ನನ್ನ ವಿಚಾರಗಳ ಬಗ್ಗೆ ಪ್ರಧಾನಿ ಮೋದಿಗೆ ಆಸಕ್ತಿ ಇಲ್ಲ, ಹೀಗಾಗಿ ಚೀನಾಗೆ ಹೋಗುವೆ; ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ

ಸುಬ್ರಹ್ಮಣಿಯನ್ ಸ್ವಾಮಿ ಅವರು ಒಬ್ಬ ಶ್ರೇಷ್ಠ ಅರ್ಥಶಾಸ್ತ್ರಜ್ಞ. ಅವರು ಹೆಸರಾಂತ ವಿವಿಯಲ್ಲಿ ಉಪನ್ಯಾಸ ನೀಡುತ್ತಿರುವುದು ಸಮಂಜಸವಾಗಿದೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದರೆ, ಇನ್ನು ಕೆಲವರು, ಸ್ವಾಮಿ ದೇಶ ಬಿಟ್ಟು ಹೋಗುತ್ತಿದ್ದಾರೆ ಇನ್ನು ಹಲವರು ವ್ಯಂಗ್ಯವಾಡಿದ್ದಾರೆ.

HR Ramesh | news18
Updated:July 2, 2019, 5:34 PM IST
ನನ್ನ ವಿಚಾರಗಳ ಬಗ್ಗೆ ಪ್ರಧಾನಿ ಮೋದಿಗೆ ಆಸಕ್ತಿ ಇಲ್ಲ, ಹೀಗಾಗಿ ಚೀನಾಗೆ ಹೋಗುವೆ; ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ
ಸುಬ್ರಮಣಿಯನ್ ಸ್ವಾಮಿ
  • News18
  • Last Updated: July 2, 2019, 5:34 PM IST
  • Share this:
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಗೆ ತಮ್ಮ ಹೇಳಿಕೆಗಳಿಂದಲೇ ಟೀಕೆ ಮಾಡುತ್ತಾ ಬಂದಿರುವ ಪಕ್ಷದ ಹಿರಿಯ ನಾಯಕ ಸುಬ್ರಹ್ಮಣಿಯನ್ ಸ್ವಾಮಿ ಇದೀಗ ಮತ್ತೆ ಪ್ರಧಾನಿ ಮೋದಿ ಅವರನ್ನು ಟೀಕೆ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಮಾತನ್ನು ಕೇಳುವ ಆಸಕ್ತಿ ಇಲ್ಲ. ಹೀಗಾಗಿ ನಾನು ಚೀನಾಗೆ ಹೋಗುತ್ತಿದ್ದೇನೆ. ಚೀನಾದ ಹೆಸರಾಂತ ಸಿಂಘುವಾ ವಿಶ್ವವಿದ್ಯಾಲಯ ಕಳೆದ 70 ವರ್ಷಗಳಲ್ಲಿ ಚೀನಾದ ಆರ್ಥಿಕ ಅಭಿವೃದ್ಧಿ ವಿಷಯವಾಗಿ ಮಾತನಾಡಲು ತಮ್ಮನ್ನು ಆಹ್ವಾನಿಸಿದ್ದು, ಆ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲು ಚೀನಾಗೆ ಹೋಗುತ್ತಿದ್ದೇನೆ. ನನ್ನ ವಿಚಾರಧಾರೆಗಳ ಬಗ್ಗೆ ಪ್ರಧಾನಿ ಮೋದಿಗೆ ಆಸಕ್ತಿ ಇಲ್ಲ ಎಂದು ಟ್ವೀಟ್ ಮಾಡುವ ಮೂಲಕ ಮೋದಿ ಅವರಿಗೆ ಕಾಲೆಳೆದಿದ್ದಾರೆ.ಸುಬ್ರಹ್ಮಣಿಯನ್ ಸ್ವಾಮಿ ಅವರ ಟ್ವೀಟ್​ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಸುಬ್ರಹ್ಮಣಿಯನ್ ಸ್ವಾಮಿ ಅವರು ಒಬ್ಬ ಶ್ರೇಷ್ಠ ಅರ್ಥಶಾಸ್ತ್ರಜ್ಞ. ಅವರು ಹೆಸರಾಂತ ವಿವಿಯಲ್ಲಿ ಉಪನ್ಯಾಸ ನೀಡುತ್ತಿರುವುದು ಸಮಂಜಸವಾಗಿದೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದರೆ, ಇನ್ನು ಕೆಲವರು, ಸ್ವಾಮಿ ದೇಶ ಬಿಟ್ಟು ಹೋಗುತ್ತಿದ್ದಾರೆ ಇನ್ನು ಹಲವರು ವ್ಯಂಗ್ಯವಾಡಿದ್ದಾರೆ.ಸುಬ್ರಹ್ಮಣಿಯನ್ ಸ್ವಾಮಿ ಅವರು ಪ್ರಧಾನಿ ಮೋದಿ ಅವರನ್ನು ಟೀಕೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಮೋದಿ ಅವರು ಚೌಕಿದಾರ್ ಎಂಬ ಅಭಿಯಾನ ಆರಂಭಿಸಿದ್ದಾಗ ಅದಕ್ಕೆ ನಾನು ಬ್ರಾಹ್ಮಣ. ಚೌಕೀದಾರ ಆಗಲು ಸಾಧ್ಯವಿಲ್ಲ. ನಾನು ಹೇಳಿದಂತೆ ಚೌಕೀದಾರ ಮಾಡಬೇಕು. ಅವರೇಕೆ ತಮ್ಮ ಹೆಸರನ್ನು ಚೌಕೀದಾರ್​ ಎಂದು ಬದಲಿಸಿಕೊಳ್ಳಬೇಕಿತ್ತು ಎಂದು ತಮಿಳು ಸ್ಥಳೀಯ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳುವ ಮೂಲಕ ಪ್ರಧಾನಿಗೆ ಸುಬ್ರಮಣಿಯನ್ ಸ್ವಾಮಿ ಟಾಂಗ್ ನೀಡಿದ್ದರು.


First published:July 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ