ಕೊರೋನಾ ವೈರಸ್​​​: ಪರಿಸ್ಥಿತಿ ಕುರಿತಂತೆ ಸೋನಿಯಾ, ಸಿಂಗ್, ಎಚ್​​ಡಿಡಿ ಮತ್ತಿತರೊಂದಿಗೆ ಮೋದಿ ಮಾತುಕತೆ

ಕೊವಿಡ್-19 ರೋಗದ ಸೋಂಕು ಪಸರುವಿಕೆ ಮೂರನೇ ಹಂತಕ್ಕೆ ಅಡಿ ಇಡುವ ಸೂಚನೆ ಸಿಗುತ್ತಿದ್ದಂತೆಯೇ ಮಾರ್ಚ್ 24ರಂದು ಪ್ರಧಾನಿ ನರೇಂದ್ರ ಮೋದಿ ಅವರು 21 ದಿನ ದೇಶವ್ಯಾಪಿ ಲಾಕ್ ಡೌನ್ ಘೋಷಣೆ ಮಾಡಿದರು. ಬ್ರಿಟನ್, ಪೊಲೆಂಡ್, ಕೊಲಂಬಿಯಾ ಸೇರಿದಂತೆ ಹಲವು ದೇಶಗಳೂ ಕೂಡ ಲಾಕ್ ಡೌನ್ ಕ್ರಮ ಜಾರಿಗೆ ತಂದಿವೆ.

ಪ್ರಧಾನಿ ನರೇಂದ್ರ ಮೋದಿ.

ಪ್ರಧಾನಿ ನರೇಂದ್ರ ಮೋದಿ.

 • Share this:
  ನವದೆಹಲಿ(ಏ.05): ದೇಶಾದ್ಯಂತ ತೀವ್ರಗತಿಯಲ್ಲಿ ಹರಡುತ್ತಿರುವ ಕೋವಿಡ್​​-19 ಸೋಂಕಿನಿಂದ ಎದುರಾಗುತ್ತಿರುವ ಪರಿಸ್ಥಿತಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಹಲವು ರಾಜ್ಯಕೀಯ ಗಣ್ಯರೊಂದಿಗೆ ಚರ್ಚಿಸಿದ್ದಾರೆ. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮನ್ ಮೋಹನ್ ಸಿಂಗ್, ಮುಲಾಯಂ ಸಿಂಗ್ ಯಾದವ್, ಅಖಿಲೇಶ್ ಯಾದವ್, ಮಮತಾ ಬ್ಯಾನರ್ಜಿ, ಡಿಎಂಕೆ ನಾಯಕ ಎಂ. ಕೆ. ಸ್ಟಾಲಿನ್, ಮತ್ತಿತರ ನಾಯಕರೊಂದಿಗೆ ಇಂದು ಪ್ರಧಾನಿ ಮಾತುಕತೆ ನಡೆಸಿದ್ದಾರೆ.

  ಇನ್ನು, ಮಾಜಿ ಪ್ರಧಾನಿ ದೇವೇಗೌಡರೊಂದಿಗೂ ಪ್ರಧಾನಿ ನರೇಂದ್ರ ಮೋದಿ ಫೋನಿನ ಮೂಲಕ ಕೊರೋನಾ ವೈರಸ್​ ವಿಚಾರವಾಗಿ ಚರ್ಚಿಸಿದ್ದಾರೆ. ಜತೆಗೆ ಕೇಂದ್ರ ವಿರೋಧ ಪಕ್ಷಗಳ ಅಗ್ರಗಣ್ಯ ನಾಯಕರಿಂದ ಹಲವು ಸಲಹೆ ಮತ್ತು ಸೂಚನೆಗಳನ್ನು ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

  ಭಾರತದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಎಂದಿನಂತೆಯೇ ಮುಂದುವರೆದಿದೆ. ಇದುವರೆಗೂ ದೇಶದಲ್ಲಿ ಸೋಂಕಿತರ ಸಂಖ್ಯೆ 3,374ಕ್ಕೆ ಏರಿಕೆಯಾಗಿದೆ. ಈ ಪೈಕಿ 267 ಮಂದಿ ಗುಣಮುಖರಾಗಿದ್ದಾರೆ. ಜತೆಗೆ 79 ಮಂದಿ ಈ ರೋಗಕ್ಕೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ.

  ಪ್ರಧಾನಿ ನರೇಂದ್ರ ಮೋದಿ ಘೋಷಿಸಿದಂತೆ ಏಪ್ರಿಲ್ 14ರವರೆಗೆ ದೇಶವ್ಯಾಪಿ ಲಾಕ್​ಡೌನ್ ಇದೆ. ಇದು ಮುಗಿಯಲು ಇನ್ನು 10 ದಿನ ಇದೆ. ಲಾಕ್​ಡೌನ್ ತೆರವುಗೊಳಿಸಲು ಕೇಂದ್ರ ಸರ್ಕಾರ ವಿವಿಧ ಮಾರ್ಗೋಪಾಯಗಳನ್ನ ಶೋಧಿಸುತ್ತಿದೆ. ಈ ಹೊತ್ತಿನಲ್ಲಿ ಅಮೆರಿಕದ ಸಂಸ್ಥೆಯೊಂದು ನಡೆಸಿದ ಅಧ್ಯಯನದ ಪ್ರಕಾರ ಭಾರತದಲ್ಲಿ ಇನ್ನೂ ಹಲವು ದಿನಗಳ ಕಾಲ ನಿರ್ಬಂಧಗಳನ್ನು ಮುಂದುವರಿಸಬೇಕಾಗಬಹುದು. ಜೂನ್ 4ನೇ ವಾರದಿಂದ ಸೆಪ್ಟೆಂಬರ್ ಮೊದಲ ವಾರದವರೆಗಿನ ಅವಧಿಯಲ್ಲಿ ಲಾಕ್ ಡೌನ್ ತೆರವು ಕಾರ್ಯ ಪ್ರಾರಂಭವಾಗಬಹುದು ಎಂದು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (ಬಿಎಸ್​ಜಿ) ಅಭಿಪ್ರಾಯಪಟ್ಟಿದೆ.

  ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರೆದ ಕೊರೋನಾ ಆರ್ಭಟ: ಇಂದು 7 ಹೊಸ ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 151ಕ್ಕೇರಿಕೆ

  ಲಾಕ್ ಡೌನ್ ಯಾಕೆ ಮುಂದುವರಿಸಬೇಕಾಗಬಹುದು ಎಂಬುದಕ್ಕೆ ಈ ಸಂಸ್ಥೆ ಕಾರಣಗಳನ್ನ ಪತ್ತೆ ಮಾಡಿದೆ. ಭಾರತದ ಆರೋಗ್ಯ ಕ್ಷೇತ್ರದ ಪರಿಸ್ಥಿತಿ ಮತ್ತು ಸರ್ಕಾರದ ನೀತಿ ಎಷ್ಟು ಸಮರ್ಪಕವಾಗಿ ಅನುಷ್ಠಾನವಾಗಬಹುದು ಎಂಬುದನ್ನು ಪರಿಗಣಿಸಿ ಒಂದು ಅಂದಾಜಿಗೆ ಬಂದಿದೆ. ಈ ಸಂಸ್ಥೆಯ ಪ್ರಕಾರ, ಜೂನ್ 3ನೇ ವಾರದಂದು ಅತಿ ಹೆಚ್ಚು ಕೊರೋನಾ ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ.

  ಕೊವಿಡ್-19 ರೋಗದ ಸೋಂಕು ಪಸರುವಿಕೆ ಮೂರನೇ ಹಂತಕ್ಕೆ ಅಡಿ ಇಡುವ ಸೂಚನೆ ಸಿಗುತ್ತಿದ್ದಂತೆಯೇ ಮಾರ್ಚ್ 24ರಂದು ಪ್ರಧಾನಿ ನರೇಂದ್ರ ಮೋದಿ ಅವರು 21 ದಿನ ದೇಶವ್ಯಾಪಿ ಲಾಕ್ ಡೌನ್ ಘೋಷಣೆ ಮಾಡಿದರು. ಬ್ರಿಟನ್, ಪೊಲೆಂಡ್, ಕೊಲಂಬಿಯಾ ಸೇರಿದಂತೆ ಹಲವು ದೇಶಗಳೂ ಕೂಡ ಲಾಕ್ ಡೌನ್ ಕ್ರಮ ಜಾರಿಗೆ ತಂದಿವೆ.
  First published: