ಮುಂದಿನ 100 ವರ್ಷದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಲೋಕಸಭೆಯಲ್ಲಿ PM Modi ಮಾತಿನೇಟು!

PM Modi in Parliament: ಕಾಂಗ್ರೆಸ್ಸಿಗರು ಮುಂದಿನ 100 ವರ್ಷಗಳ ಕಾಲ ಅಧಿಕಾರಕ್ಕೆ ಬರುವುದಿಲ್ಲ ಎಂದು ಮನಸ್ಸು ಮಾಡಿದ್ದಾರೆ. ಅವರೇ ಅದಕ್ಕೆ ಬದ್ಧರಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. 100 ವರ್ಷಗಳ ಕಾಲ ಅವರನ್ನು ಅಧಿಕಾರದಿಂದ ದೂರ ಇಡಲು  ನಾನು ನನ್ನ ಸಿದ್ಧತೆಗಳನ್ನು ಮಾಡಿದ್ದೇನೆ.

ಪ್ರಧಾನಿ ಮೋದಿ (ಫೈಲ್​ ಫೋಟೋ)

ಪ್ರಧಾನಿ ಮೋದಿ (ಫೈಲ್​ ಫೋಟೋ)

  • Share this:
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ (PM Modi in Parliament) ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯಕ್ಕೆ ಉತ್ತರ ನೀಡಿ, ಭಾಷಣ ನಡೆಸಿದರು. ಕಾಂಗ್ರೆಸ್​ (Congress) ವಿರುದ್ಧ ಪ್ರಧಾನಿ ಮೋದಿ ಭರ್ಜರಿ ವಾಗ್ದಾಳಿ ನಡೆಸಿದರು. ನಿರಂತರ ಸೋಲುಗಳ ಬಳಿಕವೂ ‘ಕೈ’ ನಾಯಕರಿಗೆ ಬುದ್ಧಿ ಬಂದಿಲ್ಲ. ಮುಂದಿನ ಚುನಾವಣೆಯಲ್ಲಿ ಅಲ್ಲ, ಮುಂದಿನ 100 ವರ್ಷಗಳ ಕಾಲ (next 100 years) ಕಾಂಗ್ರೆಸ್​ ಪಕ್ಷವನ್ನು ಜನ ಅಧಿಕಾರದಿಂದ (power) ದೂರ ಇಡಲು ನಿರ್ಧರಿಸಿದ್ದಾರೆ ಎಂದು ಮಾತಿನಲ್ಲೇ ಕುಟುಕಿದರು. ಮೋದಿ ಭಾಷಣಕ್ಕೆ ಪ್ರತಿಪಕ್ಷಗಳು ಗದ್ದಲ ಉಂಟು ಮಾಡಿ, ಅಡ್ಡಿಪಡಿಸಿದರೂ ಮೋದಿ ತಮ್ಮ ವಾಗ್ಝರಿ ಮುಂದುವರೆಸಿದರು. ಸಂಸತ್ತಿನ ಮೇಜನ್ನು ಬಡಿದು ಭಾಷಣಕ್ಕೆ ಅಡ್ಡಿಪಡಿಸಿದವರಿಗೆ ಹಾಸ್ಯ ಚಟಾಕಿ ಮೂಲಕ ತಿರುಗೇಟು ನೀಡಿದರು. ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನು ಗುರಿಯಾಗಿಸಿಕೊಂಡು ವ್ಯಂಗ್ಯವಾಡಿದರು. ಈಗಲೂ ಅಧೀರ್ ರಂಜನ್ ಚೌಧರಿಗೆ ಬಾಲ್ಯವನ್ನು ಆನಂದಿಸಲು ಅವಕಾಶ ನೀಡಬೇಕು. ಮೇಜನ್ನು ಬಡಿದು ಖುಷಿ ಪಡಲಿ ಪಾಪ ಅವರು ಎಂದು ಮೋದಿ ಹೇಳುತ್ತಿದ್ದಂತೆ ಇಡೀ ಸದನ ನಗೆಗಡಲಲ್ಲಿ ತೇಲಿತು.   

ನೀವು ಬಯಸಿದರೆ ಕುಳಿತುಕೊಳ್ಳಲು ನನಗೆ ಸಂತೋಷವಾಗುತ್ತದೆ. ನಾನು ನಿಮಗೆ ಧನ್ಯವಾದ ಹೇಳುವ ಮೂಲಕ ಪ್ರಾರಂಭಿಸಬೇಕೇ ಎಂದು ಚೌಧರಿ ಅವರನ್ನು ತರಾಟೆಗೆ ತೆಗೆದುಕೊಂಡರು. ಇನ್ನು ವಿರೋಧ ಪಕ್ಷದ ವಿರುದ್ಧ ವಾಗ್ದಾಳಿ ಮುಂದುವರೆಸಿದ ಪ್ರಧಾನಿ ಮೋದಿ, ಕಾಂಗ್ರೆಸ್‌ನ ಹೇಳಿಕೆಗಳು ಅವರನ್ನು 100 ವರ್ಷಗಳ ಕಾಲ ಅಧಿಕಾರದಿಂದ ದೂರ ಉಳಿಯವಂತೆ ಮಾಡುವಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್​​ನ ಅಹಂ ಕಡಿಮೆ ಆಗಿಲ್ಲ

ಕಾಂಗ್ರೆಸ್ಸಿಗರು ಮುಂದಿನ 100 ವರ್ಷಗಳ ಕಾಲ ಅಧಿಕಾರಕ್ಕೆ ಬರುವುದಿಲ್ಲ ಎಂದು ಮನಸ್ಸು ಮಾಡಿದ್ದಾರೆ. ಅವರೇ ಅದಕ್ಕೆ ಬದ್ಧರಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. 100 ವರ್ಷಗಳ ಕಾಲ ಅವರನ್ನು ಅಧಿಕಾರದಿಂದ ದೂರ ಇಡಲು  ನಾನು ನನ್ನ ಸಿದ್ಧತೆಗಳನ್ನು ಮಾಡಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು. ಹಲವು ವರ್ಷಗಳಿಂದ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್​ ಅಧಿಕಾರ ಕಳೆದುಕೊಂಡಿದ್ದರು, ಅಹಂ ಕಡಿಮೆ ಆಗಿಲ್ಲ ಎಂದು ಮೋದಿ ಕಟುವಾಗಿ ಟೀಕಿಸಿದರು.

ಇದನ್ನೂ ಓದಿ: ಕಾಶ್ಮೀರ ವಿವಾದ: Hyundai ಬುಕ್ಕಿಂಗ್​ ರದ್ದು ಮಾಡಲು ಮುಂದಾದ ಗ್ರಾಹಕರು

ಎಲ್ಲೆಲ್ಲಿ ಸೋತಿದಿದ್ದೀರಿ ನೆನಪಿಸಿಕೊಳ್ಳಿ..

ನಾಗಾಲ್ಯಾಂಡ್ 24 ವರ್ಷಗಳಿಂದ ಕಾಂಗ್ರೆಸ್‌ಗೆ ಮತ ಹಾಕಿಲ್ಲ, ಒಡಿಶಾ 27 ವರ್ಷಗಳ ಹಿಂದೆ ನಿಮಗೆ ಮತ ಹಾಕಿದೆ. 28 ವರ್ಷಗಳ ಹಿಂದೆ ಗೋವಾದಲ್ಲಿ ಪೂರ್ಣ ಬಹುಮತದೊಂದಿಗೆ ಕಾಂಗ್ರೆಸ್ಸಿಗರು ಗೆದ್ದಿದ್ದೀರಿ. 1988ರಲ್ಲಿ ತ್ರಿಪುರಾ ಕಾಂಗ್ರೆಸ್‌ಗೆ ಅಧಿಕಾರ ನೀಡಿದೆ. ಪಶ್ಚಿಮ ಬಂಗಾಳ 1972 ರಲ್ಲಿ ಕಾಂಗ್ರೆಸ್‌ಗೆ ಬಹುಮತ ನೀಡಿದೆ. ತೆಲಂಗಾಣ ರಚನೆಯ ಶ್ರೇಯವನ್ನು ನೀವು ತೆಗೆದುಕೊಳ್ಳುತ್ತೀರಿ ಆದರೂ ಅಲ್ಲಿನ ಜನ ನಿಮ್ಮನ್ನು ಸ್ವೀಕರಿಸಲಿಲ್ಲ ಕಾಂಗ್ರೆಸ್ಸಿನ ಸೋಲುಗಳನ್ನು ಉಲ್ಲೇಖಿಸಿ ಮಾತಿನಲ್ಲೇ ಮೋದಿ ತಿವಿದರು.

2014ರಲ್ಲೇ ಕೆಲವರ ಮನಸ್ಸು ನಿಂತು ಬಿಟ್ಟಿದೆ

ಇಂದು ದೇಶದ ಬಡ ಜನರು ಗ್ಯಾಸ್ ಸಂಪರ್ಕ, ಮನೆ, ಶೌಚಾಲಯಗಳನ್ನು ಪಡೆಯುತ್ತಿದ್ದಾರೆ. ತಮ್ಮದೇ ಆದ ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ. ಆದರೆ ದುರದೃಷ್ಟವಶಾತ್ 2014ರಲ್ಲೇ ಕೆಲವರ ಮನಸ್ಸು ನಿಂತು ಬಿಟ್ಟಿದೆ. ನಂತರದ ಅಭಿವೃದ್ಧಿ ಅವರಿಗೆ ಕಾಣುತ್ತಿಲ್ಲ ಎಂದು ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡು ಪ್ರಧಾನಿ ಮೋದಿ ವ್ಯಂಗ್ಯವಾಡಿದರು. ಕಾಂಗ್ರೆಸ್​ ಇದ್ದಾಗ ದೇಶ ಹೇಗಿತ್ತು? ದಶಕಗಳ ಕಾಲ ಆಡಳಿತ ನಡೆಸಿದರೂ ದೇಶ ಎಷ್ಟು ಹಿಂದೆ ಉಳಿದಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಕೋವಿಡ್​ ಸಮಯದಲ್ಲೂ ಸರ್ಕಾರವನ್ನು ಟೀಕಿಸುವುದನ್ನೇ ಕಾಂಗ್ರೆಸ್​ ನಾಯಕರು ಮಾಡಿದ್ದಾರೆ. ನಮ್ಮ ಕಾಲದಲ್ಲಿ ಅಲ್ಲ ಕಾಂಗ್ರೆಸ್​ ಕಾಲದಲ್ಲೇ ಬೆಲೆ ಏರಿಕೆ ದರ ದಾಖಲೆಯನ್ನು ಮುಟ್ಟಿತ್ತು ಎಂದು ಮೋದಿ ಕಿಡಿಕಾರಿದರು.
Published by:Kavya V
First published: