ಮೋದಿ ಕ್ಯಾಬಿನೆಟ್​ 2.0| ಮೆಗಾ ರೀಬೂಟ್​ ನಂತರ ಇಂದು ಅಧಿಕಾರ ವಹಿಸಲಿದ್ದಾರೆ ನೂತನ ಸಚಿವರು!

ಮೋದಿಯವರ ಬಳಗ ಸೇರಿರುವ 11 ಜನ ಮಹಿಳಾ ಸಚಿವರು.

ಮೋದಿಯವರ ಬಳಗ ಸೇರಿರುವ 11 ಜನ ಮಹಿಳಾ ಸಚಿವರು.

ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಕ್ಯಾಬಿನೆಟ್​ ರೀಬೂಟ್​ನಲ್ಲಿ ಸರ್ಬಾನಂದ ಸೋನೊವಾಲ್, ನಾರಾಯಣ್ ರಾಣೆ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಕ್ಯಾಬಿನೆಟ್​ ದರ್ಜೆಯ ಸಚಿವ ಸ್ಥಾನ ನೀಡಲಾಗಿದೆ.

 • Share this:

  ನವ ದೆಹಲಿ (ಜುಲೈ 08); ಪ್ರಧಾನಿ ಮೋದಿ ಅವರ ಎರಡನೇ ಅವಧಿಕ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗಿದೆ. ಆದರೆ, ಈವರೆಗೆ ಸಂಪುಟ ವಿಸ್ತರಣೆ ಅಥವಾ ಪುನರ್ರಚನೆ ಆಗಿಲ್ಲ. ಆದರೆ, ಮುಂದಿನ ವರ್ಷ ಉತ್ತರಪ್ರದೇಶ ಮತ್ತು ಇತರೆ ರಾಜ್ಯಗಳ ವಿಧಾನ ಸಭೆ ಚುನಾವಣೆ ಹಿನ್ನೆಲೆ ಸಂಪುಟ ಶೀಘ್ರದಲ್ಲೇ ಪುನರ್ರಚನೆಯಾಗಲಿದೆ ಎನ್ನಲಾಗಿತ್ತು. ಅದರಂತೆ ಬುಧವಾರ ನೂತನ 43 ಸಚಿವರು ಪ್ರಧಾನಿ ನರೇಂದ್ರ ಮೋದಿ ಸಂಪುಟ ಸೇರಿದ್ದಾರೆ.  ಬುಧವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನವನ್ನೂ ಸ್ವೀಕರಿಸಿದ್ದಾರೆ. ಈ 43 ಸಚಿವರ ಪೈಕಿ ಅನೇಕ ಹೊಸಾ ಮುಖಗಳಿಗೆ ಮಣೆ ಹಾಕಲಾಗಿದ್ದು. 11 ಜನ ಮಹಿಳೆಯನ್ನು ಈ ಸಚಿವ ಸಂಪುಟಕ್ಕೆ ಸೇರಿಸಲಾಗಿದೆ. ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದ ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೂ ಸಚಿವ ಸ್ಥಾನ ನೀಡಲಾಗಿದ್ದು, ಈ ಎಲ್ಲಾ ನೂತನ ಸಚಿವರುಗಳು ಇಂದು ತಮ್ಮ ಅಧಿಕಾರ ವಹಿಸಲಿದ್ದಾರೆ ಎನ್ನಲಾಗುತ್ತಿದೆ.


  ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಕ್ಯಾಬಿನೆಟ್​ ರೀಬೂಟ್​ನಲ್ಲಿ ಸರ್ಬಾನಂದ ಸೋನೊವಾಲ್, ನಾರಾಯಣ್ ರಾಣೆ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಕ್ಯಾಬಿನೆಟ್​ ದರ್ಜೆಯ ಸಚಿವ ಸ್ಥಾನ ನೀಡಲಾಗಿದೆ. ಆದರೆ, ಈ ಹಿಂದಿನ ಸಂಪುಟದಲ್ಲಿದ್ದ  ಆರೋಗ್ಯ ಸಚಿವ ಹರ್ಷವರ್ಧನ್, ಐಟಿ ಮತ್ತು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹಾಗೂ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಸೇರಿದಂತೆ 12 ಸಚಿವರನ್ನು ಮಂತ್ರಿಮಂಡಲದಿಂದ ಕೈಬಿಡಲಾಗಿರುವುದು ಅಚ್ಚರಿಗೆ ಕಾರಣವಾಗಿದೆ.


  ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‌ನಲ್ಲಿ ಬುಧವಾರ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಕೆಲವು ಹೊಸ ಮುಖಗಳು ಸೇರಿದಂತೆ 15 ಕ್ಯಾಬಿನೆಟ್ ಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಿದ್ದಾರೆ. 53 ಕೇಂದ್ರ ಸಚಿವಾಲಯಗಳಿವೆ. ಆದರೆ, ಈ ಸಚಿವಾಲಯಗಳನ್ನು ಕೇವಲ 30 ಕ್ಯಾಬಿನೆಟ್ ಮಂತ್ರಿಗಳು ಮತ್ತು ಇಬ್ಬರು ರಾಜ್ಯ ಸಚಿವರು ಸ್ವತಂತ್ರ ಉಸ್ತುವಾರಿಯಿಂದ ನಿರ್ವಹಿಸುತ್ತಾರೆ ಎಂದು ತಿಳಿದುಬಂದಿದೆ.


  'ಗರಿಷ್ಠ ಸರ್ಕಾರ, ಗರಿಷ್ಠ ಆಡಳಿತ ಮತ್ತು ಗರಿಷ್ಠ ಪ್ರಾತಿನಿಧ್ಯ'ದ ಹೊಸ ಗರಿಷ್ಠತೆಯನ್ನು ಅನುಸರಿಸುವ ಸಲುವಾಗಿಯೇ ಹೊಸ ಕ್ಯಾಬಿನೆಟ್​ ಅನ್ನು ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಈಗಾಗಲೇ ತಿಳಿಸಿದೆ. ಕೊರೋನಾವೈರಸ್ ಸಾಂಕ್ರಾಮಿಕ ಮತ್ತು ದೇಶ ಆರ್ಥಿಕತೆ ಎದುರಿಸುವ ಅವಳಿ ಸವಾಲುಗಳನ್ನು ನಿಭಾಯಿಸಲು ಈ ಸಂಪುಟ ಕೆಲಸ ಮಾಡಲಿದೆ ಎನ್ನಲಾಗುತ್ತಿದೆ.


  ಕೇಂದ್ರ ಸಂಪುಟದಲ್ಲಿ ಪ್ರಮುಖ ಖಾತೆಗಳನ್ನು ಹಂಚಿಕೆ ಮಾಡಿರುವ ಪಟ್ಟಿ ಇಲ್ಲಿದೆ.


  ಧರ್ಮೇಂದ್ರ ಪ್ರಧಾನ್ - ಮಾನವ ಸಂಪನ್ಮೂಲ


  ಪಿಯೂಷ್​ ಗೋಯಲ್​ - ಜವಳಿ, ಆಹಾರ, ಗ್ರಾಹಕ ವ್ಯಗಹಾರಗಳು


  ಸ್ಮೃತಿ ಇರಾನಿ - ಮಹಿಳಾ ಮತ್ತು ಮಕ್ಕಳ ಕಲ್ಯಾಣ


  ಹರ್​ದೀಪ್​ ಪುರಿ - ಪೆಟ್ರೋಲಿಯಂ, ನಗರಾಭಿವೃದ್ದಿ


  ಜ್ಯೋತಿರಾಧಿತ್ಯ ಸಿಂಧಿಯಾ - ನಾಗರಿಕ ವಿಮಾನಯಾನ


  ಪುರುಷೋತ್ತಂ ರೂಪಾಲ - ಡೈರಿ ಮತ್ತು ಮೀನುಗಾರಿಕೆ ಇಲಾಖೆಯ ಸಚಿವಅಶ್ವಿನ್​ ವೈಷ್ಣವ್​ ರೈಲ್ವೇ ಮತ್ತು ಮಾಹಿತಿ ತಂತ್ರಜ್ಞಾನ


  ಅನುರಾಗ್​​ ಠಾಕೂರ್ -​ ಕ್ರೀಡಾ ಸಚಿವ


  ಪಶುಪತಿ - ಆಹಾರ ಸಂಸ್ಕರಣೆ


  ಭೂಪೇಂದ್ರ - ಕಾರ್ಮಿಕ ಸಚಿವ


  ಕಿರಣ್​ ರಿಜಿಜು - ಕಾನೂನು ಖಾತೆ


  ಕಿಶನ್​ ರೆಡ್ಡಿ - ಸಂಸ್ಕೃತಿ, ಪ್ರವಾಸೋಧ್ಯಮ ಖಾತೆ


  ಭೂಪೇಂದ್ರ ಯಾದವ್​ - ಪರಿಸರ ಖಾತೆ


  ಸರ್ದಾರ್​ ಸೋನಾವಾಲ - ಬಂದರು, ಈಶಾನ್ಯ ರಾಜ್ಯ ಅಭಿವೃದ್ಧಿ ಮತ್ತು ಆಯುಷ್ ಇಲಾಖೆ


  ರಾಜ್ಯ ಖಾತೆಗಳು


  ನಾರಾಯಣ ಸ್ವಾಮಿ - ಸಮಾಜ ಕಲ್ಯಾಣ, ಸಾಮಾಜಿಕ ನ್ಯಾಯ, ಸಬಲೀಕರಣ


  ಮೀನಾಕ್ಷಿ ಲೇಖಿ - ವಿದೇಶಾಂಗ ವ್ಯವಹಾರ ಮತ್ತು ಸಂಸ್ಕೃತಿ ಖಾತೆ


  ಭಗವಂತ ಖೂಬಾ - ನವೀಕರಿಸಿದ ಇಂಧನ


  ರಾಜೀವ್ ಚಂದ್ರಶೇಖರ್ - ರೇಷ್ಮೆ ಅಭಿವೃದ್ಧಿ ರಾಜ್ಯ ಖಾತೆ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಖಾತೆ


  ಶೋಭಾ ಕರಂದ್ಲಾಜೆ - ಕೃಷಿ ರಾಜ್ಯ ಖಾತೆ


  ಮೋದಿಯವರ ಹಾಗೂ ನೂತನ ಸಚಿವ ಸಂಪುಟದ ಕಾರ್ಯ ಸೂಚಿ ಹೇಗಿರಲಿದೆ.


  ಸ್ವಚ್ಚ ಭಾರತ ಅಭಿಯಾನದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ ಯೋಜನೆ ರೂಪಿಸಿರುವ ಮೋದಿ ಸರ್ಕಾರ. ಮಕ್ಕಳು ಮತ್ತು ಮಹಿಳೆಯರಲ್ಲಿ ಕಾಡುತ್ತಿರುವ ಅಪೌಷ್ಟಿಕತೆ ನಿವಾರಣೆಗೆ ಹಾಗೂ ಅವರ ಭದ್ರತೆಗೆ ಬೇಕಾದ ಸೌಲಭ್ಯಗಳನ್ನು ನೀಡಲು ದೊಡ್ಡ ಪ್ರಮಾಣದ ಯೋಜನೆ ರೂಪಿಸಿದೆ. ನರೇಂದ್ರ ಮೋದಿಯವರು ಮೊದಲ ಬಾರಿ ಅಧಿಕಾರ ಹಿಡಿದಾಗ ರೂಪಿಸಿದ ಸ್ವಚ್ಚ ಭಾರತ ಯೋಜನೆ ಸಾಕಷ್ಟು ಜನಪ್ರಿಯಗೊಂಡಿತ್ತು ಅದೇ ರೀತಿ ಮಕ್ಕಳ ಹಾಗೂ ಮಹಿಳಾ ಸಬಳೀಕರಣದ ಯೋಜನೆಯನ್ನು ಜನಪ್ರಿಯಗಒಳಿಸುವ ಉದ್ದೇಶ ಹೊಂದಲಾಗಿದೆ.


  ಇದನ್ನೂ ಓದಿ: Virbhadra Singh| ಹಿಮಾಚಲ ಪ್ರದೇಶದ ಮಾಜಿ ಸಿಎಂ-ಕಾಂಗ್ರೆಸ್ ಮುಖಂಡ ವೀರಭದ್ರ ಸಿಂಗ್ ನಿಧನ!


  ಇದನ್ನು ಗಮನದಲ್ಲಿಟ್ಟುಕೊಂಡು ಮಹಿಳಾ ಮತ್ತು ಮಕ್ಕಳ ಸಚಿವಾಲಯವನ್ನು ಹೊರತುಪಡಿಸಿ ಬೇರೆ ಯಾವುದೇ ಜವಾಬ್ದಾರಿಯಿಲ್ಲದವರಿಗೆ ಈ ಖಾತೆ ಕೊಡುವ ಸಾಧ್ಯತೆ ಇದೆ. ಸ್ಮೃತಿ ಇರಾನಿ ಈ ಮಹತ್ವದ ಸಚಿವಾಲಯವನ್ನು ನಿಭಾಯಿಸು ಸಾಧ್ಯತೆ ಇದ್ದು ಮೋದಿ ಸರ್ಕಾರದ ಈ ಮಹತ್ವಾಕಾಂಕ್ಷೆಯ ಕಾರ್ಯಕ್ರಮವನ್ನು ಮುನ್ನೆಡಲಿದ್ದಾರೆ. ಇವರಿಗೆ ಡಾ. ಮುಂಜಾಪರ ಮಹೇಂದ್ರಭಾಯಿ ಹೆಗಲು ಕೊಡಲಿದ್ದಾರೆ. ಇವರೊಂದಿಗೆ ತಜ್ಞ ವೈದ್ಯರ ತಂಡವೇ ಇರಲಿದೆ.


  ಇದನ್ನೂ ಓದಿ: Petrol Price Today | ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ 100ರ ಗಡಿ ದಾಟಿದ ಪೆಟ್ರೋಲ್; ದೇಶದ ವಿವಿಧ ನಗರಗಳಲ್ಲಿ ಇಂದಿನ ಬೆಲೆ?


  ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ ಪಿಎಂ ಹೆಚ್ಚಿನ ಆದ್ಯತೆ ನೀಡಲಿದ್ದಾರೆಯೇ? ವಿಶೇಷವಾಗಿ ಕೋವಿಡ್ ಕಾಲದಲ್ಲಿ ವೈಜ್ಞಾನಿಕ ಆವಿಷ್ಕಾರಗಳ ವಿಷಯದಲ್ಲಿ ಭಾರತ ಒಂದಷ್ಟು ಹೊಸಾ ಆವಿಷ್ಕಾರಗಳಿಗೆ ನಾಂಧಿ ಹಾಡಿತ್ತು. ಈ ಸಚಿವಾಲಯವನ್ನು ಪ್ರಧಾನಿ ಮೋದಿಯವರೇ ಮುನ್ನಡೆಸುತ್ತಿದ್ದರು. ಈಗಲೂ ಇದು ಇವರ ಬಳಿಯೇ ಇದೆ.


  ಸಹಕಾರ ಸಚಿವಗಿರಿಯನ್ನು ತನ್ನ ಆಪ್ತ ಹಾಗೂ ಬಹುಕಾಲದ ಗೆಳೆಯ ಅಮಿತ್​ಷಾ ಅವರಿಗೆ ಕೊಡಲಾಗಿದೆ. ಆರೋಗ್ಯ ಮತ್ತು ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯಗಳನ್ನು ವಿಲೀನ ಮಾಡಲಾಗುವುದು. ವಿಲೀನಗೊಂಡ ಖಾತೆಯನ್ನು ಮನ್ಸುಖ್ ಮಾಂಡವಿಯಾ ನೀಡಲಾಗಿದೆ.

  Published by:MAshok Kumar
  First published: