ಭಾರತ ವಿಶ್ವ ನಾಯಕನಾಗಿ ಹೊರಹೊಮ್ಮಬೇಕು; ಲೋಕಸಭೆಯಲ್ಲಿ PM Modi

ಜಾಗತಿಕ ನಾಯಕತ್ವದ ಸ್ಥಾನವನ್ನು ನಾವು ತೆಗೆದುಕೊಳ್ಳಬೇಕು. ಈ ನಾಯಕತ್ವ ನಿಭಾಯಿಸಲು ಯಾವುದೇ ಕೀಳರಿಮೆ ಬೇಡ

ಲೋಕಸಭೆಯಲ್ಲಿ ಪ್ರಧಾನಿ (ಚಿತ್ರ ಕೃಪೆ: ಎಎನ್ಐ)

ಲೋಕಸಭೆಯಲ್ಲಿ ಪ್ರಧಾನಿ (ಚಿತ್ರ ಕೃಪೆ: ಎಎನ್ಐ)

 • Share this:
  ನವದೆಹಲಿ (ಫೆ. 7): ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು ಲೋಕಸಭೆಯಲ್ಲಿ (Lok Sabha) ರಾಷ್ಟ್ರಪತಿಗಳ ವಂದನಾ ನಿರ್ಣಯ ಮೇಲಿನ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದರು. ಈ ವೇಳೆ ಭಾರತದ ಆರ್ಥಿಕತೆ ಕುರಿತು ಮಾತನಾಡಿದ ಅವರು, ಕೋವಿಡ್  (Covid) ಸೋಂಕಿನ ನಂತರವೂ ಭಾರತದ ವಿಶ್ವದ ನಾಯಕನಾಗಿ ಹೊರ ಹೊಮ್ಮಬೇಕು ಎಂದು ತಿಳಿಸಿದರು. ಕೋವಿಡ್ ನಂತರದಲ್ಲಿ ಭಾರತವೂ ಜಾಗತಿಕ ನಾಯಕನ್ನಾಗಿ ಭಾರತೀಯರು  ಸಹಾಯ ಮಾಡಬೇಕು ಎಂದು ಕೇಳಿಕೊಂಡರು. ಸಾಂಕ್ರಾಮಿಕ ಸೋಂಕಿನ ನಂತರ ಹೊಸ ತಿರುವು ಕಾಣಲಿದೆ. ನಾವು ನಾಯಕರಾಗಿ ಗುರುತಿಸಿಕೊಳ್ಳುತ್ತಿದ್ದೇವೆ.  ಜಾಗತಿಕ ನಾಯಕತ್ವದ ಸ್ಥಾನವನ್ನು ನಾವು ತೆಗೆದುಕೊಳ್ಳಬೇಕು. ಈ ನಾಯಕತ್ವ ನಿಭಾಯಿಸಲು ಯಾವುದೇ ಕೀಳರಿಮೆ ಬೇಡ ಎಂದು ಕೋಟ್ಯಾಂತರ ಭಾರತೀಯರನ್ನು ಹುರಿದುಂಬಿಸುವ ಮಾತುಗಳ ಮೂಲಕ ಉತ್ತೇಜಿಸಿದ್ದಾರೆ.

  ವಿಶ್ವವು ಭಾರತದ ಆರ್ಥಿಕ ಪ್ರಗತಿಯನ್ನು ಗಮನಿಸಿದೆ . ಅದು ಕೂಡ ಜಾಗತಿಕ ಸಾಂಕ್ರಾಮಿಕದ ಮಧ್ಯದಲ್ಲಿ ಈ ಬೆಳವಣಿಗೆ ಕಂಡು ಬಂದಿದೆ ಎಂದರು

  ಕೋವಿಡ್​​ನಲ್ಲೂ ಕೊಳಕು ರಾಜಕೀಯ
  ಇನ್ನು ಇದೇ ವೇಳೆ ಕಾಂಗ್ರೆಸ್​ ವಿರುದ್ಧ ಹರಿಹಾಯ್ದ ಅವರು, ಕೋವಿಡ್​ ಮೊದಲ ಅಲೆಯಲ್ಲಿ ವಲಸೆ ಕಾರ್ಮಿಕರಲ್ಲಿ ಸೋಂಕಿನ ಭಯವನ್ನು ಕಾಂಗ್ರೆಸ್​ ಹುಟ್ಟು ಹಾಕಿತು. ಈ ಮೂಲಕವೂ ಕಾಂಗ್ರೆಸ್​ ಕೊಳಕು ರಾಜಕೀಯ ಮಾಡಿತು. ಮೊದಲ ಅಲೆಯ ವೇಳೆ ಕಾಂಗ್ರೆಸ್​ ಬೇಜಾವಬ್ದಾರಿಯಿಂದ ವರ್ತಿಸಿತು. ಅಲಲದೇ ಮುಂಬೈ, ಬಿಹಾರ, ಉತ್ತರ ಪ್ರದೇಶದ ವಲಸಿಗರನ್ನು ಮನೆಗೆ ಮರಳುವಂತೆ ಪ್ರಚೋದಿಸಿದರು ಎಂದು ವಾಗ್ದಾಳಿ ನಡೆಸಿದರು

  ನಾವು ಪ್ರಜಾಪ್ರಭುತ್ವದಲ್ಲಿ ದೃಢ ನಂಬಿಕೆಯುಳ್ಳವರಾಗಿದ್ದೇವೆ. ಟೀಕೆಯು ಪ್ರಜಾಪ್ರಭುತ್ವದ ಅತ್ಯಗತ್ಯ ಭಾಗವಾಗಿದೆ ಎಂದು ನಾವು ನಂಬುತ್ತೇವೆ. ಆದರೆ, ಎಲ್ಲದಕ್ಕೂ ಸುಖಾಸುಮ್ಮನೆ ವಿರೋಧ ಮಾಡುವುದು ಸರಿಯಲ್ಲ. ಕೋವಿಡ್ ರಾಜಕೀಯದಲ್ಲಿ ಕಾಂಗ್ರೆಸ್ ಎಲ್ಲ ಮಿತಿಗಳನ್ನು ಮೀರಿದೆ. ಕಾಂಗ್ರೆಸ್ ಕಾರ್ಯಕರ್ತರು ವಲಸೆ ಕಾರ್ಮಿಕರಿಗೆ ಟಿಕೆಟ್ ವಿತರಿಸಿದರು. ಕಾಂಗ್ರೆಸ್​ ಕೋವಿಡ್​ ಸೋಂಕನ್ನು ಉತ್ತರ ಪ್ರದೇಶ ಉತ್ತರಾಖಂಡ ಮತ್ತು ಪಂಜಾಬ್‌ನಲ್ಲಿ ಹರಡುವಂತೆ ಪ್ರಯತ್ನಿಸಿದರು

  ದೆಹಲಿ ಸಿಎಂ ವಿರುದ್ಧವೂ ಕಿಡಿ
  ಇನ್ನು ಇದೇ ವೇಳೆ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಸರ್ಕಾರದ ವಿರುದ್ಧ ಟೀಕಿ ಮಾಡಿದ ಪ್ರಧಾನಿ, ಕೋವಿಡ್ ಸಮಯದಲ್ಲಿ ದೆಹಲಿ ಸರ್ಕಾರವು ವಲಸಿಗರಲ್ಲಿ ಭೀತಿಯನ್ನು ಸೃಷ್ಟಿಸಿತ್ತು. ಕಾಂಗ್ರೆಸ್ ವಲಸಿಗರನ್ನು ಅವ್ಯವಸ್ಥೆ ಮತ್ತು ದುಃಖಕ್ಕೆ ತಳ್ಳಿತು. ಮೊದಲ ಅಲೆಯಲ್ಲಿ ದೇಶದ ಜನರು ಲಾಕ್‌ಡೌನ್‌ಗಳನ್ನು ಅನುಸರಿಸುವಾಗ, ಅವರು ಎಲ್ಲಿರುತ್ತಾರೋ ಅಲ್ಲಿಯೇ ಇರಬೇಕು ಎಂದು ಮಾರ್ಗಸೂಚಿಗಳು ಸೂಚಿಸುತ್ತವೆ. ಆದರೆ, ಕಾಂಗ್ರೆಸ್ ಕಾರ್ಯಕರ್ತರು ಮುಂಬೈ ನಿಲ್ದಾಣದಲ್ಲಿ ನಿಂತು ಅಮಾಯಕರನ್ನು ಹೆದರಿಸಿದರು.

  ಸೋತರೂ ಕರಗದ ಕಾಂಗ್ರೆಸ್​ ಅಹಂಕಾರ
  ಕಾಂಗ್ರೆಸ್​ ಇನ್ನೂ 2014ರ ಮನಸ್ಥಿತಿಗೆ ಅಂಟಿಕೊಂಡಿದೆ. ಅವರಿಗೆ ಬಡವರ ಕಷ್ಟ ಗೊತ್ತಿಲ್ಲ. ಅವರಿಗೆ ಅವರ ಸಂಪರ್ಕವೇ ಇಲ್ಲ. ಕಾಂಗ್ರೆಸ್​​ ದುರಹಂಕಾರದಿಂದ ವರ್ತಿಸುತ್ತಿದೆ. ಜನರು ಯಾಕೆ ಅವರ ಪರ ಇಲ್ಲ. ಅವರನ್ನು ಏಕೆ ನಿರಾಕರಿಸುತ್ತಿದ್ದಾರೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

  ಇದನ್ನು ಓದಿ: ಮುಂದಿನ 100 ವರ್ಷದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಲೋಕಸಭೆಯಲ್ಲಿ PM Modi ಮಾತಿನೇಟು!

  ನಾಗಾಲ್ಯಾಂಡ್ ನಲ್ಲಿ 24 ವರ್ಷಗಳ ಹಿಂದೆ ಜನರು ಕಾಂಗ್ರೆಸ್​​ಗೆ ಮತ ಹಾಕಿದ್ದರೂ, ಅದೇ ರೀತಿ ಒಡಿಶಾದಲ್ಲಿ 27 ವರ್ಷಗಳ ಹಿಂದೆ ಜನರು ಕಾಂಗ್ರೆಸ್​ ಬೆಂಬಲಿಸಿದರು. 28 ವರ್ಷಗಳ ಹಿಂದೆ ಗೋವಾದಲ್ಲಿ ಪೂರ್ಣ ಬಹುಮತದೊಂದಿಗೆ ಗೆದ್ದಿದ್ದೀರಿ. 1988ರಲ್ಲಿ ತ್ರಿಪುರಾ ಕಾಂಗ್ರೆಸ್‌ಗೆ ಮತ ಹಾಕಿತು. ಪಶ್ಚಿಮ ಬಂಗಾಳ 1972 ರಲ್ಲಿ ಕಾಂಗ್ರೆಸ್‌ಗೆ ಮತ ಹಾಕಿತು. ತೆಲಂಗಾಣ ರಚನೆಯ ಶ್ರೇಯವನ್ನು ನೀವು ತೆಗೆದುಕೊಳ್ಳುತ್ತೀರಿ ಆದರೆ ಸಾರ್ವಜನಿಕರು ನಿಮ್ಮನ್ನು ಸ್ವೀಕರಿಸಲಿಲ್ಲ ಎನ್ನುವ ಮೂಲಕ ಕಾಂಗ್ರೆಸ್​ ಜನಮಾನಸದಿಂದ ಈಗಾಗಲೇ ದೂರ ಆಗಿದೆ ಎಂಬುದನ್ನು ಮತ್ತೆ ತಿಳಿಸಿದರು

  ಇದನ್ನು ಓದಿ: ಭೋಪಾಲ್​ ಸಂಸದೆ Pragya Singh​​ಗೆ ಅಶ್ಲೀಲ ಸಂದೇಶ; ಪ್ರಕರಣ ದಾಖಲು

  ಮೇಕ್​ ಇನ್​ ಇಂಡಿಯಾ ಯಶಸ್ಸು ಕಾಂಗ್ರೆಸ್​​ಗೆ ನೋವು ನೀಡಿತು
  ಕಾಂಗ್ರೆಸ್​ ಫಿಟ್​ ಇಂಡಿಯಾ ಆಂದೋಲನವನ್ನು ಟೀಕಿಸಿತು. ನಾವು ಸ್ಥಳೀಯರ ಪರವಾಗಿ ಧ್ವನಿಯೆತ್ತಿದರೆ ಮಹಾತ್ಮ ಗಾಂಧಿಯವರ ಕನಸುಗಳನ್ನು ಈಡೇರಿಸುತ್ತಿಲ್ಲವೇ? ಹಾಗಾದರೆ ನಮ್ಮ ನಡೆಯನ್ನು ಪ್ರತಿಪಕ್ಷಗಳು ಏಕೆ ಅಪಹಾಸ್ಯ ಮಾಡುತ್ತಿವೆ? ಎಂದು ಪ್ರಶ್ನಿಸಿದರು

  ಸಂಸತ್ತಿನಲ್ಲಿ ಅವರು ಮೇಕ್ ಇನ್ ಇಂಡಿಯಾ ಯಶಸ್ವಿಯಾಗುವುದಿಲ್ಲ ಎಂದು ಹೇಳಿದರು. ಆದರೆ, ಇಂದು ಇದನ್ನು ಭಾರತದ ಯುವಕರು ಮತ್ತು ಉದ್ಯಮಿಗಳು ಮಾಡಿ ತೋರಿಸಿದ್ದಾರೆ. ಮೇಕ್​​ ಇನ್​ ಇಂಡಿಯಾ ಯಶಸ್ಸು ನಿಮಗೆ ನೋವು ನೀಡುತ್ತಿದೆ ಎಂಬುದು ನನಗೆ ಅರ್ಥವಾಗುತ್ತಿದೆ. ಮೇಕ್ ಇನ್ ಇಂಡಿಯಾ ಯಿಂದ ಕಮಿಷನ್​ ಸಿಗುತ್ತಿಲ್ಲ. ಭಷ್ಟಾಚಾರ ನಿಲ್ಲುತ್ತದೆ. ಬೊಕ್ಕಸಕ್ಕೆ ಹಣ ತುಂಬುವುದಿಲ್ಲ ಇದೇ ಕಾರಣಕ್ಕೆ ನಿಮಗೆ ನೋವುಂಟಾಗುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದರು.
  Published by:Seema R
  First published: