Modi- Sindhu: ಕೊಟ್ಟ ಮಾತು ಈಡೇರಿಸಿದ ಪ್ರಧಾನಿ; ಸಿಂಧು ಜೊತೆ ಐಸ್​ ಕ್ರೀಂ ಸವಿದ ಮೋದಿ

ಟೋಕಿಯೋಗೆ ತೆರಳುವ ಮುನ್ನ ಸ್ಪರ್ಧಿಗಳೊಂದಿಗೆ ಸಂಭಾಷಣೆ ನಡೆಸಿದ್ದ ಪ್ರಧಾನಿಗಳು ಒಲಂಪಿಕ್ಸ್​ನಲ್ಲಿ ಪದಕ ಗೆದ್ದು ಬಂದ ಬಳಿಕ ನಿಮ್ಮೊಟ್ಟಿಗೆ ನಾನು ಐಸ್​ಕ್ರೀಂ ತಿನ್ನುತ್ತೇನೆ ಎಂದು ಭರವಸೆ ಅನ್ನು ಸಿಂಧುಗೆ ನೀಡಿದ್ದರು.

ಸಿಂಧು ಜೊತೆ ಐಸ್​ಕ್ರೀಂ ಸವಿದ ಮೋದಿ

ಸಿಂಧು ಜೊತೆ ಐಸ್​ಕ್ರೀಂ ಸವಿದ ಮೋದಿ

  • Share this:
    ನವದೆಹಲಿ (ಆ. 16): ಟೋಕಿಯೋ ಒಲಂಪಿಕ್ಸ್​​ಗೆ ಹೋಗುವ ಮುನ್ನ ಬಾಡ್ಮಿಂಟನ್​ ತಾರೆ ಪಿ ವಿ ಸಿಂಧುಗೆ ನೀಡಿದ ವಚನವನ್ನು ಇಂದು ಪ್ರಧಾನಿ ಮೋದಿ ನೆರವೇರಿಸಿದ್ದಾರೆ. ಟೋಕಿಯೋ ಒಲಂಪಿಕ್ಸ್​ಗೆ ಮರಳುತ್ತಿದ್ದಂತೆ ನಿಮ್ಮ ಜೊತೆ ಐಸ್​ ಕ್ರೀಂ ತಿನ್ನುವುದಾಗಿ ತಿಳಿಸಿದ್ದರು. ಅದರಂತೆ ಇಂದು ಒಲಂಪಿಕ್ಸ್​ನಲ್ಲಿ ಕಂಚಿನ ಪದಕದೊಂದಿಗೆ ಮರಳಿರುವ ಸಿಂಧು ಜೊತೆ ಪ್ರಧಾನಿ ಐಸ್​​ ಕ್ರೀಂ ಸವಿದಿದ್ದಾರೆ. ಈ ಮೂಲಕ ಕೊಟ್ಟ ಮಾತನ್ನು ಪ್ರಧಾನಿ ನೇರವೇರಿಸಿದ್ದಾರೆ. ಕಂಚಿನ ಪದಕ ವಿಜೇತೆ ಪಿ ವಿ ಸಿಂಧು ಕೂಡ ಅಭ್ಯಾದ ಹಿನ್ನಲೆ ಹಲವು ದಿನಗಳ ಬಳಿಕ ಐಸ್​ಕ್ರೀಂ ತಿಂದು ಸಂಭ್ರಮಿಸಿದ್ದಾರೆ.

    2020 ಟೋಕಿಯೋ ಒಲಂಪಿಕ್ಸ್​ನಲ್ಲಿ ಅಭೂತ ಪೂರ್ವ ಪ್ರದರ್ಶನ ನೀಡಿದ ಒಲಂಪಿಕ್ಸ್​ ಕ್ರೀಡಾಪಟುಗಳಿಗೆ ಇಂದು ಪ್ರಧಾನಿ ಮೋದಿ ನಿವಾಸದಲ್ಲಿ ಅಭಿನಂದಿಸಲಾಯಿತು. ಅವರಿಗೆ ವಿಶೇಷ ಆಹ್ವಾನ ನೀಡಿ ಅತಿಥ್ಯ ನೀಡಿದ ಪ್ರಧಾನಿಗಳು ಕ್ರೀಡಾಳುಗಳ ಅದ್ಭುತ ಆಟಕ್ಕೆ ವೈಯಕ್ತಿಕವಾಗಿ ಶುಭ ಕೋರಿದರು.

    ಕಳೆದ ತಿಂಗಳ ಜುಲೈನಲ್ಲಿ ಒಲಂಪಿಕ್ಸ್​ಗೆ ಟೋಕಿಯೋಗೆ ಹೋಗುವ ಮುನ್ನ ಸ್ಪರ್ಥಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್​ ನಡೆಸಿ ಮಾತನಾಡಿದ್ದರು. ಈ ವೇಳೆ ಅವರಿಗೆ ಸ್ಪರ್ಧಾಳುಗಳಿಗೆ ಹುರುದುಂಬಿಸಿದ್ದ ಪ್ರಧಾನಿ  ಮೋದಿ ಅವರ ಕಠಿಣ ಅಭ್ಯಾಸದ ಕುರಿತು ಮಾತನಾಡಿದ್ದರು.

    ಈ ವೇಳೆ ಮಾತನ್ನು ಆಡಿದ್ದ ಪಿವಿ ಸಿಂಧು, ಪದಕ ಗೆಲ್ಲುವ ವಿಶ್ವಾಸದಿಂದ ಕಠಿಣ ಅಭ್ಯಾಸ ಮಾಡುತ್ತಿದ್ದು, ತಮಗಿಷ್ಟವಾದ ಐಸ್ ​ಕ್ರೀಂ ಅನ್ನು ಡಯಟ್​ ದೃಷ್ಟಿಯಿಂದ ತ್ಯಜಿಸಿರುವುದಾಗಿ ತಿಳಿಸಿದ್ದರು. ಇದರಿಂದ ತಮಗಿಷ್ಟವಾದ ಐಸ್​ಕ್ರೀಂ ಅನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದರು ಈ ವೇಳೆ ಮಾತನಾಡಿದ ಪ್ರಧಾನಿಗಳು ಒಲಂಪಿಕ್ಸ್​ನಲ್ಲಿ ಪದಕ ಗೆದ್ದು ಬಂದ ಬಳಿಕ ನಿಮ್ಮೊಟ್ಟಿಗೆ ನಾನು ಐಸ್​ಕ್ರೀಂ ತಿನ್ನುತ್ತೇನೆ ಎಂದು ಭರವಸೆ ನೀಡಿದ್ದರು.

    ಅದರಂತೆ ಇಂದು ಕಂಚಿನ ಪದಕ ಗೆದ್ದು ಬಂದ ಸಿಂಧು ಜೊತೆಗೆ ಇಂದು ಐಸ್​ಕ್ರೀಂ ಸವಿದರು. ಒಲಂಪಿಕ್ಸ್​ನಲ್ಲಿ ವೈಯಕ್ತಿಕವಾಗಿ ಎರಡು ಬಾರಿ ಪದಕ ಗೆದ್ದ ಎರಡನೇ ಮಹಿಳಾ ಅಭ್ಯರ್ಥಿ ಸಿಂಧು ಆಗಿದ್ದಾರೆ. ಕಳೆದ ಬಾರಿ ನಡೆದ ರಿಯೋ ಒಲಂಪಿಕ್ಸ್​ನಲ್ಲಿ ಅವರು ಬೆಳ್ಳಿ ಪದಕ ಗೆದ್ದಿದ್ದರು. ಈ ಬಾರಿ ಅವರು ಕಂಚಿನ ಪದಕ ಗೆದ್ದಿದ್ದಾರೆ. ಐದು ವಿಶ್ವ ಚಾಂಪಿಯನ್​ಶಿಪ್ ಪದಕವನ್ನು ಗೆದ್ದ ಕೀರ್ತಿ ಕೂಡ ಸಿಂಧುಗೆ ಇದೆ.

    ಇದನ್ನು ಓದಿ: ಟೋಕಿಯೋ ಒಲಂಪಿಕ್ಸ್​ನಿಂದ ಮರಳಿದ ಬಳಿಕ ಒಟ್ಟಿಗೆ ಐಸ್​ಕ್ರೀಂ ತಿನ್ನೋಣ; ಸಿಂಧುಗೆ ಮೋದಿ ವಚನ

    ಇದೇ ವೇಳೆ ಪ್ರಧಾನಿ ಮೋದಿ ಇತರೆ ಒಲಂಪಿಕ್​ ಸ್ಪರ್ಧಿಗಳೊಂದಿಗೆ ಕೂಡ ಮಾತುಕತೆ ನಡೆಸಿದರು. ಒಲಂಪಿಕ್ಸ್​ನಲ್ಲಿ ಚಿನ್ನ ಗೆದ್ದ ಜಾವಲಿನ್​ ಥ್ರೋ ಸ್ಪರ್ಥಿ ನೀರಜ್​ ಚೋಪ್ರಾ ಜೊತೆ ವೈಯಕ್ತಿಕವಾಗಿ ಚರ್ಚೆ ಮಾಡಿದ ಪ್ರಧಾನಿ ನರೇಂದ್ರ  ಮೋದಿ, ನೀರಜ್​ ಚೋಪ್ರಾಗೆ ಇಷ್ಟವಾದ ಚೂರ್ಮವನ್ನು ಅವರೊಟ್ಟಿಗೆ ಸವಿದರು.

    75ನೇ ಸ್ವಾತಂತ್ರ್ಯ ದಿನದ ಅಂಗವಾಗಿ ನಿನ್ನೆ ಕೆಂಪು ಕೋಟೆಯಲ್ಲಿ ಭಾಷಣ ಮಾಡಿದ್ದ ಪ್ರಧಾನಿಗಳು, ಕ್ರೀಡೆಯನ್ನು ಮುಖ್ಯವಾಹಿನಿಯ ಒಂದು ಭಾಗವೆಂದು ಪರಿಗಣಿಸದ ಕಾಲವೊಂದಿತ್ತು. ಮಕ್ಕಳು ಆಟವಾಡುತ್ತಿದ್ದರೆ ಅವರ ಜೀವನ ಹಾಳಾಗುತ್ತದೆ ಎಂದು ಪೋಷಕರು ಹೇಳುತ್ತಿದ್ದರು. ಈಗ, ದೇಶದೊಳಗೆ ಕ್ರೀಡೆ ಮತ್ತು ಫಿಟ್ನೆಸ್ ಬಗ್ಗೆ ಅರಿವು ಬಂದಿದೆ. ಇದರಿಂದಲೇ ಈ ಬಾರಿ ಹೆಚ್ಚು ಪದಕವನ್ನು ನಾವು ಗೆದ್ದಿದ್ದೇವೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಮಗೆ ಹೆಮ್ಮೆ ತಂದ ಕ್ರೀಡಾಪಟುಗಳು ಇಂದು ನಮ್ಮ ನಡುವೆ ಇದ್ದಾರೆ. ಇಂದು ಅವರ ಸಾಧನೆಯನ್ನು ಶ್ಲಾಘಿಸುವಂತೆ ನಾನು ರಾಷ್ಟ್ರವನ್ನು ಒತ್ತಾಯಿಸುತ್ತೇನೆ. ಅವರು ನಮ್ಮ ಹೃದಯವನ್ನು ಮಾತ್ರ ಗೆದ್ದಿಲ್ಲ, ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ಆಗಿದ್ದಾರೆ ಎಂದರು.
    Published by:Seema R
    First published: