UP Polls: ಉತ್ತರ ಪ್ರದೇಶದಲ್ಲಿ ಮೋದಿ ಮೊದಲ ಪ್ರಚಾರ; ಅಖಿಲೇಶ್​ ಯಾದವ್​ ವಿರುದ್ಧ ಹರಿಹಾಯ್ದ ಪ್ರಧಾನಿ

ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರತಿಪಕ್ಷ ಸಮಾಜವಾದಿ ಪಕ್ಷ ಮತದಾರರನ್ನು ಪ್ರೇರೇಪಿಸುತ್ತಿದೆ

ಪ್ರಧಾನಿ ಮೋದಿ ಸಭೆ

ಪ್ರಧಾನಿ ಮೋದಿ ಸಭೆ

 • Share this:
  ಲಕ್ನೋ (ಜ. 31):  ಉತ್ತರ ಪ್ರದೇಶ ಚುನಾವಣೆ (UP Election) ಘೋಷಣೆಯಾದ ಬಳಿಕ ಮೊದಲ ಬಾರಿಗೆ ರಾಜ್ಯದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ವರ್ಚುಯಲ್​ ಚುನಾವಣಾ ಸಮಾವೇಶ ನಡೆಸಿದ್ದಾರೆ. ಈ ವೇಳೆ ಸಮಾಜವಾದಿ ಪಕ್ಷದ  ವಿರುದ್ಧ ಹರಿಹಾಯ್ದಿದ್ದು, ಯೋಗಿ ಆದಿತ್ಯನಾಥ್​ ಸರ್ಕಾರದ ಸಾಧನೆಗಳನ್ನು ಶ್ಲಾಘಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರತಿಪಕ್ಷ ಸಮಾಜವಾದಿ ಪಕ್ಷ ಮತದಾರರನ್ನು ಪ್ರೇರೇಪಿಸುತ್ತಿದೆ. ಐದು ವರ್ಷಗಳ ಹಿಂದೆ, ಗಲಭೆಕೋರರು ಯುಪಿಯಲ್ಲಿ ಆಡಳಿತ ನಡೆಸುತ್ತಿದ್ದರು. ಅವರ ಮಾತುಗಳನ್ನು ಸರ್ಕಾರದ ಆದೇಶದಂತೆ ಪರಿಗಣಿಸಲಾಗಿದೆ. ರಾಜ್ಯದಲ್ಲಿ ಗಲಭೆ ಹೊತ್ತಿ ಉರಿಯುತ್ತಿದ್ದಾಗ ಅಂದಿನ ಸರ್ಕಾರ ಸಂಭ್ರಮಿಸುತ್ತಿದ್ದುದನ್ನು ಪಶ್ಚಿಮ ಉತ್ತರ ಪ್ರದೇಶದ ಜನರು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

  ಯೋಗಿ ಆದಿತ್ಯನಾಥ್​ ಸರ್ಕಾರಕ್ಕೆ ಮೆಚ್ಚುಗೆ
  ಇದು ಯೋಗಿ ಆದಿತ್ಯನಾಥ್ ಸರ್ಕಾರದ ಅಭಿವೃದ್ಧಿ ನೀತಿಗಳಿಂದ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಬಡವರಿಗೆ ಮನೆಗಳು, ಹಿಂದುಳಿದ ವರ್ಗಗಳ ನೀತಿಗಳು, ವೈದ್ಯಕೀಯ ಕಾಲೇಜುಗಳು, ಎಕ್ಸ್‌ಪ್ರೆಸ್‌ವೇಗಳ ಮೂಲಕ ಹೆಚ್ಚಿನ ಸಂಪರ್ಕ ಕಲ್ಪಿಸಲಾಗಿದೆ ಎಂದು ಯೋಗಿ ಆದಿತ್ಯನಾಥ್​ ಸರ್ಕಾರವನ್ನು ಶ್ಲಾಘಿಸಿದರು.

  ಅಖಿಲೇಶ್​ ಕನಸಿಗೆ ವ್ಯಂಗ್ಯ
  ಇನ್ನು ಇದೇ ವೇಳೆ ಈ ಹಿಂದೆ ಸಮಾಜವಾದಿ ಪಕ್ಷ ನಾಯಕ ಅಖಿಲೇಶ್ ಯಾದವ್​, ಭಗವಾನ್ ಶ್ರೀಕೃಷ್ಣ ಪ್ರತಿದಿನ ರಾತ್ರಿ ತನ್ನ ಕನಸಿನಲ್ಲಿ ಬಂದು ರಾಜ್ಯದಲ್ಲಿ ಈ ಬಾರಿ ಸರ್ಕಾರ ರಚಿಸುವುದಾಗಿ ಆಶೀರ್ವಾದ ನೀಡಿದ್ದಾರೆ ಎಂಬ ಹೇಳಿಕೆಗೆ ವ್ಯಂಗ್ಯವಾಡಿದ ಪ್ರಧಾನಿಗಳು , ಈ ದಿನಗಳಲ್ಲಿ ಜನರು ಬಹಳಷ್ಟು ಕನಸು ಕಾಣುತ್ತಾರೆ. ನಿದ್ರಿಸುತ್ತಿರುವವರು ಮಾತ್ರ ಕನಸು ಕಾಣುತ್ತಾರೆ. ಆದರೆ ಯೋಗಿ ಆದಿತ್ಯನಾಥ್ ಎಚ್ಚರವಾಗಿದ್ದು, ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡಲು ಬದ್ಧರಾಗಿದ್ದಾರೆ ಎಂದು ಚಾಟಿ ಬೀಸಿದರು

  ಇದನ್ನು ಓದಿ: ಕೆಲಸದಿಂದ ಕಿತ್ತು ಹಾಕಿದ ಕೋಪಕ್ಕೆ ಡಾಕ್ಟರ್​ ಮಗನನ್ನು ಅಪಹರಿಸಿ ಹತ್ಯೆ

  ಪ್ರತಿಪಕ್ಷಗಳು ಸೇಡು ತೀರಿಸಿಕೊಳ್ಳಲು ಮುಂದಾಗಿವೆ

  ಇನ್ನು ಇದೇ ವೇಳೆ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದ ನಗರ ಪ್ರದೇಶಗಳಲ್ಲಿನ ಜ್ವಲಂತ ವಸತಿ ಸಮಸ್ಯೆಯ ಬಗ್ಗೆಯೂ ಪ್ರಸ್ತಾಪಿಸಿದ ಪ್ರಧಾನಿ, ಭ್ರಷ್ಟಚಾರವು ಈ ಪ್ರದೇಶದಲ್ಲಿ ಫ್ಲ್ಯಾಟ್‌ಗಳನ್ನು ಖರೀದಿಸಿದ ಸಾವಿರಾರು ಜನರ ಸಂಕಷ್ಟಕ್ಕೆ ಕಾರಣವಾಯಿತು. ಕೈಗಾರಿಕಾ ಪ್ರದೇಶದಲ್ಲಿನ ಅನೇಕ ವಸತಿ ಯೋಜನೆಗಳು ಬಿಲ್ಡರ್‌ಗಳ ಭ್ರಷ್ಟಾಚಾರದ ಆರೋಪದ ಮೇಲೆ ಕೆಲವು ಸ್ಥಗಿತಗೊಂಡಿವೆ, ಇದು 50,000 ಕ್ಕೂ ಹೆಚ್ಚು ಮನೆ ಖರೀದಿದಾರರ ಭವಿಷ್ಯವನ್ನು ಅಪಾಯಕ್ಕೆ ದಾರಿ ಮಾಡಿಕೊಟ್ಟಿದೆ
  ಬಿಜೆಪಿ ಉತ್ತರ ಪ್ರದೇಶದಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತಿದ್ದೇವೆ.  ಪ್ರತಿಪಕ್ಷಗಳು ಸೇಡು ತೀರಿಸಿಕೊಳ್ಳಲು ಬಯಸುತ್ತವೆ. ಇಂಥವರಿಗೆ ಈ ಜನ ಟಿಕೆಟ್ ಕೊಟ್ಟಿದ್ದಾರೆ. ಜನರು ಈ ಬಗ್ಗೆ ನಿರ್ಧರಿಸಬೇಕು ಎಂದರು.

  ಇದನ್ನು ಓದಿ: ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ; ಇಲ್ಲಿದೆ ಪ್ರಮುಖಾಂಶಗಳು

  ಗರೀಬ್​ ಕಲ್ಯಾಣ್​​​ ಯೋಜನೆ ಅನುಷ್ಠಾನ

  ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಭಾರತವು ಪ್ರತಿಯೊಂದು ಬಡ ಕುಟುಂಬವನ್ನು ನೋಡಿಕೊಳ್ಳುತ್ತಿದೆ. 15 ಕೋಟಿ ನಾಗರಿಕರು ಉಚಿತ ಪಡಿತರ ಪಡೆಯುತ್ತಿದ್ದಾರೆ. ಇದೇ ಉತ್ತರಪ್ರದೇಶದಲ್ಲಿ 5 ವರ್ಷಗಳ ಹಿಂದೆ ಪಡಿತರ ಅಂಗಡಿಗಳಲ್ಲಿ ಬಡವರಿಗೆ ನೀಡಬೇಕಿದ್ದ ಪಡಿತರ ಕಳ್ಳತನವಾಗಿತ್ತು. ಇಂದು ಪ್ರತಿ ತುತ್ತು ಬಡವರ ಮನೆ ತಲುಪುತ್ತಿದೆ. ಇದು ಕಳೆದ ಐದು ವರ್ಷಗಳಲ್ಲಿ ಆಗಿರುವ ಬದಲಾವಣೆ
  ನಾವೀಗ ಸಣ್ಣ ರೈತರ ಬಗ್ಗೆ ಚಿಂತಿಸಬೇಕಾಗಿದೆ. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ಸಣ್ಣ ರೈತರು ಗ್ರಾಮೀಣ ದೃಶ್ಯವನ್ನು ಬದಲಾಯಿಸುತ್ತಾರೆ.

  ಹೆಣ್ಣು ಮಕ್ಕಳಿಗೆ ಸುರಕ್ಷೆ

  2017 ರ ಮೊದಲು ಬುಲಂದ್‌ಶಹರ್ ಮತ್ತು ಮೀರತ್‌ನಂತಹ ಜಿಲ್ಲೆಗಳಲ್ಲಿ ಹೆಣ್ಣುಮಕ್ಕಳು ತಮ್ಮ ಮನೆಯಿಂದ ಹೊರಬರುವುದು ಒಂದು ಸವಾಲಾಗಿತ್ತು. ಈಗ, ಹುಡುಗಿಯರು ಮತ್ತು ವ್ಯಾಪಾರಿಗಳಲ್ಲಿ ಸುರಕ್ಷತೆಯ ಪ್ರಜ್ಞೆ ಮತ್ತು ರೈತರು ಮತ್ತು ಯುವಕರಿಗೆ ಅವಕಾಶಗಳನ್ನು ಒದಗಿಸಿರುವುದು ಡಬಲ್ ಇಂಜಿನ್ ಬಿಜೆಪಿ ಸರ್ಕಾರದ ಸಾಧನೆ ಎಂದರು
  Published by:Seema R
  First published: