UNGA Session: ನಾಳೆ ಅಮೆರಿಕಕ್ಕೆ ಪ್ರಧಾನಿ ಮೋದಿ; ಅಫ್ಘಾನ್​ ಬಿಕ್ಕಟ್ಟು, ದ್ವಿಪಕ್ಷೀಯ ಸಂಬಂಧ ಕುರಿತು ಮಾತುಕತೆ

ಜೋ ಬಿಡೆನ್​ ಅಮೆರಿಕ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಮುಖಾಮುಖಿ ಭೇಟಿಯಾಗುತ್ತಿದ್ದಾರೆ

ನರೇಂದ್ರ ಮೋದಿ

ನರೇಂದ್ರ ಮೋದಿ

  • Share this:
ನವದೆಹಲಿ, ಸೆ. 21: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಾಳೆ (ಸೆಪ್ಟೆಂಬರ್ 22ಕ್ಕೆ) (Prime Minister Narendra Modi) ಅಮೆರಿಕಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಕೋವಿಡ್ ಸಾಂಕ್ರಾಮಿಕ (Covid Pandemic) ಬಳಿಕ ಇದು ಅವರ ಅಮೇರಿಕಾ ಪ್ರವಾಸವಾಗಿದೆ (America‌ Tour). ಇದೇ ವೇಳೆ ಅವರು ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ (America President Jo Biden) ಅವರನ್ನು ಭೌತಿಕವಾಗಿ ‌ಇದೇ ಮೊದಲ ಬಾರಿಗೆ ಭೇಟಿಯಾಗಲಿದ್ದಾರೆ. ಅಮೇರಿಕಾದ ಉನ್ನತ ಸಂಸ್ಥೆಗಳ ಸಿಇಓ (CEO)ಗಳ ಜೊತೆ ಸಭೆ ನಡೆಸಲಿದ್ದಾರೆ. ಕ್ವಾಡ್ (Quad) ದೇಶಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ‌ ಕೂಡ ಭಾಗಿಯಾಗಲಿದ್ದಾರೆ.

ಬುಧವಾರ ಭಾರತದಿಂದ ಹೊರಡಲಿರುವ ಪ್ರಧಾನಿ ಮೋದಿ ಸೆಪ್ಟೆಂಬರ್​ 26ರಂದು ದೇಶಕ್ಕೆ ಹಿಂದಿರುಗಲಿದ್ದಾರೆ. ಜೋ ಬಿಡೆನ್​ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರುಈಗಾಗಲೇ ಜಿ 7 ಶೃಂಗಸಭೆ, ಕ್ವಾಡ್​ ಶೃಂಗಸಭೆ, ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ ವರ್ಚುಯಲ್​ ಸಭೆ ನಡೆಸಿದ್ದಾರೆ. ಈಗ ಇದೇ ಮೊದಲ ಬಾರಿ ಇಬ್ಬರು ನಾಯಕರು ಮುಖಾಮುಖಿಯಾಗಿ ಭೇಟಿಯಾಗುತ್ತಿದ್ದಾರೆ.

ಸೆಪ್ಟೆಂಬರ್ 22ರಂದು ದೆಹಲಿಯಿಂದ ವಾಷಿಂಗ್ಟನ್ ಡಿಸಿಗೆ (Washington DC) ಪ್ರಯಾಣ ಬೆಳಸಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸೆಪ್ಟೆಂಬರ್ 23ಕ್ಕೆ ಅಮೆರಿಕದ ಉನ್ನತ ಸಂಸ್ಥೆಗಳ ಸಿಇಓಗಳ ಜತೆ ಸಭೆ ನಡೆಸಲಿದ್ದಾರೆ. ಇದೇ ವೇಳೆ ಅವರು ಆ್ಯಪಲ್ ಸಂಸ್ಥೆ ಮುಖ್ಯಸ್ಥ ಟಿಮ್ ಕುಕ್ (CEO of Apple, Tim Cook) ಅವರ ಜೊತೆ ಪ್ರತ್ಯೇಕವಾಗಿ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಇದಾದ ಬಳಿಕ‌ ಸೆಪ್ಟೆಂಬರ್ 24ಕ್ಕೆ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇದೇ ವೇಳೆ ಅವರು ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ ಅವರನ್ನು ಭೌತಿಕವಾಗಿ ‌ಇದೇ ಮೊದಲ ಬಾರಿಗೆ ಭೇಟಿಯಾಗಲಿದ್ದಾರೆ. ಕ್ವಾಡ್ ದೇಶಗಳಾದ ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಸ್ಕಾಟ್ ಮೋರಿಸನ್ (Australian Prime Minister Scott Morrison), ಜಪಾನ್ ಪ್ರಧಾನ ಮಂತ್ರಿ ಯೊಶಿಹಿಡೆ ಸುಗ (Japan Prime Minister Yoshihide Suga) ಮತ್ತು ಇಂಗ್ಲೆಂಡ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ (England Prime Minister Boris Johnson) ಅವರು ಕೂಡ ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಭೆಯ ಬಳಿಕ‌ ಕ್ವಾಡ್ ದೇಶಗಳ ನಾಯಕರ‌ ಭೋಜನಕೂಟ ಇರಲಿದೆ.

ಇದನ್ನು ಓದಿ: ಸೇನೆ ಸೇರಬೇಕು ಎಂಬ ಮಹಿಳೆಯರಿಗೆ Good News​: ಮೇನಲ್ಲಿ ನಡೆಯಲಿದೆ NDA Exam

ಸೆಪ್ಟೆಂಬರ್ 24ರ ಸಂಜೆ‌ ವಾಷಿಂಗ್ಟನ್ ಡಿಸಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನ್ಯೂಯಾರ್ಕ್‌‌ (New York)ಗೆ ಪ್ರಯಾಣ ಬೆಳಸಲಿದ್ದಾರೆ. ಸೆಪ್ಟೆಂಬರ್ 25ರಂದು ನ್ಯೂಯಾರ್ಕ್ ನಗರದಲ್ಲಿ ನಡೆಯುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗಿಯಾಗಿ ಭಾಷಣ ಮಾಡಲಿದ್ದಾರೆ. ಸೆಪ್ಟೆಂಬರ್‌ 26ಕ್ಕೆ ನ್ಯೂಯಾರ್ಕ್ ನಿಂದ ನವದೆಹಲಿಗೆ ವಾಪಸ್ ಆಗಲಿದ್ದಾರೆ ಎಂದು ಮಂಗಳವಾರ ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ಶೃಂಗ್ಲಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಳೆದ ಕೆಲವು ನರೇಂದ್ರ ಮೋದಿ ಮತ್ತು ಜೋ ಬಿಡೆನ್ ನಿಯಮಿತವಾಗಿ ಸಂಪರ್ಕದಲ್ಲಿದ್ದರು.‌ ಕೆಲವು ವರ್ಚ್ಯುಯಲ್ ‌ಮಿಟಿಂಗ್ ಗಳು (Verchual Meeting)ಗಳು ಆಗಿದ್ದವು. ಈಗ ಭೌತಿಕವಾಗಿ ಭೇಟಿ (Physical Meeting) ಆಗುತ್ತಿದ್ದು ಭದ್ರತೆ, ರಕ್ಷಣೆ ಮತ್ತು ವ್ಯಾಪಾರ ವೃದ್ಧಿ ಬಗ್ಗೆ ಉಭಯ ನಾಯಕರು ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಅಫ್ಘಾನಿಸ್ತಾನದ ಬಿಕ್ಕಟ್ಟಿನ (Afghanistan Crisis) ಬಗ್ಗೆ ಸಮಾಲೋಚನೆ ನಡೆಸುತ್ತಾರೆ. ಅಮೆರಿಕದ ಉಪಾಧ್ಯಕ್ಷರಾಗಿರುವ ಭಾರತ ಮೂಲದ ಕಮಲಾ ಹ್ಯಾರಿಸ್ (American Vice President Kamala Harris) ಅವರನ್ನು ಭೇಟಿ ಮಾಡಿ ಎರಡು ದೇಶಗಳ ನಡುವಿನ ವ್ಯಾಪಾರ ಮಟ್ಟದ ಸಂವಾದಗಳನ್ನು ನಡೆಸುತ್ತಾರೆ ಎಂದು ಹರ್ಷ ಶೃಂಗ್ಲಾ ತಿಳಿಸಿದ್ದಾರೆ.
Published by:Seema R
First published: