ಸಮಾಜದ ಒಳಿತಿಗಾಗಿ ಕಲೆ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿವಿಧ ಕ್ಷೇತ್ರಗಳ ಜನರಿಗೆ ಅವರ ಸಾಧನೆಗಳ ಗೌರವಾರ್ಥವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) 106 ಪದ್ಮಶ್ರೀ ಪ್ರಶಸ್ತಿಗಳನ್ನು (Padmashree) ಪ್ರದಾನ ಮಾಡಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಲ್ಲಿ ಒಬ್ಬರಾದ ಹಿರ್ಬಾಯಿ ಇಬ್ರಾಹಿಂ ಲೋಬಿ (Hirbai Ibrahim Lobi) ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ (Narendra Modi) ನಡೆಸಿದ ಸಂವಾದ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
ಸಿದ್ದಿ ಸಮುದಾಯದ ಶ್ರೇಯೋಭಿವೃದ್ಧಿ ಮತ್ತು ಮಹಿಳಾ ಸಬಲೀಕರಣ
ಗುಜರಾತ್ ಮೂಲದ ಲೋಬಿ, ರಾಜ್ಯದ ಸಿದ್ದಿ ಸಮುದಾಯದ ಶ್ರೇಯೋಭಿವೃದ್ಧಿ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಮಾಡಿದ ವ್ಯಾಪಕ ಕೆಲಸಕ್ಕಾಗಿ ಪದ್ಮಶ್ರೀ ಪ್ರಶಸ್ತಿಯಿಂದ ಪುರಸ್ಕೃತರಾದರು.
ಪ್ರಶಸ್ತಿ ಪಡೆಯಲು ಸಭೆಗೆ ಆಗಮಿಸಿದ ಲೋಬಿ, ಕೇಂದ್ರ ಮಂತ್ರಿಗಳೊಂದಿಗೆ ಮೊದಲ ಸಾಲಿನಲ್ಲಿ ಆಸೀನರಾಗಿದ್ದ ಪ್ರಧಾನಿ ಮೋದಿ, ಗೃಹ ಸಚಿವರಾದ ಅಮಿತ್ ಷಾ, ಲೋಕ ಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿದ್ದಲ್ಲಿಯೇ ಕೆಲ ಕಾಲ ನಿಂತಿದ್ದು, ತಮ್ಮ ಮನದಾಳದ ಮಾತುಗಳನ್ನು ನರೇಂದ್ರ ಮೋದಿಯವರ ಮುಂದೆ ತಿಳಿಸಿದ್ದಾರೆ.
ಇದನ್ನೂ ಓದಿ:
Uttar Pradeshದಲ್ಲಿ ಶೇಕಡಾ 25ರಷ್ಟು ಮದ್ಯದ ಅಂಗಡಿಗಳು ಮಹಿಳೆಯರ ಪಾಲು!
ಮೆಚ್ಚುಗೆಯ ಮಾತನಾಡಿದ ಹಿರ್ಬಾಯಿ ಲೋಬಿ
ಈ ಸಂದರ್ಭದಲ್ಲಿ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ ಲೋಬಿ ಅವರು, ಪ್ರಧಾನಿಯವರನ್ನು ತಮ್ಮನ್ನು ಗುರುತಿಸಿದ್ದಕ್ಕಾಗಿ ಹಾಗೂ ಪ್ರತಿಷ್ಠಿತ ಪ್ರಶಸ್ತಿ ಪಡೆಯಲು ತಮ್ಮನ್ನು ಅರ್ಹಗೊಳಿಸಿದ್ದಕ್ಕಾಗಿ ವಂದನೆಗಳನ್ನು ಸಲ್ಲಿಸಿದ್ದಾರೆ.
ಅಂತೆಯೇ ಮೋದಿಯವರು ಕೂಡ ಲೋಬಿಯೊಂದಿಗೆ ಸಂವಹನ ನಡೆಸಿದ್ದಾರೆ. ಲೋಬಿಯವರನ್ನು ನೋಡಿದ ಒಡನೆಯೇ ಪೂರ್ತಿ ಸಭಾಂಗಣ ಮೆಚ್ಚುಗೆಯಿಂದ ಚಪ್ಪಾಳೆ ತಟ್ಟಿದರೆ, ಪ್ರಧಾನಿ ಮೋದಿಯವರು 70 ವರ್ಷದ ಪದ್ಮಶ್ರೀ ಪುರಸ್ಕೃತರಿಗೆ ತಲೆಬಾಗಿ ವಂದಿಸಿದರು ಹಾಗೂ ಇದೇ ಸಂದರ್ಭದಲ್ಲಿ ಲೋಬಿ ಭಾವಪರವಶರಾಗಿ ಮೋದಿಯವರಿಗೆ ಕೃತಜ್ಞತೆಗಳನ್ನರ್ಪಿಸಿದರು.
ನಮ್ಮನ್ನು ಗುರುತಿಸಿದ್ದಕ್ಕೆ ವಂದನೆಗಳು
ನಮ್ಮ ಪ್ರೀತಿಯ ನರೇಂದ್ರ ಮೋದಿಯವರೇ ನಮ್ಮ ಜೀವನದಲ್ಲಿ ಸಂತೋಷ ತಂದಿರುವಿರಿ ಎಂಬುದಾಗಿ ಲೋಬಿಯವರು ಭಾವುಕರಾಗಿ ನರೇಂದ್ರ ಮೋದಿಯವರನ್ನುದ್ದೇಶಿಸಿ ಹೇಳಿದ ಮಾತುಗಳನ್ನು ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಯಾರೂ ನಮಗೆ ಮನ್ನಣೆ ನೀಡಲಿಲ್ಲ ಹಾಗೂ ನೀವು ನಮ್ಮನ್ನು ಗುರುತಿಸುವವರೆಗೆ ಯಾರೂ ನಮ್ಮ ಬಗ್ಗೆ ತಲೆಕೆಡೆಸಿಕೊಂಡಿರಲಿಲ್ಲ.
#WATCH | Hailing from the Siddi tribe, Hirbai Ibrahim Lobi receives the Padma Shri award from President Droupadi Murmu. She works for the upliftment and development of the Siddi tribal community. pic.twitter.com/OBQy4Yh4ON
— ANI (@ANI) March 22, 2023
ಹಿರ್ಬಾಯಿ ಇಬ್ರಾಹಿಂ ಲೋಬಿ ಯಾರು?
ಲೋಬಿ ಅವರು ‘ಸಿದ್ದಿ ಮಹಿಳಾ ಒಕ್ಕೂಟ’ ಎಂದು ಕರೆಯಲಾದ ‘ಆದಿವಾಸಿ ಮಹಿಳಾ ಸಂಘ’ದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರನ್ನು ಸಾಕಿ ಸಲುಹಿದ್ದು ಇವರ ಅಜ್ಜ ಅಜ್ಜಿ. ತಾವು ಸ್ಥಾಪಿಸಿದ ಅನೇಕ ಬಾಲವಾಡಿಗಳ ಮೂಲಕ ಸಿದ್ದಿ ಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸ ಮಾಡುತ್ತಿದ್ದಾರೆ. ಸಿದ್ದಿ ಸಮುದಾಯದ ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿಯೂ ಶ್ರಮಿಸಿದ್ದಾರೆ.
ಹಲವಾರು ಪ್ರಶಸ್ತಿಗಳಿಂದ ಗೌರವ
ಸಹಕಾರ ಚಳುವಳಿಗಳು, ಕುಟುಂಬ ಯೋಜನೆ, ಸಮುದಾಯ ಶಾಲೆಗಳು ಅವರು ಮುನ್ನಡೆಸಿದ ಅಥವಾ ಸಂಬಂಧಿಸಿರುವ ಕೆಲವು ಯೋಜನೆಗಳಾಗಿವೆ.
ಈ ಮನ್ನಣೆಗೆ ಮೊದಲು, ಅವರು ಜುನಾಗಢ್‌ನ ಗುಜರಾತ್ ಕೃಷಿ ವಿಶ್ವವಿದ್ಯಾಲಯದ 'ಸಮ್ಮಾನ್ ಪತ್ರ', 'ಗ್ರಾಮೀಣ ಜೀವನದಲ್ಲಿ ಮಹಿಳಾ ಸೃಜನಶೀಲತೆಗೆ ಮಹಿಳಾ ವಿಶ್ವ ಶೃಂಗಸಭೆ ಪ್ರತಿಷ್ಠಾನದ ಬಹುಮಾನ' ಹಾಗೂ 2006 ರಲ್ಲಿ ಅತ್ಯುತ್ತಮ ಮಹಿಳಾ ಗ್ರಾಮೀಣ ಉದ್ಯಮಕ್ಕಾಗಿ ಜಾಂಕಿದೇವಿ ಬಜಾಜ್ ಪುರಸ್ಕಾರ ಮುಂತಾದ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಪರಿಶ್ರಮವೇ ಕೀಲಿಕೈ
ಪರಿಶ್ರಮದಿಂದ ಕೆಲಸ ಮಾಡಿ ಹಾಗೂ ಆ ಪರಿಶ್ರಮವೇ ನಿಮಗೆ ಮನ್ನಣೆಯನ್ನು ನೀಡುತ್ತದೆ. ಪ್ರಧಾನಿ ಹಾಗೂ ರಾಜಭವನ ಆ ಮನ್ನಣೆ ಹಾಗೂ ಗೌರವವನ್ನು ನಮಗೆ ನೀಡಿದೆ ಎಂದು ಲೋಬಿ ಪ್ರಶಸ್ತಿ ಸ್ವೀಕರಿಸುವಾಗ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ