HOME » NEWS » National-international » PM MODI LAUNCHING 750 MW SOLAR PROJECT IN MADHYA PRADESH RMD

ಮಧ್ಯ ಪ್ರದೇಶದ ರೇವಾದಲ್ಲಿ 750 ಮೆಗಾವ್ಯಾಟ್​ ಸೌರ ವಿದ್ಯುತ್​ ಘಟಕ ಉದ್ಘಾಟಿಸಿದ ಪ್ರಧಾನಿ ಮೋದಿ

ಈ ಯೋಜನೆಯಿಂದ ಮಧ್ಯ ಪ್ರದೇಶಕ್ಕೆ ವಿದ್ಯುತ್​ ಪೂರೈಕೆ ಆಗಲಿದೆ. ಅಲ್ಲದೆ, ದೆಹಲಿ ಮೆಟ್ರೋಗೂ ಇಲ್ಲಿಂದಲೇ ವಿದ್ಯುತ್​ ಪೂರೈಕೆ ಆಗಲಿದೆ. 500 ಹೆಕ್ಟೇರ್​ ಜಾಗದಲ್ಲಿ ಈ ಸೋಲಾರ್​ ಪವರ್​ ಪ್ಲಾಂಟ್​ ಸ್ಥಾಪಿತವಾಗಿದೆ.

news18-kannada
Updated:July 10, 2020, 1:57 PM IST
ಮಧ್ಯ ಪ್ರದೇಶದ ರೇವಾದಲ್ಲಿ 750 ಮೆಗಾವ್ಯಾಟ್​ ಸೌರ ವಿದ್ಯುತ್​ ಘಟಕ ಉದ್ಘಾಟಿಸಿದ ಪ್ರಧಾನಿ ಮೋದಿ
ನರೇಂದ್ರ ಮೋದಿ
  • Share this:
ನವದೆಹಲಿ (ಜು.10): ಮಧ್ಯ ಪ್ರದೇಶದ ರೇವಾದಲ್ಲಿರುವ 750 ಮೆಗಾವ್ಯಾಟ್​ ಸೌರ ವಿದ್ಯುತ್​ ಘಟಕವನ್ನು ಪ್ರಧಾನಿ ನರೇಂದ್ರ ಅವರು ವಿಡಿಯೋ ಕಾನ್ಫರೆನ್ಸ್​ ಮೂಲಕ ಲೋಕಾರ್ಪಣೆ ಮಾಡಿದರು. ಏಷ್ಯಾ ಖಂಡದಲ್ಲಿರುವ ಅತಿ ದೊಡ್ದ ಸೋಲಾರ್​ ಪ್ಲಾಂಟ್​ಗಳಲ್ಲಿ ಇದು ಕೂಡ ಒಂದಾಗಿದೆ.

ಸೌರ ವಿದ್ಯುತ್ ಘಟಕ ಉದ್ಘಾಟಿಸಿದ ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ರೇವಾದಲ್ಲಿ ಸ್ಥಾಪನೆಗೊಂಡ ಸೌರ ವಿದ್ಯುತ್​ ಘಟಕದಿಂದ ನಮಗೆ ಕಡಿಮೆ ಬೆಲೆಯಲ್ಲಿ ವಿದ್ಯುತ್​ ದೊರೆಯಲು ಸಹಕಾರಿಯಾಗುತ್ತದೆ. ಸೌರ ವಿದ್ಯುತ್​ ಶಕ್ತಿ ಕಡಿಮೆ ದರದಲ್ಲಿ ದೊರೆಯುತ್ತದೆ. ಸೂರ್ಯನ ಶಕ್ತಿ ಇರುವವರೆಗೆ ನಾವು ವಿದ್ಯುತ್​ ಪಡೆಯಬಹುದಾಗಿದೆ. ವಿಶ್ವದಲ್ಲಿ ಅತಿ ಹೆಚ್ಚು ಸೋಲಾರ್ ವಿದ್ಯುತ್​ ಉತ್ಪಾದನೆ ಮಾಡುವ ಐದು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಕೂಡ ಒಂದು ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಈ ಯೋಜನೆಯಿಂದ ಮಧ್ಯ ಪ್ರದೇಶಕ್ಕೆ ವಿದ್ಯುತ್​ ಪೂರೈಕೆ ಆಗಲಿದೆ. ಅಲ್ಲದೆ, ದೆಹಲಿ ಮೆಟ್ರೋಗೂ ಇಲ್ಲಿಂದಲೇ ವಿದ್ಯುತ್​ ಪೂರೈಕೆ ಆಗಲಿದೆ. 500 ಹೆಕ್ಟೇರ್​ ಜಾಗದಲ್ಲಿ ಈ ಸೋಲಾರ್​ ಪವರ್​ ಪ್ಲಾಂಟ್​ ಸ್ಥಾಪಿತವಾಗಿದೆ.

ರೇವಾ ಯೋಜನೆ ಸ್ಥಾಪನೆ ಮಾಡಲು ಕಾರಣವಾದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಹೊಗಳಿದ್ದಾರೆ.
Published by: Rajesh Duggumane
First published: July 10, 2020, 1:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories