• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Hubballi Accident: ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಮೋದಿ, ಸಾವನ್ನಪ್ಪಿದವರು ನಮ್ಮವರಲ್ಲ ಎಂದ ಹಾಲಪ್ಪ

Hubballi Accident: ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಮೋದಿ, ಸಾವನ್ನಪ್ಪಿದವರು ನಮ್ಮವರಲ್ಲ ಎಂದ ಹಾಲಪ್ಪ

ನರೇಂದ್ರ ಮೋದಿ

ನರೇಂದ್ರ ಮೋದಿ

ಹುಬ್ಬಳ್ಳಿ - ಧಾರವಾಡ ಬೈಪಾಸ್ ನಲ್ಲಿ ಇಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ PMO ಇಂಡಿಯಾ ಟ್ವಿಟರ್​ ನಲ್ಲಿ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಪರಿಹಾರವನ್ನೂ ಘೋಷಿಸಿದ್ದಾರೆ.

 • Share this:

ಹುಬ್ಬಳ್ಳಿ: ಹುಬ್ಬಳ್ಳಿ - ಧಾರವಾಡ ಬೈಪಾಸ್ (Hubballi-Dharwad Bypass) ನಲ್ಲಿ ಇಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ಹಾಗೂ ಲಾರಿಗಳ (Private Bus And Lorry) ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಏಳು ಜನ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ (Hubballi) ಹೊರವಲಯದಲ್ಲಿ ನಡೆದಿದೆ. ಖಾಸಗಿ ಬಸ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಇದರಲ್ಲಿ ಸ್ಥಳದಲ್ಲಿಯೇ ಆರು ಜನರ ಸಾವನ್ನಪ್ಪಿದ್ದರೆ, ಓರ್ವ ಕಿಮ್ಸ್ ಆಸ್ಪತ್ರೆಯಲ್ಲಿ (KIMS Hospital) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅಲ್ಲದೇ ಈ ಘಟನೆಯಲ್ಲಿ 25 ಜನರಿಗೆ ಗಾಯಗಳಾಗಿವೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ PMO ಇಂಡಿಯಾ ಟ್ವಿಟರ್​ ನಲ್ಲಿ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಪರಿಹಾರವನ್ನೂ ಘೋಷಿಸಿದ್ದಾರೆ.


ಹುಬ್ಬಳ್ಳಿ ಅಪಘಾತದಕ್ಕೆ ಸಂತಾಪ ಸೂಚಿಸಿದ ಪ್ರಧಾನಿ:


ಇನ್ನು, ಇಂದು ನಡೆದ ಹುಬ್ಬಳ್ಳಿ ಬಳಿಯ ರಸ್ತೆ ಅಪಘಾತದಲ್ಲಿ ಏಳು ಜನ ಸಾವನ್ನಪ್ಪಿದ್ದು, 25 ಜನರನ್ನು ಆಸ್ಪತ್ರಗೆ ದಾಖಲಿಸಲಾಗಿದೆ. ಈ ಸಂಬಂಧ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, PMO ಇಂಡಿಯಾ ಟ್ವಟಿರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ್ದು, ‘ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಜೀವ ಹಾನಿಯಾಗಿರುವುದು ನೋವುತಂದಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡಿರುವವರು ಶೀಘ್ರ ಗುಣಮುಖರಾಗಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ‘ ಎಂದು ಟ್ವೀಟ್ ಮಾಡಲಾಗಿದೆ.ಅಲ್ಲದೇ ಪರಿಹಾರವನ್ನೂ ನೀಡಲಾಗಿದ್ದು, ‘ಹುಬ್ಬಳ್ಳಿಯಲ್ಲಿ ಸಂಭವಿಸಿದ ದುರ್ಘಟನೆಯಿಂದ ಪ್ರಾಣ ಕಳೆದುಕೊಂಡವರ ಸಂಬಂಧಿಗಳಿಗೆ ಪಿಎಂಎನ್‌ಆರ್‌ಎಫ್‌ ನಿಧಿಯಿಂದ ತಲಾ 2 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಾಳುಗಳಿಗೂ ತಲಾ 50,000 ರೂ. ನೀಡಲಾಗುವುದು: ಪ್ರಧಾನಮಂತ್ರಿ ನರೇಂದ್ರ ಮೋದಿ‘ ಎಂದು ಬರೆಯಲಾಗಿದೆ.ಓವರ್ ಟೇಕ್ ವೇಳೆ ಅಪಘಾತ:


ಸಾವಿನ ಹೆದ್ದಾರಿ ಎಂದೇ ಬಿಂಬಿತಗೊಂಡಿರೋ ಹುಬ್ಬಳ್ಳಿ ಹೊರವಲಯದ ತಾರಿಹಾಳ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಂದು ಭೀಕರ ದುರ್ಘಟನೆ ಸಂಭವಿಸಿದೆ. ಮಹಾರಾಷ್ಟ್ರದ ಕೊಲ್ಹಾಪುರದಿಂದ ಬೆಂಗಳೂರಿಗೆ ಹೊರಟಿದ್ದ ನ್ಯಾಷನಲ್ ಟ್ರಾವೆಲ್ಸ್ ಬಸ್ ಗೆ ಧಾರವಾಡ ದ ಕಡೆ ಹೊರಟಿದ್ದ ಲಾರಿ ಮುಖಾಮುಖಿ ಡಿಕ್ಕಿಯಾಗಿದೆ. ಓವರ್ ಟೇಕ್ ಮಾಡುವ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.


ಇದನ್ನೂ ಓದಿ: Hubballi Accident: ಸಾವಿನ ಹೆದ್ದಾರಿಯಲ್ಲಿ ಮತ್ತೊಂದು ಭೀಕರ ಅಪಘಾತ; ಏಳು ಸಾವು, 25 ಗಾಯ


ಗಾಯಾಳುಗಳು ಹೇಳಿದ್ದೇನು?:


ಕೊಲ್ಹಾಪುರದಿಂದ ಬೆಂಗಳೂರಿಗೆ ಹೊರಟಿದ್ದೆವು. ಗಾಢ ನಿದ್ದೆಯಲ್ಲಿದ್ದಾಗ ಅಪಘಾತವಾಗಿದೆ. ಏನಾಯಿತು, ಯಾವ ರೀತಿ ಆಯಿತು ಎನ್ನೋದು ಒಂದೂ ಗೊತ್ತಿಲ್ಲ ಅಂತಾರೆ ಗಾಯಾಳುಗಳು. ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಗಾಯಾಳುಗಳಿಗೆ ಕಿಮ್ಸ್ ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.


ಪರಿಹಾರ ಕೊಡೋಕೆ ಬರೊಲ್ಲ ಎಂದ ಹಾಲಪ್ಪ:


ಇತ್ತ, ಪಿಎಂಓ ಇಂಡಿಯಾ ದಲ್ಲಿ ಹುಬ್ಬಳ್ಳಿಯಲ್ಲಿ ಅಪಘಾತವಾದವರಿಗೆ ಪರಿಹಾರವನ್ನು ಘೊಷಿಸಲಾಗಿದೆ. ಆದರೆ ಅಪಘಾತ ಸಂಬಂಧ ಸಭೆ ನಡೆಸಿ ನಂತರ ಮಾತನಾಡಿದ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ‘ಹುಬ್ಬಳ್ಳಿ ಅಪಘಾತದಲ್ಲಿ ಮೃತಪಟ್ಟವರು ನಮ್ಮವರಲ್ಲ ಹಾಗಾಗಿ ಪರಿಹಾರ ಕೊಡೋಕೆ ಬರೊಲ್ಲ. ಮೃತಪಟ್ಟವರೆಲ್ಲರೂ ಮಹಾರಾಷ್ಟ್ರಕ್ಕೆ ಸೇರಿದ್ದಾರೆ. ಅವರು ನಮ್ಮವರು ಆಗದಿರುವುದರಿಂದ ಪರಿಹಾರ ಕೊಡೋಕೆ ಆಗಲ್ಲ.


ಇದನ್ನೂ ಓದಿ:  Murder Accused: 5 ವರ್ಷದಿಂದ ಪೊಲೀಸರು ಹುಡುಕುತ್ತಿದ್ದ ಕೊಲೆಗಾರ ಒಂದು ಸೆಲ್ಫಿಯಿಂದ ಸಿಕ್ಕಿಬಿದ್ದ, ರೋಚಕ ಕಹಾನಿ!

top videos


  ನಿನ್ನೆ ಮೊನ್ನೆ ಧಾರವಾಡದಲ್ಲಿ ಮೃತಪಟ್ಟವರು ನಮ್ಮವರೇ ಆಗಿದ್ದರು. ಇನ್ನು, ಯಾವುದೇ ಇನ್ಶೂರೆನ್ಸ್ ಅವರಿಗೆ ಅಪ್ಲೈ ಆಗುತ್ತಿರಲಿಲ್ಲ. ಹೀಗಾಗಿ ಅವರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆವು. ಆದರೆ ಇಲ್ಲಿ ಖಾಸಗಿ ಬಸ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಹೀಗಾಗಿ ಇಲ್ಲಿ ಇನ್ಶೂರೆನ್ಸ್ ಕಂಪನಿಯೇ ಪರಿಹಾರ ಕೊಡುತ್ತದೆ. ನಾವು ಕೊಡುವ ಪ್ರಶ್ನೆ ಬರಲ್ಲ. ಹಾಗೊಂದು ವೇಳೆ ಅಗತ್ಯವೆನಿಸಿದರೆ ಮುಖ್ಯಮಂತ್ರಿ ಬಳಿ ಮಾತನಾಡುತ್ತೇನೆ‘ ಎಂದು ಹೇಳಿದ್ದಾರೆ.

  First published: