ಪೌರತ್ವ ಕಾಯ್ದೆ ಬಗ್ಗೆ ಪ್ರಧಾನಿಯಿಂದ ಜಾಗೃತಿ ಅಭಿಯಾನ; ಸದ್ಗುರು ವಿಡಿಯೋ ಟ್ವೀಟ್ ಮಾಡಿದ ಮೋದಿ

ನಮೋ ಆ್ಯಪ್​ನಲ್ಲಿ ಸಿಎಎಗೆ ಸಂಬಂಧಿಸಿದ ವಿವಿಧ ಮಾದರಿಯ ಮಾಹಿತಿ ಇದ್ದು, ಅದನ್ನು ಎಲ್ಲೆಡೆ ಶೇರ್ ಮಾಡಿರಿ. ಸಿಎಎಗೆ ನಿಮ್ಮ ಬೆಂಬಲ ವ್ಯಕ್ತಪಡಿಸಿ ಎಂದು ಪ್ರಧಾನಿ ಕರೆ ನೀಡಿದ್ದಾರೆ.

news18
Updated:December 30, 2019, 1:16 PM IST
ಪೌರತ್ವ ಕಾಯ್ದೆ ಬಗ್ಗೆ ಪ್ರಧಾನಿಯಿಂದ ಜಾಗೃತಿ ಅಭಿಯಾನ; ಸದ್ಗುರು ವಿಡಿಯೋ ಟ್ವೀಟ್ ಮಾಡಿದ ಮೋದಿ
ಪ್ರಧಾನಿ ನರೇಂದ್ರ ಮೋದಿ
  • News18
  • Last Updated: December 30, 2019, 1:16 PM IST
  • Share this:
ನವದೆಹಲಿ(ಡಿ. 30): ದೇಶಾದ್ಯಂತ ಪ್ರತಿಭಟನೆಗಳಿಗೆ ಎಡೆ ಮಾಡಿಕೊಟ್ಟಿರುವ ಪೌರತ್ವ ಕಾಯ್ದೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜಾಗೃತಿ ಅಭಿಯಾನ ಪ್ರಾರಂಭಿಸಿದ್ದಾರೆ. ಕಾಯ್ದೆ ಬಗ್ಗೆ ಇರುವ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸುವುದು ಈ ಅಭಿಯಾನದ ಉದ್ದೇಶ. ಸಿಎಎ ಪರವಾಗಿ ಇಂದು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಕಾಯ್ದೆಯಿಂದ ಯಾರ ಪೌರತ್ವಕ್ಕೂ ಧಕ್ಕೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅದರ ಬೆನ್ನಲ್ಲೇ ಸದ್ಗುರು ಜಗ್ಗಿ ವಾಸುದೇವ್ ಅವರು ಕಾಯ್ದೆ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯವಿರುವ ವಿಡಿಯೋವನ್ನೂ ಮೋದಿ ತಮ್ಮ ಟ್ವಿಟ್ಟರ್​ನಲ್ಲಿ ಶೇರ್ ಮಾಡಿದ್ದಾರೆ.

“ಸಿಎಎ ಬಗ್ಗೆ ಸದ್ಗುರು ಸರಳವಾಗಿ ವಿವರಿಸಿರುವುದನ್ನು ನೀವು ಆಲಿಸಿರಿ. ಈ ಕಾಯ್ದೆಯ ಹಿಂದಿನ ಐತಿಹಾಸಿಕ ನೆಲಗಟ್ಟು, ನಮ್ಮ ಸಂಸ್ಕೃತಿಯ ಮುಖ್ಯಾಂಶಗಳನ್ನು ತಿಳಿಸಿದ್ದಾರೆ. ಸ್ವಾರ್ಥ ಗುಂಪುಗಳು ಪಸರಿಸುತ್ತಿರುವ ತಪ್ಪು ಮಾಹಿತಿಯನ್ನು ಎತ್ತಿ ತೋರಿಸಿದ್ದಾರೆ” ಎಂದು ಟ್ವೀಟ್ ಮಾಡಿರುವ ಮೋದಿ, ಅದರಲ್ಲಿ ಸದ್ಗುರು ಮಾತನಾಡಿರುವ ವಿಡಿಯೋದ ಲಿಂಕ್ ನೀಡಿದ್ಧಾರೆ.

ಇದನ್ನೂ ಓದಿ: ಫೇಸ್​ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾ ಬಳಕೆ ನಿಷೇಧಿಸಿದ ನೌಕಾ ದಳ

ಇದಕ್ಕೂ ಮುನ್ನ ಅವರು ಪೌರತ್ವ ಕಾಯ್ದೆ ಪರವಾಗಿ ಬೆಂಬಲ ವ್ಯಕ್ತಪಡಿಸುವ ಅಭಿಯಾನದ ಬಗ್ಗೆಯೂ ಒಂದು ಟ್ವೀಟ್ ಹಾಕಿದ್ದಾರೆ. “ಸಿಎಎ ಎಂಬುದು ಧಾರ್ಮಿಕ ದೌರ್ಜನ್ಯಕ್ಕೊಳಗಾದ ವಲಸಿಗರಿಗೆ ಪೌರತ್ವ ನೀಡುವುದಾಗಿದೆಯೇ ಹೊರತು ಯಾರೊಬ್ಬ ಪೌರತ್ವ ಕಸಿದುಕೊಳ್ಳುವುದಿಲ್ಲ” ಎಂಬ ಸ್ಪಷ್ಟನೆ ನೀಡಿದ್ದಾರೆ.

ಹಾಗೆಯೇ, ನಮೋ ಆ್ಯಪ್​ನಲ್ಲಿ ಸಿಎಎಗೆ ಸಂಬಂಧಿಸಿದ ವಿವಿಧ ಮಾದರಿಯ ಮಾಹಿತಿ ಇದ್ದು, ಅದನ್ನು ಎಲ್ಲೆಡೆ ಶೇರ್ ಮಾಡಿರಿ. ಸಿಎಎಗೆ ನಿಮ್ಮ ಬೆಂಬಲ ವ್ಯಕ್ತಪಡಿಸಿ ಎಂದವರು ಕರೆ ನೀಡಿದ್ದಾರೆ.ಇನ್ನು, ಮೋದಿ ಅವರು ಶೇರ್ ಮಾಡಿರುವ ವಿಡಿಯೋದಲ್ಲಿ ಜಗ್ಗಿ ವಾಸುದೇವ್ ಅವರು ಪೌರತ್ವ ಕಾಯ್ದೆಯ ಹಿನ್ನೆಲೆಯಾಗಿರುವ ಐತಿಹಾಸಿಕ ಸಂದರ್ಭ ಮತ್ತಿತರ ಆಯಾಮಗಳಲ್ಲಿ ವಿಶ್ಲೇಷಣೆ ಮಾಡಿದ್ದಾರೆ. ಪೌರತ್ವ ಕಾಯ್ದೆ ಯಾಕೆ ಅಗತ್ಯ ಎಂಬುದನ್ನು ವಿವರಿಸಿದ್ದಾರೆ.ಕೇಂದ್ರ ಸರ್ಕಾರ ಕೆಲ ದಿನಗಳ ಹಿಂದೆ ತಂದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ಮುಸ್ಲಿಮ್ ಸಮುದಾಯ ತಿರುಗಿಬಿದ್ದಿದೆ. ಕಾಂಗ್ರೆಸ್ ಸೇರಿದಂತೆ ಬಹುತೇಕ ವಿಪಕ್ಷಗಳು ಈ ಕಾಯ್ದೆಯನ್ನು ಬಲವಾಗಿ ವಿರೋಧಿಸಿವೆ. ದಿನ ನಿತ್ಯವೂ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಈ ಕಾಯ್ದೆಯು ಧಾರ್ಮಿಕವಾಗಿ ತಾರತಮ್ಯ ಮಾಡುತ್ತಿದೆ. ಮುಸ್ಲಿಮ್ ಸಮುದಾಯದ ವಿರುದ್ಧ ಸಂಚು ನಡೆಸಲಾಗಿದೆ. ದೇಶದ ಪ್ರಜಾತಂತ್ರ ವ್ಯವಸ್ಥೆ ಮತ್ತು ಜಾತ್ಯತೀತತೆಗೆ ಧಕ್ಕೆಯಾಗುತ್ತಿದೆ. ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಚಿತಾವಣೆ ಇದಾಗಿದೆ ಎಂಬುದು ಟೀಕಾಕಾರರ ಆತಂಕವಾಗಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

Published by: Vijayasarthy SN
First published: December 30, 2019, 1:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading