HOME » NEWS » National-international » PM MODI SAYS POLITICAL DESIGN BEHIND JAMIA SHAHEEN BAGH PROTESTS TO BREAK INDIA INTO PIECES SESR

ರಾಜಕೀಯ ಪ್ರೇರಿತ ಶಾಹೀನ್ ಬಾಗ್, ಜಾಮಿಯಾ ಪ್ರತಿಭಟನೆಗಳು ಭಾರತವನ್ನು ಇಬ್ಭಾಗವಾಗಿಸಿದೆ; ಪ್ರಧಾನಿ ಮೋದಿ

ಜಾಮಿಯಾ, ಶಾಹಿನ್​ಬಾಗ್​​ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ರಾಜಕೀಯ ಪ್ರೇರಿತ. ದೇಶದ ಸಾಮರಸ್ಯವನ್ನು ಹಾಳುಗೆಡುವಿ, ಇಬ್ಬಾಗವನ್ನಾಗಿ ಮಾಡುತ್ತಿರುವ ರಾಜಕೀಯ ತಂತ್ರಗಳು ಎಂದು ನರೇಂದ್ರ ಮೋದಿ ಆರೋಪಿಸಿದರು  

Seema.R | news18-kannada
Updated:February 3, 2020, 6:40 PM IST
ರಾಜಕೀಯ ಪ್ರೇರಿತ ಶಾಹೀನ್ ಬಾಗ್, ಜಾಮಿಯಾ ಪ್ರತಿಭಟನೆಗಳು ಭಾರತವನ್ನು ಇಬ್ಭಾಗವಾಗಿಸಿದೆ; ಪ್ರಧಾನಿ ಮೋದಿ
ಪ್ರಧಾನಿ ಮೋದಿ
  • Share this:
ನವದೆಹಲಿ (ಫೆ.3): ಪೌರತ್ವ ಕಾಯ್ದೆ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ಅರಾಜಕತೆಯಿಂದ ಕೂಡಿದ್ದು, ಇದು ಕಾಂಗ್ರೆಸ್​ ಮತ್ತು ಆಪ್​ ಪಕ್ಷಗಳ ಪ್ರಚೋದನೆಯಿಂದ ನಡೆಯುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

ಮೊದಲ ಬಾರಿ ದೆಹಲಿ ಮತದಾರರನ್ನು ಉದ್ದೇಶಿಸಿ ಕರ್ಕರ್​ಡೂಮ್​ನ ಚುನಾವಣಾ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಜಾಮಿಯಾ, ಶಾಹಿನ್ಬಾಗ್​ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಆಕಸ್ಮಿಕವೇ ಎಂದು ಪ್ರಶ್ನಿಸಿದರು. ಸೀಲಂಪುರ್​, ಜಾಮಿಯಾ, ಶಾಹಿನ್​ಬಾಗ್​​ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ರಾಜಕೀಯ ಪ್ರೇರಿತ. ದೇಶದ ಸಾಮರಸ್ಯವನ್ನು ಹಾಳುಗೆಡುವಿ, ಇಬ್ಬಾಗವನ್ನಾಗಿ ಮಾಡುತ್ತಿರುವ ರಾಜಕೀಯ ತಂತ್ರಗಳು ಎಂದು ಆರೋಪಿಸಿದರು

ಆಧುನಿಕ ಮತ್ತು ಸುರಕ್ಷಿತ ದೆಹಲಿ ಬೇಕೆಂದರೆ ಬಿಜೆಪಿಗೆ ಮತಹಾಕಬೇಕು. ನಾವು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ನಮ್ಮ ಭರವಸೆಗಳನ್ನು ಈಡೇರಿಸುತ್ತೇವೆ. ದೆಹಲಿ ಜನರಿಗೆ ಏನು ಬೇಕು ಎಂಬುದನ್ನು ನಾನು ಕೇಳುವುದಿಲ್ಲ. ಕಾರಣ ಇದರ ಬಗ್ಗೆ ನನಗೆ ಸಂಪೂರ್ಣ ಚಿತ್ರಣವಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತದಾರರು ಶಕ್ತಿ ತುಂಬಿದ್ದಾರೆ. ಅವರ ಮತಗಳು ಭವಿಷ್ಯವನ್ನು ಬದಲಾಯಿಸಲು ನಮಗೆ ಸಹಕಾರ ನೀಡುತ್ತದೆ ಎಂದರು.

ಇದೇ ವೇಳೆ ಆಪ್​ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪ್ರಧಾನ ಮಂತ್ರಿ ಆವಾಜ್​ ಯೋಜನೆ ರಾಜಧಾನಿಯಲ್ಲಿ ಸರಿಯಾಗಿ ಜಾರಿಯಾಗದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ನಮ್ಮದೇ ಆದ ಮನೆಹೊಂದಬೇಕು ಎಂಬುದು ಪ್ರತಿಯೊಬ್ಬರ ಕನಸು. ಕೇಂದ್ರ ಸರ್ಕಾರ ದೇಶದಲ್ಲಿ ಎರಡು ಕೋಟಿ ಮನೆ ನಿರ್ಮಾಣ ಮಾಡಿದೆ, ಆದರೆ ದೆಹಲಿಯಲ್ಲಿ ಒಂದೂ ಮನೆ ನಿರ್ಮಾಣವಾಗಿಲ್ಲ. ಆಪ್​ ಸರ್ಕಾರ ಇಂತಹ ಯೋಜನೆಗೆ ಅಡ್ಡಗಾಲಾಗಿ ನಿಂತಿದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನು ಓದಿ: ಶಾಹೀನ್ ಬಾಗ್ ಬಿಸಿ ಆರಲು ಅಮಿತ್ ಶಾ ಬಿಡುವುದಿಲ್ಲ: ಅರವಿಂದ್ ಕೇಜ್ರಿವಾಲ್

ಇದೇ ವೇಳೆ ಬಿಜೆಪಿ ಸರ್ಕಾರದ ಸಾಧನೆ ಪಟ್ಟಿ ಮಾಡಿದ ಅವರು, ವಿಧಿ 370 ನಿಷೇಧ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ತ್ರಿವಳಿ ತಲಾಖ್​ ನಿಷೇಧ ಮಾಡಿದೆವು. ಆದರೆ ದೆಹಲಿ ಜನರು ಲೋಕಪಾಲ್​ ಮಸೂದೆ ಜಾರಿಗಾಗಿ ಇನ್ನು ಕಾಯುತ್ತಿದ್ದಾರೆ., ಅಂತಹ ದೊಡ್ಡ ಚಳುವಳಿ ಏನಾಯಿತು ಎಂದು ಪ್ರಶ್ನಿಸಿದರು.
Youtube Video
First published: February 3, 2020, 6:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories