UP Election: ಸಾಯುವವರೆಗೂ Varanasi ಜನರ ಸೇವೆ ಮಾಡುತ್ತೇನೆ; PM Modi

ವಿರೋಧ ಪಕ್ಷಗಳ ನಾಯಕರು ತಮ್ಮ ಪಕ್ಷವನ್ನು ಸ್ವಂತ ಆಸ್ತಿಯಂತೆ ಪರಿಗಣಿಸುತ್ತಾರೆ ಅವರು ಎಂದಿಗೂ ಕಾರ್ಯಕರ್ತರ ಪಕ್ಷವಾದ ಬಿಜೆಪಿಗೆ ಸವಾಲು ಹಾಕಲು ಸಾಧ್ಯವಿಲ್ಲ.

ಪ್ರಧಾನಿ ಮೋದಿ

ಪ್ರಧಾನಿ ಮೋದಿ

 • Share this:
  ಜನರು ತಮ್ಮ ಕೊನೆ ದಿನಗಳನ್ನು ಕಳೆಯಲು ವಾರಣಾಸಿಗೆ ಬರುತ್ತಾರೆ ಎಂಬ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಯಾದವ್ (Akhilesh Yadav)​ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ತಿರುಗೇಟು ನೀಡಿದ್ದಾರೆ. ವಾರಣಾಸಿಯ (Varanasi) ಜನರ ಸೇವೆಯನ್ನು ನನ್ನ ಕಡೆ ಉಸಿರುವವರೆಗೆ ನಾನು ಮಾಡುತ್ತೇನೆ. ಇದು ನನ್ನ ಸೌಭಾಗ್ಯ ಎಂದು ಅವರು ತಿಳಿಸಿದ್ದಾರೆ. ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿದ ಅವರು ಮಾತನಾಡಿದರು. ಇದೇ ವೇಳೆ ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದ ಅವರು, ವಿರೋಧ ಪಕ್ಷಗಳ ನಾಯಕರು ತಮ್ಮ ಪಕ್ಷವನ್ನು ಸ್ವಂತ ಆಸ್ತಿಯಂತೆ ಪರಿಗಣಿಸುತ್ತಾರೆ ಅವರು ಎಂದಿಗೂ ಕಾರ್ಯಕರ್ತರ ಪಕ್ಷವಾದ ಬಿಜೆಪಿಗೆ ಸವಾಲು ಹಾಕಲು ಸಾಧ್ಯವಿಲ್ಲ ಎಂದು ಗುಡುಗಿದರು.

  ನನ್ನ ಸಾವಿಗೆ ಹಾರೈಸುತ್ತಿದ್ದಾರೆ
  ಕಾಶಿಯಲ್ಲಿ ನನ್ನ ಸಾವಿಗೆ ಜನರು ಹಾರೈಸುತ್ತಿದ್ದಾರೆ. ಇದರಿಂದ ನನಗೆ ಸಂತೋಷ. ವಾರಣಾಸಿಯವರಾಗಲೀ ಇಲ್ಲಿರುವ ಜನರಾಗಲಿ ನನ್ನನ್ನು ಬಿಡುವುದಿಲ್ಲ ಎಂದು ನಾನು ಅರಿತುಕೊಂಡಿದ್ದೇನೆ. ವಾರಣಾಸಿಯ ಜನರ ಸೇವೆ ಮಾಡುವಾಗಲೇ ನಾನು ಸಾಯುವುದು ನನಗೆ ಒಂದು ಭಾಗ್ಯ ಎಂದರು.

  ಕಳೆದ ಡಿಸೆಂಬರ್‌ನಲ್ಲಿ ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕನಸಿನ ಯೋಜನೆಯಾದ ಕಾಶಿ ವಿಶ್ವನಾಥ ಕಾರಿಡಾರ್‌ ಉದ್ಘಾಟಿಸಿದರು. ಇದಾದ ಬಳಿಕ ಟೀಕಿಸಿದ ಅಖಿಲೇಶ್ ಯಾದವ್​, ಅಂತ್ಯ ಸಮೀಪಿಸಿದಾಗ ಜನರು ಕಾಶಿಯಲ್ಲಿ ಇರುತ್ತಾರೆ ಎಂದು ಲೇವಡಿ ಮಾಡಿದ್ದರು.

  ಕಾರ್ಯಕರ್ತರ ಪಕ್ಷಕ್ಕೆ ಸವಾಲ್​ ಮಾಡಲು ಸಾಧ್ಯವಿಲ್ಲ
  ಅದಕ್ಕೆ ತಿರುಗೇಟು ನೀಡಿ ಮಾತನಾಡಿದ ಪ್ರಧಾನಿಗಳು, ತಮ್ಮ ಪಕ್ಷಗಳನ್ನು ತಮ್ಮ ಖಾಸಗಿ ಆಸ್ತಿ ಎಂದು ಪರಿಗಣಿಸುವ ರಾಜವಂಶಸ್ಥರು ಬಿಜೆಪಿಗೆ ಎಂದಿಗೂ ಸವಾಲು ಮಾಡಲು ಸಾಧ್ಯವಿಲ್ಲ. ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದೆ. ಬಿಜೆಪಿ ಎಂದಿಗೂ ಕುಟುಂಬದ ಅಭಿವೃದ್ಧಿಗೆ ಕೆಲಸ ಮಾಡುವುದಿಲ್ಲ. ಪಕ್ಷ ಕೇವಲ ದೇಶದ ಅಭಿವೃದ್ಧಿಗಾಗಿ ಮಾತ್ರ ಕೆಲಸ ಮಾಡುತ್ತದೆ ಎಂದು ತಿಳಿಸಿದರು.

  ಇದೇ ವೇಳೆ ಸಮಾಜವಾದಿ ಪಕ್ಷವನ್ನು ಉಲ್ಲೇಖಿಸದೇ ಹರಿಹಾಯ್ದ ಅವರು, ಹಿಂದಿನ ಸರ್ಕಾರವು ಯಾತ್ರಾ ನಗರವನ್ನು ನಿರ್ಲಕ್ಷಿಸಿದೆ. ಈ ಹಿಂದೆ ಹೋಲಿಸಿದರೆ ಕಳೆದ ಐದು ವರ್ಷದಲ್ಲಿ ರಾಜ್ಯದಲ್ಲಿ ಅಪರಾಧಿಗಳು ಮುಕ್ತರಾಗಿದ್ದಾರೆ. ಈ ಹಿಂದೆ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಆಡಳಿತದಲ್ಲಿ ಭಯೋತ್ಪಾದಕರು ಯಾವುದೇ ಭಯವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದರು ಎಂದು ಟೀಕಿಸಿದರು.

  ಇದನ್ನು ಓದಿ: National Science Day: ಈ ದಿನದ ಇತಿಹಾಸ, ಮಹತ್ವ, ಈ ವರ್ಷದ ಘೋಷಣೆಗಳ ಬಗ್ಗೆ ನಿಮಗೆಷ್ಟು ಗೊತ್ತು?

  ಡಬಲ್​ ಇಂಜಿನ್​ ಸರ್ಕಾರದಿಂದ ಯುಪಿ ಅಭಿವೃದ್ಧಿ
  ರಾಜವಂಶಗಳ ಆಳ್ವಿಕೆಯಲ್ಲಿ, ವಾರಣಾಸಿಯ ದೇವಾಲಯಗಳನ್ನು ಜನರು ಲೂಟಿ ಮಾಡಿದರು. ದೇವಾಲಯದಲ್ಲಿ ಬಾಂಬ್‌ಗಳನ್ನು ಸ್ಫೋಟಿಸಲು ಬಳಸಿದರು. ಭಯೋತ್ಪಾದನೆ ಆರೋಪಿಗಳನ್ನು ರಕ್ಷಿಸುವ ಕಾರ್ಯ ಸಮಾಜವಾದಿ ಪಕ್ಷ ಮಾಡಿತು
  ರಾಜವಂಶಸ್ಥರು ವಾರಣಾಸಿಯನ್ನು ನಿರ್ಲಕ್ಷಿಸಿದ್ದರು. ಅದು ಈಗ ಬದಲಾಗುತ್ತಿದೆ. ಹಲವು ವರ್ಷಗಳ ನಂತರ, ಕಾಶಿ ವಿಶ್ವನಾಥ ದೇವಾಲಯವು ಮತ್ತೆ ಗಂಗಾ ನದಿಯ ದಡವನ್ನು ಸೇರಿದೆ. ಡಬಲ್ ಇಂಜಿನ್ ಸರ್ಕಾರವು ಯುಪಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ. 2017 ರ ಮೊದಲು ಯುಪಿ ಕೇವಲ 33 ವೈದ್ಯಕೀಯ ಕಾಲೇಜುಗಳನ್ನು ಇದ್ದವು. ಆದರೆ, ಈಗ 65 ವೈದ್ಯಕೀಯ ಕಾಲೇಜ್​ ಇದೆ. ಬಿಜೆಪಿ ಸರ್ಕಾರವು ಬಡವರಿಗಾಗಿ 10 ಲಕ್ಷಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿದೆ ಎಂದು ಜನರಿಗೆ ತಿಳಿಸಿದರು.

  ಇದನ್ನು ಓದಿ: Ukraineನಲ್ಲಿ ನಾಯಿ ಬಿಟ್ಟು ಭಾರತಕ್ಕೆ ಬರಲು ಒಪ್ಪದ ವಿದ್ಯಾರ್ಥಿ! ಮೂಕಪ್ರಾಣಿ ಮೇಲೆ ಅದೆಂಥಾ ಪ್ರೀತಿ

  ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್‌ರಾಜ್‌ನಂತಹ ಧಾರ್ಮಿಕ ಸ್ಥಳಗಳ ಅಭಿವೃದ್ಧಿಯು ಪ್ರದೇಶಗಳ ಆರ್ಥಿಕ ಅಭಿವೃದ್ಧಿಗೆ ಕಾರಣವಾಗುತ್ತದೆ. ಕಾಶಿ ವಿಶ್ವನಾಥ ಧಾಮ ಯೋಜನೆಯ ಬಗ್ಗೆ ಎಲ್ಲರೂ ಹೆಮ್ಮೆ ಪಡುತ್ತಿದ್ದರೆ, ಕೆಲವರು ಅದನ್ನು ಕೋಮು ದೃಷ್ಟಿಯಲ್ಲಿ ನೋಡಿದ್ದಾರೆ ಎಂದು ಸಮಾಜವಾದಿ ಪಕ್ಷದ ವಿರುದ್ಧ ಹರಿಹಾಯ್ದರು.

  ದಲಿತರು, ಹಿಂದುಳಿದವರು ಮತ್ತು ಸಾಮಾನ್ಯ ವರ್ಗದ ಜನರು ಸೇರಿದಂತೆ 15 ಕೋಟಿ ಕುಟುಂಬಗಳಿಗೆ ಸರ್ಕಾರ ಉಚಿತ ಪಡಿತರವನ್ನು ನೀಡಿದೆ. ಇದಲ್ಲದೆ, ಯುಪಿಯ 2.6 ಕೋಟಿ ರೈತರು ತಮ್ಮ ಬ್ಯಾಂಕ್ ಖಾತೆಗಳಿಗೆ ನೇರವಾಗಿ 43,000 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಯುಪಿಯಲ್ಲಿ ಗಂಗಾನದಿಯನ್ನು ಸ್ವಚ್ಛಗೊಳಿಸಲು ಉದ್ದೇಶಿಸಿರುವ ವಿವಿಧ ಯೋಜನೆಗಳಲ್ಲಿ ಸುಮಾರು 11,000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗಿದೆ. ಬಿಜೆಪಿ ಸರ್ಕಾರದ ಈ ಕಾರ್ಯಗಳನ್ನು ಕಾರ್ಯಕರ್ತರು ಜನರಿಗೆ ತಿಳಿಸಬೇಕು ಎಂದು ಒತ್ತಾಯಿಸಿದರು.
  Published by:Seema R
  First published: