Ayodhya Verdict: ಅಯೋಧ್ಯೆ ತೀರ್ಪಿನ ಕುರಿತು ಪ್ರಧಾನಿ ಮೋದಿ, ಅಮಿತ್​ ಶಾ ಪ್ರತಿಕ್ರಿಯೆ

ವಿವಾದಿತ ಅಯೋಧ್ಯೆಯಲ್ಲಿನ ಜಾಗವನ್ನು ಹಿಂದೂಗಳಿಗೆ ಕೆಲವು ಷರತ್ತುಗಳನ್ನು ವಿಧಿಸಿ ನೀಡಲಾಗಿದೆ.  ಇನ್ನು ಮುಸ್ಲಿಂ ಸಮುದಾಯಕ್ಕೆ ಬದಲಿ ಜಾಗವನ್ನು ನೀಡಲು ಸಹ ಸುಪ್ರೀಂ ಕೋರ್ಟ್​ ಆದೇಶಿಸಿದೆ.

Seema.R | news18-kannada
Updated:November 9, 2019, 1:17 PM IST
Ayodhya Verdict: ಅಯೋಧ್ಯೆ ತೀರ್ಪಿನ ಕುರಿತು ಪ್ರಧಾನಿ ಮೋದಿ, ಅಮಿತ್​ ಶಾ ಪ್ರತಿಕ್ರಿಯೆ
ನರೇಂದ್ರ ಮೋದಿ ಮತ್ತು ಅಮಿತ್​ ಶಾ.
  • Share this:
ನವದೆಹಲಿ (ನ.09): ಅಯೋಧ್ಯೆ ಭೂವಿವಾದ ಕುರಿತು ಸುಪ್ರೀಂಕೋರ್ಟ್​ ತೀರ್ಪನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್​ ಶಾ ಸ್ವಾಗತಿಸಿದ್ದಾರೆ.

ವಿವಾದಿತ ಅಯೋಧ್ಯೆಯಲ್ಲಿನ ಜಾಗವನ್ನು ಹಿಂದೂಗಳಿಗೆ ಕೆಲವು ಷರತ್ತುಗಳನ್ನು ವಿಧಿಸಿ ನೀಡಲಾಗಿದೆ.  ಇನ್ನು ಮುಸ್ಲಿಂ ಸಮುದಾಯಕ್ಕೆ ಬದಲಿ ಜಾಗವನ್ನು ನೀಡಲು ಸಹ ಸುಪ್ರೀಂ ಕೋರ್ಟ್​ ಆದೇಶಿಸಿದೆ.

ಸುಪ್ರೀಂಕೋರ್ಟ್​ನ ಈ ತೀರ್ಪನ್ನು ಯಾರೊಬ್ಬರ ಸೋಲು- ಗೆಲುವಿನ ದೃಷ್ಟಿಕೋನದಲ್ಲಿ ನೋಡಬಾರದು. ಅದು ರಾಮ ಭಕ್ತಿ ಅಥವಾ ರಹೀಮ್​ ಭಕ್ತಿ ಇರಲಿ. ಈ ಸಮಯದಲ್ಲಿ ನಾವು ಒಟ್ಟಾಗಿ ರಾಷ್ಟ್ರಭಕ್ತಿಯನ್ನು ತೋರಿಸಿ ಶಾಂತಿ ಮತ್ತು ಸೌಹರ್ದತೆಯನ್ನು ಎತ್ತಿಹಿಡಿಯಬೇಕು ಎಂದು ಪ್ರಧಾನಿ ಮೋದಿ ಟ್ವೀಟ್​ ಮಾಡಿದ್ದಾರೆ.


ಹಲವು ದಶಕಗಳಿಂದ ಇದ್ದ ಈ ವಿವಾದ ಕುರಿತು ಸುಪ್ರೀಂಕೋರ್ಟ್​ ಎಲ್ಲಾ ದೃಷ್ಟಿಕೋನದಲ್ಲಿ ವಾದ ವಿವಾದ ಆಲಿಸಿದೆ. ಇದಕ್ಕಾಗಿ ಅಗತ್ಯ ಸಮಯ ಹಾಗೂ ಅವಕಾಶವನ್ನು ನೀಡಿ, ಅವರ ಪರವಾದ ದೃಷ್ಟಿಕೋನ ತಿಳಿಸಲು ಅವಕಾಶ ನೀಡಿದೆ. ಈ ತೀರ್ಪಿನಿಂದ ಜನರಿಗೆ ನ್ಯಾಯಾಲಲಯ ಪ್ರಕ್ರಿಯೆ ಮೇಲೆ ಇನ್ನಷ್ಟು ನಂಬಿಕೆ ಹೆಚ್ಚಲಿದೆ ಎಂದಿದ್ದಾರೆ.

 



ಇದೇ ವೇಳೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಂತೆ 130 ಕೋಟಿ ಜನರಿಗೆ ಮನವಿ ಮಾಡಿದ್ದಾರೆ, ನಿಮ್ಮ ಏಕತಾ ಉತ್ಸಾಹ ಒಗ್ಗಟ್ಟಿನಿಂದ ದೇಶದ ಬೆಳವಣಿಗೆ. ಪ್ರತಿಯೊಬ್ಬ ಭಾರತೀಯರು ಇದನ್ನು ಬಲಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.



ಸುಪ್ರೀಂಕೋರ್ಟ್ನ​ ಐತಿಹಾಸಿಕ ತೀರ್ಪ ಐತಿಹಾಸಿಕ ಮೈಲಿಗಲ್ಲಾಗಲಿದೆ. ಈ ತೀರ್ಮಾನ ಭಾರತದ ಏಕತೆ, ಸಮಗ್ರತೆ ಮತ್ತು ಸಂಪ್ರದಾಯವನ್ನು ಸಬಲೀಕರಣಗೊಳಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ತಿಳಿಸಿದ್ದಾರೆ.

First published:November 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading