HOME » NEWS » National-international » PM MODI IN AYODHYA AYODHYA RAM MANDIR PM NARENDRA MODI TRAVEL TOWARD AYODHYA RH

PM Modi in Ayodhya: ಕುರ್ತಾ, ಪಂಚೆ ತೊಟ್ಟು ಅಯೋಧ್ಯೆಯತ್ತ ಹೊರಟ ಪ್ರಧಾನಿ ಮೋದಿ

PM Narendra Modi: ದಶಕಗಳ ಹಿಂದಿನ ರಾಮ ಜನ್ಮಭೂಮಿ ವಿವಾದಕ್ಕೆ ತೆರೆ ಬಿದ್ದಿದೆ. ಈ ಬೆನ್ನಲ್ಲೀಗ ಇಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ. ಈ ಭೂಮಿ ಪೂಜೆ ಕಾರ್ಯಕ್ರಮವನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ನೆರವೇರಿಸಲಿದ್ದಾರೆ. ಹಾಗೆಯೇ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಜತೆಗೆ ವಿವಿಧ ಕ್ಷೇತ್ರಗಳ 175 ಮಂದಿ ಗಣ್ಯರು ಭಾಗವಹಿಸಲಿದ್ದಾರೆ.

news18-kannada
Updated:August 5, 2020, 11:33 AM IST
PM Modi in Ayodhya: ಕುರ್ತಾ, ಪಂಚೆ ತೊಟ್ಟು ಅಯೋಧ್ಯೆಯತ್ತ ಹೊರಟ ಪ್ರಧಾನಿ ಮೋದಿ
ದೆಹಲಿಯಿಂದ ಅಯೋಧ್ಯೆಯತ್ತ ತೆರಳುತ್ತಿರುವ ಪ್ರಧಾನಿ ಮೋದಿ.
 • Share this:
ನವದೆಹಲಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೆಹಲಿಯಿಂದ ಅಯೋಧ್ಯೆಯತ್ತ ಪ್ರಯಾಣ ಬೆಳೆಸಿದ್ದಾರೆ.ರಾಮಮಂದಿರ ನಿರ್ಮಾಣದ ಭೂಮಿಪೂಜೆಯಲ್ಲಿ ಪಾಲ್ಗೊಳ್ಳಲು ಕುರ್ತಾ ಮತ್ತು ಪಂಚೆ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಅಯೋಧ್ಯೆಯತ್ತ ಪ್ರಯಾಣ ಬೆಳೆಸಿದ್ದಾರೆ. ಅವರ ಇಂದಿನ‌ ಕಾರ್ಯಕ್ರಮದ ವಿವರಗಳು ಈ‌ ರೀತಿ ಇವೆ.


 • 10.30ಕ್ಕೆ ಲಖನೌ ವಿಮಾನ ನಿಲ್ದಾಣ ತಲುಪಲಿರುವ ಮೋದಿ

 • 11.30ಕ್ಕೆ ಅಯೋಧ್ಯೆಯ ಸಾಕೇತ್ ಕಾಲನಿಗೆ ಆಗಮನ

 • 11.45ಕ್ಕೆ ಹನುಮಾನ್​ಗಡಿಯಲ್ಲಿ ಪ್ರಾರ್ಥನೆ

 • ಹನುಮಾನ್ ಪೂಜೆ ಬಳಿಕ ಸರಯೂ ನದಿಗೆ ಪೂಜೆ

 • ಮಧ್ಯಾಹ್ನ 12 ಗಂಟೆಗೆ ರಾಮಜನ್ಮಭೂಮಿಗೆ ಆಗಮನ
 • 12.30ಕ್ಕೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗಿ

 • 12.40ಕ್ಕೆ ರಾಮಮಂದಿರಕ್ಕೆ ಅಡಿಗಲ್ಲು ಹಾಕಲಿರುವ ಮೋದಿ

 • ಶಿಲಾನ್ಯಾಸದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿ

 • 1.10ಕ್ಕೆ ರಾಮಜನ್ಮಭೂಮಿ ಸಂಕೀರ್ಣ ವೀಕ್ಷಿಸಲಿರುವ ಮೋದಿ

 • ಶ್ರೀರಾಮ ಮಂದಿರ ತೀರ್ಥ ಕ್ಷೇತ್ರ ‌ಟ್ರಸ್ಟ್ ಅಧ್ಯಕ್ಷ ನೃತ್ಯ ಗೋಪಾಲದಾಸ್ ಮತ್ತಿತರ ಜೊತೆ ಸಮಾಲೋಚನೆ

 • ಮಧ್ಯಾಹ್ನ 02:05ಕ್ಕೆ ಅಯೋಧ್ಯೆಯಿಂದ ಹೆಲಿಕಾಪ್ಟರ್ ಮೂಲಕ ಲಕ್ನೋಗೆ ಪ್ರಯಾಣ

ದಶಕಗಳ ಹಿಂದಿನ ರಾಮ ಜನ್ಮಭೂಮಿ ವಿವಾದಕ್ಕೆ ತೆರೆ ಬಿದ್ದಿದೆ. ಈ ಬೆನ್ನಲ್ಲೀಗ ಇಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ. ಈ ಭೂಮಿ ಪೂಜೆ ಕಾರ್ಯಕ್ರಮವನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ನೆರವೇರಿಸಲಿದ್ದಾರೆ. ಹಾಗೆಯೇ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಜತೆಗೆ ವಿವಿಧ ಕ್ಷೇತ್ರಗಳ 175 ಮಂದಿ ಗಣ್ಯರು ಭಾಗವಹಿಸಲಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸದ‌‌ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಐವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಪಿಎಂ ಮೋದಿ, ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್, ರಾಮಮಂದಿರ ಟ್ರಸ್ಟ್ ಅಧ್ಯಕ್ಷ ನೃತ್ಯ ಗೋಪಾಲದಾಸ್, ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿ ಬೇನ್, ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಮಾತ್ರ ಅವಕಾಶ ನೀಡಲಾಗಿದೆ.
Published by: HR Ramesh
First published: August 5, 2020, 10:02 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories