ಕೊರೋನಾದಿಂದ ಜೀವನ ಶೈಲಿ ಬದಲಾಗಿದೆ. ಶ್ರದ್ಧೆ, ಭಕ್ತಿಯಲ್ಲ; ಪ್ರಧಾನಿ ಮೋದಿ

ಕೊರೋನಾ ನಮ್ಮ ಜೀವನವನ್ನು ಎಷ್ಟೇ ಬದಲಾಯಿಸಿದ್ದರೂ ನಮ್ಮ ಭಕ್ತಿ, ಶಕ್ತಿಯನ್ನು ಬದಲಾಯಿಸಲು ಸಾಧ್ಯವಿಲ್ಲ

ದೇವ್​ ದೀಪಾವಳಿ ಸಂಭ್ರಮದಲ್ಲಿ ಮೋದಿ

ದೇವ್​ ದೀಪಾವಳಿ ಸಂಭ್ರಮದಲ್ಲಿ ಮೋದಿ

 • Share this:
  ವಾರಾಣಾಸಿ (ನ.30):  ಕಾರ್ತಿಕ ಪೂರ್ಣಿಮದ ಶುಭದಿನದಂದು ನಡೆಯುವ ದೇವ್​ ದೀಪಾವಳಿ ಆಚರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕ್ಷೇತ್ರ ವಾರಾಣಸಿಗೆ ಭೇಟಿ ನೀಡಿದರು. ಗಂಗನಾದಿಯ ಎರಡೂ ಬಂದಿಗಳಲ್ಲಿ ಲಕ್ಷ ದೀಪಗಳಿಂದ ಅಲಂಕರಿಸಲಾಗಿದ್ದ  ದೇವ್​​ ದೀಪಾವಳಿ ಸಂಭ್ರಮದಲ್ಲಿ ಭಾಗಿಯಾದರು. ಇದಕ್ಕೂ ಮುನ್ನ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ಕೊರೋನಾ ನಮ್ಮ ಜೀವನವನ್ನು ಎಷ್ಟೇ ಬದಲಾಯಿಸಿದ್ದರೂ ನಮ್ಮ ಭಕ್ತಿ, ಶಕ್ತಿಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದರು. ದೀಪ ಬೆಳಗಿದ ಪ್ರಧಾನಿ ಈ ಗೌರವನ್ನು ದೇಶಕ್ಕಾಗಿ ಪ್ರಾಣ ಸಲ್ಲಿಸಿದ ಯೋಧರೆಲ್ಲರಿಗೂ ಈ ನನ್ನ ಗೌರವ ಅರ್ಪಿಸುತ್ತೇನೆ ಎಂದರು. ಇದೇ ವೇಳೆ ದೇಶದೊಳಗೆ ನಮ್ಮನ್ನು ಇಬ್ಬಾಗ ಮಾಡಲು ಪ್ರಯತ್ನಿಸುತ್ತಿರುವವರಿಗೆ ಸೂಕ್ತ ಉತ್ತ ನೀಡುತ್ತೇವೆ ಎಂದು ಎಚ್ಚರಿಸಿದರು.  100 ವರ್ಷಗಳ ಹಿಂದೆ ಭಾರತದಿಂದ ಕಳ್ಳತನ ಮಾಡಿದ್ದ ಮಾತೆ ಅನ್ನಪೂರ್ಣ ದೇವಿಯ ಪ್ರತಿಮೆ ಭಾರತಕ್ಕೆ ಮರಳುತ್ತಿದೆ. ಕಾಶಿಗೆ ಇದು ಅದೃಷ್ಟದ ಕ್ಷಣ, ಈ ಪ್ರಯತ್ನವನ್ನು ಮೊದಲೇ ಮಾಡಿದ್ದರೆ, ಅಂತಹ ಅನೇಕ ಪ್ರತಿಮೆಗಳು ಭಾರತಕ್ಕೆ ಮರಳಿ ತರಬಹುದಿತ್ತು ಎಂದರು.

  ಇದೇ ವೇಳೆ ಪರೋಕ್ಷವಾಗಿ ಕಾಂಗ್ರೆಸ್​ ಟೀಕಿಸಿದ ಅವರು ನಮಗೆ ಅನುವಂಶಿಕತೆ ಎಂದರೆ ಪರಂಪರೆ ಆದರೆ, ಕೆಲವರಿಗೆ ಅನುವಂಶಿಕತೆ ಎಂದರೆ ಸ್ವಂತ ಕುಟುಂಬ ಎಂದು ಕುಟುಕಿದರು  ಕಾಶಿಯ ಪರಂಪರೆ ಹಾಡಿಹೊಗಳಿದ ಅವರು ಕಾಶಿ ವಿಶ್ವನಾಥ ಟನಲ್​ ಉದ್ಘಾಟನೆ ಮಾಡಿದರು ಗಂಗಾ ತಟದಲ್ಲಿ ಸುಮಾರು 16 ಲಕ್ಷಗಳ ದೀಪ ಬೆಳಗುವ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿದರು. ಇದಾದ ಬಳಿಕ ಅವರು ರಾಜ್​ಘಟ್​ನಲ್ಲಿ ಮಾತನಾಡಿದರು.
  Published by:Seema R
  First published: