ದೆಹಲಿಯಲ್ಲಿಂದು 10ಗಂಟೆಗಳ ಕಾಲ ಬಿಜೆಪಿ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿರುವ ಮೋದಿ-ಶಾ

news18
Updated:August 28, 2018, 11:48 AM IST
ದೆಹಲಿಯಲ್ಲಿಂದು 10ಗಂಟೆಗಳ ಕಾಲ ಬಿಜೆಪಿ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿರುವ ಮೋದಿ-ಶಾ
news18
Updated: August 28, 2018, 11:48 AM IST
ನ್ಯೂಸ್​ 18 ಕನ್ನಡ

ನವದೆಹಲಿ (ಆ.28): ಲೋಕಸಭಾ ಚುನಾವಣೆ ಹಾಗೂ ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಸಿದ್ಧತೆಯಲ್ಲಿರುವ ಬಿಜೆಪಿ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಬಿಜೆಪಿ ಆಡಳಿತ  ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ಏರ್ಪಡಿಸಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ನೇತೃತ್ವದಲ್ಲಿ ಇಂದು ನವದೆಹಲಿಯಲ್ಲಿ ಸುಮಾರು 10ಗಂಟೆಗಳ ಕಾಲ ಸಭೆ ನಡೆಯಲಿದೆ.

ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳ ಅನುಷ್ಠಾನ ಕುರಿತು ಆಯಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ವರದಿ ಕೇಳಲಾಗಿದೆ. ಕಳೆದ ಫೆಬ್ರವರಿಯಲ್ಲಿ ನಡೆದ ಮುಖ್ಯಮಂತ್ರಿ ಸಭೆಯಲ್ಲಿ ದತ್ತಾಂಶಗಳ ಸಿದ್ದಪಡಿಸುವ ಕುರಿತು ಚರ್ಚಿಸಲಾಗಿತ್ತು. ಆ ಯೋಜನೆಗಳು ಯಾವ ರೀತಿ ಜನರಿಗೆ ತಲುಪಿಸಲಾಗಿದೆ ಎಂಬ ಕುರಿತು ಪರಿಶೀಲನೆ ನಡೆಸಲಾಗುವುದು.

ಉತ್ತರ ಪ್ರದೇಶ, ಗುಜರಾತ್​, ನಾಗಾಲ್ಯಾಂಡ್​ ಅರುಣಾಚಲ ಪ್ರದೇಶ ಮತ್ತು ತ್ರಿಪುರಾ  ಸೇರಿದಂತೆ 1 5 ಮುಖ್ಯಮಂತ್ರಿಗಳು ಮತ್ತು 7 ಉಪಮುಖ್ಯಮಂತ್ರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಕೇಂದ್ರ ಸರ್ಕಾರದ ಯೋಜನೆಗಳನ್ನು ಆಯಾ ರಾಜ್ಯಗಳಲ್ಲಿ ಯಾವ ರೀತಿ ಅನುಷ್ಠಾನಗೊಂಡಿದೆ ಎಂಬ ಕುರಿತು ಪ್ರಧಾನಿ ಅವರಿಂದ  ವರದಿ ಪಡೆಯಲಿದ್ದಾರೆ

ಇದರ ಹೊರತಾಗಿ ಲೋಕಸಭಾ ಚುನಾವಣೆಯ ಗೆಲ್ಲಲು ರೂಪಿಸಿರುವ ತಂತ್ರಗಾರಿಗೆ ಹಾಗೂ ಸಿದ್ಧತೆಗಳ ಕುರಿತು ಚರ್ಚೆ ನಡೆಯಲಿದೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯಗಳಿಂದ ಎಷ್ಟು ಸ್ಥಾನಗಳನ್ನು ಗೆಲ್ಲಬಹುದು ಎಂಬ ಕುರಿತು ಮಾಹಿತಿ ಪಡೆಯಲಿದ್ದಾರೆ,.

2014ರಿಂದ ಈ ರೀತಿ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಆರು ತಿಂಗಳಿಗೆ ಒಮ್ಮೆ ಪ್ರಧಾನಿ ನಡೆಸುತ್ತಿದ್ದಾರೆ.
First published:August 28, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ