2014ರಲ್ಲಿ ಯುವರಾಜನಿಗಾಗಿ ನನ್ನ ಹೆಲಿಕಾಪ್ಟರ್​ ಹಾರಾಟಕ್ಕೆ ಅವಕಾಶ ನೀಡಿರಲಿಲ್ಲ; ರಾಹುಲ್ ವಿರುದ್ಧ ಮೋದಿ ವಾಗ್ದಾಳಿ

ಪಂಜಾಬ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಮೆರವಣಿಗೆಯಿಂದಾಗಿ ಮುಖ್ಯಮಂತ್ರಿ ಚರಣ್‌ಜಿತ್ ಚನ್ನಿ ಅವರ ಹೆಲಿಕಾಪ್ಟರ್ ಹಾರಾಟಕ್ಕೆ ಅವಕಾಶ ನೀಡದಿರುವ ಘಟನೆ ನಡೆದಿದೆ.

ಪ್ರಧಾನಿ ಮೋದಿ

ಪ್ರಧಾನಿ ಮೋದಿ

  • Share this:
ಪ್ರಧಾನಿ ನರೇಂದ್ರ ಮೋದಿ (PM Narendra Modi) ಸೋಮವಾರ ಕಾಂಗ್ರೆಸ್​ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜಕೀಯ ಎದುರಾಳಿಗಳ ವಿರುದ್ಧ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್​ ವಿರುದ್ಧ ಮೋದಿ ಗಂಭೀರ ಆರೋಪ ಮಾಡಿದ್ದಾರೆ. ಪಂಜಾಬ್​​ನ (Punjab) ಜಲಂಧರ್​​ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, 2014ರ ಘಟನೆ ಕುರಿತು ರಾಹುಲ್ ಗಾಂಧಿ (Rahul Gandhi) ವಿರುದ್ಧ ಹರಿಹಾಯ್ದರು. ಆಗ ಕಾಂಗ್ರೆಸ್​ ಸಂಸದರಾಗಿದ್ದ ರಾಹುಲ್​ ಗಾಂಧಿಯವರಿಗಾಗಿ ಗುಜರಾತ್​ ಸಿಎಂ ಆಗಿದ್ದ ಪ್ರಧಾನಿ ಮೋದಿಯವರ ಹೆಲಿಕಾಪ್ಟರ್​​ನ್ನು ತಡೆಹಿಡಿಯಲಾಗಿತ್ತು ಎಂಬ ವಿಚಾರವನ್ನು ಮೋದಿ ಈಗ ಪ್ರಸ್ತಾಪಿಸಿದ್ದಾರೆ.

2014ರ ಘಟನೆ ನೆನೆದ ಪ್ರಧಾನಿ ಮೋದಿ

2014ರಲ್ಲಿ ನಾನು ಗುಜರಾತ್ ಸಿಎಂ ಆಗಿದ್ದೆ, ಜೊತೆಗೆ ನಾನು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಕೂಡ ಆಗಿದ್ದೆ. ಹೀಗಾಗಿ ಚುನಾವಣೆ ಪ್ರಚಾರ ನಡೆಸಲು ಎಲ್ಲಾ ಕಡೆ ಹೋಗುತ್ತಿದ್ದೆ. ಒಂದು ದಿನ ನಾನು ಪಠಾಣ್​ಕೋಟ್​​ಗೆ ಹೋಗಬೇಕಾಗಿತ್ತು. ನಂತರ ಹಿಮಾಚಲಕ್ಕೂ ಹೆಲಿಕಾಪ್ಟರ್​​ನಲ್ಲಿ ಹೋಗಬೇಕಿತ್ತು. ಈ ವೇಳೆ ನಡೆದ ಘಟನೆಯನ್ನು ನಾನು ಹೇಳಿದರೆ ನೀವು ಶಾಕ್​ ಆಗುತ್ತೀರಿ. ಯುವರಾಜ(ರಾಹುಲ್ ಗಾಂಧಿ) ಆಗ ಕೇವಲ ಕಾಂಗ್ರೆಸ್​​ ಪಕ್ಷದ ಸಂಸದರಾಗಿದ್ದರು. ಅವರು ಅಮೃತಸರದಲ್ಲಿ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿತ್ತು. ಇದೇ ಕಾರಣದಿಂದಾಗಿ ನನಗೆ ಹಾರಲು ಬಿಡದೆ ಹೆಲಿಕಾಪ್ಟರ್​​ನ್ನು ತಡೆಹಿಡಿದಿದ್ದರು. ಸುಮಾರು 1 ಗಂಟೆ ತಡವಾಗಿ ನಾನು ಪಠಾಣ್​ಕೋಟ್ ತಲುಪಿದೆ. ಕೇವಲ ರಾಹುಲ್​ ಗಾಂಧಿ ಪಂಜಾಬ್​​ನ ಯಾವುದೋ ಮೂಲೆಗೆ ಬರುತ್ತಾರೆ ಎಂದು ಹೇಳಿ ನನ್ನ ಹೆಲಿಕಾಪ್ಟರ್​​ನ್ನು ತಡೆ ಹಿಡಿದಿದ್ದರು‘‘ ಎಂದು ಮೋದಿ ಅಂದಿನ ಘಟನೆ ಬಗ್ಗೆ ಬಹಿರಂಗಪಡಿಸಿದರು.

ಇದನ್ನೂ ಓದಿ: Morning Digest: ಚಿನ್ನದ ಬೆಲೆಯಲ್ಲಿ ಇಳಿಕೆ, ರಾಜ್ಯದಲ್ಲಿ ಬೇಸಿಗೆ ಆರಂಭ, ಬೆಳಗಿನ ಟಾಪ್ ನ್ಯೂಸ್​ಗಳು

ಕಾಂಗ್ರೆಸ್​ ಅಧಿಕಾರ ದುರ್ಬಳಕ್ಕೆ ಮಾಡಿಕೊಳ್ಳುತ್ತೆ

ರಾಜಕೀಯ ಅಧಿಕಾರವನ್ನು ಒಂದು ಕುಟುಂಬದವರು ಬಳಸಿಕೊಂಡಿದ್ದಾರೆ. ಇವರ ಕಾರಣದಿಂದಾಗಿ ಹಿಮಾಚಲದಲ್ಲಿನ ನನ್ನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಬೇಕಾಯಿತು. ಇಂತಹ ಅಬ್ಬರದ ಅಧಿಕಾರ ದುರ್ಬಳಕೆ, ವಿರೋಧಿಗಳಿಗೆ ಅಡೆತಡೆಗಳನ್ನು ಸೃಷ್ಟಿಸುವುದನ್ನು ಕಾಂಗ್ರೆಸ್​ ಪ್ರತೀ ಬಾರಿ ಮಾಡುತ್ತದೆ ಎಂದು ಮೋದಿ ಹೇಳಿದರು. ಜನವರಿಯಲ್ಲಿ ಭದ್ರತಾ ಲೋಪ ಉಂಟಾದ ಹಿನ್ನೆಲೆ, ಪ್ರಧಾನಿ ಮೋದಿಯವರ ಪಂಜಾಬ್​ ರ್ಯಾಲಿಯನ್ನು ರದ್ದುಗೊಳಿಸಿದ ಒಂದು ತಿಂಗಳ ಬಳಿಕ, ಈಗ ಜಲಂಧರ್​​ಗೆ ಭೇಟಿ ನೀಡಿದ್ದಾರೆ.

ಚನ್ನಿ ಹೆಲಿಕಾಪ್ಟರ್ ವಿವಾದದ ಬಗ್ಗೆ ಕಾಂಗ್ರೆಸ್ ವಾಗ್ದಾಳಿ


ಪಂಜಾಬ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಮೆರವಣಿಗೆಯಿಂದಾಗಿ ಮುಖ್ಯಮಂತ್ರಿ ಚರಣ್‌ಜಿತ್ ಚನ್ನಿ ಅವರ ಹೆಲಿಕಾಪ್ಟರ್ ಹಾರಾಟಕ್ಕೆ ಅವಕಾಶ ನೀಡದಿರುವ ಘಟನೆ ನಡೆದಿದೆ. ಚಂಡೀಗಢದಿಂದ ಹಾರಲು ಅವಕಾಶ ನೀಡದ ನಂತರ ರಾಜಕೀಯ ಸಂಘರ್ಷ ಭುಗಿಲೆದ್ದಿದೆ. ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಸುನೀಲ್ ಜಾಖರ್, ಚುನಾವಣಾ ಆಯೋಗ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಇದೇ ಭಾನುವಾರ ಅಂದರೆ ಫೆ. 20ರಂದು ಪಂಜಾಬ್​​ನಲ್ಲಿ 117 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಅದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 16 ಮತ್ತು 17 ರಂದು ಪಂಜಾಬ್‌ನ ಇತರ ಪ್ರದೇಶಗಳಾದ ಮಾಲ್ವಾ, ದೋಬಾ ಮತ್ತು ಮಜಾಗೆ ಭೇಟಿ ನೀಡಲಿದ್ದಾರೆ. ಫೆಬ್ರವರಿ 16 ರಂದು ಪಠಾಣ್‌ಕೋಟ್‌ನಲ್ಲಿ ಮತ್ತು ಫೆಬ್ರವರಿ 17 ರಂದು ಅಬೋಹರ್‌ನಲ್ಲಿ ಮತ್ತೊಂದು ಚುನಾವಣಾ ಸಮಾವೇಶ ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ.

ಇದನ್ನೂ ಓದಿ: Shocking: 48 ವರ್ಷಕ್ಕೇ 14 ಮದುವೆಯಾಗಿದ್ದ ಭೂಪ, ಒಮ್ಮೆಯೂ ಮದುವೆ ಆಗದವರು ಇವನನ್ನು ನೋಡಿ ಶಾಕ್!

ಬಿಜೆಪಿ ಪ್ರಣಾಳಿಕೆ

ರಾಜ್ಯದ ಯುವಕರಿಗೆ ಎಲ್ಲಾ ಸರ್ಕಾರಿ ಉದ್ಯೋಗಗಳಲ್ಲಿ ಶೇಕಡಾ 75 ರಷ್ಟು ಮೀಸಲಾತಿ, ಮತ್ತು ನಿರುದ್ಯೋಗ ಭತ್ಯೆ, ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇಕಡಾ 35 ರಷ್ಟು ಮೀಸಲಾತಿ ಸೇರಿದಂತೆ ನಿರುದ್ಯೋಗ ಭತ್ಯೆ ಸೇರಿದಂತೆ ಅನೇಕ ಭರವಸೆಗಳನ್ನು ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದೆ.
Published by:Latha CG
First published: