PM Modi ಜರ್ಮನಿ ಪ್ರವಾಸದ ವೇಳೆ ವೈರಲ್​ ಆಯ್ತು ಹಳೆ ಫೋಟೋ

ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಆಗಿನ ಮತ್ತು ಇಂದಿನ ಮೋದಿ (Then and Now Modi) ಎಂಬ ಶೀರ್ಷಿಕೆ ಜೊತೆ ಅವರ ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ.

ಮೋದಿಯ ಹಳೆಯ ಫೋಟೋ

ಮೋದಿಯ ಹಳೆಯ ಫೋಟೋ

  • Share this:
    ಪ್ರಧಾನಿ ನರೇಂದ್ರ ಮೋದಿ (PM Narendra Modi) ಸದ್ಯ ಯೂರೋಪ್​ (Europe) ಪ್ರವಾಸದಲ್ಲಿದ್ದಾರೆ. ಈ ವೇಳೆ ಅವರು ಜರ್ಮನಿ, ಡೆನ್ಮಾರ್ಕ್​, ಫ್ರಾನ್ಸ್​​ಗೆ ಭೇಟಿ ನೀಡಲಿದ್ದಾರೆ. ಅವರ ಪ್ರವಾಸದ ಬೆನ್ನಲ್ಲೇ ಅವರ ಹಳೆಯ ಫೋಟೋವೊಂದು ವೈರಲ್​ ಆಗಿದೆ. ಸುಮಾರು 30 ವರ್ಷಗಳ ಹಿಂದೆ ನರೇಂದ್ರ ಮೋದಿ ಯುರೋಪ್​ ಪ್ರವಾಸದ ಚಿತ್ರಣ ಅದು. ಜರ್ಮನಿಗೆ ಭೇಟಿ ನೀಡಿದ್ದ ಅವರು ಅಲ್ಲಿನ ಚಾರ್ಲೆ ಮ್ಯಾಗ್ನೆ ಪ್ರತಿಮೆ ಬಳಿ ಫೋಟೋ ತೆಗೆಸಿಕೊಂಡಿದ್ದರು. ಇದೀಗ ಮೂವತ್ತು ವರ್ಷಗಳ ಬಳಿಕ ಮತ್ತೆ ಅವರು ಜರ್ಮನಿಗೆ ಭೇಟಿ ನೀಡುತ್ತಿದ್ದಾರೆ. ಅದು ಜಗತ್ತಿನ ಪ್ರಭಾವಿ ನಾಯಕ, ಭಾರತದ ಪ್ರಧಾನಿ ಆಗಿದೆ. ಈ ಹಿನ್ನಲೆ ಆಗಿನ ಮತ್ತು ಇಂದಿನ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    1993ರ ಭೇಟಿ ನೆನಪು 
    ಸಾಮಾನ್ಯ ಬಿಜೆಪಿ ಕಾರ್ಯಕರ್ತರಾಗಿದ್ದ ಸಂದರ್ಭದಲ್ಲಿ ನರೇಂದ್ರ ಮೋದಿ 1993ರಲ್ಲಿ ಅಮೆರಿಕ ಪ್ರವಾಸದ ವೇಳೆ ಜರ್ಮನಿ ಭೇಟಿ ನೀಡಿದ್ದರು. ಈ ವೇಳೆ ಪ್ರಾಂಕ್​ಫರ್ಟ್​ನಲ್ಲಿ ಅವರು, ರೋಮನ್ ಸಾಮ್ರಾಜ್ಯವನ್ನು ಸ್ಥಾಪಿಸಿದ ಪಶ್ಚಿಮ ಯುರೋಪಿನ ಮಧ್ಯಕಾಲೀನ ಚಕ್ರವರ್ತಿ ಚಾರ್ಲೆಮ್ಯಾಗ್ನೆ ಅವರ ಪ್ರತಿಮೆ ಮುಂದೆ ತಮ್ಮ ಸಹೋದ್ಯೋಗಿ ಜೊತೆ ಫೋಟೋ ಕ್ಲಿಕ್ಕಿಸಿದ್ದರು.

    ವೈರಲ್​ ಆಯ್ತು ಅಂದು- ಇಂದಿನ ಫೋಟೋ
    ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಆಗಿನ ಮತ್ತು ಇಂದಿನ ಮೋದಿ ಎಂಬ ಶೀರ್ಷಿಕೆ ಜೊತೆ ಅವರ ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ.


    ಅಂದು ಸಾಮಾನ್ಯರಂತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದ ನರೇಂದ್ರ ಮೋದಿ ಇಂದು ಜರ್ಮನಿಯಲ್ಲಿ ಗೌರವವನ್ನು ಪಡೆಯುತ್ತಿರುವ ಫೋಟೋವನ್ನು ಹಾಕಿ ಜನರು ಪ್ರಧಾನಿಯ ಸಾಧನೆ ಬಣ್ಣಿಸಿದ್ದಾರೆ.

    ಜಿ7 ಶೃಂಗಸಭೆಗೆ ವಿಶೇಷ ಅತಿಥಿಯಾಗಿ ಆಹ್ವಾನ
    ಜರ್ಮನಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಬರ್ಲಿನ್‌ನಲ್ಲಿ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಸೇರಿದಂತೆ ದೇಶದ ನಾಯಕತ್ವದೊಂದಿಗೆ ಹಲವಾರು ಪ್ರಮುಖ ಸಭೆಗಳನ್ನು ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚಾನ್ಸೆಲರ್ ಸ್ಕೋಲ್ಜ್, ಮುಂದಿನ ತಿಂಗಳು ನಡೆಯಲಿರುವ ಜಿ7 ನಾಯಕರ ಶೃಂಗಸಭೆಗೆ ವಿಶೇಷ ಅತಿಥಿಯಾಗಿ ಪ್ರಧಾನಿ ಮೋದಿಯನ್ನು ಆಹ್ವಾನಿಸಿರುವುದಾಗಿ ತಿಳಿಸಿದರು.

    ಇದನ್ನು ಓದಿ: ಇಂಧನಕ್ಕಾಗಿ ಭಾರತಕ್ಕೆ ₹80,000 ಕೋಟಿ ನೀಡಿದ ಜರ್ಮನಿ; ಮೋದಿ ಭೇಟಿಯ ವಿಶೇಷಗಳು ಇಲ್ಲಿವೆ

    ಅಭಿವೃದ್ಧಿಯತ್ತ ಭಾರತ
    ಜರ್ಮನಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ವರ್ಷ ನಾವು ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿದ್ದೇವೆ. ಸ್ವತಂತ್ರ ಭಾರತದಲ್ಲಿ ಹುಟ್ಟಿದ ಮೊದಲ ಪ್ರಧಾನಿ ನಾನೇ. ಭಾರತವು ಸ್ವಾತಂತ್ರ್ಯದ 100 ನೇ ವರ್ಷವನ್ನು ಆಚರಿಸುವ ಸಮಯದಲ್ಲಿ ಭಾರತವು ಸದೃಡವಾಗಿದ್ದು, ಅಭಿವೃದ್ಧಿಯ ಪಥದ ಕಡೆಗೆ ಬಲವಾದ ಹೆಜ್ಜೆಗಳನ್ನು ಇಡುತ್ತಿದೆ. ಜೊತೆಗೆ ಆ ಗುರಿಯತ್ತ ವೇಗವಾಗಿ ನಡೆಯುತ್ತಿದೆ. ಸುಧಾರಣೆಗೆ ರಾಜಕೀಯ ಇಚ್ಛಾಶಕ್ತಿ ಬೇಕು. ಇಂದು ಭಾರತವು ಜೀವನದ ಗುಣಮಟ್ಟ, ಶಿಕ್ಷಣದ ಗುಣಮಟ್ಟ ಮತ್ತು ಇತರ ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದೆ ಎಂದರು

    ಇದನ್ನು ಓದಿ: Rahul Gandhi ನೈಟ್​ ಪಾರ್ಟಿ ವಿಡಿಯೋ ಪೋಸ್ಟ್​ ಮಾಡಿದ ಬಿಜೆಪಿ; ತಪ್ಪೇನಿದೆ ಎಂದ ಕಾಂಗ್ರೆಸ್​​

    ಇನ್ನು ಈ ವೇಳೆ ಪ್ರಧಾನಿ ಮೋದಿ ಚಾನ್ಸೆಲರ್ ಸ್ಕೋಲ್ಜ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. ಈ ವೇಳೆ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದರು.

    ಇದಾದ ಬಳಿಕ ಇಂದು ಅವರು ಡೆನ್ಮಾರ್ಕ್​​ಗೆ ಭೇಟಿ ನೀಡಿದ್ದಾರೆ. ಈ ವೇಳೆ ಮೆಟ್ಟೆ ಫ್ರೆಡೆರಿಕ್ಸೆನ್ ಜೊತೆ ಚರ್ಚೆ ನಡೆಸಿದ್ದಾರೆ. ಚರ್ಚೆಯಲ್ಲಿ ಉಕ್ರೇನ್ ಯುದ್ಧದ ಕುರಿತು ಮತ್ತು ತಕ್ಷಣದ ಕದನ ವಿರಾಮ ಹಾಗೂ ಬಿಕ್ಕಟ್ಟನ್ನು ಪರಿಹರಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆ ಕುರಿತು ಮಾತನಾಡಲಾಗಿದೆ ಎಂದು ಮೋದಿ ತಿಳಿಸಿದ್ದಾರೆ.

    ನಾಳೆ ಪ್ರಧಾನಮಂತ್ರಿಯವರು ಫ್ರಾನ್ಸ್‌ಗೆ ಭೇಟಿ ನೀಡಲಿರುವ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಭೇಟಿಯಾಗಲಿದ್ದಾರೆ.
    Published by:Seema R
    First published: