Ashok Gehlot: ಮೋದಿ, ಅಮಿತ್ ಶಾ ದುರಹಂಕಾರ ಹೆಚ್ಚು ಸಮಯ ಉಳಿಯಲ್ಲ ಎಂದ ಸಿಎಂ ಗೆಹ್ಲೋಟ್

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅಹಂಕಾರ ಮತ್ತು ದುರಹಂಕಾರದಿಂದ ತಿರುಗಾಡುತ್ತಿದ್ದಾರೆ. ದುರಹಂಕಾರ ಇವತ್ತಿನವರೆಗೂ ಯಾರ ಬಳಿಯೂ ಕೆಲಸ ಮಾಡಿಲ್ಲ, ಅವರಿಗೂ ಕೆಲಸ ಆಗುತ್ತಿಲ್ಲ, ಇವತ್ತಲ್ಲದಿದ್ದರೆ ನಾಳೆ ಮುಗಿಯುತ್ತದೆ ಎಂದು ಗೆಹ್ಲೋಟ್ ತೀವ್ರ ವಾಗ್ದಾಳಿ ನಡೆಸಿದ್ದಾರೆ

ಪ್ರಧಾನಿ ಮೋದಿ ಹಾಗೂ ಸಚಿವ ಅಮಿತ್ ಶಾ

ಪ್ರಧಾನಿ ಮೋದಿ ಹಾಗೂ ಸಚಿವ ಅಮಿತ್ ಶಾ

  • Share this:
ದೆಹಲಿ(ಜೂ. 13): ಕಾಂಗ್ರೆಸ್ (Congress) ಮುಖಂಡ ಜೂ.13ರಂದು ಇಡಿ (ED) ಮುಂದೆ ವಿಚಾರಣೆಗೆ ಹಾಜರಾಗಿದ್ದು ಎರಡನೇ ದಿನವೂ ವಿಚಾರಣೆ ಮುಂದುವರಿದಿದೆ. ಅದೇ ರೀತಿ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ (Sonia Gandhi) ಅವರಿಗೂ ವಿಚಾರಣೆಗೆ ಹಾಜರಾಗಲು ಇಡಿ ಸಮನ್ಸ್ (ED Summons) ಕಳುಹಿಸಿದೆ. ಈ ನಡುವೆ ಕಾಂಗ್ರೆಸ್ ಮುಖಂಡರ (Congress Leaders) ವಿಚಾರಣೆಗೆ ಸಂಬಂಧಿಸಿ ಪಕ್ಷದ ಕಾರ್ಯಕರ್ತರು ತೀವ್ರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ದೇಶಾದ್ಯಂತ ಬೃಹತ್ ಪ್ರತಿಭಟನೆಗೆ (Protest) ಯೋಜನೆ ಹಾಕಿಕೊಂಡಿದ್ದ ಕಾಂಗ್ರೆಸ್ ಅದರಂತೆಯೇ ಜೂ.13ರಂದು ದೇಶಾದ್ಯಂತ ಹಲವು ಭಾಗಗಳಲ್ಲಿ ಪ್ರತಿಭಟನೆ ನಡೆಸಿದೆ. ಈ ಸಂದರ್ಭ ಕೇಂದ್ರ ಸರ್ಕಾರ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎನ್ನುವ ಆರೋಪ ವಿರೋಧ ಪಕ್ಷಗಳಿಂದ ವ್ಯಾಪಕವಾಗಿ ಕೇಳಿ ಬರುತ್ತಿದೆ. ಇದೀಗ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ (Ashok Gehlot) ಅವರೂ ಈ ನಿಟ್ಟಿನಲ್ಲಿ ಮೋದಿ ಹಾಗೂ ಅಮಿತ್ ಶಾ ಅವರನ್ನು ಕಟುವಾಗಿ ಟೀಕಿಸಿದ್ದಾರೆ.

ಬಿಜೆಪಿ ನೇತೃತ್ವದ ಆಡಳಿತದ ವಿರುದ್ಧದ ಸೈದ್ಧಾಂತಿಕ ಹೋರಾಟದಲ್ಲಿ ತಾವು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂಬ ಸಂದೇಶವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೀಡಿದ್ದಾರೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೋಮವಾರ ಹೇಳಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಡೆಸುತ್ತಿರುವ ದುರಹಂಕಾರ  ಅಂತ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.

ಆರೇಳು ವರ್ಷ ಹಿಂದಿನ ಘಟನೆ ತೆಗೆದು ವಿರೋಧ ಪಕ್ಷದ ಮೇಲೆ ಒತ್ತಡ

ಆಡಳಿತಾರೂಢ ಬಿಜೆಪಿಯು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಆರೋಪಿಸಿದ್ದಾರೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧದ 6-7 ವರ್ಷಗಳ ಹಿಂದಿನ ಪ್ರಕರಣಗಳನ್ನು ಕೈಗೆತ್ತಿಕೊಂಡ ರೀತಿ ನೋಡಿದರೆ ರಾಜಕೀಯ ವಿರೋಧಿಗಳ ಮೇಲೆ ಒತ್ತಡ ಹೇರುವ ರಾಜಕಾರಣ ಮಾಡುತ್ತಿರುವುದು ಸ್ಪಷ್ಟವಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಕಾಂಗ್ರೆಸ್ ನಾಯಕರು ಅರೆಸ್ಟ್

ಮನಿ ಲಾಂಡರಿಂಗ್ ಪ್ರಕರಣದಲ್ಲಿ ವಿಚಾರಣೆಗಾಗಿ ರಾಹುಲ್ ಗಾಂಧಿ ಇಡಿ ಮುಂದೆ ಹಾಜರಾಗುತ್ತಿದ್ದಂತೆ ಕಾಂಗ್ರೆಸ್ ನಾಯಕರು ಬೀದಿಗಿಳಿದ ನಂತರ ಅವರು ಹೇಳಿಕೆ ನೀಡಿದ್ದಾರೆ. ಪೊಲೀಸರು ಕೇಂದ್ರ ದೆಹಲಿ ಪ್ರದೇಶಗಳಿಗೆ ಭಾರಿ ಬ್ಯಾರಿಕೇಡ್‌ಗಳನ್ನು ಹಾಕಿದರು. ನಿಷೇಧಾಜ್ಞೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪಕ್ಷದ ನಾಯಕರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Morning Digest: ಮತ್ತೆ ED ಮುಂದೆ ರಾಹುಲ್ ಗಾಂಧಿ, ಜೋಗ ಜಲಪಾತದಲ್ಲಿ ವಿಸ್ಮಯ, ಭೂಕುಸಿತ; ಬೆಳಗಿನ ಟಾಪ್ ನ್ಯೂಸ್ ಗಳು

“ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರು ದೇಶಕ್ಕೆ ಸಂದೇಶವನ್ನು ನೀಡಿದ್ದಾರೆ, ನಾವು ರಾಜಿ ಮಾಡಿಕೊಳ್ಳುವುದಿಲ್ಲ, ನಾವು ಸಿದ್ಧಾಂತದ ಆಧಾರದ ಮೇಲೆ ಹೋರಾಡುತ್ತೇವೆ ಎನ್ನುವುದನ್ನು ತೋರಿಸಿದ್ದಾರೆ. ಸಿಬಿಐ, ಆದಾಯ ತೆರಿಗೆ, ಇಡಿ, ಡಿಆರ್‌ಐ, ನ್ಯಾಯಾಂಗದ ಮೇಲೆ ತುಂಬಾ ಒತ್ತಡವಿದೆ, ಯಾರಾದರೂ ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಬಯಸಿದರೆ, ಆ ವ್ಯಕ್ತಿ ಅದನ್ನು ಮಾಡಲು ಸಾಧ್ಯವಿಲ್ಲ ಎಂದು ಗೆಹ್ಲೋಟ್ ಸುದ್ದಿಗಾರರಿಗೆ ತಿಳಿಸಿದರು.

ಬಿಜೆಪಿಯವರು ದೇಶದಲ್ಲೆಡೆ ಸೀಮೆ ಎಣ್ಣೆ ಸುರಿದಿದ್ದಾರೆ

“ನಾವು ದೇಶವನ್ನು ಎಲ್ಲಿಗೆ ಕೊಂಡೊಯ್ಯಬೇಕು ಎಂದು ಪ್ರತಿಯೊಬ್ಬ ಭಾರತೀಯನೂ ಯೋಚಿಸಬೇಕಾದ ಸಮಯ ಬಂದಿದೆ. ಬಿಜೆಪಿಯವರು ದೇಶದೆಲ್ಲೆಡೆ ಸೀಮೆಎಣ್ಣೆ ಸುರಿದಿದ್ದಾರೆ ಎಂದು ರಾಹುಲ್ ಗಾಂಧಿ ಲಂಡನ್ ನಲ್ಲಿ ಹೇಳಿದ್ದಾರೆ. ಈಗ ಏನು ನಡೆಯುತ್ತಿದೆ ಎಂದು ನೀವು ನೋಡುತ್ತೀರಾ? ಗಲಭೆಗಳು ನಡೆಯುತ್ತಿವೆ, ಗಲಭೆಗಳನ್ನು ಪ್ರಚೋದಿಸಲಾಗುತ್ತಿದೆ, ಉದ್ವಿಗ್ನತೆ ಹೆಚ್ಚುತ್ತಿದೆ, ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ದುರಹಂಕಾರ ಎಲ್ಲಿಯೂ ಕೆಲಸ ಮಾಡಲ್ಲ

“ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅಹಂಕಾರ ಮತ್ತು ದುರಹಂಕಾರದಿಂದ ತಿರುಗಾಡುತ್ತಿದ್ದಾರೆ. ದುರಹಂಕಾರ ಇವತ್ತಿನವರೆಗೂ ಯಾರ ಬಳಿಯೂ ಕೆಲಸ ಮಾಡಿಲ್ಲ, ಅವರಿಗೂ ಕೆಲಸ ಆಗುತ್ತಿಲ್ಲ, ಇವತ್ತಲ್ಲದಿದ್ದರೆ ನಾಳೆ ಮುಗಿಯುತ್ತದೆ,'' ಎಂದರು.

ಇದನ್ನೂ ಓದಿ: Rahul Gandhi: ಇಂದು ಇಡಿ ಕಚೇರಿಯಲ್ಲಿ ಏನೇನಾಯ್ತು? ನಾಳೆಯೂ ನಡೆಯಲಿದೆ ರಾಹುಲ್ ಗಾಂಧಿ ವಿಚಾರಣೆ

ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಮತ್ತು ಕಾಂಗ್ರೆಸ್ ನಾಯಕರಾದ ರಣದೀಪ್ ಸುರ್ಜೆವಾಲಾ, ಕೆ ಸಿ ವೇಣುಗೋಪಾಲ್ ಮತ್ತು ಅಧೀರ್ ರಂಜನ್ ಚೌಧರಿ ಅವರನ್ನು ಬಂಧಿಸಲಾಗಿದೆ.

51 ವರ್ಷದ ರಾಹುಲ್ ಗಾಂಧಿ ಅವರು ಪ್ರಿಯಾಂಕಾ ಗಾಂಧಿ ವಾದ್ರಾ, ಗೆಹ್ಲೋಟ್ ಮತ್ತು ಬಘೇಲ್ ಸೇರಿದಂತೆ ಪಕ್ಷದ ನಾಯಕರ ದೊಡ್ಡ ಬೆಂಗಾವಲು ಪಡೆಗಳೊಂದಿಗೆ ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಿಂದ ಬೆಳಿಗ್ಗೆ 11 ಗಂಟೆಗೆ ಕೇಂದ್ರ ದೆಹಲಿಯ ತನಿಖಾ ಸಂಸ್ಥೆಗೆ ಆಗಮಿಸಿದರು.
Published by:Divya D
First published: