ಅಗಸ್ಟಾವೆಸ್ಟ್ ​​ಲ್ಯಾಂಡ್​​ ಹಗರಣ: ಮಧ್ಯವರ್ತಿ ಎಲ್ಲ 'ರಹಸ್ಯ' ಬಯಲು ಮಾಡಲಿದ್ದಾನೆ- ನರೇಂದ್ರ ಮೋದಿ

ಹಗರಣದಲ್ಲಿ ಕಾಂಗ್ರೆಸ್​ ರಾಜಕಾರಣಿಗಳಿಗೆ ಮೈಕಲ್​​ 225 ಕೋಟಿ ರುಪಾಯಿ ಲಂಚ ನೀಡಿದ್ದಾನೆ ಎಂಬ ಆರೋಪವಿದೆ. ಲಂಚ ಪಡೆದವರ ಪಟ್ಟಿಯಲ್ಲಿ ಗಾಂಧಿ ಕುಟುಂಬದ ಕೆಲವರ ಹೆಸರುಗಳು ಕೂಡ ಇವೆ. ಆದರಿಂದಲೇ, ಯಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಹಾಗೂ ರಾಹುಲ್​​ ಗಾಂಧಿಯವರು ಬಂಧನದ ಭೀತಿಯಲ್ಲಿದ್ದಾರೆ- ಮೋದಿ

Ganesh Nachikethu
Updated:December 5, 2018, 7:47 PM IST
ಅಗಸ್ಟಾವೆಸ್ಟ್ ​​ಲ್ಯಾಂಡ್​​ ಹಗರಣ: ಮಧ್ಯವರ್ತಿ ಎಲ್ಲ 'ರಹಸ್ಯ' ಬಯಲು ಮಾಡಲಿದ್ದಾನೆ- ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Ganesh Nachikethu
Updated: December 5, 2018, 7:47 PM IST
ನವದೆಹಲಿ(ಡಿ.05): ಅಗಸ್ಟಾವೆಸ್ಟ್​​ಲ್ಯಾಂಡ್​​ ಹಗರಣಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿ ಕ್ರಿಶ್ಚಿಯನ್​​ ಮೈಕಲ್​​ ಏನೆಲ್ಲಾ ರಹಸ್ಯಗಳನ್ನು ಬಯಲು ಮಾಡಲಿದ್ದಾನೆ? ಎಂಬುದನ್ನು ಕಾದು ನೋಡಿರಿ. ಯುಪಿಎ ಸರ್ಕಾರ ತನ್ನ ಅವಧಿಯಲ್ಲಿ ವಿಐಪಿಗಳನ್ನು ಕರೆದೊಯ್ಯುವ ಸಾಲುವಾಗಿ ಇಟಲಿ ಮೂಲದ ಕಂಪನಿಯೊಂದರಿಂದ ಹೆಲಿಕಾಪ್ಟರುಗಳನ್ನು ಖರೀದಿತ್ತು. ಇದರಲ್ಲಿ ಭಾರೀ ಪ್ರಮಾಣದ ಹಣ ಲೂಟಿ ಮಾಡಲಾಗಿತ್ತು. ಇದೀಗ ಪ್ರಕರಣದ ಪ್ರಮುಖ ಆರೋಪಿ, ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್​​ನನ್ನು ಭಾರತಕ್ಕೆ ಕರೆತರಲಾಗಿದೆ. ಹೀಗಾಗಿ ಸಿಬಿಐ ವಿಚಾರಣೆಯಲ್ಲಿ ಮೈಕಲ್​​ ಏನೆಲ್ಲಾ? ರಹಸ್ಯಗಳು ಬಿಚ್ಚಿಡಲಿದ್ದಾರೆ ಎಂದು ಸ್ವಲ್ಪ ಕಾದು ನೋಡಿರಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ಸಾರ್ವಜನಿಕರಿಗೆ ತಿಳಿಸಿದ್ದಾರೆ. ಈ ಮೂಲಕ ಹಗರಣದ ಬಗ್ಗೆ ತಿಳಿದುಕೊಳ್ಳಲು ಮತ್ತಷ್ಟು ಕುತೂಹಲ ಹುಟ್ಟಿಸಿದ್ದಾರೆ ಎನ್ನಲಾಗಿದೆ.

ಇಂದು ರಾಜಸ್ಥಾನದಲ್ಲಿ ಬಿಜೆಪಿಯಿಂದ ಕೊನೆಯ ದಿನದ ಪ್ರಚಾರ ಕಾರ್ಯಕ್ರವೊಂದನ್ನು ನಡೆಸಲಾಯ್ತು. ಈ ಬಹಿರಂಗ ಪ್ರಚಾರದಲ್ಲಿ ಭಾಗಿಯಾಗಿದ್ದ ಪ್ರಧಾನಿ ಮೋದಿಯವರು, ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದರು. ಈ ವೇಳೆ ಎಂದಿನ ಶೈಲಿಯಲ್ಲಿಯೇ ತಮ್ಮ ಮಾತನ್ನು ಶುರು ಮಾಡಿದ ಮೋದಿ, ಕಾಂಗ್ರೆಸ್​ ಪಕ್ಷವನ್ನು ಭಾಷಣದುದ್ದಕ್ಕೂ ಕೆಣಕಿದರು. ಮಧ್ಯವರ್ತಿ ಮೈಕಲ್​​ನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ನ್ಯಾಯಲಯ ಆದೇಶಿಸಿತ್ತು. ಬಳಿಕ ಆತ ನಾಪತ್ತೆಯಾಗಿದ್ದ. ಇದೀಗ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಮೈಕಲ್​​ನನ್ನು ಭಾರತಕ್ಕೆ ಕರೆ ತರಲಾಗಿದೆ. ಸಿಬಿಐ ಮುಂದೆ ಹಗರಣದ ಇಂಚಿಂಚೂ ಮಾಹಿತಿಯೂ ಹೊರಬೀಳಲಿದೆ ಎಂದರು.

ಇದನ್ನೂ ಓದಿ: ಆಗಸ್ಟಾವೆಸ್ಟ್​ಲ್ಯಾಂಡ್ ಹಗರಣ: 5 ದಿನ ಸಿಬಿಐ ಕಸ್ಟಡಿಗೆ ಕ್ರಿಶ್ಚಿಯನ್ ಮೈಕೆಲ್

ಇನ್ನು ಚುನಾವಣೆ ಹೊಸ್ತಿಲಲ್ಲಿಯೇ ಕಾಂಗ್ರೆಸ್​ ವಿರುದ್ಧ ಮತದಾರರನ್ನು ಎತ್ತಿಕಟ್ಟಲು ಪ್ರಧಾನಿ ಮೋದಿ ಈ ಸಂದರ್ಭವನ್ನು ಬಳಸಿಕೊಂಡಿದ್ದಾರೆ. ಈ ಕಾರಣದಿಂದಲೇ ಅಗಸ್ಟಾವೆಸ್ಟ್​ಲ್ಯಾಂಡ್​​ ಪ್ರಕರಣದ ಬಗ್ಗೆ ಭಾಷಣದುದ್ದಕ್ಕೂ ಪ್ರಸ್ತಾಪಿಸಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಇದೇ ವೇಳೆ ಹೀಗೆ ಮಾತು ಮುಂದುವರೆಸಿದ ಮೋದಿ ಅವರು, ಅಂದಿನ ಕಾಂಗ್ರೆಸ್​ ರಾಜಕಾರಣಿಗಳಿಗೆ ಮೈಕಲ್​​ 225 ಕೋಟಿ ರುಪಾಯಿ ಲಂಚ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಲಂಚ ಪಡೆದವರ ಪಟ್ಟಿಯಲ್ಲಿ ಗಾಂಧಿ ಕುಟುಂಬದ ಕೆಲವರ ಹೆಸರುಗಳು ಕೂಡ ಇವೆ. ಆದರಿಂದಲೇ, ಯಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಹಾಗೂ ರಾಹುಲ್​​ ಗಾಂಧಿಯವರು ಬಂಧನದ ಭೀತಿಯಲ್ಲಿದ್ದಾರೆ ಎಂದು ಅಣಿಕಿಸಿದರು.

ಏನಿದು ಪ್ರಕರಣ?

2010ರ ಫೆಬ್ರವರಿ 8ರಂದು ಅಗಸ್ಟಾವೆಸ್ಟ್​ಲ್ಯಾಂಡ್ ಸಂಸ್ಥೆಯ 12 ವಿವಿಐಪಿ ಹೆಲಿಕಾಪ್ಟರ್​ಗಳ ಖರೀದಿಗೆ ಒಪ್ಪಂದವಾಗಿತ್ತು. ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಚಾರ್ಜ್​ಶೀಟ್​ಗಳ ಪ್ರಕಾರ, ಈ ಒಪ್ಪಂದದಿಂದ ಸರಕಾರದ ಖಜಾನೆಗೆ 2,666 ಕೋಟಿ ರೂ ನಷ್ಟವಾಗಿತ್ತು. ಈ ಒಪ್ಪಂದವು ಸಾಕಾರಗೊಳ್ಳಲು ನೆರವಾಗುವ ಕಾರ್ಯಕ್ಕೆ ಅಗಸ್ಟವೆಸ್ಟ್​ಲ್ಯಾಂಡ್ ಸಂಸ್ಥೆಯು ಕ್ರಿಶ್ಚಿಯನ್ ಮೈಕೆಲ್​ಗೆ ಸುಮಾರು 225 ಕೋಟಿ ರೂ. ಹಣವನ್ನು ‘ಲಂಚ’ವಾಗಿ ಕೊಟ್ಟಿತಂತೆ.

ಇದನ್ನೂ ಓದಿ: ಬೆಂಗಳೂರಿನ ಐಐಎಸ್​ಸಿ ಆವರಣದಲ್ಲಿ ಹೈಡ್ರೋಜನ್ ಸಿಲಿಂಡರ್ ಸ್ಫೋಟ: ಯುವ ವಿಜ್ಞಾನಿ ಸಾವು; ಮೂವರಿಗೆ ಗಂಭೀರ ಗಾಯ
Loading...

ಇನ್ನು ಪ್ರಕರಣ ಸದ್ದು ಮಾಡುತ್ತಿದ್ದಂತೆ ಫೆಬ್ರವರಿ 2013ರಲ್ಲಿಯೇ ವಿವಿಐಪಿಗಳಿಗೆ ಹೆಲಿಕ್ಯಾಫ್ಟರ್ ಒದಗಿಸುವ ಒಪ್ಪಂದವನ್ನು ತಡೆ ಹಿಡಿಯಲಾಯಿತು. ಜನವರಿ 2014ರಲ್ಲಿ ಟೆಂಡರ್ ರದ್ಧುಗೊಳಿಸಲಾಯಿತು. ಈ ಸಮಯದಲ್ಲಿ ಸದರಿ ಕಂಪನಿಗಳು ಮಧ್ಯವರ್ತಿಗಳ ಮೂಲಕ 225 ಕೋಟಿ ಲಂಚ ನೀಡಿದ್ದಾಗಿ ಆರೋಪಿಸಿದ್ದವು. ಬಳಿಕ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಎರಡೂ ತನಿಖಾ ಸಂಸ್ಥೆಗಳು ಈ ಹಗರಣದ ಆಳ ಅಗಲ ಜಾಲಾಡಲು ಮುಂದಾದವು. ಇದೀಗ ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್​ಪಿ ತ್ಯಾಗಿ ಸೇರಿದಂತೆ 9 ಜನರ ವಿರುದ್ಧ ದೆಹಲಿ ಹೈಕೋರ್ಟ್​​ನಲ್ಲಿ ಸಿಬಿಐ ಚಾರ್ಜ್​ಶೀಟ್ ಹಾಕಲಾಗಿದೆ.

-------------------
ಆಂಧ್ರದಲ್ಲಿ ಸೇತುವೆಗಾಗಿ ವಿಶೇಷ ರೀತಿಯಲ್ಲಿ ಪ್ರತಿಭಟನೆ
First published:December 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ