎರಡು ಕಾಲುಗಳನ್ನು ಹಿಡಿದು ಆಡವಾಡುತ್ತಿದ್ಧಾರೆ. ಮಗು ಕೈಯಲ್ಲೊಂದು ಆಟಿಕೆ ಹಿಡಿದು ಮೋದಿಯವರ ಮುಖವನ್ನೇ ನೋಡುತ್ತಿದೆ.



 

ಮತ್ತೊಂದು ಫೋಟೋದಲ್ಲಿ ಮೋದಿ ಆ ಮುದ್ದಾದ ಮಗುವನ್ನು ತಮ್ಮ ತೊಡೆಯ ಮೇಲೆ ಕೂರಿಸಿಕೊಂಡಿದ್ದಾರೆ. ಅವರ ಮುಂದೆ ಇರುವ ಟೇಬಲ್​ ಮೇಲೆ ಮಗುವಿಗಾಗಿ ಚಾಕೋಲೆಟ್​​ಗಳನ್ನು ಇಟ್ಟುಕೊಂಡಿದ್ದಾರೆ. ಆ ಮಗು ಚಾಕೋಲೆಟ್​ ತೆಗೆದುಕೊಳ್ಳಲು ಹಾತೊರೆಯುತ್ತಿದೆ. ಮೋದಿ ಬಹಳ ಉತ್ಸಾಹದಿಂದ ಮಗುವನ್ನೇ ನೋಡುತ್ತಿದ್ದಾರೆ. ಪುಟ್ಟ ಮಗು ಕೂಡ ಚಂದದಿಂದ ಮೋದಿ ಜೊತೆ ಆಟವಾಡುತ್ತಿದೆ.



 

ಮಗು ಯಾರು ಎಂಬ ಯಾವುದೇ ಮಾಹಿತಿ, ವಿವರಗಳನ್ನು ಪ್ರಧಾನಿ ಮೋದಿ ಹಂಚಿಕೊಂಡಿಲ್ಲ. ಮೋದಿ ಆಗಾಗ್ಗೆ ಮಕ್ಕಳೊಂದಿಗೆ ಬೆರೆಯುವುದು ಸಹಜ. ಆದರೆ ಈ ಫೋಟೋ ಹಾಗೂ ಅದಕ್ಕೆ ಕೊಟ್ಟ ಕ್ಯಾಪ್ಶನ್​ ಬಹಳಷ್ಟು ಜನರಿಗೆ ಮೆಚ್ಚುಗೆಯಾಗಿದ್ದು, ವೈರಲ್​ ಆಗುತ್ತಿದೆ.
First published:July 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...