Modi in UK: ಯುಕೆ ತಲುಪಿದ ಪ್ರಧಾನಿ ಮೋದಿ: ಇಂದು ಕೋಪ್​ 26 ಶೃಂಗಸಭೆಯಲ್ಲಿ ಭಾಗಿ

Modi in UK: ಪ್ರಧಾನಿ ಮೋದಿ ಗ್ಲಾಸ್ಗೋಗೆ  ಬಂದು ಇಳಿಯುತ್ತಿದ್ದಂತೆ ಅಲ್ಲಿರುವ ಭಾರತೀಯ ಮೂಲದವರು ದೊಡ್ಡದಾಗಿ ಭಾರತ್​ ಮಾತಾ ಕಿ ಜೈ ಎಂದು ಘೋಷಣೆ ಕೂಗಿ, ಸ್ವಾಗತಿಸಿದ್ದಾರೆ.

ಯುಕೆಯಲ್ಲಿ ಪ್ರಧಾನಿ ಮೋದಿ

ಯುಕೆಯಲ್ಲಿ ಪ್ರಧಾನಿ ಮೋದಿ

  • Share this:
ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ರೋಮ್(Rome)​ ಪ್ರವಾಸ ಮುಗಿಸಿ ಇದೀಗ ಯುಕೆ(UK)ಗೆ ತೆರಳಿದ್ದಾರೆ. ನಿನ್ನೆ ಭಾನುವಾರ ಜಿ20 ಶೃಂಗಸಭೆಯ 2ನೇ ಸೆಷನ್​​ನಲ್ಲಿ ಪಾಲ್ಗೊಂಡ ಬಳಿಕ ಅವರು ಯುಕೆಯ ಸ್ಕಾಟ್ಲೆಂಡ್​​ನ(Scotland)ಲ್ಲಿರುವ ಗ್ಲಾಸ್ಗೋ(Glasgow)ಗೆ ತೆರಳಿದ್ದಾರೆ. ಇಂದು ವಿಶ್ವಸಂಸ್ಥೆಯ 2021ನೇ ಸಾಲಿನ ಹವಾಮಾನ ಬದಲಾವಣೆ ಸಮ್ಮೇಳನ ಅಥವಾ ಕೋಪ್​ 26 ಶೃಂಗಸಭೆ (COP26 Summit)ಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಾದ ಬಳಿಕ ಯುಕೆ ಪ್ರಧಾನಮಂತ್ರಿ ಬೋರಿಸ್​​ ಜಾನ್ಸ್​ನ್(Boris Johnson​) ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇಂದು ಮುಂಜಾನೆ 4 ಗಂಟೆ ಹೊತ್ತಿಗೆ ಟ್ವೀಟ್​ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಇದೀಗ ಗ್ಲಾಸ್ಗೋಗೆ ಬಂದಿಳಿದಿದ್ದೇನೆ. ಹವಾಮಾನ ಬದಲಾವಣೆ ನಿಯಂತ್ರಣ ಮತ್ತು ಅದಕ್ಕೆ ಸಂಬಂಧಪಟ್ಟಂತೆ ಭಾರತ ನಡೆಸುತ್ತಿರುವ ಪ್ರಯತ್ನಗಳನ್ನು ವಿಶ್ವದ ಇತರ ನಾಯಕರ ಎದುರು ವ್ಯಕ್ತಪಡಿಸಲು ನಾನು ಕಾಯುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮೊಳಗಿದ ‘ಭಾರತ್​ ಮಾತಾ ಕಿ ಜೈ’ ಘೋಷವಾಕ್ಯ

ಪ್ರಧಾನಿ ಮೋದಿ ಗ್ಲಾಸ್ಗೋಗೆ  ಬಂದು ಇಳಿಯುತ್ತಿದ್ದಂತೆ ಅಲ್ಲಿರುವ ಭಾರತೀಯ ಮೂಲದವರು ದೊಡ್ಡದಾಗಿ ಭಾರತ್​ ಮಾತಾ ಕಿ ಜೈ ಎಂದು ಘೋಷಣೆ ಕೂಗಿ, ಸ್ವಾಗತಿಸಿದ್ದಾರೆ. ಇನ್ನು ಪ್ರಧಾನಿ ಮೋದಿ ಇಂದು ಮೊದಲು ಸ್ಕಾಟ್​ಲೆಂಡ್​ ಸಮುದಾಯದ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ನಂತರ ನಡೆಯಲಿರುವ ವಿಶ್ವಸಂಸ್ಥೆ ಹವಾಮಾನ ಬದಲಾವಣೆ 26ನೇ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಶೃಂಗಸಭೆಯ ಸಮಗ್ರ ಅಧಿವೇಶನದಲ್ಲಿ ಮಾತನಾಡಲಿದ್ದಾರೆ. ಈ  ಹಿಂದೆ ಆಗಸ್ಟ್​ 15 ಸ್ವಾಂತತ್ರ್ಯ ದಿನೋತ್ಸವದ ಸಂಭ್ರಮಕ್ಕೆ ಬೋರಿಸ್​ ಜಾನ್ಸನ್​ ಅವರನ್ನು ಆಹ್ವಾನ ಮಾಡಲಾಗಿತ್ತು. ಆದರೆ ಕೋವಿಡ್​ ಕಾರಣಗಳಿಂದ ಅವರ ಭಾರತದ ಭೇಟಿ ರದ್ದಾಗಿತ್ತು.

ಇದನ್ನು ಓದಿ : ರೋಮ್ ಶೃಂಗಸಭೆಯಲ್ಲಿ ಅಮೆರಿಕಾ ಅಧ್ಯಕ್ಷರು, ಪೋಪ್ ಅವರನ್ನು ಭೇಟಿಯಾದ PM Modi

ಕೆಲ್ವಿಂಗ್ರೋವ್ ಆರ್ಟ್ ಗ್ಯಾಲರಿ ಮತ್ತು ಮ್ಯೂಸಿಯಂಗೆ ಭೇಟಿ

ಈ ಕೋಪ್​ 26 ಶೃಂಗಸಭೆ ಬಳಿಕ ಪ್ರಧಾನಿ ಮೋದಿ ಅವರು ಕೆಲ್ವಿಂಗ್ರೋವ್ ಆರ್ಟ್ ಗ್ಯಾಲರಿ ಮತ್ತು ಮ್ಯೂಸಿಯಂಗೆ ಭೇಟಿ  ಕೊಡಲಿದ್ದಾರೆ. ಈ ವೇಳೆ ಸರ್ಕಾರದ ವಿವಿಧ ವಿಭಾಗದ 120 ಮುಖ್ಯಸ್ಥರು ಹಾಜರಿರಲಿದ್ದಾರೆ. ಪ್ರಿನ್ಸ್​ ಚಾರ್ಲ್ಸ್​ ಮತ್ತು ಅವರ ಪತ್ನಿ ಕ್ಯಾಮಿಲ್ಲಾ ಕೂಡ ಭಾಗವಹಿಸುವ ನಿರೀಕ್ಷೆಯಿದೆ.  ಮಂಗಳವಾರ ಪ್ರಧಾನಿ ಮೋದಿಯವರ ಯುಕೆ ಭೇಟಿಯ ಕೊನೇ ದಿನವಾಗಿದ್ದು, ಅಂದು ಸ್ವಿಟ್ಜರ್ಲ್ಯಾಂಡ್​, ಫಿನ್ಲ್ಯಾಂಡ್​, ಇಸ್ರೇಲ್​, ನೇಪಾಳ, ಮಲಾವಿ, ಉಕ್ರೇನ್​, ಜಪಾನ್​ ಮತ್ತು ಅರ್ಜಿಂಟೀನಾ ದೇಶಗಳೊಂದಿಗೆ ಸರಣಿ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಅದಾದ ಬಳಿಕ ಮೈಕ್ರೋಸಾಫ್ಟ್​ ಸಹ ಸಂಸ್ಥಾಪಕ ಬಿಲ್​ ಗೇಟ್ಸ್​ರೊಂದಿಗೆ ಕೂಡ ಪ್ರಧಾನಿ ಮೋದಿ ಮಾತುಕತೆ ನಡೆಸಲಿದ್ದಾರೆ.

ಇದನ್ನು ಓದಿ :ರೋಮ್​ನಲ್ಲೂ ‘ಹೌಡಿ ಮೋದಿ’ ಹವಾ : ಭಾಯ್ ಕೇಮ್ ಛೋ ಎಂದು ಕೇಳಿದ ಭಾರತೀಯರು!​

ಟ್ರೆವಿ ಫೌಂಟೇನ್‌ಗೆ ನಾಣ್ಯ ಎಸೆದ ಮೋದಿ


ಯುಕೆಗೆ ಬರುವ ಮುನ್ನ ಮೋದಿ ಇಟಲಿಯಲ್ಲಿ ನಡೆಸ ಜಿ20 ಶೃಂಗಸಭೆಯಲ್ಲಿ ಭಾಗಿಯಾಗಿದ್ದರು. ಇದಾದ ಬಳಿಕ ಅಲ್ಲಿನ ಪ್ರಸಿದ್ಧ ಟ್ರಿವಿ ಫೌಂಟೇನ್​ಗೆ ಮೋದಿ, ಇತರ ವಿಶ್ವ ನಾಯಕರೊಂದಿಗೆ ಭೇಟಿ  ನೀಡಿದ್ದರು.ಈ ಕಾರಂಜಿ ಇಟಲಿಯ ಪ್ರಖ್ಯಾತ ಸ್ಮಾರಕಗಳಲ್ಲಿ ಒಂದಾಗಿದ್ದು ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಇಲ್ಲಿ ನಾಣ್ಯ ಎಸೆಯುವುದು ಸಂಪ್ರದಾಯ ಎಂದು ಜಿ20 ಇಟಲಿ ಟ್ವೀಟ್ ಮಾಡಿದೆ. ಟ್ರೆವಿ ಫೌಂಟೇನ್‌ 26.3 ಮೀಟರ್ ಎತ್ತರ ಮತ್ತು 49.15 ಮೀಟರ್ ಅಗಲವಿದೆ. ನಿಮ್ಮ ಭುಜದ ಮೇಲಿಂದ ಹಿಂಬದಿಯಾಗಿ ಕಾರಂಜಿ ನೀರಿನಲ್ಲಿ ಎಸೆದರೆ, ರೋಮ್​​ಗೆ ಹಿಂತಿರುಗುವುದು ಖಚಿತ ಎಂಬುದು ನಂಬಿಕೆ.
Published by:Vasudeva M
First published: