• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಫೋಟೋ ಪ್ರಶ್ನಿಸಿದ ಅರ್ಜಿ ವಜಾಗೊಳಿಸಿದ ಕೇರಳ ಹೈ ಕೋರ್ಟ್​​

ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಫೋಟೋ ಪ್ರಶ್ನಿಸಿದ ಅರ್ಜಿ ವಜಾಗೊಳಿಸಿದ ಕೇರಳ ಹೈ ಕೋರ್ಟ್​​

ಕೇರಳ ಹೈ ಕೋರ್ಟ್​

ಕೇರಳ ಹೈ ಕೋರ್ಟ್​

ಕೋವಿಡ್​ 19 ಲಸಿಕೆ ಪ್ರಮಾಣ ಪತ್ರದಲ್ಲಿನ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ತೆಗೆದು ಹಾಕಬೇಕು ಎಂದು ಕೋರಿ ಅರ್ಜಿದಾರ ಪೀಟರ್​ ಮೈಲಿಪರಂಪಿಲ್​​ ಕೇರಳ ಹೈ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು

  • Share this:

ತಿರುವನಂತಪುರಂ (ಡಿ. 21): ಕೋವಿಡ್-19 ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ ನರೇಂದ್ರ ಮೋದಿ (PM Modi Photo in Covid 19 Certificate) ಅವರ ಭಾವಚಿತ್ರವನ್ನು ತೆಗೆದುಹಾಕುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಕೇರಳ ಹೈಕೋರ್ಟ್ (Kerala High Court) ಮಂಗಳವಾರ ವಜಾಗೊಳಿಸಿದೆ. ಈ ಅರ್ಜಿಯು ಕ್ಷುಲಕವಾಗಿದ್ದು, ಪ್ರಚಾರ ಉದ್ದೇಶ ಹೊಂದಿದ ರಾಜಕೀಯ ಪ್ರೇರಿತ ಆಗಿದೆ ಎಂದ ನ್ಯಾಯಾಲಯ ಅರ್ಜಿದಾರರ ಮೇಲೆ 1 ಲಕ್ಷ ರೂ ದಂಡ  ವಿಧಿಸಿದೆ. ಕೋವಿಡ್​ 19 ಲಸಿಕೆ ಪ್ರಮಾಣ ಪತ್ರದಲ್ಲಿನ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ತೆಗೆದು ಹಾಕಬೇಕು ಎಂದು ಕೋರಿ ಅರ್ಜಿದಾರ ಪೀಟರ್​ ಮೈಲಿಪರಂಪಿಲ್​​ ಕೇರಳ ಹೈ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.


ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಮೂರ್ತಿ ಜಸ್ಟೀಸ್​ ಪಿವಿ ಕುಂಞಿಕೃಷ್ಣನ್(PV Kunhikrishnan)  ಆರು ವಾರಗಳಲ್ಲಿ ಕೇರಳ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಲ್‌ಎಸ್‌ಎ) ಪರವಾಗಿ ವೆಚ್ಚವನ್ನು ಠೇವಣಿ ಮಾಡುವಂತೆ ಸೂಚಿಸಿದೆ. ನಿಗದಿತ ಅವಧಿಯೊಳಗೆ ದಂಡವನ್ನು ಠೇವಣಿ ಮಾಡಲು ವಿಫಲವಾದಲ್ಲಿ, ಕೆಎಲ್‌ಎಸ್‌ಎ ಅವರ ವಿರುದ್ಧ ಆದಾಯ ವಸೂಲಾತಿ ಪ್ರಕ್ರಿಯೆಗಳನ್ನು ಪ್ರಾರಂಭಿಸುವ ಮೂಲಕ ಅವರ ಆಸ್ತಿಯಿಂದ ಮೊತ್ತವನ್ನು ವಸೂಲಿ ಮಾಡುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ.


ದೇಶದ ಜನರಿಂದ ಈ ರೀತಿಯ ವರ್ತನೆ ಸಲ್ಲದು


ಈ ಹಿಂದೆ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಮೂರ್ತಿಗಳು, ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಹಾಕಿದರೆ ತಪ್ಪೇನಿದೆ ಎಂದು ಪ್ರಶ್ನಿಸಿತು. ಪ್ರಧಾನಿಗೆ ಈ ದೇಶದ ಜನರು ಅಧಿಕಾರ ನೀಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತು. ಈ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ನ್ಯಾಯಾಲಯ, ನ್ಯಾಯಾಂಗದ ಸಮಯವನ್ನು ವ್ಯರ್ಥ ಮಾಡುವ ಈ ರೀತಿಯ ಕ್ಷುಲ್ಲಕ ಮನವಿಯನ್ನು ನ್ಯಾಯಾಲಯವು ಪರಿಗಣಿಸುವುದಿಲ್ಲ ಎಂದು ಜನರಿಗೆ ಮತ್ತು ಸಮಾಜಕ್ಕೆ ತಿಳಿಸಲು ಈ ಹಣವನ್ನು ವಿಧಿಸಲಾಗುತ್ತಿದೆ. ಅಲ್ಲದೇ ಈ ರೀತಿ ಕ್ಷುಲಕ ವಿವಾದಗಳನ್ನು ಮೂಡಿಸುವ ವರ್ತನೆ ದೇಶದ ನಾಗರಿಕರಿಂದ ನಿರೀಕ್ಷಿಸಲಾಗುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.


ಇದನ್ನು ಓದಿ: ನಿಮಗೆ ಕೆಟ್ಟ ದಿನಗಳು ಬೇಗ ಬರಲಿವೆ: ರಾಜ್ಯಸಭೆಯಲ್ಲಿ ಜಯಾ ಬಚ್ಚನ್ ಹಿಡಿಶಾಪ


ಸಮಯ ವ್ಯರ್ಥ ಮಾಡುವ ಅರ್ಜಿ


ನ್ಯಾಯಾಲಯಗಳಲ್ಲಿ ಸಾವಿರಾರು ಕ್ರಿಮಿನಲ್ ಮೇಲ್ಮನವಿಗಳು, ಜಾಮೀನು ಅರ್ಜಿಗಳು, ಸಿವಿಲ್ ಸೂಟ್‌ಗಳು ಮತ್ತು ವೈವಾಹಿಕ ಪ್ರಕರಣಗಳು ಬಾಕಿ ಇರುವಾಗ, ಇಂತಹ ಅರ್ಜಿಗಳ ತ್ವರಿತ ವಿಚಾರಣೆಯಿಂದ ನ್ಯಾಯಾಂಗದ ಸಮಯ ಹಾಳಾಗುತ್ತದೆ ಎಂದು ಚಾಟಿ ಬೀಸಿದೆ.


ಇದನ್ನು ಓದಿ: ದೇಶದಲ್ಲಿ 200 ದಾಟಿದ ಓಮೈಕ್ರಾನ್​ ಪ್ರಕರಣ; ಮಹಾರಾಷ್ಟ್ರ-ದೆಹಲಿಯಲ್ಲಿ ಅಧಿಕ ಸೋಂಕು​


ಕೋವಿಡ್​ ಲಸಿಕೆಪ್ರಮಾಣಪತ್ರವು ವೈಯಕ್ತಿಕ ವಿವರಗಳೊಂದಿಗೆ ಖಾಸಗಿ ಸ್ಥಳವಾಗಿದೆ. ಇಲ್ಲಿ ಪ್ರಧಾನಿ ಫೋಟೋ ಹಾಕುವ ಮೂಲಕ ವ್ಯಕ್ತಿಯ ಖಾಸಗಿತನಕ್ಕೆ ಒಳನುಗ್ಗುವ ಕ್ರಮ ಸೂಕ್ತವಲ್ಲ ಎಂದು ಅರ್ಜಿದಾರರು ವಾದಿಸಿದ್ದರು. ತಮ್ಮ ವ್ಯಾಕ್ಸಿನೇಷನ್ ಪ್ರಮಾಣಪತ್ರದಲ್ಲಿ ಪ್ರಧಾನ ಮಂತ್ರಿಯವರ ಫೋಟೋ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ತಮ್ಮ ಮನವಿಯಲ್ಲಿ ತಿಳಿಸಿದ್ದರು.


ಪ್ರಧಾನಿ ಎಂಬ ಗೌರವ ಇರಲಿ


ಈ ಕುರಿತು ಕಳೆದ ವಾರ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಪ್ರಧಾನಿಯವರು ದೇಶದ ಜನರಿಂದ ಅಧಿಕಾರಕ್ಕೆ ಆಯ್ಕೆಯಾಗಿದ್ದಾರೆ. ಅವರ ಭಾವಚಿತ್ರ ಹೊಂದಿದರೆ ಏನು ಸಮಸ್ಯೆ ಎಂದು ಪ್ರಶ್ನಿಸಿತು. ಅಲ್ಲದೇ ಅವರು ನಮ್ಮ ಪ್ರಧಾನಿಗಳ ಬಗ್ಗೆ ಹೆಮ್ಮೆಪಡದಿರಬಹುದು, ನಮ್ಮ ಪ್ರಧಾನಿಯ ಬಗ್ಗೆ ನಮಗೆ ಹೆಮ್ಮೆ ಇರಬೇಕು. ಪ್ರಧಾನಿ ನಿಮಗೆ ಏಕೆ ನಾಚಿಕೆಪಡುತ್ತೀರಿ? ಅವರು ಜನರ ಆದೇಶದ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ. ವಿಭಿನ್ನ ರಾಜಕೀಯ ದೃಷ್ಟಿಕೋನಗಳನ್ನು ಹೊಂದಿರಬಹುದು, ಆದರೆ ಅವರು ನಮ್ಮ ಪ್ರಧಾನಿ ಎಂಬ ಗೌರವ ಇರಬೇಕು ಎಂದು ಅಭಿಪ್ರಾಯ ತಿಳಿಸಿತು.

First published: