• Home
  • »
  • News
  • »
  • national-international
  • »
  • First Tricolour: ನೆಹರೂ ಹಾರಿಸಿದ ಮೊದಲು ತ್ರಿವರ್ಣ ಧ್ವಜದ ಫೋಟೋ ಶೇರ್ ಮಾಡಿದ ಮೋದಿ, ಜನರಲ್ಲಿ ವಿಶೇಷ ಮನವಿ

First Tricolour: ನೆಹರೂ ಹಾರಿಸಿದ ಮೊದಲು ತ್ರಿವರ್ಣ ಧ್ವಜದ ಫೋಟೋ ಶೇರ್ ಮಾಡಿದ ಮೋದಿ, ಜನರಲ್ಲಿ ವಿಶೇಷ ಮನವಿ

ನೆಹರೂ ಹಾರಿಸಿದ ಮೊದಲ ಧ್ವಜ

ನೆಹರೂ ಹಾರಿಸಿದ ಮೊದಲ ಧ್ವಜ

First Tricolour: ನೆಹರೂ ಅವರು ಹಾರಿಸಿದ ಮೊದಲ ತ್ರಿವರ್ಣ ಧ್ವಜದ ಫೋಟೋವನ್ನು ಪ್ರಧಾನಿ ನರೇಂದ್ರ ಮೋದಿ ಶೇರ್ ಮಾಡಿದ್ದಾರೆ. ಅದರೊಂದಿಗೆ ಜನರಲ್ಲಿ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಏನದು ಗೊತ್ತಾ?

  • Share this:

ದೆಹಲಿ(ಜು.22): ದೇಶವು 75 ನೇ ಸ್ವಾತಂತ್ರ್ಯೋತ್ಸವವನ್ನು (75th Independence Day) ಆಚರಿಸುವ ಸಂಭ್ರಮದಲ್ಲಿರುವಾಗ ಆಗಸ್ಟ್ 13-15 ರ ನಡುವೆ ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು (Tricolour) ಹಾರಿಸುವ ಅಥವಾ ಪ್ರದರ್ಶಿಸುವ ಮೂಲಕ ‘ಹರ್ ಘರ್ ತಿರಂಗ’ (Har Ghar Tirang) ಆಂದೋಲನವನ್ನು ಬಲಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಶುಕ್ರವಾರ ಭಾರತದ ಜನತೆಗೆ ಮನವಿ ಮಾಡಿದ್ದಾರೆ. "ಆಜಾದಿ ಕಾ ಅಮೃತ್ ಮಹೋತ್ಸವ" ವನ್ನು ಗುರುತಿಸಲು ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸುವ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸುವಂತೆ ಮೋದಿ ವಿನಂತಿಸಿದ್ದಾರೆ. ಈ ಮೂಲಕ ರಾಷ್ಟ್ರಧ್ವಜದೊಂದಿಗೆ (National Flag) ನಮ್ಮ ಸಂಪರ್ಕವನ್ನು ಇನ್ನಷ್ಟು ಗಾಢಗೊಳಿಸುವ ಬಗ್ಗೆ ಮೋದಿ ಸರಣಿ ಟ್ವೀಟ್‌ ಮಾಡಿದ್ದಾರೆ.


ತ್ರಿವರ್ಣ ಧ್ವಜವನ್ನು ರಾಷ್ಟ್ರಧ್ವಜವಾಗಿ ಅಳವಡಿಸಿಕೊಳ್ಳಲು ಕಾರಣವಾದ ಅಧಿಕೃತ ಸಂವಹನಗಳು ಸೇರಿದಂತೆ ಇತಿಹಾಸದ ಕೆಲವು ಆಸಕ್ತಿದಾಯಕ ವಿಚಾರಗಳನ್ನು ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಹಾರಿಸಿದ ಮೊದಲ ತ್ರಿವರ್ಣ ಧ್ವಜದ ಚಿತ್ರವನ್ನು ಸಹ ಅವರು ಪೋಸ್ಟ್ ಮಾಡಿದ್ದಾರೆ.


ಜುಲೈ 22ರ ಪ್ರಾಮುಖ್ಯತೆ ತಿಳಿಸಿದ ಮೋದಿ


ಇಂದು, ಜುಲೈ 22 ನಮ್ಮ ಇತಿಹಾಸದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. 1947 ರಲ್ಲಿ ಈ ದಿನ ನಮ್ಮ ರಾಷ್ಟ್ರಧ್ವಜವನ್ನು ಅಳವಡಿಸಲಾಯಿತು. ನಮ್ಮ ತ್ರಿವರ್ಣ ಧ್ವಜಕ್ಕೆ ಸಂಬಂಧಿಸಿದ ಸಮಿತಿಯ ವಿವರಗಳು ಮತ್ತು ಪಂಡಿತ್ ನೆಹರು ಅವರು ಹಾರಿಸಿದ ಮೊದಲ ತ್ರಿವರ್ಣ ಧ್ವಜ ಸೇರಿದಂತೆ ಇತಿಹಾಸದಿಂದ ಕೆಲವು ಆಸಕ್ತಿದಾಯಕ ವಿಚಾರ ಹಂಚಿಕೊಳ್ಳುತ್ತಿದ್ದಾರೆ, ”ಎಂದು ಅವರು ಹೇಳಿದರು.


ಕನಸುಗಳ ಭಾರತ ನಿರ್ಮಿಸಲು ಬದ್ಧ


ನಾವು ವಸಾಹತುಶಾಹಿ ಆಡಳಿತದ ವಿರುದ್ಧ ಹೋರಾಡುತ್ತಿರುವಾಗ ಮುಕ್ತ ಭಾರತಕ್ಕಾಗಿ ಧ್ವಜದ ಕನಸು ಕಂಡವರೆಲ್ಲರ ಧೈರ್ಯ ಮತ್ತು ಪ್ರಯತ್ನಗಳನ್ನು ನಾವು ಇಂದು ನೆನಪಿಸಿಕೊಳ್ಳುತ್ತೇವೆ. ಅವರ ಯೋಚನೆ ಈಡೇರಿಸಲು ಮತ್ತು ಅವರ ಕನಸುಗಳ ಭಾರತವನ್ನು ನಿರ್ಮಿಸಲು ನಾವು ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ ಎಂದಿದ್ದಾರೆ.



ಇದನ್ನೂ ಓದಿ: Farewell Dinner: ನಿರ್ಗಮಿತ ರಾಷ್ಟ್ರಪತಿ ಕೋವಿಂದ್​ಗೆ ಪ್ರಧಾನಿ ಮೋದಿಯಿಂದ ವಿಶೇಷ ಬೀಳ್ಕೊಡುಗೆ ಭೋಜನ


ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ 'ಹರ್ ಘರ್ ತಿರಂಗ' ಅಭಿಯಾನದ ಭಾಗವಾಗಿ ನಡೆಯಲಿರುವ ಬೆಳಗಿನ ಮೆರವಣಿಗೆಗಳಲ್ಲಿ 'ರಘುಪತಿ ರಾಘವ್ ರಾಜಾ ರಾಮ್' ಭಕ್ತಿಗೀತೆ ಮತ್ತು ರಾಷ್ಟ್ರೀಯ ಗೀತೆ 'ವಂದೇ ಮಾತರಂ' ಹಾಡಲು ತನ್ನ ಸದಸ್ಯರನ್ನು ಕೇಳಿದೆ.



'ಹರ್ ಘರ್ ತಿರಂಗ' ಕಾರ್ಯಕ್ರಮ


ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು ಕಳೆದ ವಾರ ದೇಶದ ಪ್ರತಿಯೊಬ್ಬ ನಾಗರಿಕರಲ್ಲಿ ದೇಶಭಕ್ತಿಯ ಭಾವನೆಯನ್ನು ಬೆಳೆಸುವ ಸಲುವಾಗಿ ಸರ್ಕಾರವು 'ಹರ್ ಘರ್ ತಿರಂಗ' ಕಾರ್ಯಕ್ರಮವನ್ನು ಘೋಷಿಸಿದೆ ಎಂದು ಹೇಳಿದರು.


Indian Flag helped to Pakistani Turkish Students in Russia Ukraine War
ಭಾರತದ ಹೆ್ಮೆಯ ತ್ರಿವರ್ಣ ಧ್ವಜ


ದೇಶದ ಪ್ರತಿಯೊಬ್ಬ ನಾಗರಿಕರಲ್ಲಿ ದೇಶಭಕ್ತಿಯ ಭಾವನೆ ಮೂಡಿಸಲು, ಕೇಂದ್ರ ಸರ್ಕಾರವು 'ಹರ್ ಘರ್ ತಿರಂಗ' ಎಂಬ ಅತ್ಯುತ್ತಮ ಕಾರ್ಯಕ್ರಮವನ್ನು ಘೋಷಿಸಿದೆ. ಅಂದರೆ ದೇಶದ ಪ್ರತಿಯೊಬ್ಬ ನಾಗರಿಕನು ತನ್ನ ಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾಕಬೇಕು ಎಂದು ಠಾಕೂರ್ ಉಲ್ಲೇಖಿಸಿದ್ದಾರೆ.


20 ಕೋಟಿ ಮನೆಗಳಲ್ಲಿ ತ್ರಿವರ್ಣ ಧ್ವಜ


ಇದಕ್ಕಾಗಿ ಗೃಹ ಸಚಿವರು ಎಲ್ಲಾ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದರು. ದೇಶಾದ್ಯಂತ 20 ಕೋಟಿ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಕಾರ್ಯಕ್ರಮವನ್ನು ನಿಗದಿಪಡಿಸಲಾಗಿದೆ. ನಾಳೆ ನಾವು ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಕಾರ್ಯಕ್ರಮವನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.

Published by:Divya D
First published: