News18 India World Cup 2019

ತಾವು ಕ್ಲರ್ಕ್​ ಇದ್ದಂತೆ ಎಂದು ಕರ್ನಾಟಕ ಸಿಎಂ ಹೇಳುತ್ತಾರೆ, ಮೈತ್ರಿಯಲ್ಲಿ ಕಾಂಗ್ರೆಸ್ ಒತ್ತಡ ಹೇರುತ್ತಿದೆ; ಪ್ರಧಾನಿ ಮೋದಿ

ಕಾಂಗ್ರೆಸ್​ನವರ ಪ್ರತಿಯೊಂದು ಭ್ರಷ್ಟಾಚಾರವನ್ನು ಮೋದಿ ಬಯಲಿಗೇಳುತ್ತಾರೆ. ಭ್ರಷ್ಟಾಚಾರ ಎಸಗಿದವರನ್ನು ಈ ಚೌಕಿದಾರ ಬಿಡುವುದಿಲ್ಲ. ಅವರಿಗೆ ಶಕ್ತಿಶಾಲಿ ಸರ್ಕಾರ ರಚಿಸುವ ಇಚ್ಛಾಶಕ್ತಿ ಇಲ್ಲ. ಹಗರಣ ನಡೆಸುವುದಷ್ಟೇ ಅವರಿಗೆ ಬೇಕಿರುವುದು. ಆದರೆ, ನಮಗೆ ಬೇಕಿರುವುದು ಶಕ್ತಿಯುತ ಸರ್ಕಾರ ಎಂದು ಪ್ರಧಾನಿ ಮೋದಿ ಹೇಳಿದರು.

Seema.R | news18
Updated:January 12, 2019, 2:46 PM IST
ತಾವು ಕ್ಲರ್ಕ್​ ಇದ್ದಂತೆ ಎಂದು ಕರ್ನಾಟಕ ಸಿಎಂ ಹೇಳುತ್ತಾರೆ, ಮೈತ್ರಿಯಲ್ಲಿ ಕಾಂಗ್ರೆಸ್ ಒತ್ತಡ ಹೇರುತ್ತಿದೆ; ಪ್ರಧಾನಿ ಮೋದಿ
ಬಿಜೆಪಿ ರಾಷ್ಟ್ರೀಯ ಸಮಿತಿ ಸಭೆ
Seema.R | news18
Updated: January 12, 2019, 2:46 PM IST
ನವದೆಹಲಿ(ಜ.12): ಎರಡು ದಿನಗಳ ನಡೆದ ಬಿಜೆಪಿ  ರಾಷ್ಟ್ರೀಯ ಮಂಡಳಿ ಸಭೆಯ ಸಮಾರೋಪ ಭಾಷಣ ಮಾಡಿದ ಪ್ರಧಾನಿ ಮೋದಿ, ಸರ್ಕಾರದ ಯೋಜನೆಗಳು, ರೈತ ಪರ ನಿಲುವು ಹಾಗೂ ಮೇಲ್ಜಾತಿ ಹಿಂದುಳಿದವರ ಮೀಸಲಾತಿ ಕುರಿತು ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. ಅಲ್ಲದೇ, ಪ್ರತಿ ಮಾತಿನಲ್ಲೂ ಕಾಂಗ್ರೆಸ್​ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್​ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲೇ ಮುಳುಗಿಹೋಗಿತ್ತು. ಆದರೆ, ನಾವು ಯಾರಿಗೂ ತೊಂದರೆ ಮಾಡಿಲ್ಲ. ಸಾಮಾನ್ಯ ವರ್ಗದ ಬಡವರಿಗೂ ಮೀಸಲಾತಿ ನೀಡುವ ಮೂಲಕ ಸಮಾನತೆ ತರಲು ಪ್ರಯತ್ನಿಸಿದ್ದೇವೆ. ಸರ್ಕಾರ ಯಾವುದೇ ಒಂದು ಕಠಿಣ ನಿರ್ಧಾರ ತೆಗೆದುಕೊಂಡಾಗ ಜನರು ಸಹಕರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ರಚನೆಯಾಗಿ ಕೆಲವು ತಿಂಗಳಷ್ಟೇ ಆಗಿವೆ. ಅಲ್ಲಿನ ಮುಖ್ಯಮಂತ್ರಿ ತಮ್ಮನ್ನು ಕ್ಲರ್ಕ್​ ಮಾಡಲಾಗಿದೆ ಎಂದು ಹೇಳಿದ್ದಾರೆ. ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲೂ ಇದೇ ರೀತಿಯ ಒತ್ತಡ ತಂತ್ರಗಳನ್ನು ಹೇರಲಾಗುತ್ತಿದೆ. ತಮ್ಮ ಹಿತಕ್ಕಾಗಿ ಮೈತ್ರಿ  ಮಾಡಿಕೊಳ್ಳುತ್ತಿದ್ದಾರೆ. ನಾವು ದೇಶದ ಹಿತಕ್ಕಾಗಿ ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ. ಎಲ್ಲರೂ ಒಬ್ಬನ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಮಹಾಘಟ್​ಬಂಧನ್ ವಿರುದ್ಧ ವಾಗ್ದಾಳಿ ನಡೆಸಿದರು.

ಮೇಲ್ಜಾತಿಯ ಹಿಂದುಳಿದ ಬಡವರಿಗೆ ಸರ್ಕಾರ ಶೇ.10 ಮೀಸಲಾತಿ ನೀಡಿದೆ. ಇದು ಸಮಾಜದಲ್ಲಿ ಸಮಾನತೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ದೇಶದ ಜನ ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಭಾರತದ ಹೆಸರು ಈಗ ಜಾಗತಿಕವಾಗಿ ಬೆಳಗುತ್ತಿದೆ. ದೇಶದಲ್ಲಿ ಕೌಶಲ್ಯದ ಕೊರತೆ ಇಲ್ಲ. ಯುವಕರನ್ನು ಬಳಸಿಕೊಂಡು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು ಎಂದು ಪ್ರಧಾನಿ ಹೇಳಿದರು.

ಈ ದೇಶದ ಜನರ ನಂಬಿಕೆ ನಮ್ಮ ಮೇಲಿದೆ. ಬೇಟಿ ಬಚಾವೋ, ಬೇಟಿ ಪಡಾವೋ ಅಂತಹ ಯೋಜನೆಯ ಬಗ್ಗೆಯೇ ವ್ಯಂಗ್ಯವಾಡುತ್ತಾರೆ. ರಾಜಕೀಯ ಲಾಭಕ್ಕಾಗಿ ಕೆಲವರು ಅಪಹಾಸ್ಯ ಮಾಡುತ್ತಾರೆ. ಆದರೆ, ಇದರ ಬಗ್ಗೆ ನನಗೆ ಹೆಮ್ಮೆಯಿದೆ. ನಮ್ಮದು ರೈತಪರ ಸರ್ಕಾರ, ಅನ್ನದಾತ ನೆಮ್ಮದಿಯಾಗಿದ್ದರೆ ದೇಶ ನೆಮ್ಮದಿಯಾಗಿರುತ್ತದೆ. ರೈತರ ಸಶಕ್ತಿಕರಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಅದಕ್ಕಾಗಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
Loading...

ಕಳೆದ ನಾಲ್ಕೂವರೆ ವರ್ಷಗಳಲ್ಲಿ ಜಿಡ್ಡುಗಟ್ಟಿದ ವ್ಯವಸ್ಥೆಗೆ ವೇಗ ನೀಡಿದ್ದೇವೆ. ನಮ್ಮ ಸರ್ಕಾರದಲ್ಲಿ ಅತಿ ಹೆಚ್ಚು ರಸ್ತೆಗಳನ್ನು ನಿರ್ಮಿಸಿದ್ದೇವೆ. ಮೊದಲೂ ಪಾಸ್​ಪೋರ್ಟ್​ ಸಿಗುತ್ತಿತ್ತು. ಈಗಲೂ ಸಿಗುತ್ತಿದೆ. ಆದರೆ, ಸಿಗುವ ಅವಧಿಯಲ್ಲಿ ಭಾರಿ ಬದಲಾವಣೆಯಾಗಿದೆ. ಮೂಲೆ ಮೂಲೆಯ ಹಳ್ಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ. ಎಲ್ಲ ಬಡ ಜನರಿಗೂ ಗ್ಯಾಸ್ ಸಿಲಿಂಡರ್ ಸಿಗುವಂತೆ ಮಾಡಿದ್ದೇವೆ. ಈ ಮೊದಲು ಗ್ಯಾಸ್ ಸಬ್ಸಿಡಿ ಮಧ್ಯವರ್ತಿಗಳ ಪಾಲಾಗುತ್ತಿತ್ತು. ಇದನ್ನು ಬದಲಿಸಲು ಬಿಜೆಪಿ ಸರ್ಕಾರವೇ ಬರಬೇಕಾಯಿತು. ಎಲ್ಲ ಯೋಜನೆಗಳನ್ನು ಬಡವರ ಶ್ರೇಯೋಭಿವೃದ್ಧಿಗಾಗಿಯೇ ಜಾರಿ ಮಾಡಿರುವಂತಹದ್ದು. ಈ ಕೆಲಸ ಮೊದಲೇ ಏಕೆ ಆಗಲಿಲ್ಲ. ಅವರಿಗೆ ಅಧಿಕಾರ ಬೇಕು, ನಮಗೆ ದೇಶದ ಅಭಿವೃದ್ಧಿ ಬೇಕು ಎಂದು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್​ ಸರ್ಕಾರ ಬೇಕಾಬಿಟ್ಟಿಯಾಗಿ ಲೋನ್​ಗಳನ್ನು ನೀಡಿ, ಬ್ಯಾಂಕ್​ ಹಣ ಲೂಟಿ ಮಾಡುತ್ತಿತ್ತು. ಜನರ ಹಣ ಖಾಸಗಿಯವರಿಗೆ ಸೇರುತ್ತಿತ್ತು. ಆದರೀಗ ಅದಕ್ಕೆ ಕಡಿವಾಣ ಬಿದ್ದಿದೆ. 2008ರಿಂದ 2014ರವರೆಗೆ ಕಾಂಗ್ರೆಸ್​ ಸರ್ಕಾರ 52 ಲಕ್ಷ ಕೋಟಿ ಸಾಲ ನೀಡಿದೆ. ಆರು ವರ್ಷಗಳಲ್ಲಿ ಯಾಕೆ ಇಷ್ಟೊಂದು ಸಾಲ ಕೊಟ್ಟರು. ಇದನ್ನು ನಾವು ನಾಲ್ಕು ವರ್ಷದಲ್ಲಿ ವಸೂಲು ಮಾಡಿದ್ದೇವೆ. ಒಂದು ಸಾಮಾನ್ಯ ವಿಧದ ಲೋನ್ ಆದರೆ, ಮತ್ತೊಂದು ಕಾಂಗ್ರೆಸ್​ ಲೋನ್​ ಇತ್ತು. ಕಾಂಗ್ರೆಸ್​ ಲೋನ್ ಅಂದರೆ ಭ್ರಷ್ಟಾಚಾರ. ಅಂದು ಸಾವಿರಾರು ಕೋಟಿ ಸಾಲ ಮಾಡಿದವರು ದೇಶ ಬಿಟ್ಟು ಪರಾರಿಯಾದರು. ಅವರಲ್ಲಿ ಒಬ್ಬ ವಂಚಕನನ್ನು ಹಿಡಿದು ಕರೆತಂದಿದ್ದೇವೆ. ಸಾಲ ವಸೂಲಾತಿ ಪ್ರಕ್ರಿಯೆಯಲ್ಲಿ ನಾವು ಸುಮ್ಮನಾಗಿಲ್ಲ. ಎಲ್ಲವನ್ನೂ ವಸೂಲಿ ಮಾಡುತ್ತೇವೆ. ಕಾಂಗ್ರೆಸ್​ನವರ ಭ್ರಷ್ಟಾಚಾರ ಬಯಲಾಗುತ್ತಿದೆ. ಸುಳ್ಳು ಹೇಳೋದೇ ಅವರ ಕೆಲಸ ಎಂದು ವಾಗ್ಪ್ರಾಹಾರ ನಡೆಸಿದರು.

ಕಾಂಗ್ರೆಸ್​ನವರ ಪ್ರತಿಯೊಂದು ಭ್ರಷ್ಟಾಚಾರವನ್ನು ಮೋದಿ ಬಯಲಿಗೇಳುತ್ತಾರೆ. ಭ್ರಷ್ಟಾಚಾರ ಎಸಗಿದವರನ್ನು ಈ ಚೌಕಿದಾರ ಬಿಡುವುದಿಲ್ಲ. ಅವರಿಗೆ ಶಕ್ತಿಶಾಲಿ ಸರ್ಕಾರ ರಚಿಸುವ ಇಚ್ಛಾಶಕ್ತಿ ಇಲ್ಲ. ಹಗರಣ ನಡೆಸುವುದಷ್ಟೇ ಅವರಿಗೆ ಬೇಕಿರುವುದು. ಆದರೆ, ನಮಗೆ ಬೇಕಿರುವುದು ಶಕ್ತಿಯುತ ಸರ್ಕಾರ ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನು ಓದಿ: ದುಬೈನಲ್ಲಿ ರಾಹುಲ್​​​: ನಿಮ್ಮ ಮನದ ಮಾತು ಆಲಿಸುವೆ; ಅನಿವಾಸಿ ಭಾರತೀಯರಿಗೆ ಕಾಂಗ್ರೆಸ್​​ ಅಧ್ಯಕ್ಷ ಭರವಸೆ!

ಈ ಮೊದಲು ಸಭೆಯನ್ನು ಉದ್ಘಾಟಿಸಿ ಮಾತನಾಡಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ,  "ಲೋಕಸಭಾ ಚುನಾವಣೆಯನ್ನು ತತ್ವಗಳ ನಡುವಿನ ಸಂಘರ್ಷ ದಂತೆ ಪ್ರಚಾರ ನಡೆಸಿ, ವಿಪಕ್ಷಗಳು ಮೈತ್ರಿ ಮಾಡಿಕೊಳ್ಳುವ ಮೂಲಕ ಮೋದಿಯನ್ನು ಸೋಲಿಸಲು ಮಹಾಮೈತ್ರಿ ಮಾಡಿಕೊಳ್ಳಲಾಗಿದೆ. ಬಿಜೆಪಿ ದೃಢ ಸರ್ಕಾರವನ್ನು ದೇಶಕ್ಕೆ ನೀಡಬೇಕು ಎಂದು ಬಯಸಿದೆ. ಆದರೆ ವಿಪಕ್ಷಗಳು ಅಸಹಾಯಕ ಸರ್ಕಾರವನ್ನು ಜನರಿಗೆ ನೀಡಲು ಒಟ್ಟುಗೂಡಿದೆ.  ಆದರೆ “ಮೋದಿಯನ್ನು ಸೋಲಿಸುವುದು ಅಸಾಧ್ಯ. 1987ರಿಂದ ಯಾವುದೇ ಒಂದು ಚುನಾವಣೆಯಲ್ಲಿ ಅವರು ಸೋತ ಇತಿಹಾಸವಿಲ್ಲ“ ಎಂದರು.

ಮೋದಿ ನೇತೃತ್ವದ ಸರ್ಕಾರ ತೆಗೆದುಕೊಂಡ ಪ್ರಮುಖ ನಿರ್ಧಾರಗಳನ್ನು ಪಟ್ಟಿ ಮಾಡಿ ಜನರಿಗೆ ಹೇಳುವ ಕೆಲಸವಾಗಬೇಕು. ಕಾರ್ಯಕರ್ತರು ಇದಕ್ಕಾಗಿ ಒಕ್ಕೂಡಬೇಕು ಎಂದು ಕರೆ ನೀಡಿದರು.

ರಾಜನಾಥ್​ ಸಿಂಗ್​, ಅರುಣ್​ ಜೇಟ್ಲಿ, ನಿತಿನ್​ ಗಡ್ಕರಿ, ಎಲ್​ ಕೆ ಅಡ್ವಾನಿ, ಮುರಳಿ ಮನೋಹರ್​ ಜೋಶಿ ಕೂಡ ಸಭೆಯಲ್ಲಿ ಭಾಗಿಯಾಗಿದ್ದರು.

First published:January 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...