PM Modi: ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಕ್ಲೀನ್​ ಬೌಲ್ಡ್​ ಆಗಿದ್ದಾರೆ; ಪ್ರಧಾನಿ ಮೋದಿ

ನಂದಿಗ್ರಾಮದಲ್ಲಿ ಬಂಗಾಳದ ಜನರು ದೀದಿಯನ್ನು ಕ್ಲೀನ್​ ಬೌಲ್ಡ್​ ಮಾಡಿದ್ದು, ಅವರ ಸಂಪೂರ್ಣ ತಂಡವನ್ನು ಮೈದಾನ ಬಿಟ್ಟು ಹೊರನಡೆಯುವಂತೆ ಆದೇಶಿಸಿದ್ದಾರೆ

ಪ್ರಧಾನಿ ಮೋದಿ

ಪ್ರಧಾನಿ ಮೋದಿ

 • Share this:
  ಕೊಲ್ಕತ್ತಾ (ಏ. 12): ಮಮತಾ ಬ್ಯಾನರ್ಜಿ ಅವರನ್ನು ಕ್ಲೀನ್​ ಬೌಲ್ಡ್​ ಮಾಡಲಾಗಿದೆ. ಅವರ ಇಡೀ ತಂಡ ಮೈದಾನದಿಂದ ಹೊರ ಹೋಗಬೇಕೇಂದು ಕೇಳಿಕೊಳ್ಳುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಕುಟುಕಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರದಲ್ಲಿ, ಟಿಎಂಸಿ ನಾಯಕಿಯನ್ನು ಮತ್ತೊಮ್ಮೆ ಟೀಕಿಸಿದ ಪ್ರಧಾನಿ ಮೋದಿ, ಹಿಂದಿನ ಶೈಲಿಯಲ್ಲಿ ದೀದಿ ಓ ದೀದಿ ಎಂದು ಕರೆಯುವ ಮೂಲಕ   ತೃಣಮೂಲ ಕಾಂಗ್ರೆಸ್​ ವಿರುದ್ಧ ಹರಿಹಾಯ್ದರು. ದೀದಿ.. ನೀವು ಕೋಪ ಹೊರಹಾಕಬೇಕೆಂದರೆ, ನಾನು ಇಲ್ಲೇ ಇದ್ದೇನೆ. ನನ್ನನ್ನು ದೂಷಿಸಿ. ಆದರೆ, ಬಂಗಾಳದ ಘನತೆ ಮತ್ತು ಸಂಪ್ರದಾಯವನ್ನು ಅವಮಾನಿಸಬೇಡಿ. ಬಂಗಾಳದ ಜನರು ನಿಮ್ಮ ದುರಹಂಕಾರ, ಸುಲಿಗೆಯನ್ನು ಸಹಿಸುವುದಿಲ್ಲ. ಕಾರಣ ಜನರು ನಿಜವಾಗಿಯೂ ಬದಲಾವಣೆ ಬಯಸುತ್ತಿದ್ದಾರೆ ಎಂದರು.

  ಪಶ್ಚಿಮ ಬಂಗಾಳದ ಬರ್ಧಮಾನ್​ನಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಟಿಎಂಸಿ ಧ್ಯೇಯವಾಕ್ಯವಾದ 'ಮಾ, ಮಾತಿ ಮನುಷ್ಯ' (ತಾಯಿ, ತಾಯ್ನಾಡು ಮತ್ತು ಜನರು) ಹಿಡಿದು ಪಕ್ಷ ಟೀಕಿಸಿದ ಅವರು, ಮಾ ಎಂದರೆ ಹಿಂಸೆ ನೀಡುವುದು, ಮಾತಿ ಎಂದರೆ ಲೂಟಿ ಮಾಡುವುದು ಮನುಷ್ಯ್​ ಎಂದರೆ ರಕ್ತಪಾತ ಎಂದು ವಾಗ್ದಾಳಿ ನಡೆಸಿದರು.  ನಾಲ್ಕು ಹಂತದ ವಿಧಾನಸಭಾ ಚುನಾವಣೆಯಲ್ಲಿ ಈಗಾಗಲೇ ಬಿಜೆಪಿ ನಾಲ್ಕು, ಆರು ರನ್​ ಬಾರಿಸುವ ಮೂಲಕ ಸೆಂಚುರಿ ಬಾರಿಸಿದೆ. ಅರ್ಧ ಮ್ಯಾಚ್​ನಲ್ಲಿಯೇ ಟಿಎಂಸಿಯನ್ನು ಸೋಲಿಸಿದೆ. ನಂದಿಗ್ರಾಮದಲ್ಲಿ ಬಂಗಾಳದ ಜನರು ದೀದಿಯನ್ನು ಕ್ಲೀನ್​ ಬೌಲ್ಡ್​ ಮಾಡಿದ್ದು, ಅವರ ಸಂಪೂರ್ಣ ತಂಡವನ್ನು ಮೈದಾನ ಬಿಟ್ಟು ಹೊರನಡೆಯುವಂತೆ ಆದೇಶಿಸಿದ್ದಾರೆ ಎಂದರು.

  ಇದನ್ನು ಓದಿ: ಕೊಚ್​ಬೆಹಾರ್​​ ಗುಂಡಿನ ದಾಳಿ: ಅಮಿತ್​ ಶಾ ರಾಜೀನಾಮೆಗೆ ಮಮತಾ ಬ್ಯಾನರ್ಜಿ ಆಗ್ರಹ

  ಶನಿವಾರ ಕೊಚ್​ ಬೆಹಾರ್​ನಲ್ಲಿ ಕೇಂದ್ರ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದರು. ಈ ಘಟನೆ ಕುರಿತು ಮಾತನಾಡಿದ್ದ ಮಮತಾ ಬ್ಯಾನರ್ಜಿ ಕೇಂದ್ರ ಪಡೆಗಳು ಜನರನ್ನು ಪ್ರಚೋದಿಸುತ್ತೀವೆ ಎಂದು ಟೀಕಿಸಿದ್ದರು. ಈ ಕುರಿತು ಮಾತನಾಡಿದ ಪ್ರಧಾನಿ, ನಿಮ್ಮ ನೀತಿಯಂದ ಅಸಂಖ್ಯಾತ ತಾಯಂದಿರು ಮಕ್ಕಳನ್ನು ಕಳೆದುಕೊಂಡಿದ್ದಾರೆ ಎಂದರು.

  ಬಂಗಾಳದ ಎಸ್​ಸಿ ಸಮುದಾಯವನ್ನು ಅವರು ನಿಂದಿಸುತ್ತಾರೆ. ಅವರನ್ನು ಭಿಕ್ಷುಕರು ಎಂದು ಕರೆಯುತ್ತಾರೆ. ಇಂತಹ ಮಾತನ್ನು ಕೇಳಿಸಿಕೊಂಡು ಬಾಬಾ ಸಾಹೇಬ್​ ಆತ್ಮಕ್ಕೆ ನೋವಾಗುತ್ತದೆ. ಅಧಿಕಾರದಿಂದ ಒಮ್ಮೆ ಕೆಳಗಿಳಿದ ಬಳಿಕ ಕಾಂಗ್ರೆಸ್​ ಮತ್ತೆ ಅಧಿಕಾರಕ್ಕೆ ಏರಲು ವಿಫಲವಾಗಿದೆ. ಇದೇ ರೀತಿ ಟಿಎಂಸಿ ಕೂಡ ಒಮ್ಮೆ ಸೋತ ಬಳಿಕ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ ಎಂದು ತಿಳಿದಿದೆ ಎಂದರು.
  Published by:Seema R
  First published: