HOME » NEWS » National-international » PM MODI SAYS ARTICLE 370 HINDERING DEVELOPMENT OF JAMMU AND KASHMIR PEOPLE NOW WANT CHANGE

ಕಾಶ್ಮೀರದ ದುಸ್ಥಿತಿಗೆ ನೆಹರೂ ನೀತಿ ಕಾರಣ; ರಾಜ್ಯದ ಅಭಿವೃದ್ಧಿಗೆ 370ನೇ ವಿಧಿ ಅಡ್ಡಿ: ಪ್ರಧಾನಿ ಮೋದಿ

ನ್ಯೂಸ್18 ಜೊತೆ ನೀಡಿದ ಈ ಮಹಾ ಸಂದರ್ಶನದಲ್ಲಿ ನರೇಂದ್ರ ಮೋದಿ ಅವರು ಕಾಶ್ಮೀರದ ಇಂದಿನ ದುಸ್ಥಿತಿಗೆ ಜವಾಹರಲಾಲ್ ನೆಹರೂ ಅವರ ನೀತಿಗಳೇ ಕಾರಣ ಎಂದು ದೂರಿದರು.

news18
Updated:April 9, 2019, 1:34 PM IST
ಕಾಶ್ಮೀರದ ದುಸ್ಥಿತಿಗೆ ನೆಹರೂ ನೀತಿ ಕಾರಣ; ರಾಜ್ಯದ ಅಭಿವೃದ್ಧಿಗೆ 370ನೇ ವಿಧಿ ಅಡ್ಡಿ: ಪ್ರಧಾನಿ ಮೋದಿ
ನರೇಂದ್ರ ಮೋದಿ
  • News18
  • Last Updated: April 9, 2019, 1:34 PM IST
  • Share this:
ನವದೆಹಲಿ(ಏ. 09): ಸಂವಿಧಾನದ 370 ಮತ್ತು 35ಎ ವಿಧಿಯಿಂದ ಕಾಶ್ಮೀರದ ಅಭಿವೃದ್ಧಿಗೆ ತೊಡಕಾಗಿದೆ. ಜನರಿಗೆ ಈಗ ಬದಲಾವಣೆ ಬೇಕಿದೆ. ರಾಜಕೀಯ ಕುಟುಂಬಗಳಿಂದ ಕಾಶ್ಮೀರಿಗಳು ಸ್ವಾತಂತ್ರ್ಯ ಬಯಸಿದ್ದಾರೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು. ನ್ಯೂಸ್18 ನೆಟ್ವರ್ಕ್ ಗ್ರೂಪ್​ನ ಮುಖ್ಯಸಂಪಾದಕ ರಾಹುಲ್ ಜೋಷಿ ಅವರ ಜೊತೆ ವಿಶೇಷ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ ಅವರು ಕಾಶ್ಮೀರದ ವಿಶೇಷ ಸ್ಥಾನಮಾನದ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

“ಸುಮಾರು 50 ರಾಜಕೀಯ ಕುಟುಂಬಗಳಿಂದಾಗಿಯೇ ಹೆಚ್ಚಾಗಿ ಕಾಶ್ಮೀರದಲ್ಲಿ ಸಮಸ್ಯೆ ಸೃಷ್ಟಿಯಾಗಿದೆ. ಈ ಕುಟುಂಬಗಳು ಕಾಶ್ಮೀರೀ ಬಿಕ್ಕಟ್ಟನ್ನು ಮುಂದಿಟ್ಟುಕೊಂಡು ಲಾಭ ಮಾಡಿಕೊಳ್ಳುತ್ತಿವೆ. ಸಾಮಾನ್ಯ ಕಾಶ್ಮೀರಿ ಜನರಿಗೆ ಯಾವುದೇ ಲಾಭ ಸಿಗುವುದು ಇವರಿಗೆ ಇಷ್ಟವಿಲ್ಲ. ಸಾರ್ವಜನಿಕರ ಭಾವನೆಗಳನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇಂಥ ಶಕ್ತಿಗಳ ಮೇಲೆ ಐಟಿ ಇಲಾಖೆ ಪ್ರಹಾರ ಮಾಡಿದೆ” ಎಂದು ನರೇಂದ್ರ ಮೋದಿ ಹೇಳಿದರು.

ಇದನ್ನೂ ಓದಿ: ಪಾಕಿಸ್ತಾನದ ಬೆಂಬಲಕ್ಕೆ ನಿಂತಿದ್ದು ಚೀನಾ ಮಾತ್ರ; ನೆಟ್​ವರ್ಕ್​18 ಸಂದರ್ಶನದಲ್ಲಿ ಪ್ರಧಾನಿ ಮೋದಿ ಮಾತು

“ಭಯೋತ್ಪಾದಕರನ್ನು ರಕ್ಷಿಸಲು ಪಾಕಿಸ್ತಾನವು ಕಾಶ್ಮೀರದಲ್ಲಿ ಕಲ್ಲೆಸೆಯುವವರಿಗೆ ನೆರವು ಒದಗಿಸುತ್ತಿದೆ. ಆದರೆ, ಉಗ್ರರ ಮೇಲೆ ಎನ್​ಐಎ ದಾಳಿ ಮಾಡಿದಾಗ ಜನರು ತಮ್ಮ ಮನೆಯ ಹೊರಗೆ ನಿಂತು ಚಪ್ಪಾಳೆ ತಟ್ಟಿ ಸ್ವಾಗತ ಮಾಡಿದ್ದಾರೆ. 50 ವರ್ಷಗಳಿಂದ ತಮ್ಮ ಭಾವನೆಗಳ ಜೊತೆ ಆಟವಾಡುತ್ತಿರುವ ಇಂಥ ರಾಜಕೀಯ ಕುಟುಂಬಗಳಿಂದ ಕಾಶ್ಮೀರೀ ಜನರು ಸ್ವಾತಂತ್ರ್ಯ ಬಯಸಿದ್ದಾರೆ. 370 ಅಥವಾ 35ಎ ಆಗಲೀ ಜನರು ಬದಲಾವಣೆ ಬಯಸುತ್ತಿರುವಂಥ ಸ್ಥಿತಿಗೆ ಈಗ ಕಾಶ್ಮೀರ ಬಂದಿದೆ,” ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.

ನ್ಯೂಸ್18 ಜೊತೆ ನೀಡಿದ ಈ ಮಹಾ ಸಂದರ್ಶನದಲ್ಲಿ ನರೇಂದ್ರ ಮೋದಿ ಅವರು ಕಾಶ್ಮೀರದ ಇಂದಿನ ದುಸ್ಥಿತಿಗೆ ಜವಾಹರಲಾಲ್ ನೆಹರೂ ಅವರ ನೀತಿಗಳೇ ಕಾರಣ ಎಂದು ದೂರಿದರು.

ಇದನ್ನೂ ಓದಿ: 60 ವರ್ಷದಲ್ಲಿ ಮಾಡದ್ದನ್ನು ಕಾಂಗ್ರೆಸ್​​ ಈಗ ಮಾಡಲು ಸಾಧ್ಯವೇ?: ‘ನ್ಯಾಯ್​​ ಯೋಜನೆ’ ಬಗ್ಗೆ ಮೋದಿ ವ್ಯಂಗ್ಯ!

“ಜಮ್ಮು-ಕಾಶ್ಮೀರದಲ್ಲಿ ಹೂಡಿಕೆ ಬೇಕಾಗಿದೆ. ಉದ್ಯೋಗಾವಕಾಶ ಸೃಷ್ಟಿಯಾಗಬೇಕಿದೆ. ಈ ನಿಟ್ಟಿನಲ್ಲಿ 35ಎ ಮತ್ತು 370ನೇ ವಿಧಿ ಅಡ್ಡಿಯಾಗಿದೆ. ಅಲ್ಲಿಗೆ ಹೋಗಿ ಹೂಡಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಕಾಶ್ಮೀರದಲ್ಲಿ ನಾವು ಐಐಟಿ ಕಟ್ಟಬಹುದಾದರೂ ಅಲ್ಲಿಗೆ ಹೋಗಲು ಪ್ರೊಫೆಸರ್​ಗಳು ತಯಾರಿಲ್ಲ. ಕಾಶ್ಮೀರದಲ್ಲಿ ಅವರಿಗೆ ಮನೆ ಸಿಗುವುದಿಲ್ಲ. ಅವರ ಮಕ್ಕಳನ್ನು ಶಾಲೆಗೆ ಸೇರಿಸಲು ಆಗುವುದಿಲ್ಲ. ಇದು ಕಾಶ್ಮೀರದ ಹಿತಾಸಕ್ತಿಗೆ ಧಕ್ಕೆಯಾಗುವಂತಿದೆ. ಜಮ್ಮು-ಕಾಶ್ಮೀರದ ಇಂದಿನ ದುಸ್ಥಿತಿಗೆ ಪಂಡಿತ್ ನೆಹರೂ ಅವರ ನೀತಿಗಳೇ ಪ್ರಮುಖ ತೊಡಕಾಗಿದೆ. ಇದನ್ನು ಪರಾಮರ್ಶಿಸುವ ಅಗತ್ಯವಿದೆ” ಎಂದು ಪ್ರಧಾನಿಗಳು ತಿಳಿಸಿದರು.ಸರ್ದಾರ್ ವಲಭಭಾಯ್ ಪಟೇಲ್ ಅವರು ಆರಂಭದಲ್ಲೇ ಕಾಶ್ಮೀರ ಸಮಸ್ಯೆಯನ್ನು ನಿರ್ವಹಿಸಿದ್ದರೆ ಇವತ್ತಿನ ಈ ದುಸ್ಥಿತಿಯಲ್ಲಿ ನಾವು ಇರುತ್ತಿರಲಿಲ್ಲ. ಜುನಾಗಡ್ ವಿಚಾರದಲ್ಲಿ ಹಾಗೂ ನಿಜಾಮ್ ವಿಚಾರದಲ್ಲಿ ಪರಿಹಾರ ಕಂಡುಕೊಂಡಂತೆ ಅವರು ಈ ಕಾಶ್ಮೀರ ಸಮಸ್ಯೆಗೂ ಪರಿಹಾರ ಹುಡುಕುತ್ತಿದ್ದರು. ಆದರೆ, ಪಂಡಿತ್ ನೆಹರೂ ಅವರು ಈ ಸಮಸ್ಯೆಯನ್ನು ತಾವೇ ನಿರ್ವಹಿಸಿದರು. ಅದರಿಂದಾಗಿ ಇವತ್ತೂ ಕೂಡ ಇದು ಬಿಕ್ಕಟ್ಟಾಗಿ ಉಳಿದಿದೆ ಎಂದು ನೆಹರೂ ನೀತಿಯನ್ನು ಮೋದಿ ಕುಟುಕಿದರು.

ಇದನ್ನೂ ಓದಿ: ಪಾಕಿಸ್ತಾನದ ಬೆಂಬಲಕ್ಕೆ ನಿಂತಿದ್ದು ಚೀನಾ ಮಾತ್ರ; ನೆಟ್​ವರ್ಕ್​18 ಸಂದರ್ಶನದಲ್ಲಿ ಪ್ರಧಾನಿ ಮೋದಿ ಮಾತು

ಸಂವಿಧಾನದಲ್ಲಿ 370 ಮತ್ತು 35ಎ ವಿಧಿಗಳು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿವೆ. ಕೇಂದ್ರದ ಅಂಕೆಯಿಲ್ಲದೆ ಕಾಶ್ಮೀರವು ಸ್ವತಂತ್ರವಾಗಿ ಕಾರ್ಯನಿರ್ವಹಿಸುವಷ್ಟು ಸ್ವಾತಂತ್ರ್ಯ ನೀಡಲಾಗಿದೆ. ಹೊರಗಿನಿಂದ ಕಾಶ್ಮೀರಕ್ಕೆ ಜನರು ವಲಸೆ ಹೋಗಲು ಅವಕಾಶ ಇಲ್ಲ. ಕಾಶ್ಮೀರಿಗಳ ಈ ಸ್ವಾಯತ್ತತೆಗೆ ಪರ ವಿರೋಧ ಅಭಿಪ್ರಾಯಗಳು ಇವೆ. ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಈ ವಿಶೇಷ ಸ್ಥಾನಮಾನವನ್ನು ಮುಂದುವರಿಸಿಕೊಂಡು ಹೋಗುವುದಾಗಿ ಭರವಸೆ ನೀಡಿದೆ. ಬಿಜೆಪಿಯು ಈ ವಿಧಿಗಳನ್ನು ರದ್ದು ಮಾಡುವುದಾಗಿ ಹೇಳಿದೆ. ಒಂದು ವೇಳೆ, 370ನೇ ವಿಧಿ ರದ್ದಾದರೆ ಕಾಶ್ಮೀರದ ಪ್ರತ್ಯೇಕ ರಾಷ್ಟ್ರದ ಹಾದಿ ಸುಗಮವಾಗಲಿದೆ ಎಂದು ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಎಚ್ಚರಿಸಿದ್ದಾರೆ.

First published: April 9, 2019, 12:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading