ಶಾಂಘೈ ಶೃಂಗ ಸಭೆಯಲ್ಲಿ SECURE​ ಮಂತ್ರ ಜಪಿಸಿದ ಮೋದಿ

news18
Updated:June 10, 2018, 11:38 AM IST
ಶಾಂಘೈ ಶೃಂಗ ಸಭೆಯಲ್ಲಿ SECURE​ ಮಂತ್ರ ಜಪಿಸಿದ ಮೋದಿ
news18
Updated: June 10, 2018, 11:38 AM IST
ನ್ಯೂಸ್​ 18 ಕನ್ನಡ

ಚೀನಾ (ಜೂ 10) : ಶಾಂಘೈ ಸಹಕಾರ ಸಂಘಟನೆ (ಎಸ್​ಸಿಒ) ಯಲ್ಲಿ ಭಾಗವಹಿಸಿರುವ ಪ್ರಧಾನಿ ಮೋದಿ ನೆರೆಯ ದೇಶದೊಂದಿಗಿನ ಉತ್ತಮ ಬಾಂಧವ್ಯವೃದ್ಧಿಸುವುದು  ಭಾರತದ ಪ್ರಮುಖ ಆದ್ಯತೆ ಎಂದು ತಿಳಿಸಿದ್ದಾರೆ.

ಶಾಂಘೈನ 18ನೇ ಶೃಂಗಾ ಸಹಕಾರ ಸಂಘಟನೆಯಲ್ಲಿ ಮೊದಲ ಬಾರಿ ಭಾಗಿಯಾದ ಅವರು ಸೆಕ್ಯೂರ್​ (SECURE) ಪರಿಕಲ್ಪನೆ ಬಗ್ಗೆ ಮಾತನಾಡಿದ್ದಾರೆ.  ಎಸ್​ ಎಂದರೆ ಜನರ ರಕ್ಷಣೆ , ಇ ಎಂದರೆ ಆರ್ಥಿಕ ಅಭಿವೃದ್ಧಿ, ಸಿ ಎಂದರೆ ಪ್ರದೇಶಗಳ ಸಂಪರ್ಕ, ಯು ಎಂದರೆ ಏಕತೆ, ಆರ್​ ಎಂದರೆ ಸಾರ್ವಭೌಮ ಮತ್ತು ಸಮಗ್ರತೆ ಗೌರವ ಮತ್ತು ಇ ಎಂದರೆ ಪರಿಸರ ರಕ್ಷಣೆ ಮಾಡುವ ಮೂಲಕ ನೆರೆಯ ರಾಷ್ಟಗಳೊಂದಿಗೆ ಸಂಪರ್ಕಕ್ಕೆ ಬದ್ಧ ಎಂದಿದ್ದಾರೆ.

ಭೌತಿಕ ಮತ್ತು ಡಿಜಿಟಲ್ ಸಂಪರ್ಕವು ಭೂಗೋಳದ ವ್ಯಾಖ್ಯಾನವನ್ನು ಬದಲಾಯಿಸುತ್ತಿದೆ. ಈ ಹಿನ್ನಲೆ ನಮ್ಮ ನೆರೆಯ ದೇಶ ಮತ್ತು ಎಸ್​ಸಿಒ ಜೊತೆಗಿನ ಸಂಪರ್ಕವು ನಮ್ಮ ಆದ್ಯತೆಯಾಗಿದೆಯಾಗಿದೆ ಎಂದು ಮೋದಿ ತಿಳಿಸಿದ್ದಾರೆ.

ಶೃಂಗಸಭೆಯ ಯಶಸ್ವಿಗೆ ಭಾರತ ಬದ್ಧವಾಗಿದ್ದು, ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ದವಾಗಿದೆ ಎಂದು ಇದೇ ವೇಳೆ ಪುನರ್​ ಉಚ್ಚರಿಸಿದ್ದಾರೆ.

ಎಸ್​ಸಿಒದಲ್ಲಿ ಭಾಗವಹಿಸಿರುವ ದೇಶದಲ್ಲಿ ಕೇವಲ ಆರರಷ್ಟು ಜನ ಭಾರತದ ಪ್ರವಾಸೋದ್ಯಮಕ್ಕೆ ಆಗಮಿಸುತ್ತಿದ್ದು, ಇದನ್ನು ದ್ವಿಗುಣಗೊಳಿಸಲು ಪ್ರಯತ್ನಿಸಲಾಗುವುದು. ಎರಡು ದೇಶಗಳ ನಡುವೆ ಹಂಚಿ ಹೋಗಿರುವ ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸಿ ಹಾಗೂ ಶೃಂಗಾ ಸಭೆಯಲ್ಲಿ ಆಹಾರ ಮೇಳ ಹಾಗೂ ಬುದ್ದಿಸ್ಟ್​ ಹಬ್ಬವನ್ನು ಭಾರತದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಅಫ್ಘಾನಿಸ್ಥಾನದಲ್ಲಿ ಭಯೋತ್ಪಾದನೆ ಬಗ್ಗೆ ಅಲ್ಲಿನ ಅಧ್ಯಕ್ಷರು ಅಶ್ರಫ್​ ಘಾನಿ ಮಹತ್ವದ ನಿರ್ಧಾರ ಕೈಗೊಂಡಿದ್ದು ಶಾಂತಿ ಸ್ಥಾಪನೆಗೆ ಮುಂದಾಗಿರುವುದು ಶ್ಲಾಘನೀಯ ಎಂದು ಪ್ರಶಂಸಿದರು.
Loading...

ಶಾಂಘೈ ಸಹಕಾರ ಸಂಘಟನೆಯಲ್ಲಿ ಎಂಟು ರಾಷ್ಟ್ರಗಳು  ಭಾಗಿಯಾಗಿದೆ. ಈ ದೇಶಗಳು ಜಗತ್ತಿನ ಶೇ 42ರಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುತ್ತಿದ್ದು, ಪ್ರಪಂಚದ ಒಟ್ಟಾರೆ ಜಿಡಿಪಿ ಶೇ 20ರಷ್ಟಿದೆ.

ಚೀನಾದಲ್ಲಿ ನಡೆಯುತ್ತಿರುವ ಶೃಂಗ ಸಭೆಯಲ್ಲಿ ಚೀನಾ ಅಧ್ಯಕ್ಷ ಜಿಂಗ್​ಪಿಂಗ್​ , ರಷ್ಯಾ ಅಧ್ಯಕ್ಷ ವಾಡ್ಲಿಮಿರ್​ ಪುಟಿನ್​, ಇರಾನ್​ ಅಧ್ಯಕ್ಷ ಹಸನ್​ ರೋಹನಿ ಮತ್ತು ಪಾಕಿಸ್ತಾನದ ಅಧ್ಯಕ್ಷ ಮಮ್ನೂನ್​ ಹುಸೈನ್​ ಭಾಗಿಯಾಗಿದ್ದಾರೆ.

2001ರಲ್ಲಿ ರಷ್ಯಾ, ಚೀನಾ, ಗಿರ್ಜಿಗ್​ ರಿಪಬ್ಲಿಕ್​, ಕಜಗೀಸ್ಥಾನ, ತೆಜಕಿಸ್ಥಾನ, ಉಸ್​ಬೇಕಿಸ್ಥಾನ ಸೇರಿ 2001ರಲ್ಲಿ ಶಾಂಘೈನಲ್ಲಿ ಎಸ್​ಸಿಒ ಶೃಂಗ ಸಭೆ ಸ್ಥಾಪಿಸಿದವು. ಈ ಶೃಂಗಸಭೆಗೆ ಭಾರತ ಮತ್ತು ಪಾಕಿಸ್ತಾನ ಕಳೆದ ವರ್ಷ ಸೇರ್ಪಡನೆಗೊಂಡವು
First published:June 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...