Narendra Modi: ಮನ್​ ಕಿ ಬಾತ್​ನಲ್ಲಿ ಮಹಿಳಾ ಸಾಧಕಿಯರನ್ನು ಶ್ಲಾಘಿಸಿದ ಮೋದಿ!

ಪ್ರಧಾನಿ ಮೋದಿ

ಪ್ರಧಾನಿ ಮೋದಿ

  • Share this:

ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಇಂದು ಮನ್​ ಕಿ ಬಾತ್​ (Mann Ki Baat) 99ನೇ ಸಂಚಿಕೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದರು. ಇದು ಈ ವರ್ಷದ ಮೂರನೇ ಮನ್ ಕಿ ಬಾತ್‌ ಕಾರ್ಯಕ್ರಮವಾಗಿದೆ. ಇಂದು ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ ಅವರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರ  (Women Achievers) ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಏಷ್ಯಾದ ಮೊದಲ ಮಹಿಳಾ ಲೋಕೋ ಪೈಲಟ್ ಸುರೇಖಾ ಯಾದವ್ (Loco Pilot Surekha Yadav) ಮತ್ತು ಯುದ್ಧ ಘಟಕದಲ್ಲಿ ಕಮಾಂಡ್ ನೇಮಕಾತಿಯನ್ನು ಪಡೆದ ಮೊದಲ ಮಹಿಳಾ ವಾಯುಪಡೆಯ ಅಧಿಕಾರಿ (First Woman Air Force Officer ) ಎಂಬ ಹೆಗ್ಗಳಿಕೆಗೆ ಪಾತ್ರರಾದ ಗ್ರೂಪ್ ಕ್ಯಾಪ್ಟನ್ ಶಾಲಿಜಾ ಧಾಮಿ (Capt Shalija Dhami ) ಅವರ ಬಗ್ಗೆ ಶ್ಲಾಘನೆ  ವ್ಯಕ್ತಪಡಿಸಿದರು.


ಸುರೇಖಾ ಯಾದವ್, ಶಿವ ಚೌಹಾಣ್ ಸಿಯಾಚಿನ್‌ರನ್ನು ಹೊಗಳಿದ ಮೋದಿ


ಏಷ್ಯಾದ ಮೊದಲ ಮಹಿಳಾ ಲೋಕೋ ಪೈಲಟ್ ಸುರೇಖಾ ಯಾದವ್ ಮತ್ತೊಂದು ದಾಖಲೆಯನ್ನು ನಿರ್ಮಿಸಿದ್ದಾರೆ. ವಂದೇ ಭಾರತ್‌ನ ಮೊದಲ ಮಹಿಳಾ ಲೋಕೋ ಪೈಲಟ್ ಎಂಬ ಹೆಗ್ಗಳಿಕೆಗೆ ಅವರು  ಪಾತ್ರರಾಗಿದ್ದಾರೆ. ಗ್ರೂಪ್ ಕ್ಯಾಪ್ಟನ್ ಶಾಲಿಜಾ ಧಾಮಿ ಅವರು ಯುದ್ಧ ಘಟಕದಲ್ಲಿ ಕಮಾಂಡ್ ನೇಮಕಾತಿಯನ್ನು ಪಡೆದ ಮೊದಲ ಮಹಿಳಾ ವಾಯುಪಡೆ ಅಧಿಕಾರಿಯಾಗಿದ್ದಾರೆ. ಅವರು  ಪೈಲಟ್​ ಆಗುವ ಸಾಮರ್ಥ್ಯ ಹೊಂದಿದ್ದಾರೆ. ಅದೇ ರೀತಿ, ಭಾರತೀಯ ಸೇನೆಯ ಕ್ಯಾಪ್ಟನ್ ಶಿವ ಚೌಹಾಣ್ ಸಿಯಾಚಿನ್‌ನಲ್ಲಿ ನಿಯೋಜಿಸಲ್ಪಟ್ಟ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ ಹೊಗಳಿದರು.


75 ವರ್ಷಗಳ ನಾಗಾಲ್ಯಾಂಡ್‌ನಲ್ಲಿ ಇಬ್ಬರು ಮಹಿಳಾ ಶಾಸಕರು ಗೆಲುವು


ಭಾರತದ ನಾರಿ ಶಕ್ತಿಯು ಮುಂಚೂಣಿಯಿಂದ ಮುನ್ನಡೆಯುತ್ತಿದೆ. ಉದಯೋನ್ಮುಖ ಭಾರತೀಯ ಶಕ್ತಿಯಲ್ಲಿ ಮಹಿಳಾ ಶಕ್ತಿಯು ಮಹತ್ವದ ಪಾತ್ರವನ್ನು ವಹಿಸುತ್ತಿದೆ. ನಾಗಾಲ್ಯಾಂಡ್‌ನಲ್ಲಿ 75 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಇಬ್ಬರು ಮಹಿಳಾ ಶಾಸಕರು ಗೆಲುವು ಸಾಧಿಸುವ ಮೂಲಕ ವಿಧಾನಸಭೆಗೆ ಕಾಲಿಟ್ಟಿದ್ದಾರೆ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಶಕ್ತಿ ಪ್ರದರ್ಶಿಸುತ್ತಿದ್ದಾರೆ. ಇಂದು, ಭಾರತದ ಸಾಮರ್ಥ್ಯವು ಹೊಸ ದೃಷ್ಟಿಕೋನದಿಂದ ಹೊರಹೊಮ್ಮುತ್ತಿದೆ ಮತ್ತು ನಮ್ಮ ಮಹಿಳಾ ಶಕ್ತಿಯು ಅದರಲ್ಲಿ ಬಹಳ ದೊಡ್ಡ ಪಾತ್ರವನ್ನು ವಹಿಸುತ್ತಿದೆ.


'ದಿ ಎಲಿಫೆಂಟ್ ವಿಸ್ಪರರ್ಸ್' ಆಸ್ಕರ್ ಪ್ರಶಸ್ತಿಗೆ ಪ್ರಧಾನಿ ಮೋದಿ ಸಂತಸ 


ಆಸ್ಕರ್ ಪ್ರಶಸ್ತಿಗಳಲ್ಲಿ ಮಿಂಚಿನ ಪ್ರದರ್ಶನ ನೀಡಿದ ಭಾರತದ ಬಗ್ಗೆ ಮಾತನಾಡಿದ ಮೋದಿ ಅವರು,  ಮತ್ತು 'ದಿ ಎಲಿಫೆಂಟ್ ವಿಸ್ಪರರ್ಸ್ ಬಗ್ಗೆ ಪ್ರಸ್ತಾಪಿಸಿದರು. ನಿರ್ಮಾಪಕ ಗುನೀತ್ ಮೊಂಗಾ ಮತ್ತು ನಿರ್ದೇಶಕ ಕಾರ್ತಿಕಿ ಗೊನ್ಸಾಲ್ವಿಸ್ ಅವರು ತಮ್ಮ 'ದಿ ಎಲಿಫೆಂಟ್ ವಿಸ್ಪರರ್ಸ್' ಸಾಕ್ಷ್ಯಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದು ದೇಶಕ್ಕೆ ಗೌರವವನ್ನು ತಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.




ಇದನ್ನೂ ಓದಿ: Mann Ki Baat: ಮನ್ ಕಿ ಬಾತ್​ನಲ್ಲಿ ಕರ್ನಾಟಕದ ಹಲವು ಅಂಶಗಳನ್ನು ಹೊಗಳಿದ ಪ್ರಧಾನಿ ಮೋದಿ


ಸೌರಶಕ್ತಿ ಕ್ಷೇತ್ರದಲ್ಲಿ ಭಾರತ ಮುನ್ನಡೆಗೆ ಮೋದಿ ಸಂತಸ

top videos


    ಜೊತೆಗೆ, ಸೌರಶಕ್ತಿ ಕ್ಷೇತ್ರದಲ್ಲಿ ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಬಗ್ಗೆ ಮಾತನಾಡಿದ ಮೋದಿ, ಇತ್ತೀಚಿಗೆ ಜಾಗತಿಕವಾಗಿ ಶುದ್ಧ ಇಂಧನ ಕ್ಷೇತ್ರವನ್ನು ಚರ್ಚಿಸಲಾಗುತ್ತಿದೆ ಎಂದು ಹೇಳಿದರು. ಸೌರಶಕ್ತಿ ಕ್ಷೇತ್ರದಲ್ಲಿ ಭಾರತ ವೇಗವಾಗಿ ಮುನ್ನಡೆಯುತ್ತಿರುವುದೇ ದೊಡ್ಡ ಸಾಧನೆ. 'ಸಬ್ಕಾ ಪ್ರಯಾಸ್'ನ ಆತ್ಮವು ಇಂದು ಭಾರತದ ಸೌರ ಮಿಷನ್ ಅನ್ನು ಮುಂದಕ್ಕೆ ಕೊಂಡೊಯ್ಯುತ್ತಿದೆ ಎಂದು ಹೇಳಿದರು.

    First published: