ಅಗಲಿದ ನಾಯಕ ಕಲ್ಯಾಣ್​ ಸಿಂಗ್​ರಿಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ

ಕಲ್ಯಾಣ್​ ಸಿಂಗ್​ ಅವರ ಅಂತ್ಯ ಕ್ರಿಯೆ ಕಾರ್ಯಗಳು ನಾಳೆ ನರೋರದ ಗಂಗಾ ನದಿಯ ತಟದಲ್ಲಿ ನಡೆಯಲಿದೆ.

ಪ್ರಧಾನಿ ಅವರಿಂದ ಅಂತಿಮ ನಮನ

ಪ್ರಧಾನಿ ಅವರಿಂದ ಅಂತಿಮ ನಮನ

 • Share this:
  ಲಕ್ನೋ (ಆ. 22): ಅಗಲಿದ ಬಿಜೆಪಿ ನಾಯಕ, ಉತ್ತರ ಪ್ರದೇಶ ಮಾಜಿ ಸಿಎಂ ಕಲ್ಯಾಣ್​ ಸಿಂಗ್​ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಂತಿಮ ನಮನ ಸಲ್ಲಿಸಿದರು. ಶನಿವಾರ ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದ ಕಲ್ಯಾಣ್​ ಸಿಂಗ್​ ಅವರ ಪಾರ್ಥಿವ ಶರೀರ ದರ್ಶನ ಪಡೆದ ಅವರು, ಅಂತಿಮ ಗೌರವ ಸಮರ್ಪಣೆ ಮಾಡಿದರು. ಈ ವೇಳೆ ಗದ್ಗದಿತರಾದ ಅವರು, ನಾವು ಒಬ್ಬ ಸಮರ್ಥ ನಾಯಕನ್ನು ಕಳೆದು ಕೊಂಡಿದ್ದೇವೆ. ಅವರ ಮೌಲ್ಯ ಮತ್ತು ನಿರ್ಣಯಗಳನ್ನು ಅಳವಳಡಿಸಿಕೊಳ್ಳುವ ಮೂಲಕ ಅವರನ್ನು ಕಾಣಬೇಕು. ಅವರ ಗುರಿಯನ್ನು ಈಡೇರಿಕೆಗೆ ಅಡೆತಡೆ ಇರದಂತೆ ಪ್ರಯತ್ನಿಸಬೇಕು. ಕಲ್ಯಾಣ್​ ಸಿಂಗ್​ ಅವರ ಕುಟುಂಬಕ್ಕೆ ಈ ಆಘಾತ ತಡೆಯುವ ಶಕ್ತಿಯನ್ನು ನೀಡಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

  ಕಲ್ಯಾಣ್​​ ಸಿಂಗ್​ ಅವರ ಪಾರ್ಥಿವ ಶರೀರ ದರ್ಶನಕ್ಕೆ ಲಕ್ನೋಗೆ ಬಂದಿಳಿದ ಅವರನ್ನು ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೇನ್​ ಪಾಟೀಲ್, ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್​​, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಇನ್ನಿತರೆ ಬಿಜೆಪಿ ನಾಯಕರು ಆಹ್ವಾನಿಸಿದರು.

  ಕಲ್ಯಾಣ್​ ಸಿಂಗ್​ ಅವರ ಅಂತಿಮ ವಿಧಿ ವಿಧಾನ ಕಾರ್ಯಗಳು ನಾಳೆ ನರೋರದ ಗಂಗಾ ನದಿಯ ತಟದಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ಅವರ ಅಂತಿಮ ದರ್ಶನಕ್ಕೆ ರಾಜ್ಯದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಅವರ ಮನೆಯಿಂದ ಪಾರ್ಥಿವ ಶರೀರವನ್ನು ಮಧ್ಯಾಹ್ನ 1 ಗಂಟೆಗೆ ವಿಧಾನಸೌಧಕ್ಕೆ ಕೊಂಡೊಯ್ಯುಲಾಗಿತ್ತು. ಮಧ್ಯಾಹ್ನ 2. 30ರ ಬಳಿಕ ಬಿಜೆಪಿ ಕಚೇರಿಯಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆಯನ್ನು ನಡೆಸಲಾಗಿತ್ತು.
  ಬಳಿಕ ಆಲಿಘಡಕ್ಕೆ ಅವರ ಪಾರ್ಥಿವ ಶರೀರ ಕೊಂಡೊಯ್ಯುದು ಅಲ್ಲಿಮ ಕ್ರೀಡಾಂಗಣದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ನಾಳೆ ನರೋರಾದ ಗಂಗಾ ನದಿ ತಟದಲ್ಲಿ ಅಂತ್ಯ ಕ್ರಿಯೆ ಕಾರ್ಯ ನಡೆಯಲಿದೆ.

  ಇದನ್ನು ಓದಿ: ಸಚಿವರ ಮುನಿಸಿನ ನಡುವೆ ಬಿಜೆಪಿ ಸರ್ಕಾರ ನಡೆಸುವುದು ಬಹಳ ಕಷ್ಟ; ಎಸ್​ ಆರ್​ ಪಾಟೀಲ್​

  89 ವರ್ಷದ ಕಲ್ಯಾಣ್​​ ಸಿಂಗ್​ ಅವರು ನಿನ್ನೆ ಅಂದರೆ ಶನಿವಾರ ರಾತ್ರಿ ಸೆಪ್ಸಿಸ್ ಮತ್ತು ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದರು. ಈ ಹಿನ್ನಲೆ ಉತ್ತರ ಪ್ರದೇಶ ಸರ್ಕಾರ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿತ್ತು. ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಕುರ್ಚಿ ಏರಿದ ಮೊದಲ ವ್ಯಕ್ತಿ ಹಾಗೂ ಸದಾ ವಿವಾದಗಳಿಂದಲೇ ಸುದ್ದಿಯಲ್ಲಿದ್ದ ಈ ಹಿರಿಯ ನಾಯಕ. ಜಾತಿ ರಾಜಕಾರಣ ಎನ್ನುವುದು ಉತ್ತರ ಪ್ರದೇಶದಲ್ಲಿ ಚುನಾವಣೆ ಹೊತ್ತಿನಲ್ಲಿ ಮುನ್ನೆಲೆಗೆ ತಂದ ಕುಖ್ಯಾತಿ ಇವರಿಗಿದೆ. ಹೊಸ ರೀತಿಯ ರಾಜಕಾರಣವನ್ನು ಉತ್ತರ ಪ್ರದೇಶದಲ್ಲಿ ಪ್ರಯೋಗಿಸಿ ಚಾಲ್ತಿಗೆ ಬಂದ ಧೀಮಂತ ನಾಯಕರಾಗಿ ಅವರು ಗುರುತಿಸಿಕೊಂಡಿದ್ದರು.

  ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್​ ಶಾ, ಸಿಎಂ ಯೋಗಿ ಆದಿತ್ಯನಾಥ್​  ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Seema R
  First published: