ವಾರಣಾಸಿಯಲ್ಲಿ 63 ಅಡಿ ಎತ್ತರದ ದೀನ ದಯಾಳ್​ ಪ್ರತಿಮೆ ಅನಾವರಣಗೊಳಿಸಲಿರುವ ಪ್ರಧಾನಿ ಮೋದಿ

ವಾರಣಾಸಿಯಲ್ಲಿ ನಿರ್ಮಾಣವಾಗಿರುವ ಆರ್​ಎಸ್​ಎಸ್​ನ ಆರಾಧ್ಯ ದೈವ ದೀನ ದಯಾಳ್​ ಉಪಾಧ್ಯಾಯ ಅವರ 63 ಅಡಿ ಎತ್ತರದ ಪ್ರತಿಮೆಯನ್ನು ಮೋದಿ ಅನಾವರಣಗೊಳಿಸಲಿದ್ದಾರೆ.  200ಕ್ಕೂ ಹೆಚ್ಚು ಕುಶಲ ಕರ್ಮಿಗಳು ಒಂದು ವರ್ಷ ಕಾಲ ಕೆಲಸ ಮಾಡಿ ಈ ಪ್ರತಿಮೆಯನ್ನು ನಿರ್ಮಿಸಿದ್ದಾರೆ ಎಂದು ತಿಳಿದು ಬಂದಿದೆ.

ವಾರಣಾಸಿಗೆ ಬಂದಿಳಿದ ಪ್ರಧಾನಿ ಮೋದಿ

ವಾರಣಾಸಿಗೆ ಬಂದಿಳಿದ ಪ್ರಧಾನಿ ಮೋದಿ

 • Share this:
  ವಾರಣಾಸಿ(ಫೆ.16): ಇಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಲೋಕಸಭಾ ಕ್ಷೇತ್ರವಾದ ಉತ್ತರ ಪ್ರದೇಶದ ವಾರಣಾಸಿಗೆ  ಭೇಟಿ ನೀಡಿದ್ದು, ಅಲ್ಲಿ 30ಕ್ಕೂ ಹೆಚ್ಚು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

  ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿಯನ್ನು ಗವರ್ನರ್​​​ ಆನಂದಿಬೆನ್​ ಪಟೇಲ್​, ಸಿಎಂ ಯೋಗಿ ಆದಿತ್ಯನಾಥ್​ ಮತ್ತು ಇತರೆ ಬಿಜೆಪಿ ಸಚಿವರು, ನಾಯಕರು ಮತ್ತು ಅಧಿಕಾರಿಗಳು ಬರಮಾಡಿಕೊಂಡರು.

  ವಾರಣಾಸಿಯಲ್ಲಿ ನಿರ್ಮಾಣವಾಗಿರುವ ಆರ್​ಎಸ್​ಎಸ್​ನ ಆರಾಧ್ಯ ದೈವ ದೀನ ದಯಾಳ್​ ಉಪಾಧ್ಯಾಯ ಅವರ 63 ಅಡಿ ಎತ್ತರದ ಪ್ರತಿಮೆಯನ್ನು ಮೋದಿ ಅನಾವರಣಗೊಳಿಸಲಿದ್ದಾರೆ.  200ಕ್ಕೂ ಹೆಚ್ಚು ಕುಶಲ ಕರ್ಮಿಗಳು ಒಂದು ವರ್ಷ ಕಾಲ ಕೆಲಸ ಮಾಡಿ ಈ ಪ್ರತಿಮೆಯನ್ನು ನಿರ್ಮಿಸಿದ್ದಾರೆ ಎಂದು ತಿಳಿದು ಬಂದಿದೆ.

  ಭಿನ್ನಾಭಿಪ್ರಾಯವು ಪ್ರಜಾಪ್ರಭುತ್ವದ ಸುರಕ್ಷತಾ ಕವಾಟ ಆದರೆ, ಅದನ್ನು ಹತ್ತಿಕ್ಕಲಾಗುತ್ತಿದೆ: ಜಸ್ಟೀಸ್​ ಚಂದ್ರಚೂಡ್

  ಬಳಿಕ ಮೋದಿ ಮಹಾ ಕಾಳ ಎಕ್ಸ್​ಪ್ರೆಸ್​​ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಈ ರೈಲು ವಾರಣಾಸಿ, ಉಜ್ಜಯಿನಿ ಮತ್ತು ಓಂಕಾರೇಶ್ವರ- ಈ ಮೂರು ಪುಣ್ಯಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸಲಿದೆ.

  ಅಷ್ಟೇ ಅಲ್ಲದೇ, ಮೋದಿ ತಮ್ಮ ಲೋಕಸಭಾ ಕ್ಷೇತ್ರದಲ್ಲಿ 430 ಹಾಸಿಗೆಗಳನ್ನು ಹೊಂದಿರುವ ಸೂಪರ್​ ಮಲ್ಟಿಸ್ಪೆಷಾಲಿಟಿ ಗವರ್ನಮೆಂಟ್​ ಹಾಸ್ಪಿಟಲ್​​ ಉದ್ಘಾಟನೆ ಮಾಡಲಿದ್ದಾರೆ. ಬನಾರಸ್​ ಹಿಂದೂ ಯೂನಿವರ್ಸಿಟಿಯಲ್ಲಿ ಇರುವ ಸೈಕಿಯಾಟ್ರಿ ಆಸ್ಪತ್ರೆಯನ್ನು ಉದ್ಘಾಟನೆ ಮಾಡಲಿದ್ದಾರೆ. ಶ್ರೀ ಜಗದ್ಗುರು ವಿಶ್ವಾರಾಧ್ಯ ಗುರುಕುಲ ಅವರ ಶತಮಾನೋತ್ಸವ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಮೋದಿ ಭಾಗವಹಿಸಲಿದ್ದಾರೆ.

  ಸೇತುವೆ ಇಲ್ಲದ ಊರಿಗೆ ತೆಪ್ಪವೇ ಸಾರಿಗೆ; ಕನಿಷ್ಟ ಮೂಲಭೂತ ಸೌಲಭ್ಯವನ್ನಾದರೂ ನೀಡಲು ಇನ್ನೆಷ್ಟು ವರ್ಷಬೇಕು ಸರ್ಕಾರಕ್ಕೆ?

   
  First published: