ಗಾಂಧೀಜಿ 150ನೇ ಸ್ಮರಣಾರ್ಥ ಬಾಲಿವುಡ್ ನಟರೊಂದಿಗೆ ಮೋದಿ ಸಂವಾದ; ಮಹಾತ್ಮರ ಚಿಂತನೆ ಸಾರುವ ದೃಶ್ಯರೂಪಕ ಬಿಡುಗಡೆ

ತಮ್ಮ ನಿರಂತರ ಕೆಲಸದ ಒತ್ತಡದ ನಡುವೆಯೂ ತಮ್ಮ ಮನವಿ ಓಗೊಟ್ಟು ಮಹಾತ್ಮ ಗಾಂಧಿ ಸ್ಮರಣಾರ್ಥ ಕಾರ್ಯಕ್ರಮಕ್ಕೆ ಹಾಜರಾಗಿದ್ದಕ್ಕೆ ಮತ್ತು ಗಾಂಧಿ ಚಿಂತನೆಗಳನ್ನು ಸಾರುವ ದೃಶ್ಯ ರೂಪಕದ ಮೂಲಕ ಕಟ್ಟಿಕೊಟ್ಟಿರುವುದಕ್ಕೆ ಪ್ರಧಾನಿ ಕೃತಜ್ಞತೆ ಸಲ್ಲಿಸಿದ್ದಾರೆ.

news18-kannada
Updated:October 19, 2019, 10:05 PM IST
ಗಾಂಧೀಜಿ 150ನೇ ಸ್ಮರಣಾರ್ಥ ಬಾಲಿವುಡ್ ನಟರೊಂದಿಗೆ ಮೋದಿ ಸಂವಾದ; ಮಹಾತ್ಮರ ಚಿಂತನೆ ಸಾರುವ ದೃಶ್ಯರೂಪಕ ಬಿಡುಗಡೆ
ಮಹಾತ್ಮ ಗಾಂಧೀಜಿ 150ನೇ ಸ್ಮರಣಾರ್ಥ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಿಯೊಂದಿಗೆ ಸೆಲ್ಫಿ ತೆಗೆದುಕೊಂಡ ನಟ ಶಾರುಖ್ ಖಾನ್. ಆಮೀರ್ ಖಾನ್ ಇದ್ದಾರೆ.
news18-kannada
Updated: October 19, 2019, 10:05 PM IST
ನವದೆಹಲಿ: ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಸಂಜೆ ಬಾಲಿವುಡ್ ನಟ-ನಟಿಯೊಂದಿಗೆ ಸಂವಾದ ನಡೆಸಿದರು. ಇದೇ ವೇಳೆ ಗಾಂಧೀಜಿ ಚಿಂತನೆಗಳನ್ನು ಸಾರುವ ದೃಶ್ಯರೂಪಕವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಿದರು.

ಆಮೀರ್ ಖಾನ್, ಶಾರುಖ್ ಖಾನ್, ರಾಜ್​ಕುಮಾರ್ ಇರಾನಿ, ಕಂಗನಾ ರಣಾವತ್, ಆನಂದ್ ರೈ, ಎಸ್.ಪಿ. ಬಾಲಸುಬ್ರಹ್ಮಣ್ಯ, ಸೋನಂ ಕಪೂರ್, ಜಾಕಿ ಶ್ರಾಫ್​, ಸೋನು ನಿಗಮ್, ಏಕ್ತಾ ಕಪೂರ್ ಸೇರಿದಂತೆ ಭಾರತೀಯ ಸಿನಿಮಾ ಮತ್ತು ಮನರಂಜನಾ ಸಂಸ್ಥೆಯ ಸದಸ್ಯರು ಮಹಾತ್ಮ ಗಾಂಧಿ ಸ್ಮರಣಾರ್ಥ ಸಂವಾದದಲ್ಲಿ ಭಾಗಿಯಾಗಿದ್ದಾರೆ. ಮಹಾತ್ಮ ಗಾಂಧಿಯ ಚಿಂತನೆಗಳನ್ನು ದೃಶ್ಯರೂಪಕದಲ್ಲಿ ಹೇಳಿರುವ ನಟ-ನಟಿಯರಿಗೆ ಪ್ರಧಾನಿ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ.

ಪ್ರಧಾನಿ ಮೋದಿ ಅವರು ಹಂಚಿಕೊಂಡಿರುವ ದೃಶ್ಯರೂಪಕ ರಾಜ್​ಕುಮಾರ್ ಇರಾನಿ ನಿರ್ಮಾಣ ಸಂಸ್ಥೆಯಿಂದ ನಿರ್ಮಿಸಲಾಗಿದೆ. 1.40 ನಿಮಿಷದ ದೃಶ್ಯ ರೂಪಕದಲ್ಲಿ  ಬಾಲಿವುಡ್​ನ ಹೆಸರಾಂತ ನಟ-ನಟಿಯರು, ಗಾಯಕರು ಮಹಾತ್ಮ ಗಾಂಧೀಜಿಯ ಶ್ರೇಷ್ಠ ಚಿಂತನೆಗಳನ್ನು ಸಾರಿದ್ದಾರೆ.

ತಮ್ಮ ನಿರಂತರ ಕೆಲಸದ ಒತ್ತಡದ ನಡುವೆಯೂ ತಮ್ಮ ಮನವಿ ಓಗೊಟ್ಟು ಮಹಾತ್ಮ ಗಾಂಧಿ ಸ್ಮರಣಾರ್ಥ ಕಾರ್ಯಕ್ರಮಕ್ಕೆ ಹಾಜರಾಗಿದ್ದಕ್ಕೆ ಮತ್ತು ಗಾಂಧಿ ಚಿಂತನೆಗಳನ್ನು ಸಾರುವ ದೃಶ್ಯ ರೂಪಕದ ಮೂಲಕ ಕಟ್ಟಿಕೊಟ್ಟಿರುವುದಕ್ಕೆ ಪ್ರಧಾನಿ ಕೃತಜ್ಞತೆ ಸಲ್ಲಿಸಿದ್ದಾರೆ.

Loading...

ಇದನ್ನು ಓದಿ: ನೀವು ನನ್ನನ್ನು 5 ವರ್ಷ ಶಾಶ್ವತವಾಗಿ ರೂಪಿಸಿದಾಗ ನಾನು ಏಕೆ ತಾತ್ಕಾಲಿಕ ವಿಧಿಗೆ ಅವಕಾಶ ನೀಡಲಿ; 370ನೇ ವಿಧಿ ಬಗ್ಗೆ ಮೋದಿ ಮಾತು

First published:October 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...