HOME » NEWS » National-international » PM MODI INTERACTION WITH STUDENTS OF A CBSE AFFILIATED SCHOOL SESR

ಪರೀಕ್ಷೆ ರದ್ದಾಗಿದ್ದಕ್ಕೆ ಸಂತಸವೇ; 12ನೇ ತರಗತಿ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಅಚ್ಚರಿ ಸಂವಾದ

ವಿದ್ಯಾರ್ಥಿಗಳಿಗೆ ಯಾವುದೇ ಮುನ್ಸೂಚನೆ ನೀಡದೇ ಸಂವಾದ ಕಾರ್ಯಕ್ರಮಕ್ಕೆ ಲಾಗಿನ್​ ಆದ ಪ್ರಧಾನಿಗಳು, ನೀವು ಪರೀಕ್ಷೆ ರದ್ದಾದ ಸಂತಸದಲ್ಲಿದ್ದೀರಾ. ನಿಮ್ಮ ಸಂತಸಕ್ಕೆ ನಾನು ತೊಂದರೆ ಮಾಡುವುದಿಲ್ಲ ಎಂದರು.

news18-kannada
Updated:June 3, 2021, 9:23 PM IST
ಪರೀಕ್ಷೆ ರದ್ದಾಗಿದ್ದಕ್ಕೆ ಸಂತಸವೇ; 12ನೇ ತರಗತಿ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಅಚ್ಚರಿ ಸಂವಾದ
ವಿದ್ಯಾರ್ಥಿಗಳಿಗೆ ಯಾವುದೇ ಮುನ್ಸೂಚನೆ ನೀಡದೇ ಸಂವಾದ ಕಾರ್ಯಕ್ರಮಕ್ಕೆ ಲಾಗಿನ್​ ಆದ ಪ್ರಧಾನಿಗಳು, ನೀವು ಪರೀಕ್ಷೆ ರದ್ದಾದ ಸಂತಸದಲ್ಲಿದ್ದೀರಾ. ನಿಮ್ಮ ಸಂತಸಕ್ಕೆ ನಾನು ತೊಂದರೆ ಮಾಡುವುದಿಲ್ಲ ಎಂದರು.
  • Share this:
ಸಿಬಿಎಸ್​ಸಿ ವಿದ್ಯಾರ್ಥಿಗಳಿಗೆ ಕೇಂದ್ರ ಶಿಕ್ಷಣ ಸಚಿವಾಲಯ ಆಯೋಜಿಸಿದ್ದ ವಿಶೇಷ ಸಂವಾದಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗುವ ಮೂಲಕ ವಿದ್ಯಾರ್ಥಿಗಳಿಗೆ ಅಚ್ಚರಿ ಮೂಡಿಸಿದರು. ಆನ್​ಲೈನ್​ ಮೂಲಕ ನಡೆದ ಈ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಪೋಷಕರು ಕೂಡ ಹಾಜರಿದ್ದರು. ಈ ಕಾರ್ಯಕ್ರಮ ಆರಂಭವಾದ ಕೆಲ ಸಮಯದ ಬಳಿಕ ನರೇಂದ್ರ ಮೋದಿ ಅವರು ಕೂಡ ಲಾಗಿನ್​ ಆಗಿ ಅವರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಪೋಷಕರು ಕೊರೋನಾ ಸಂದರ್ಭದಲ್ಲಿ ಸಿಬಿಎಸ್​ಸಿ ಪರೀಕ್ಷೆಯನ್ನು ರದ್ದು ಮಾಡಿದ ಕ್ರಮಕ್ಕೆ ಪ್ರಧಾನಿ ಅವರಿಗೆ ಧನ್ಯಾವಾದ ತಿಳಿಸಿದರು.

ವಿದ್ಯಾರ್ಥಿಗಳಿಗೆ ಯಾವುದೇ ಮುನ್ಸೂಚನೆ ನೀಡದೇ ಸಂವಾದ ಕಾರ್ಯಕ್ರಮಕ್ಕೆ ಲಾಗಿನ್​ ಆದ ಪ್ರಧಾನಿಗಳು, ನೀವು ಪರೀಕ್ಷೆ ರದ್ದಾದ ಸಂತಸದಲ್ಲಿದ್ದೀರಾ. ನಿಮ್ಮ ಸಂತಸಕ್ಕೆ ನಾನು ತೊಂದರೆ ಮಾಡುವುದಿಲ್ಲ ಎಂದು ತಿಳಿಸಿದರು.

ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಪರೀಕ್ಷೆ ರದ್ದಾಗುವ ಮುನ್ನ ವಿದ್ಯಾರ್ಥಿಗಳು ಪರೀಕ್ಷೆಯ ಭೀತಿ ಎದುರಿಸಿದ್ದರೆ ಎಂದು ಪ್ರಶ್ನಿಸಿದರು. ಪ್ರಧಾನಿ ಅವರ ಪ್ರಶ್ನೆಗೆ ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಉತ್ತರಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಮೋದಿ, ನಾನು ವಿದ್ಯಾರ್ಥಿಗಳು ಪರೀಕ್ಷೆ ಭಯ ಪಡಬಾರದು ಎಂದು ಎಕ್ಸಾಂ ವಾರಿಯರ್​ ಪುಸ್ತಕ ಬರೆದಿದ್ದು ವ್ಯರ್ಥವಾಯಿತು ಎಂದು ನಗೆಚಟಾಕಿ ಹಾರಿಸಿದರು.

ಬಳಿಕ ಗುವಾಹಟಿಯ ವಿದ್ಯಾರ್ಥಿಯೊಬ್ಬ ಪ್ರಧಾನಿ ಅವರ ಎಕ್ಸಾಂ ವಾರಿಯರ್​ ಪುಸ್ತಕವನ್ನು ಓದಿದರಿಂದ ತಮಗೆ ಸಾಕಷ್ಟು ಸಹಾಯವಾಯಿತು ಎಂದು ತಿಳಿಸಿದ,
ಪಂಚ್​ಕುಲದ 10ನೇ ತರಗತಿ ಟಾಪರ್​ ವಿದ್ಯಾರ್ಥಿ ಹಿತೇಶ್ವರ್​ ಶರ್ಮಾರೊಂದಿಗೆ ಸಂಭಾಷಣೆ ನಡೆಸಿದ ಪ್ರಧಾನಿ, 10ನೇ ತರಗತಿಯಲ್ಲಿ ಟಾಪರ್​ ಆಗಿದ್ದ ನಿನಗೆ, ಈ ಬಾರಿ ಪರೀಕ್ಷೆ ರದ್ಧತಿಯಿಂದ ಬೇಸರವಾಗಿರಬೇಕು ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ವಿದ್ಯಾರ್ಥಿ, ಖಂಡಿತ ಇಲ್ಲ. ಓದಿದ ಜ್ಞಾನ ನಮ್ಮ ಜೊತೆ ಸದಾ ಇರುತ್ತದೆ. ನಮ್ಮ ಯಾವುದೇ ಪ್ರಯತ್ನ ವ್ಯರ್ಥವಾಗುವುದಿಲ್ಲ ಎಂದು ತಿಳಿಸಿದರು

ಇದನ್ನು ಓದಿ: CBSE12ನೇ ತರಗತಿ ಬೋರ್ಡ್​ ಪರೀಕ್ಷೆ ರದ್ದು ಮಾಡಿದ ಕೇಂದ್ರ ಸರ್ಕಾರ

ಸಾಮೂಹಿಕ ಒಗ್ಗಟ್ಟು ಹೇಗೆ ಯಾವುದೇ ಸಮಸ್ಯೆಗೆ ನಿವಾರಣೆ ಆಗಬಲ್ಲದು ಎಂದು ತಿಳಿಸಿದ ಅವರು, ಕೋವಿಡ್​ ಸಮಯದಲ್ಲಿ ಸಾಮೂಹಿಕ ಒಗ್ಗಟ್ಟಿನ ಹೋರಾಎ ಉದಾಹರಣೆ ನೀಡಿದರು. ನಾವು ಕೋವಿಡ್​ ಬಿಕ್ಕಟ್ಟಿನಿಂದ  ಅನೇಕ ಸಮಸ್ಯೆಗಳನ್ನು ಎದುರಿಸಿದೆವು.   ಒಗ್ಗಟ್ಟಿನ ಮನೋಬಲದಿಂದ ನಾವು ಮತ್ತಷ್ಟು ಗಟ್ಟಿಯಾದೆವು. ಇದೇ ಕೂಡ ಭಾರತದ ಜನರಿಗೆ ಉತ್ತಮ ಸಂದೇಶವಾಗಿದೆ. ಟೀಂ ಸ್ಪಿರಿಟ್​ಗೆ ಒತ್ತು ನೀಡುವ ಮೂಲಕ ಭವಿಷ್ಯದ ಸವಾಲುಗಳನ್ನು ನಿವಾಹರಿಸಬಹುದು. ಇದು ನಿಮಗೆ ಎಲ್ಲಾ ಸಮಯದಲ್ಲೂಸಹಾಯ ಮಾಡುತ್ತದೆ ಎಂದು ಸಲಹೆ ನೀಡುವ ಮೂಲಕ ಈ ಸಂವಾದ ​ ಅನ್ನು ಮುಗಿಸಿದರುಸಿಬಿಎಸ್​ಸಿ 12ನೇ ತರಗತಿ ಪರೀಕ್ಷೆ ರದ್ದು ಮಾಡಿರುವ ಹಿನ್ನಲೆ, ಸಿಬಿಎಸ್​ಸಿ ಈ ವಸ್ತು ನಿಷ್ಟ ಮಾನದಂಡದ ಪ್ರಕಾರ ವಿದ್ಯಾರ್ಥಿಗಳ ಫಲಿತಾಂಶವನ್ನು ಕ್ರೋಢಿಕರಿಸಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ವಿದ್ಯಾರ್ಥಿಗಳ ಮೂರು ವರ್ಷದ ಸಾಧನೆ ಸಂಗ್ರಹಿಸುವಂತೆ ಸೂಚಿಸಲಾಗಿದೆ. ವಿದ್ಯಾರ್ಥಿಗಳಿ 9, 10, 11ನೇ ತರಗತಿಯ ಬೋರ್ಡ್​ ಪರೀಕ್ಷೆ ವೇಳೆ ಪಡೆದ ಅಂಕಗಳ ಸಂಬಂಧಿಸಿದಂತೆ ಈಗಾಗಲೇ ವಿವರಗಳನ್ನು ನೀಡುವಂತೆ ಶಾಲೆಗಳಿಗೆ ಕೋರಲಾಗಿದೆ. ಈ ಮೂರು ವರ್ಷಗಳಲ್ಲಿ ವಿದ್ಯಾರ್ಥಿಗಳ ತೋರಿದ ಸಾಧನೆ ಆಧಾರದ ಮೇಲೆ 12ನೇ ತರಗತಿಯ ಫಲಿತಾಂಶವನ್ನು ಲೆಕ್ಕಾಹಾಕುವ ಸಾಧ್ಯತೆ ಇದೆ. ಈ ಕುರಿತು ಇನ್ನು ಅಂತಿಮ ತೀರ್ಮಾನವಾಗಿಲ್ಲ

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.)
Published by: Seema R
First published: June 3, 2021, 9:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories