ನವದೆಹಲಿ: ಚೀನಾದಲ್ಲಿ (China) ಕೊರೊನಾ (Corona) ರಣಕೇಕೆ ಹಾಕುತ್ತಿದೆ. ಈ ನಡುವೆ ಭಾರತದಲ್ಲಿ (India) ಹೈ ಅಲರ್ಟ್ ಘೋಷಿಸಲಾಗಿದೆ. ಈಗಾಗಲೇ ದೇಶದಲ್ಲಿ ಕೊರೊನಾ ರೂಪಾಂತರಿ ಓಮೈಕ್ರಾನ್ನ ಉಪತಳಿ ಬಿಎಫ್7 ಸೋಂಕಿನ ನಾಲ್ಕು ಪ್ರಕರಣಗಳು ಪತ್ತೆಯಾಗಿದ್ದು, ಈ ಬೆನ್ನೆಲ್ಲೇ ಪ್ರಧಾನಿ ನರೇಂದ್ರ ಮೋದಿ (Prim Minister Narendra Modi) ಅವರು ಇಂದು ಹಿರಿಯ ಅಧಿಕಾರಿಗಳು ಮತ್ತು ತಜ್ಞರೊಂದಿಗೆ ಸಭೆ ನಡೆಸಿದರು. ಸಭೆಗೂ ಮುನ್ನ ಅಧಿಕಾರಿಗಳಿಂದ ಭಾರತದಲ್ಲಿನ ಕೋವಿಡ್ (Covid19) ಪ್ರಕರಣ ಸಂಖ್ಯೆ, ಚೀನಾದಲ್ಲಿ ಕೊರೊನಾ ಹೆಚ್ಚಾಗುತ್ತಿರುವುದರಿಂದ ಭಾರತದಲ್ಲಿ ಆಗುತ್ತಿರುವ ಪರಿಣಾಮ ಕುರಿತಂತೆ ಅಧಿಕಾರಿಗಳಿಂದ ಮೋದಿ ವರದಿ ತರಿಸಿಕೊಂಡು ಪರಿಶೀಲನೆ ನಡೆಸಿದರು. ನಂತರ ಕೊರೊನಾ ಬಗ್ಗೆ ಆರೋಗ್ಯ ಸಚಿವಾಲಯದ ಅಧಿಕಾರಿಗಳಿಂದಲೂ ಮಾಹಿತಿ ಪಡೆದರು. ಬಳಿಕ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ ಅವರು ಸದ್ಯದ ಸ್ಥಿತಿಗತಿ ಬಗ್ಗೆ ವಿವರಿಸಿದರು.
#WATCH | PM Narendra Modi reviews the situation related to #COVID19 in the country at a high-level meeting pic.twitter.com/Ql1KvMSIFL
— ANI (@ANI) December 22, 2022
ಜನಸಂದಣಿ ಪ್ರದೇಶದಲ್ಲಿ ಮಾಸ್ಕ್ ಧರಿಸುವಂತೆ ಸೂಚನೆ
ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ ಅವರು, ಸಾರ್ವಜನಿಕರಲ್ಲಿ ಮತ್ತೆ ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಕೋವಿಡ್ ಮಾರ್ಗಸೂಚಿಗಳ ಜಾಗೃತಿ ಮೂಡಿಸಲು ಸೂಚಿಸಲಾಗಿದೆ. ಜನಸಂದಣಿ ಪ್ರದೇಶಗಳಲ್ಲಿ ಮಾಸ್ಕ್ ಧರಿಸಲು ಸೂಚನೆ ನೀಡಿದ್ದಾರೆ. ಈ ಹಿಂದೆ ಕೊರೊನಾ ಅಲೆಗಳಲ್ಲಿ ಭಾರತ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಂಡು ಅಪಾಯದಿಂದ ಪಾರಾಗಿದೆ. ಆದರೆ ಬೂಸ್ಟರ್ ಡೋಸ್ ಹೆಚ್ಚಿನ ಮಂದಿ ಪಡೆದಿಲ್ಲ. ಸಾರ್ವಜನಿಕರು ಹೆಚ್ಚಾಗಿ ಬೂಸ್ಟರ್ ಡೋಸ್ ಪಡೆಯಲು ಸೂಚಿಸಬೇಕು. ಜೊತೆಗೆ ಕೋವಿಡ್ ಟೆಸ್ಟ್ ಸಂಖ್ಯೆ ಹೆಚ್ಚಿಸಬೇಕು. ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕಡ್ಡಾಯವಾಗಿ ಕೊರೊನಾ ಟೆಸ್ಟ್ ಮಾಡಬೇಕು ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಈ ಹಿಂದಿನ ಕೋವಿಡ್ ಅಲೆಯಲ್ಲಿ ಅನುಸರಿಸಿದ 3ಟಿ ಸೂತ್ರ ಈಗಲೂ ಅನುಸರಿಸಬೇಕು. ಟ್ರ್ಯಾಕ್, ಟೆಸ್ಟ್ ಹಾಗೂ ಟ್ರೀಟ್ಮೆಂಟ್ ಕೋವಿಡ್ ನಿಯಂತ್ರಣದಲ್ಲಿ ಅತೀ ಮುಖ್ಯ ಪಾತ್ರ ನಿರ್ವಹಿಸಿದೆ. ಹೀಗಾಗಿ ಕೋವಿಡ್ ಟೆಸ್ಟಿಂಗ್ ಹೆಚ್ಚಿಸಿ ಆರಂಭದಲ್ಲಿಯೇ ಕೋವಿಡ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಕೊರೊನಾದಿಂದ ದೇಶವನ್ನು ರಕ್ಷಿಸಬಹು ಎಂದು ಸಲಹೆ ನೀಡಿದ್ದಾರೆ.
ದೇಶದಲ್ಲಿ ಓಮೈಕ್ರಾನ್ನ ಉಪತಳಿ ಬಿಎಫ್.7 ಸೋಂಕಿನ ನಾಲ್ಕು ಕೇಸ್ ಪತ್ತೆ
ದೇಶದಲ್ಲಿ ಕೊರೊನಾ ವೈರಸ್ ಓಮೈಕ್ರಾನ್ನ ಉಪತಳಿ ಬಿಎಫ್.7 ಸೋಂಕಿನ ನಾಲ್ಕು ಪ್ರಕರಣಗಳು ಜುಲೈ, ಸೆಪ್ಟೆಂಬರ್ ಮತ್ತು ನವೆಂಬರ್ನಲ್ಲಿ ಪತ್ತೆಯಾಗಿವೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ.
ಅಲ್ಲದೇ ನಿನ್ನೆ ಕೋವಿಡ್ ಸಂಬಂಧ ಉನ್ನತ ಅಧಿಕಾರಿಗಳು ಮತ್ತು ತಜ್ಞರೊಂದಿಗೆ ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಸಭೆ ನಡೆಸಿದ್ದರು. ಅಲ್ಲದೇ ದೇಶದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಮತ್ತು ಜನನಿಬಿಡ ಪ್ರದೇಶದಲ್ಲಿ ಮಾಸ್ಕ್ ಧರಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು. ಜೊತೆಗೆ ಟ್ವೀಟ್ ಮಾಡುವ ಮೂಲಕ ಕೊರೊನಾ ಇನ್ನೂ ಮುಗಿದಿಲ್ಲ. ಎಲ್ಲರೂ ಎಚ್ಚರದಿಂದ ಇರುವಂತೆ ಮತ್ತು ಕಣ್ಗಾವಲು ಬಲಪಡಿಸುವಂತೆ ಸೂಚಿಸಿದ್ದೇನೆ. ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ನಾವು ಸಿದ್ಧರಾಗಿದ್ದೇವೆ ಎಂದು ಎಚ್ಚರಿಕೆ ನೀಡಿದ್ದರು.
ಚೀನಾದಲ್ಲಿ ನಿನ್ನೆ 5,994 ಕೇಸ್ ದಾಖಲು
ನಿನ್ನೆ ಚೀನಾದಲ್ಲಿ 5,994 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಕಳೆದ 7 ದಿನಗಳಲ್ಲಿ ಸರಾಸರಿ 2,650 ಕೇಸ್ ವರದಿಯಾಗಿದೆ. ಅದರಲ್ಲಿಯೂ ಅತೀ ಹೆಚ್ಚು ವೇಗವಾಗಿ ಹರಡುತ್ತಿರುವ BF .7 ಒಮಿಕ್ರಾನ್ ಉಪತಳಿ ಹೆಚ್ಚಳವಾಗುತ್ತಿದೆ. ಇದರೊಂದಿಗೆ BA.5.2 ಒಮಿಕ್ರಾನ್ ಉಪತಳಿ ಕೂಡಾ ಅಪಾಯಕಾರಿಯಾಗಿದೆ. ಅಷ್ಟಕ್ಕೂ ಚೀನಾದಲ್ಲಿ ಕೊರೊನಾ ಹೆಚ್ಚಾಗಲು ಕಾರಣವೆಂದರೆ, ಕೋವಿಡ್ ವೇಳೆ ಅಲ್ಲಿನ ಜನರಿಗೆ ನೀಡಿದ್ದ ಕೊರೊನಾವ್ಯಾಕ್ ಲಸಿಕೆ. ಯಾಕಂದ್ರೆ ಈ ಲಸಿಕೆ ಕೇವಲ 50.4 ರಷ್ಟು ಜನಕ್ಕೆ ಪರಿಣಾಮ ಬೀರಿದ್ದು, ಅಷ್ಟಾಗಿ ಹೆಚ್ಚು ಪರಿಣಾಮಕಾರಿಯಾಗಿಲಿಲ್ಲ. ಅಲ್ಲದೇ ಚೀನಾ ಹೊಸ ಲಸಿಕೆಯನ್ನು ಸಹ ಖರೀದಿಸದೇ ಎಡವಟ್ಟು ಮಾಡಿತ್ತು. 80 ವರ್ಷ ಮೀರಿದವರಿಗೂ 2ನೇ ಡೋಸ್ ಕೊಡಲಿಲ್ಲ. ಕೋವಿಡ್ ಇದ್ದ ಹಿನ್ನೆಲೆ ಜನರನ್ನು ಮನೆಯಲ್ಲಿಯೇ ಇರುವಂತೆ ಸೂಚಿಸಿದ್ದರಿಂದ ಮನೆಯಿಂದ ಹೊರಗೆ ಬಾರದ ಹಿನ್ನೆಲೆ ಜನರಲ್ಲಿ ರೋಗ ನಿರೋಧಕ ಶಕ್ತಿ ಕುಗ್ಗಿದೆ.
ಒಬ್ಬರಿಂದ ಕನಿಷ್ಠ 18 ಜನಕ್ಕೆ ಹರಡುವ BF .7 ಒಮಿಕ್ರಾನ್ ಸೋಂಕು
ಚೀನಾದಲ್ಲಿ BF .7 ಒಮಿಕ್ರಾನ್ ಸೋಂಕು ಒಬ್ಬರಿಂದ ಕನಿಷ್ಠ 18 ಜನಕ್ಕೆ ಹರಡುತ್ತದೆ. ವೈರಸ್ನ ಸಂತಾನೋತ್ಪತ್ತಿ ವೇಗ ಹೆಚ್ಚಾಗಿದ್ದು, ಸೋಂಕಿತರಲ್ಲಿ ರೋಗ ಲಕ್ಷಣಗಳೇ ಕಾಣಿಸುವುದಿಲ್ಲ. ಸೋಂಕು ಕಾಣಿಸದ ಕಾರಣ ಜನರು ಓಡಾಟ ನಡೆಸಿದ್ದರಿಂದ ಚೀನಾದಲ್ಲಿ ಕೊರೊನಾ ಏರಿಕೆ ಕಂಡಿದೆ. ಅಲ್ಲದೇ ಬೂಸ್ಟರ್ ಡೋಸ್ ಪಡೆದವರಿಗೂ ಕೊರೊನಾ ಸೋಂಕು ತಗುಲಿದೆ.
ಚೀನಾದಲ್ಲಿ ಈಗ ಯಾವ ಲಕ್ಷಣ?
ಕೊರೊನಾ ರೋಗ ಲಕ್ಷಣಗಳೆಂದರೆ ಗಂಟಲು ನೋವು, ಮೈಕೈ ನೋವು, ತಲೆಸಿಡಿತ, ಅಧಿಕ ಜ್ವರ ಆಗಿದೆ. ಅಲ್ಲದೇ ಕೊರೊನಾ ಸೋಂಕಿಗೆ ಕೆಲವು ದೋಷಪೂರಿತ ಆಹಾರ ಪದ್ದತಿಯೂ ಕಾರಣವಾಗಿದೆ. ಸಾಮಾನ್ಯವಾಗಿ ಮೊಟ್ಟೆ, ಕುರಿ, ಕೋಳಿ ಹಂದಿ ಮಾಂಸವನ್ನು ಜನರು ಸೇವಿಸುತ್ತಾರೆ. ಆದರೆ ಚೀನಿಯರು ಹಾವು, ಇಲಿ, ಕಪ್ಪೆ, ಬಾವಲಿ ಸೇವಿಸುವುದರಿಂದ ಕೊರೊನಾ ಹೆಚ್ಚಾಗಿದೆ.
PM Modi reviews COVID-19 situation at high-level meeting
Read @ANI Story | https://t.co/CeQGTyfJY9#COVID19 #covidindia #India #PMModi pic.twitter.com/ke3fQlwlJ3
— ANI Digital (@ani_digital) December 22, 2022
ರಕ್ತ ಸಂಬಂಧಿಕರೊಂದಿನ ಮದುವೆ ಕೂಡ ಕೊರೊನಾಗೆ ಕಾರಣ
ಮತ್ತೊಂದು ವಿಚಾರವೆಂದರೆ ಚೀನಾ ಸಂಪ್ರದಾಯದಂತೆ ಸಂಬಂಧಿಕರೊಳಗೆ ಮದುವೆ ಆಗುವುದರಿಂದ ಶರೀರ ದುರ್ಬಲ ಆಗುತ್ತದೆ. ಇದರಿಂದ ಕೊರೊನಾ ಸೋಂಕು ಬೇಗ ತಗುಲುವ ಸಾಧ್ಯತೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ