ಭಾರತ-ನೇಪಾಳ ನಡುವಿನ ದಕ್ಷಿಣ ಏಷ್ಯಾದ ಮೊದಲ ಗಡಿಯಾಚೆಗಿನ ಪೆಟ್ರೋಲಿಯಂ ಪೈಪ್​ಲೈನ್ ಉದ್ಘಾಟಿಸಿದ ಪ್ರಧಾನಿ ಮೋದಿ

ಬಿಹಾರದ ಮೋತಿಹಾರಿ ಹಾಗೂ ನೇಪಾಳದ ಅಮ್ಲೆಖ್​ಗಂಜ್ ನಡುವಿನ 60 ಕಿಮೀ ಉದ್ದದ ಪೆಟ್ರೋಲಿಯಂ ಉತ್ಪನ್ನಗಳ ಪೈಪ್​ಲೈನ್ ದಕ್ಷಿಣ ಏಷ್ಯಾದ ಮೊಟ್ಟ ಮೊದಲ ಗಡಿಯಾಚೆಗಿನ ಪೆಟ್ರೋಲಿಯಂ ಉತ್ಪನ್ನಗಳ ಪೈಪ್​ಲೈನ್​ ಎಂದು ಖ್ಯಾತಿ ಪಡೆದಿದೆ.

MAshok Kumar | news18-kannada
Updated:September 10, 2019, 1:46 PM IST
ಭಾರತ-ನೇಪಾಳ ನಡುವಿನ ದಕ್ಷಿಣ ಏಷ್ಯಾದ ಮೊದಲ ಗಡಿಯಾಚೆಗಿನ ಪೆಟ್ರೋಲಿಯಂ ಪೈಪ್​ಲೈನ್ ಉದ್ಘಾಟಿಸಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ.
  • Share this:
ನವ ದೆಹಲಿ (ಸೆಪ್ಟೆಂಬರ್.10); ಬಿಹಾರದ ಮೋತಿಹಾರಿ ಹಾಗೂ ನೇಪಾಳದ ಅಮ್ಲೆಖ್​ಗಂಜ್ ನಡುವಿನ 60 ಕಿಮೀ ಉದ್ದದ ಪೆಟ್ರೋಲಿಯಂ ಉತ್ಪನ್ನಗಳ ಪೈಪ್​ಲೈನ್ ಅನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ನೇಪಾಳದ ಪ್ರಧಾನಿ ಕೆ.ಪಿ. ಶರ್ಮ ಒಲಿ ವಿಡಿಯೋ ಕಾನ್ಪರೆನ್ಸ್​ ಮೂಲಕ ಇಂದು ಜಂಟಿಯಾಗಿ ಉದ್ಘಾಟಿಸಿದ್ದಾರೆ.

ದಕ್ಷಿಣ ಏಷ್ಯಾದ ಮೊಟ್ಟ ಮೊದಲ ಗಡಿಯಾಚೆಗಿನ ಪೆಟ್ರೋಲಿಯಂ ಉತ್ಪನ್ನಗಳ ಪೈಪ್​ಲೈನ್​ ಎಂದು ಇದು ಖ್ಯಾತಿ ಪಡೆದಿದೆ. ಈ ಹಿಂದೆ 1973ರಿಂದ ಜಾರಿಯಲ್ಲಿರುವ ವ್ಯವಸ್ಥೆಯ ಒಂದು ಭಾಗವಾಗಿ ನೇಪಾಳಕ್ಕೆ ಭಾರತದಿಂದ ಟ್ಯಾಂಕರ್​ಗಳ ಮೂಲಕ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸಲಾಗುತ್ತಿತ್ತು. ಇದು ದುಬಾರಿಯಾಗಿದ್ದ ಕಾರಣ ಎರಡೂ ದೇಶಗಳು ಜಂಟಿಯಾಗಿ ಈ ಯೋಜನೆಗೆ ಕೈ ಹಾಕಿತ್ತು.

ಈ ಕುರಿತು ಸೋಮವಾರವೇ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ್ದ ಪ್ರಧಾನಿ ಸಚಿವಾಲಯ, “ಭಾರತ-ನೇಪಾಳ ಇಂಧನ ಸಹಕಾರ ಯೋಜನೆಯು ಎರಡೂ ದೇಶಗಳ ನಿಕಟ ದ್ವಿಪಕ್ಷೀಯ ಸಂಬಂಧಗಳ ಸಂಕೇತವಾಗಿದೆ. ಈ ಯೋಜನೆ ಇಂಧನದ ಸುರಕ್ಷತೆಯನ್ನು ಹೆಚ್ಚಿಸಲು ಹಾಗೂ ಸಾರಿಗೆ ವೆಚ್ಚವನ್ನು ಗಣನೀಯ ಪ್ರಮಾಣದಲ್ಲಿ ಕಡಿತಗೊಳಿಸಲು ಸಹಕಾರಿಯಾಗಿದೆ” ಎಂದು ಅಭಿಪ್ರಾಯಪಟ್ಟಿತ್ತು.


ಇಂದು ಈ ಐತಿಹಾಸಿಕ ಯೋಜನೆಯ ಉದ್ಘಾಟನೆಯ ಸಂದರ್ಭದಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಂತಸ ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ, “2015ರ ಭೂಕಂಪ ನೇಪಾಳ ರಾಷ್ಟ್ರವನ್ನು ಬಹುತೇಕ ಧ್ವಂಸಗೊಳಿಸಿತ್ತು. ಆದರೆ, ಇಂತಹ ದುರಂತದ ನಂತರವೂ ಹಿಮಾಲಯದ ಈ ದೇಶ ಅಭಿವೃದ್ಧಿಯ ಪಥದತ್ತ ಸಾಗುತ್ತಿರುವುದು ಸಂತಸ ಮೂಡಿಸಿದೆ. ಅಲ್ಲದೆ, ತನ್ನದೇಯಾದ ಆದ್ಯತೆಗಳಿಗೆ ಅನುಗುಣವಾಗಿ ನೇಪಾಳದ ಅಭಿವೃದ್ಧಿ ಕೆಲಸಗಳಿಗೆ ಸಹಾಯ ಮಾಡಲು ಭಾರತ ಬದ್ಧವಾಗಿದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ತನ್ನ ಹತ್ಯೆಗೆ ತಾನೇ ಸುಫಾರಿ ಕೊಟ್ಟ ವ್ಯಕ್ತಿ, ಕೊಲೆಯ ಬಳಿಕ ಬಯಲಾಯ್ತು ಪ್ರಕರಣ; ದುರಂತ ನಿರ್ಧಾರಕ್ಕೆ ಕಾರಣವಾದರೂ ಏನು?

First published:September 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ