ಹಳೆ ಪೋಟೋಗಳನ್ನು ಟ್ವೀಟ್ ಮಾಡುವ ಮೂಲಕ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ ಪ್ರಧಾನಿ ನರೇಂದ್ರ ಮೋದಿ

ಹುಟ್ಟುಹಬ್ಬದ ಪ್ರಯುಕ್ತ ನಿನ್ನೆ ರಾತ್ರಿಯೇ ಗುಜರಾತ್​ಗೆ ಆಗಮಿಸಿದ್ದ ನರೇಂದ್ರ ಮೋದಿ ಇಂದು ಬೆಳಗ್ಗೆ ಗಾಂಧಿ ನಗರ ಹಾಗೂ ನರ್ಮದಾ ಜಿಲ್ಲೆಗಳಲ್ಲಿ ಆಯೋಜಿಸಲಾಗಿದ್ದ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಏಕತಾ ಪ್ರತಿಮೆಗೂ ಭೇಟಿ ನೀಡಿದ್ದರು.

MAshok Kumar | news18-kannada
Updated:September 17, 2019, 9:31 PM IST
ಹಳೆ ಪೋಟೋಗಳನ್ನು ಟ್ವೀಟ್ ಮಾಡುವ ಮೂಲಕ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ ಪ್ರಧಾನಿ ನರೇಂದ್ರ ಮೋದಿ
ನರೇಂದ್ರ ಮೋದಿಯ ಹಳೆಯ ಪೋಟೊ.
  • Share this:
ನವ ದೆಹಲಿ (ಸೆಪ್ಟೆಂಬರ್.17); ಇಂದು 69ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಖಾಸಗಿ ಟ್ವೀಟರ್ ಖಾತೆಯಲ್ಲಿ ಹಳೆಯ ಪೋಟೊಗಳನ್ನು ಪ್ರಕಟಿಸುವ ಮೂಲಕ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಜನರು ಸಹ ತಮ್ಮ ವೆಬ್​ಸೈಟಿನಲ್ಲಿ ಹಳೆಯ ನೆನಪುಗಳನ್ನು ಹಂಚಿಕೊಳ್ಳಲು ಅವರು ಅವಕಾಶ ಮಾಡಿಕೊಟ್ಟಿದ್ದಾರೆ.

ಈ ಕುರಿತು ಟ್ವೀಟರ್​ನಲ್ಲಿ ಬರೆದುಕೊಂಡಿರುವ ಅವರು, “ಬದುಕಿನ ವಿಶೇಷ ನೆನಪುಗಳು ಅಮೂಲ್ಯ ಕ್ಷಣಗಳನ್ನು ಪುನರುಜ್ಜೀವನಗೊಳಿಸುತ್ತದೆ. ನಾನು ನನ್ನ ಹಲವಾರು ಹಳೆಯ ಪೋಟೊಗಳನ್ನು ಸ್ನೇಹಿತರಿಂದ ಸ್ವೀಕರಿಸಿದ್ದೇನೆ. ಇಂತಹ ಪೋಟೋಗಳನ್ನು ಸ್ನೇಹಿತರ ವಿನಂತಿಯ ಮೇರೆಗೆ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ನಿಮಗೂ ಸಹ ಇಂತಹ ಹಳೆಯ ನೆನಪುಗಳಿದ್ದರೆ ಅದನ್ನು ನನ್ನೊಂದಿಗೆ ಹಂಚಿಕೊಳ್ಳಿ” ಎಂದು ತಿಳಿಸಿದ್ದಾರೆ. ಅಲ್ಲದೆ, ಜನಸಾಮಾನ್ಯರು ಸಹ ತಮ್ಮ ಪೋಟೊಗಳನ್ನು ಹಂಚಿಕೊಳ್ಳುವ ಲಿಂಕ್​ ಅನ್ನೂ ನೀಡಿದ್ದಾರೆ.ಹುಟ್ಟುಹಬ್ಬದ ಪ್ರಯುಕ್ತ ನಿನ್ನೆ ರಾತ್ರಿಯೇ ಗುಜರಾತ್​ಗೆ ಆಗಮಿಸಿದ್ದ ನರೇಂದ್ರ ಮೋದಿ ಇಂದು ಬೆಳಗ್ಗೆ ಗಾಂಧಿ ನಗರ ಹಾಗೂ ನರ್ಮದಾ ಜಿಲ್ಲೆಗಳಲ್ಲಿ ಆಯೋಜಿಸಲಾಗಿದ್ದ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಏಕತಾ ಪ್ರತಿಮೆಗೂ ಭೇಟಿ ನೀಡಿದ್ದರು.

ಅಲ್ಲದೆ, ತಮ್ಮ ಗಾಂಧಿ ನಗರದಲ್ಲಿರುವ ತಮ್ಮ ತಾಯಿಯನ್ನು ಭೇಟಿಯಾಗಿ ಉಪಹಾರ ಸ್ವೀಕರಿಸಿದ ಅವರು ನಂತರ ತಮ್ಮ ಸ್ನೇಹಿತರು ಹಾಗೂ ನೆರೆಹೊರೆಯವರನ್ನೂ ಸಹ ಭೇಟಿಯಾಗಿದ್ದರು.

ಇದನ್ನೂ ಓದಿ : ಒಂದೇ ಬಾವಿಯಲ್ಲಿ ತುಂಡು ತುಂಡಾಗಿ ಬಿದ್ದಿದ್ದ 44 ಮೃತ ದೇಹಗಳು; ಘಟನೆಗೆ ಬೆಚ್ಚಿಬಿತ್ತು ಮೆಕ್ಸಿಕೋ!

First published:September 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ