PM Modi in Aligarh: ಅಭಿವೃದ್ಧಿಯತ್ತ ಉತ್ತರ ಪ್ರದೇಶ ಆಡಳಿತ; ಯೋಗಿ ಆಡಳಿತ ಮೆಚ್ಚಿದ ಪ್ರಧಾನಿ

ಭಾರತ ರಕ್ಷಣಾ ವಸ್ತುಗಳ ರಫ್ತಿನಲ್ಲೂ ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಈ ಹಿಂದೆ ದೇಶದಲ್ಲಿ ಕೇವಲ ಆಮದು ಮಾತ್ರ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಇದೀಗ ಪರಿಸ್ಥಿತಿ ಬದಲಾಗಿದೆ

ಭಾರತ ರಕ್ಷಣಾ ವಸ್ತುಗಳ ರಫ್ತಿನಲ್ಲೂ ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಈ ಹಿಂದೆ ದೇಶದಲ್ಲಿ ಕೇವಲ ಆಮದು ಮಾತ್ರ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಇದೀಗ ಪರಿಸ್ಥಿತಿ ಬದಲಾಗಿದೆ

ಭಾರತ ರಕ್ಷಣಾ ವಸ್ತುಗಳ ರಫ್ತಿನಲ್ಲೂ ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಈ ಹಿಂದೆ ದೇಶದಲ್ಲಿ ಕೇವಲ ಆಮದು ಮಾತ್ರ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಇದೀಗ ಪರಿಸ್ಥಿತಿ ಬದಲಾಗಿದೆ

  • Share this:
    ಲಕ್ನೋ (ಸೆ. 14):  ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾಜ ಮಹೇಂದ್ರ ಪ್ರತಾಪಸಿಂಹ ರಾಜ್ಯ ವಿಶ್ವವಿದ್ಯಾನಿಲಯ (Raja Mahendra Pratap Singh State University) ಹಾಗೂ ಅಲಿಘಡ್​​ ನೋಡ್ ಆಫ್ ಡಿಫೆನ್ಸ್ ಕಾರಿಡಾರ್​ಗೆ  ( Aligarh node of the defence corridor)ಇಂದು ಶಂಕುಸ್ಥಾಪನೆ ನೆರವೇರಿಸಿದರು. ಇದೇ ವೇಳೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಆಡಳಿತವನ್ನು ಶ್ಲಾಘಿಸಿದ ಅವರು ಇಂದು ಪ್ರಮುಖ ದಿನ ಎಂದು ಬಣ್ಣಿಸಿದರು. ರಾಧಾ ಅಷ್ಟಮಿಯ ಈ ದಿನ ಈ ಕಾರ್ಯಕ್ಕೆ ಅಡಿಗಲ್ಲು ಹಾಕುವ ಮೂಲಕ ಇನ್ನುಷ್ಟು ಪ್ರವಿತ್ರಗೊಳಿಸಲಾಗಿದೆ . ರಾಜ ಮಹೇಂದ್ರ ಪ್ರತಾಪಸಿಂಹ ವಿಶ್ವವಿದ್ಯಾನಿಲಯದ ಅಭಿವೃದ್ಧಿಯಿಂದ ಸಂತೋಷವಾಗಲಿದೆ. ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಣ ತಜ್ಞ ಮತ್ತು ಸಮಾಜ ಸುಧಾರಕರಾದ ರಾಜ ಮಹೇಂದ್ರ ಪ್ರತಾಪ ಸಿಂಹ ಅವರ ಸ್ಮರಣೆ ಮತ್ತು ಗೌರವಾರ್ಥವಾಗಿ ರಾಜ್ಯ ಸರ್ಕಾರವು ವಿವಿ ಸ್ಥಾಪಿಸಿದೆ ಎಂದರು

    ಬಿಜೆಪಿ ನಾಯಕ, ಮಾಜಿ ಉತ್ತರ ಪ್ರದೇಶ ಸಿಎಂ ಕಲ್ಯಾಣ್​ ಸಿಂಗ್​ ನೆನೆಪು ಮಾಡಿಕೊಳ್ಳುವ ಮೂಲಕ ಭಾಷಣ ಆರಂಭಿಸಿದ ಅವರು, ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಅಪ್ರತಿಮ ವೀರರ ನೆನೆಪು ಅಜರಾಮರ. ದೇಶಕ್ಕೆ ಅವರ ಕೊಡುಗೆ ಅಪಾರ. ಅನೇಕ ನಾಯಕರನ್ನು ಹಿಂದಿನ ಸರ್ಕಾರಗಳು ನಿಲರ್ಕಷಿಸಿ, ಮರೆತು ಬಿಟ್ಟಿದೆ. ಆದರೆ, ರಾಜ ಮಹೇಂದ್ರ ಪ್ರತಾಪ್ ಸಿಂಗ್ ಜೀ ಅಥವಾ ಸುಹೇಲ್ ದೇವ್ ಜೀ ಮತ್ತು ಇತರರು, ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ.

    ಆಲಿಘಡ್ ಕೋಲ್ ತೆಹ್ಸಿಲ್‍ನ ಲೋಧಾ ಮತ್ತು ಮುಸೇಪುರ್ ಕರೀಂ ಜಾರೌಲಿ ಗ್ರಾಮಗಳಲ್ಲಿ 92 ಎಕರೆ ವಿಸ್ತಾರವಾದ ಪ್ರದೇಶದಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸ ಲಾಗುತ್ತಿದೆ. ಇದು ಆಲಿಘಡ್ ವಿಭಾಗದ 395 ಕಾಲೇಜುಗಳಿಗೆ ಅಂಗಸಂಸ್ಥೆಯನ್ನು ಒದಗಿಸುತ್ತದೆ.

    ಭಾರತ ರಕ್ಷಣಾ ವಸ್ತುಗಳ ರಫ್ತಿನಲ್ಲೂ ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಈ ಹಿಂದೆ ದೇಶದಲ್ಲಿ ಕೇವಲ ಆಮದು ಮಾತ್ರ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಇದೀಗ ಪರಿಸ್ಥಿತಿ ಬದಲಾಗಿದೆ. ಆಲಿಘರ್​ ರಕ್​ಷಣಾ ಕಾರಿಡಾರ್​ ದೇಶದ ಗಡಿಗಳಲ್ಲಿ ದೊಡ್ಡ ಕೊಡುಗೆ ನೀಡುತ್ತಿದೆ ಎಂದರು. ಇದೇ ವೇಳೆ ಲಕ್ನೋ ನೋಡ್‌ ಕಾರಿಡಾರ್​ ಅಭಿವೃದ್ಧಿ ಪಡಿಸಿರುವ ಬ್ರಹ್ಮೋಸ್​​ ಕ್ಷಿಪಣಿಗೆ 9 ಸಾವಿರ ಕೋಟಿ ಘೋಷಿಸಿದರು.

    ಇದನ್ನು ಓದಿ: ಒಂದು ವರ್ಷದಿಂದ ಒಂದೇ ಲಾಟರಿ ಸಂಖ್ಯೆಯನ್ನು ಆಡಿ ಕೊನೆಗೂ 8.8 ಕೋಟಿ ರೂ. ಗೆದ್ದ ಮಹಿಳೆ

    ಇನ್ನು ಕಾರ್ಯಕ್ರಮದಲ್ಲಿ ಹಾಜರರಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ ಅವರ ಕಾರ್ಯಕ್ಕೆ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಯೋಗಿ ಆದಿತ್ಯನಾಥ್​ ನೇತೃತ್ವದಲ್ಲಿ ರಾಜ್ಯ ಅಭಿವೃದ್ದಿಯತ್ತ ಮುನ್ನಡೆ ಸಾಧಿಸಿದೆ ಎಂದು ಶ್ಲಾಘಿಸಿದರು.

    ಇದನ್ನು ಓದಿ: ಹಳಿ ತಪ್ಪಿ ನದಿಗೆ ಉರುಳಿದ ಗೂಡ್ಸ್​ ಟ್ರೈನ್​​; ರೈಲಿನಲ್ಲಿದ್ದ ಗೋಧಿ ನೀರು ಪಾಲು

    ಒಂದ ಕಾಲದಲ್ಲಿ ದೇಶದ ಅಭಿವೃದ್ಧಿಗೆ ಉತ್ತರ ಪ್ರದೇಶ ಅಡ್ಡಿಯಾಗಿ ಕಾಣುತ್ತಿತ್ತು. ಆದರೆ, ಇದೀಗ ರಾಜ್ಯದ ಬೆಳವಣಿಗೆ ಬಗ್ಗೆ ನನಗೆ ತುಂಬಾ ತೃಪ್ತಿ ಇದೆ. ಪ್ರಕಾಶಮಾನ ರಾಜ್ಯಕ್ಕೆ ಉದಾಹರಣೆಯಾಗಿ ಇಂದು ಉತ್ತರ ಪ್ರದೇಶ ಇದೆ, ಡಬಲ್​ ಎಂಜಿನ್​​ ಸರ್ಕಾರದಿಂದ ಡಬಲ್​ ಲಾಭ ಇದೆ ಎಂದು ಸರ್ಕಾರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.



    ಇದೇ ವೇಳೆ ವಿರೋಧ ಪಕ್ಷವಾಗಿರುವ ಸಮಾಜವಾದಿ ಪಕ್ಷದ ವಿರುದ್ಧ ಹರಿಹಾಯ್ದ ಅವರು, ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ನಡೆದ ಹಗರಣಗಳನ್ನು ಜನರು ಮರೆಯಲು ಸಾಧ್ಯವಿಲ್ಲ. ಎಸ್​ಪಿ ಅಧಿಕಾರದಲ್ಲಿದ್ದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿತ್ತು. ಆದರೆ, ಈಗ ಜನರು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಲು ಹೆದರುವಂತಹ ವಾತವಾರಣ ಸೃಷ್ಟಿಯಾಗಿದೆ ಎಂದರು.
    Published by:Seema R
    First published: