ಫ್ಲೈಓವರ್ ಮೇಲೆ ಸಿಲುಕಿದ PM Car; ಪಂಜಾಬ್ ಸರ್ಕಾರದಿಂದ ಭದ್ರತಾ ಲೋಪ ಎಂದ ಕೇಂದ್ರ

PM Modi ಸಂಚರಿಸುವ ಮಾರ್ಗದಲ್ಲಿ ಪ್ರತಿಭಟನೆ ನಡೆಸಿ ರಸ್ತೆ ತಡೆಗೆ ಮುಂದಾದರು. ಈ ವೇಳೆ ಅವರ ಕಾರ್​ ಫ್ಲೈಓವರ್​ ಮೇಲೆ ಸಿಲುಕಿಕೊಂಡಿತು.

ಫ್ಲೈಓವರ್ ಮೇಲೆ ಸಿಲುಕಿದ ಪ್ರಧಾನಿ ಕಾರು

ಫ್ಲೈಓವರ್ ಮೇಲೆ ಸಿಲುಕಿದ ಪ್ರಧಾನಿ ಕಾರು

 • Share this:
  ನವದೆಹಲಿ (ಜ. 5):  ಕಾರ್ಯಕ್ರಮದಲ್ಲಿ ಭಾಗಿಯಾಗಲು ಪಂಜಾಬ್​​ಗೆ ಆಗಮಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರ ಭದ್ರತೆಯಲ್ಲಿ ಭಾರೀ ಲೋಪ (Security Breach) ಉಂಟಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಆರೋಪಿಸಿದೆ. ದೇಶದ ಪ್ರಧಾನ ಮಂತ್ರಿಗಳು ಬರುತ್ತಾರೆ ಎಂದು ಗೊತ್ತಿದ್ದು, ಪಂಜಾಬ್​ ಸರ್ಕಾರ (Punjab Government) ರಸ್ತೆ ಸಂಚಾರದಲ್ಲಿ ಸುರಕ್ಷತೆ ವಹಿಸಿಲ್ಲ. ಇದರಿಂದಾಗಿ ಫ್ಲೈ ಒವರ್​ ಮೇಲೆ ಪ್ರಧಾನಿ ಅವರ ಕಾರು 15-20 ನಿಮಿಷ ಸಿಲುಕಿತು. ಜೊತೆಗೆ ಹೆಚ್ಚುವರಿ ಭದ್ರತೆ ನೀಡುವಲ್ಲಿ ಕೂಡ ವಿಫಲವಾಗಿದೆ ಎಂದು ಕಾಂಗ್ರೆಸ್​ ನೇತೃತ್ವದ ಪಂಜಾಬ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.

  ಫ್ಲೈಓವರ್​ ಮೇಲೆ ಸಿಲುಕಿದ ಪ್ರಧಾನಿ ಕಾರು

  ಪ್ರಧಾನಿ ಮೋದಿ ಅವರು ಇಂದು ಬರುತ್ತಾರೆ ಎಂದು ತಿಳಿದ ರೈತರು ಇಂದು ಅವರು ಸಂಚರಿಸುವ ಮಾರ್ಗದಲ್ಲಿ ಪ್ರತಿಭಟನೆ ನಡೆಸಿ ರಸ್ತೆ ತಡೆಗೆ ಮುಂದಾದರು. ಈ ವೇಳೆ ಅವರ ಕಾರ್​ ಫ್ಲೈಓವರ್​ ಮೇಲೆ ಸಿಲುಕಿಕೊಂಡಿತು. ಈ ವೇಳೆ ಮುನ್ನೆಚ್ಚರಿಕೆ ವಹಿಸಿದ ಎಸ್‌ಪಿಜಿ ಸಿಬ್ಬಂದಿಗಳು ಕಾರಿನಿಂದ ಕೆಳಗೆ ಇಳಿದು ಕಾರ್ಯಾಚರಣೆಗೆ ಮುಂದಾದರು. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಅವರ ಕಾರನ್ನು ಸುತ್ತುವರೆದರು.

  ಅತಿದೊಡ್ಡ ಭದ್ರತಾ ಲೋಪ ಎಂದ ಕೇಂದ್ರ
  ಈ ರೀತಿ ಪ್ರತಿಭಟನೆ ನಡೆಯುವ ಸಂದರ್ಭದಲ್ಲಿ ಇದರ ಪರ್ಯಾಯ ಮಾರ್ಗಗಳು ಪಂಜಾಬ್​ ಪೊಲೀಸರಿಗೆ ತಿಳಿದಿರುತ್ತದೆ. ಅಲ್ಲದೇ, ಪಂಜಾಬ್ ಪೊಲೀಸರಿಗೆ ಮಾತ್ರ ಪ್ರಧಾನಿಯವರ ನಿಖರವಾದ ಮಾರ್ಗ ತಿಳಿದಿತ್ತು. ಆದರೂ ಆ ಮಾರ್ಗದಲ್ಲಿ ಪ್ರತಿಭಟನೆಗೆ ಅವಕಾಶ ನೀಡಲಾಗಿದೆ. ಪ್ರಧಾನಿಯವರ ಭದ್ರತೆಯು ಕೊನೆಯ ಕ್ಷಣದಲ್ಲಿ ಮಾರ್ಗ ಬದಲಾವಣೆಗೆ ಹೇಗೆ ಅವಕಾಶ ಮಾಡಿಕೊಟ್ಟಿತು ಇದು ಅತಿದೊಡ್ಡ ಭದ್ರತಾ ಲೋಪವಾಗಿದೆ ಎಂದು ಕೇಂದ್ರ ಆರೋಪಿಸಿದೆ.

  ಹವಾಮಾನ ವೈಪರೀತ್ಯದಿಂದ ರಸ್ತೆ ಪ್ರಯಾಣಕ್ಕೆ ಮುಂದಾದ ಪ್ರಧಾನಿ

  ಹುಸೇನಿವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಲು ಪ್ರಧಾನಿಯವರು ಇಂದು ಮುಂಜಾನೆ ಬಟಿಂಡಾಗೆ ಬಂದಿಳಿದರು. ಅವರು ಹೆಲಿಕಾಪ್ಟರ್ ಮೂಲಕ ಪ್ರಯಾಣ ನಡೆಸಬೇಕಿತತು. ಆದರೆ ಮಳೆ ಮತ್ತು ಮಂದ ಬೆಳಕಿನ ಕಾರಣ ರಸ್ತೆ ಮಾರ್ಗ ಪ್ರಯಾಣ ಬೆಳೆಸಲು ಮುಂದಾದರು. ಎರಡು ಗಂಟೆಗಳಿಗೂ ಹೆಚ್ಚಿನ ಅವಧಿಯ ಈ ಪ್ರಯಾಣದ ಕುರಿತು ಡಿಜಿಪಿ ಪಂಜಾಬ್ ಪೊಲೀಸರಿಂದ ಅಗತ್ಯ ಭದ್ರತಾ ವ್ಯವಸ್ಥೆಗಳ ಅಗತ್ಯ ದೃಢೀಕರಣ ಪಡೆಯಲಾಗಿತ್ತು.

  ಇದನ್ನು ಓದಿ: ಮೂರನೇ ಅಲೆ ಬಂದಾಗಿದೆ; ದೆಹಲಿಯಲ್ಲಿ ಇಂದು ಪಾಸಿಟಿವಿಟಿ ದರ ಶೇ 10ರಷ್ಟು ಆಗುವ ಸಾಧ್ಯತೆ; ಆರೋಗ್ಯ ಸಚಿವರು

  ವಿವರಣೆ ಕೋರಿದ ಕೇಂದ್ರ

  ಸ್ಮಾರಕದಿಂದ ಸುಮಾರು 30 ಕಿ.ಮೀ ದೂರದಲ್ಲಿ, ಪ್ರಧಾನಿ ಬೆಂಗಾವಲು ಪಡೆ ಮೇಲ್ಸೇತುವೆಯನ್ನು ತಲುಪಿದಾಗ, ಪ್ರತಿಭಟನಾಕಾರರು ರಸ್ತೆಯನ್ನು ತಡೆದರು.
  ಪ್ರಧಾನಿಯವರ ವೇಳಾಪಟ್ಟಿ ಮತ್ತು ಪ್ರಯಾಣದ ಯೋಜನೆಯನ್ನು ಪಂಜಾಬ್ ಸರ್ಕಾರಕ್ಕೆ ಸಾಕಷ್ಟು ಮುಂಚಿತವಾಗಿ ತಿಳಿಸಲಾಯಿತು. ಕಾರ್ಯವಿಧಾನದ ಪ್ರಕಾರ, ಅವರು ಲಾಜಿಸ್ಟಿಕ್ಸ್, ಭದ್ರತೆಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಬೇಕು. ಜೊತೆಗೆ ಆಕಸ್ಮಿಕ ಯೋಜನೆಯನ್ನು ಸಿದ್ಧಪಡಿಸಬೇಕು. ಆಕಸ್ಮಿಕ ಯೋಜನೆಯ ದೃಷ್ಟಿಯಿಂದ ಪಂಜಾಬ್ ಸರ್ಕಾರವು ರಸ್ತೆಯ ಮೂಲಕ ಯಾವುದೇ ಚಲನೆಯನ್ನು ಸುರಕ್ಷಿತವಾಗಿರಿಸಲು ಹೆಚ್ಚುವರಿ ಭದ್ರತೆಯನ್ನು ನಿಯೋಜಿಸಬೇಕು, ಆದರೆ ಅದನ್ನು ಸ್ಪಷ್ಟವಾಗಿ ನಿಯೋಜಿಸಲಾಗಿಲ್ಲ. ಈ ಭದ್ರತಾ ಲೋಪದ ನಂತರ, ಬಟಿಂಡಾ ವಿಮಾನ ನಿಲ್ದಾಣಕ್ಕೆ ಹಿಂತಿರುಗಲು ನಿರ್ಧರಿಸಲಾಯಿತು ಎಂದು ಕೇಂದ್ರ ದೂರಿದೆ.

  ಇದನ್ನು ಓದಿ: ಪೊಲೀಸ್ ವೇಷದಲ್ಲಿ ಹೋಗಿ ಹಣ ದೋಚಿದ ಖದೀಮರು

  ಗೃಹ ಸಚಿವಾಲಯವು ಪಂಜಾಬ್ ಸರ್ಕಾರದಿಂದ ವಿವರವಾದ ವರದಿಯನ್ನು ಕೇಳಿದ್ದು, ಜವಾಬ್ದಾರಿ ಕುರಿತು ಕ್ರಮ ತೆಗೆದುಕೊಳ್ಳಲು ಕೇಳಲಾಗಿದೆ.

  ಪಂಜಾಬ್ ಸರ್ಕಾರದ ವಿರುದ್ಧ ವಾಗ್ದಾಳಿ
  ಪ್ರಧಾನಿ ಅವರ ಪ್ರಯಾಣದಲ್ಲಿ ಉಂಟಾದ ಭದ್ರತಾ ಲೋಪ ದೋಷ ಸಂಬಂಧ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರು ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರ ವಿರುದ್ಧ ಸರಣಿ ಟ್ವೀಟ್‌ಗಳ ಮೂಲಕ ಹರಿಹಾಯ್ದಿದ್ದಾರೆ. ಅಲ್ಲದೇ, ಈ ಸಂಬಂಧ ಕೇಳಲು ಕರೆ ಮಾಡಿದ್ದು, ಅವರು ಫೋನ್ ಕರೆಗಳನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
  Published by:Seema R
  First published: