• Home
  • »
  • News
  • »
  • national-international
  • »
  • Modi In Himachal: ನಾಲ್ಕನೇ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿಯಿಂದ ಹಸಿರು ನಿಶಾನೆ!

Modi In Himachal: ನಾಲ್ಕನೇ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿಯಿಂದ ಹಸಿರು ನಿಶಾನೆ!

ದೇಶದ ನಾಲ್ಕನೇ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ

ದೇಶದ ನಾಲ್ಕನೇ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ

ಪ್ರಧಾನಿ ನರೇಂದ್ರ ಮೋದಿ ಅವರು ಉನಾದಲ್ಲಿ ಸುಮಾರು 7,981 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ದೇಶದ ನಾಲ್ಕನೇ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ನೀಡುವ ಜೊತೆಗೆ ಉನಾದ ಹರೋಲಿಯಲ್ಲಿ ನಿರ್ಮಿಸಲಿರುವ ಬಲ್ಕ್ ಡ್ರಗ್ ಪಾರ್ಕ್‌ನ ಶಂಕುಸ್ಥಾಪನೆ ಮತ್ತು ಉನಾ-ಹಮೀರ್‌ಪುರ ರೈಲು ಮಾರ್ಗದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಮುಂದೆ ಓದಿ ...
  • Share this:

ಶಿಮ್ಲಾ(ಅ.13): ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಹಿಮಾಚಲ ಪ್ರದೇಶಕ್ಕೆ (Himachal Pradesh) ಭೇಟಿ ನೀಡಲಿದ್ದಾರೆ. ಅವರು ಉನಾ ಮತ್ತು ಚಂಬಾದಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಿದ್ದಾರೆ. ಬಳಿಕ ಸ್ಥಳಗಳಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಲಿದ್ದಾರೆ. ಇನ್ನು 10 ದಿನಗಳಲ್ಲಿ ಪ್ರಧಾನಿ ಮೋದಿ ಎರಡನೇ ಬಾರಿ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ ಎಂಬುವುದು ಉಲ್ಲೇಖನೀಯ. ಮುಂಬರುವ ಡಿಸೆಂಬರ್‌ನಲ್ಲಿ ಈ ಗುಡ್ಡಗಾಡು ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಉನಾದಲ್ಲಿ ಬಲ್ಕ್ ಡ್ರಗ್ ಪಾರ್ಕ್‌ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅವರು ಉನಾದಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ (ಐಐಐಟಿ) ಯನ್ನು ಉದ್ಘಾಟಿಸಲಿದ್ದಾರೆ. 2017ರಲ್ಲಿ ಅದರ ಶಿಇಲಾನ್ಯಾಸ ನೆರವೇರಿಸಿದ್ದಾರೆ. ಇದೇ ವೇಳೆ ಚಂಬುವಿನಲ್ಲಿ ಹಂತ III – 48 MW ಮತ್ತು ದೆಯೋತಲ್ ಚಂಜು – 30 MW ವಿದ್ಯುತ್ ಯೋಜನೆಗಳ ಶಂಕುಸ್ಥಾಪನೆಯನ್ನೂ ನೆರವೇರಿಸಲಿದ್ದಾರೆ.


ಪ್ರಧಾನಿ ನರೇಂದ್ರ ಮೋದಿ ಅವರು ಉನಾದಲ್ಲಿ ಸುಮಾರು 7981 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ದೇಶದ ನಾಲ್ಕನೇ ವಂದೇ ಭಾರತ್ ರೈಲಿಗೆ hಸಿರು ನಿಶಾನೆ ತೋರುವ ಜೊತೆಗೆ ಉನಾದ ಹರೋಲಿಯಲ್ಲಿ ನಿರ್ಮಿಸಲಿರುವ ಬಲ್ಕ್ ಡ್ರಗ್ ಪಾರ್ಕ್‌ನ ಶಂಕುಸ್ಥಾಪನೆ ಮತ್ತು ಉನಾ-ಹಮೀರ್‌ಪುರ ರೈಲು ಮಾರ್ಗದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.


ಅಭಿವೃದ್ಧಿ ಯೋಜನೆಗಳ ಉಡುಗೊರೆ


ಬುಧವಾರ ಹೊರತುಪಡಿಸಿ ವಾರದಲ್ಲಿ 6 ದಿನ ದೆಹಲಿಯಿಂದ ಉನಾಗೆ ವಂದೇ ಭಾರತ್ ಓಡಲಿದೆ ಎಂಬುವುದು ಉಲ್ಲೇಖನೀಯ. ಉನಾ ಮಾತ್ರವಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ಚಂಬಾಗೆ ಹಲವು ಅಭಿವೃದ್ಧಿ ಯೋಜನೆಗಳನ್ನು ಉಡುಗೊರೆಯಾಗಿ ನೀಡಲಿದ್ದಾರೆ. ಇದರಲ್ಲಿ 2 ಜಲವಿದ್ಯುತ್ ಯೋಜನೆಗಳ ಉದ್ಘಾಟನೆಯೂ ಸೇರಿದೆ. ಇದಲ್ಲದೇ ಹಿಮಾಚಲ ಪ್ರದೇಶದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂರನೇ ಹಂತಕ್ಕೂ ಚಾಲನೆ ನೀಡಲಿದ್ದಾರೆ.


ಬಲ್ಕ್ ಡ್ರಗ್ಸ್ ಫಾರ್ಮಾ ಜೊತೆಗೆ ಜಲವಿದ್ಯುತ್ ಯೋಜನೆಗಳ ಶಂಕುಸ್ಥಾಪನೆ


ಇದಲ್ಲದೇ ಚಂಬಾದ ಐತಿಹಾಸಿಕ ಚೌಗನ್ ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇಲ್ಲಿ ಬಲ್ಕ್ ಡ್ರಗ್ಸ್ ಫಾರ್ಮಾ ಜೊತೆಗೆ ಜಲವಿದ್ಯುತ್ ಯೋಜನೆಗಳ ಶಂಕುಸ್ಥಾಪನೆಯನ್ನೂ ಪ್ರಧಾನಿ ನೆರವೇರಿಸಲಿದ್ದಾರೆ. ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಪ್ರಧಾನಿಯವರ ಈ ಭೇಟಿ ಬಹಳ ಮಹತ್ವದ್ದಾಗಿದೆ.


ಬಿಜೆಪಿ ಪರ ಅಲೆ ಮೂಡಿಸಲು ಯತ್ನ


ಚಂಬಾದಲ್ಲಿ ಭಾರಿ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡುವ ಮೂಲಕ ಬಿಜೆಪಿ ಪರ ಅಲೆ ಮೂಡಿಸಲು ಯತ್ನಿಸಲಿದ್ದಾರೆ. ಚಂಬಾದ 5 ವಿಧಾನಸಭಾ ಸ್ಥಾನಗಳ ಪೈಕಿ 4 ಮಾತ್ರ ಬಿಜೆಪಿ ವಶವಾಗಿದೆ. ಕಾಂಗ್ರೆಸ್ ಗೆದ್ದಿದ್ದ ಏಕೈಕ ಕ್ಷೇತ್ರ ಡಾಲ್ ಹೌಸಿ. ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆ 11:45ರ ಸುಮಾರಿಗೆ ಚಂಬಾ ತಲುಪಲಿದ್ದಾರೆ. ಇಲ್ಲಿ ಅವರ ರ್ಯಾಲಿಯಲ್ಲಿ ಸುಮಾರು 75000 ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

Published by:Precilla Olivia Dias
First published: