• Home
  • »
  • News
  • »
  • national-international
  • »
  • LK Advani: 'ಬಿಜೆಪಿ ಭೀಷ್ಮ' ಅಡ್ವಾಣಿಗೆ 95ನೇ ಹುಟ್ಟುಹಬ್ಬದ ಸಂಭ್ರಮ, ಶುಭ ಹಾರೈಸಿದ ಪಿಎಂ ಮೋದಿ!

LK Advani: 'ಬಿಜೆಪಿ ಭೀಷ್ಮ' ಅಡ್ವಾಣಿಗೆ 95ನೇ ಹುಟ್ಟುಹಬ್ಬದ ಸಂಭ್ರಮ, ಶುಭ ಹಾರೈಸಿದ ಪಿಎಂ ಮೋದಿ!

ಅಡ್ವಾಣಿ ಭೇಟಿಯಾದ ಮೋದಿ

ಅಡ್ವಾಣಿ ಭೇಟಿಯಾದ ಮೋದಿ

LK Advani Birthday: ಇಂದು ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರ ಜನ್ಮದಿನ. ಅವರಿಗೆ 95 ವರ್ಷ. ಎಲ್‌ಕೆ ಅಡ್ವಾಣಿ ಅವರ ಹುಟ್ಟುಹಬ್ಬಕ್ಕೆ ಶುಭಕೋರಲು ಪ್ರಧಾನಿ ನರೇಂದ್ರ ಮೋದಿ ಅವರ ಮನೆಗೆ ಆಗಮಿಸಿದರು. ಇದಕ್ಕೂ ಮುನ್ನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಅಡ್ವಾಣಿ ಮನೆಗೆ ಆಗಮಿಸಿ ಹುಟ್ಟುಹಬ್ಬದ ಶುಭಾಶಯ ಕೋರಿದರು.

ಮುಂದೆ ಓದಿ ...
  • Share this:

ನವದೆಹಲಿ(ನ.08): ಇಂದು ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ (Lal Krishna Advani) ಅವರ ಜನ್ಮದಿನ. ಅವರಿಗೆ 95 ವರ್ಷ. ಎಲ್‌ಕೆ ಅಡ್ವಾಣಿ ಅವರ ಹುಟ್ಟುಹಬ್ಬಕ್ಕೆ ಶುಭಕೋರಲು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಮನೆಗೆ ಆಗಮಿಸಿದರು. ಇದಕ್ಕೂ ಮುನ್ನ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಕೂಡ ಅಡ್ವಾಣಿ ಮನೆಗೆ ಆಗಮಿಸಿ ಹುಟ್ಟುಹಬ್ಬದ ಶುಭಾಶಯ ಕೋರಿದರು. ಪ್ರಧಾನಿ ಮೋದಿ ಅವರು ಲಾಲ್ ಕೃಷ್ಣ ಅಡ್ವಾಣಿ ಅವರ ಮನೆಯಲ್ಲಿ ಸುಮಾರು ಅರ್ಧ ಗಂಟೆ ತಂಗಿದ್ದರು. ಈ ವೇಳೆ ಪ್ರಧಾನಿ ಮೋದಿ ಲಾಲ್ ಕೃಷ್ಣ ಅಡ್ವಾಣಿ ಅವರಿಂದ ಆಶೀರ್ವಾದ ಪಡೆದರು. ಅಡ್ವಾಣಿ ಅವರ ಜನ್ಮದಿನದಂದು ಅಭಿನಂದಿಸಲು ಪ್ರಧಾನಿ ಮೋದಿ ಪ್ರತಿ ವರ್ಷ ಆಗಮಿಸುತ್ತಾರೆ ಎಂಬುವುದು ಉಲ್ಲೇಖನೀಯ.


ಇದನ್ನೂ ಓದಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಇಂದು; ಆಡ್ವಾಣಿ, ಜೋಶಿ, ಉಮಾ ಭಾರತಿ ಭವಿಷ್ಯ ನಿರ್ಧಾರ


ರಾಜನಾಥ್ ಸಿಂಗ್ ಅಭಿನಂದಿಸಿದ್ದಾರೆ


ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿ, “ಪೂಜ್ಯ ಲಾಲ್ ಕೃಷ್ಣ ಅಡ್ವಾಣಿಜೀ ಅವರಿಗೆ ಜನ್ಮದಿನದ ಶುಭಾಶಯಗಳು. ಅವರು ಭಾರತೀಯ ರಾಜಕೀಯದ ಅತಿ ಉನ್ನತ ವ್ಯಕ್ತಿಗಳಲ್ಲಿ ಎಣಿಸಲ್ಪಟ್ಟಿದ್ದಾರೆ. ದೇಶ, ಸಮಾಜ ಮತ್ತು ಪಕ್ಷದ ಅಭಿವೃದ್ಧಿ ಪಯಣದಲ್ಲಿ ಅವರು ಬಹಳ ಮಹತ್ವದ ಕೊಡುಗೆ ನೀಡಿದ್ದಾರೆ. ನಾನು ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಬಯಸುತ್ತೇನೆ ಎಂದಿದ್ದಾರೆ.


ಹುಟ್ಟಿದ್ದು ಸಿಂಧ್ ಪ್ರಾಂತ್ಯದಲ್ಲಿ


ಎಲ್ ಕೆ ಅಡ್ವಾಣಿ ಅವರು ಅವಿಭಜಿತ ಭಾರತದ ಸಿಂಧ್ ಪ್ರಾಂತ್ಯದಲ್ಲಿ 8 ನವೆಂಬರ್ 1927 ರಂದು ಜನಿಸಿದರು. ಅವರ ತಂದೆಯ ಹೆಸರು ಕೃಷ್ಣಚಂದ್ ಡಿ ಅಡ್ವಾಣಿ ಮತ್ತು ತಾಯಿಯ ಹೆಸರು ಗಿಯಾನಿ ದೇವಿ. ಅವರು ತಮ್ಮ ಶಾಲಾ ಶಿಕ್ಷಣವನ್ನು ಪಾಕಿಸ್ತಾನದ ಕರಾಚಿಯಲ್ಲಿ ಮಾಡಿದರು. ನಂತರ ಅವರು ಸಿಂಧ್‌ನ ಕಾಲೇಜಿಗೆ ಸೇರಿದರು. ದೇಶ ವಿಭಜನೆಯಾದಾಗ ಅವರ ಕುಟುಂಬ ಮುಂಬೈಗೆ ಸ್ಥಳಾಂತರಗೊಂಡಿತು. ಇಲ್ಲಿ ಅವರು ಕಾನೂನು ಅಧ್ಯಯನ ಮಾಡಿದರು. ಅಡ್ವಾಣಿಯವರು ತಮ್ಮ 14ನೇ ವಯಸ್ಸಿನಲ್ಲಿ ಸಂಘವನ್ನು ಸೇರಿದರು.


ಬಿಜೆಪಿಯ ಸ್ಥಾಪಕ ಸದಸ್ಯ


1951 ರಲ್ಲಿ, ಅವರು ಶ್ಯಾಮ ಪ್ರಸಾದ್ ಮುಖರ್ಜಿ ಸ್ಥಾಪಿಸಿದ ಜನಸಂಘಕ್ಕೆ ಸೇರಿದರು. 1977ರಲ್ಲಿ ಜನತಾ ಪಕ್ಷ ಸೇರಿದರು. ಅವರು ಬಿಜೆಪಿಯ ಸ್ಥಾಪಕ ಸದಸ್ಯ. ಬಿಜೆಪಿಯೊಂದಿಗೆ ಅಡ್ವಾಣಿ ಭಾರತದ ರಾಜಕೀಯದ ದಿಕ್ಕನ್ನೇ ಬದಲಿಸಿದರು. ಅಡ್ವಾಣಿಯವರು ಆಧುನಿಕ ಭಾರತದಲ್ಲಿ ಹಿಂದುತ್ವದ ರಾಜಕೀಯವನ್ನು ಪ್ರಯೋಗಿಸಿದರು. ಅವರ ಪ್ರಯೋಗ ಬಹಳ ಯಶಸ್ವಿಯಾಯಿತು. 1984 ರಲ್ಲಿ 2 ಸ್ಥಾನಗಳೊಂದಿಗೆ ತನ್ನ ಪ್ರಯಾಣ ಆರಂಭಿಸಿದ ಭಾರತೀಯ ಜನತಾ ಪಕ್ಷವು 2014 ರಲ್ಲಿ ಸಂಪೂರ್ಣ ಬಹುಮತವನ್ನು ತಲುಪಿತು.


ಇದನ್ನೂ ಓದಿ: ಆರ್ಮೇನಿಯಾ-ಆಜರ್​ಬೈಜಾನ್ ಯುದ್ಧ; ಏನು ಕಾರಣ?


1990 ರಲ್ಲಿ ನಡೆದ ರಥಯಾತ್ರೆ


ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲವನ್ನು ಪಡೆಯಲು ಅಡ್ವಾಣಿಯವರು 25 ಸೆಪ್ಟೆಂಬರ್ 1990 ರಂದು ಸೋಮನಾಥದಿಂದ ರಥಯಾತ್ರೆಯನ್ನು ಪ್ರಾರಂಭಿಸಿದರು. ಈ ರಥಯಾತ್ರೆ ಸಾಕಷ್ಟು ಸುದ್ದಿ ಮಾಡಿದೆ. ಆಡ್ವಾಣಿ ತಮ್ಮ ಭಾವೋದ್ರೇಕ ಮತ್ತು ಅದ್ಭುತ ಭಾಷಣಗಳಿಂದ ಹಿಂದುತ್ವದ ನಾಯಕರೆನಿಸಿಕೊಂಡರು. ಹಲವು ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದರು. ಅಡ್ವಾಣಿ ಅವರು 2002 ರಿಂದ 2004 ರವರೆಗೆ ದೇಶದ ಉಪಪ್ರಧಾನಿಯೂ ಆಗಿದ್ದರು.

Published by:Precilla Olivia Dias
First published: